Posts

Showing posts from November, 2009

ಆಭಾರಿ...

ಅಭಾರಿ  ಆಗಿರಬೇಕು ಅಭಾರಿ ಸದಾ ಇಲ್ಲಿಯವರೆಗೂ ಬದುಕಿ ಉಳಿದಿರುವುದಕ್ಕೆ. ಹೇಳಲೇಬೇಕು ಖಂಡಿತ ಯಾರಿಗಾದರೂ ಥ್ಯಾಂಕ್ಸ್. ಏಕೋಪಾಧ್ಯಾಯ ಸರಕಾರೀ ಶಾಲೆಗಳಲ್ಲಿ ಸಾಣೆ ಹಿಡಿದ ಮನಸು, ಬುದ್ಧಿ, ಹಳ್ಳಿ ಗಮಾರನಿಗೆ, ದಡ್ಡತನ ಸರಳತೆ, ನಗೆಪಾಟಲಿನ ಮುಘ್ದತೆಗೆ, ಅನ್ವೇಷಕ ಪ್ರಾಣಿ, ಅಂಡೆಲೆದು ಓಡಿ, ಕಾಡು ಬಂಡೆಗಳ ಮೇಲೆ ಆಡಿ, ಕುಂಟಿ, ಕುಪ್ಪಳಿಸಿ,ಎದ್ದು ಬಿದ್ದ ವಡ್ಡ ದೇಹಕ್ಕೆ, ಅಳದೆ, ತೊಳೆಯದೇ, ಅರಿಶಿನಹಚ್ಚಿ, ಗಾಯ ಮುಚ್ಚಿ ಮೆರೆದ , ಕನಸಾದ ಆ ದೇಹಕ್ಕೆ ಶರಣು, ಅನ್ವೇಷಿಸಲು ಕಳಿಸಿದ ಅ ಮರಳು ಹಳ್ಳಿಗೆ, ಆಹ್ವಾನವಿಲ್ಲದ ಅಥಿತಿ, ನನ್ನನ್ನು ಸಹಿಸಿದ ಮಹಾ ನಗರದ ನಾಗರಿಕರಿಗೆ, ಮನೆ ಭಾಷೆ ಕೀಳರಿಮೆ ಮೂಡಿಸಿ, ಲೋಕಭಾಷೆ ಕೇಳಿ, ನಗೆಯಾಡಿ, ಬದುಕನ್ನೇ ಭಾಷೆಯಾಗಿಸಿದ ಸ್ನೇಹಿತರಿಗೆ, ಅಮಾನವೀಯ ಪೈಪೋಟಿಯ ಬಿತ್ತಿದ ಬದುಕಿಗೆ 'ಬದುಕು ಅಂದರೆ ಹೊಂದಾಣಿಕೆ' ಒಪ್ಪಂದದ ಬಾಯಿಪಾಠ ಮಾಡಿಸಿದ ಗುರುಗಳಿಗೆ ವಂದನೆ, ಆತ್ಮವನ್ನೇ ಶಾಶ್ವತ ಮುಚ್ಚಿದ ಸನ್ನಿವೇಶಗಳಿಗೆ, ಆಸೆಪಟ್ಟು, ನಿರಾಸೆಗೊಂಡ ಮನಸಿಗೆ, ದುರಾಸೆ ಹೆಚ್ಚಿಸಿ, ಪಡೆದು,ಗೆದ್ದ ಕ್ಷಣಗಳಿಗೆ, ಮೇಲೇರಿದ ಸ್ನೇಹಿತರ ಕಂಡು ಕರುಬಿದ ಸಣ್ಣತನಕ್ಕೆ, ಚಾಡಿ ಹೇಳಿದ್ದಕ್ಕೆ, ವಂಚಿಸಿ ಹೀರೋ ಆಗಿದ್ದಕ್ಕೆ, ನನ್ನವರ ಕೆಳನೂಕಲು ಪಟ್ಟ ಗುಪ್ತ ಪ್ರಯತ್ನಕ್ಕೆ, ಅಮಲೇರಿದ ಕುಡುಕನ ನಶೆ ಇಳಿದಾಗ ಪಟ್ಟ ವ್ಯಥೆಗೆ, ಪೊಗರಿಳಿದ ದೇಹದ ನಿರಾಕರಣೆಗೆ ಸ

ನಿರೀಕ್ಷೆ,

ಕಾಯುತ್ತಿದ್ದೇನೆ ಹೌದು, ನಡುಹಗಲಿನ ನಿದ್ರೆ ಮಂಪರು ಬರಹವಾಗುವ ಮುನ್ನ ಮರೆತು ಹೋಗುವ ಕನಸು, ಬಿಚ್ಚಿಟ್ಟ ನೆನಪು ಕರಗಿ ಹೋಗಿದೆ ಬಳಲಿಕೆಯ ಬೆವರಿನಲಿ, ಆವಿಯಾಗಿ, ಅಸ್ಪಷ್ಟ ಕದಡಿದ ಮನಸು, ರಾಡಿ ಆಗಿದೆ, ಸಂಪೂರ್ಣವಾಗಿ, ಪರ್ಯಾಪ್ತ ದ್ರಾವಣ, ಪ್ರನಾಳದಷ್ಟೇ ಪಾರದರ್ಶಕ, ಕಾರಣ, ಆಕರ್ಷಕ ಭಾವ ಸ್ವಭಾವ, ಭಾಷೆ ಅಭಾವ ಎಲ್ಲದರಲ್ಲೂ ಆಗಿದೆ ರಹಸ್ಯ ಒಪ್ಪಂದ, ನಿಜ, ಯಾವುದಕ್ಕೂ ತಾಳೆಯಾಗದ ಯಾವ ಸಂಭಂದ.. ಹೂವಲ್ಲಿ, ಇರದ ಮಕರಂದ, ದುಂಬಿ ಮರೆತಿದೆ ತನ್ನ ಹಾರಾಟದಾನಂದ ಬೇಕಿಲ್ಲ ಪರಾಗ ತೇಲಿದೆ ಆವರಣದಲ್ಲಿ ಸರಾಗ, ಸ್ನೇಹಿತನ ಮಗಳು ಸ್ರಜನ, ಬರೆಯುತ್ತಾಳೆ ಕವನ, ಅಲ್ಲಿ... ಗೋಕರ್ಣದಲ್ಲಿ, ಮೀನ ವಾಸನೆಗೆ ನಾಯಿಯ ಹಸಿವು, ಹಸಿದ ಹೊಟ್ಟೆಗೆ ತಳಮಳ ಮಿಡಿಯುತ್ತಾಳೆ ಅಂತಃಕರಣದಲ್ಲಿ ಮಗಳು ಸಹನಾ, ಎದುರು ಆವಿಯಾಗುವ ಕಡಲ ಝಳ ಉಹಿಸ ಬಹುದೇ? ಹವಳ ಹಂಚುವ ಅದರ ತಳ, ಕಾಯುತ್ತಿದ್ದೇನೆ ಬೀಸಿ ನನ್ನ ಗಾಳ,