Posts

Showing posts from May, 2016
ಅಮ್ಮ......  ನನ್ನಮ್ಮ ನನ್ನಬಾಯಲ್ಲಿ, ಈಗ ಕೇವಲ ಉದ್ಗಾರ ಮಾತ್ರ ಅದರೂ ಕೂಗುತ್ತೇನೆ, ಬಾರಿ,ಬಾರಿ  ಅಕಾಲ, ಅನಿರೀಕ್ಷತ ಸಂದರ್ಭ ಗಳಲ್ಲಿ ಪರಿಸ್ಥಿತಿಗಳ ಹಂಗಿಲ್ಲದೆ... ಅಸಹಾಯಕನಾಗಿ...  ಪ್ರಜ್ಞಾಹೀನ  ಹೆದರಿಕೆಯ ನಡುಕದಲಿ, ಬೆವರೇ ಬೇರಾದ ಆತ್ಮದಾಳದಲ್ಲಿ  ಆಪ್ಯಾಯ ನೋವಲ್ಲಿ, ನಿರ್ಲಜ್ಜ ನಲಿವುಗಳ  ಕೋಪದ ಅಲೆಗಳಲ್ಲಿ, ಬಚ್ಚಿಟ್ಟ ಈರ್ಷೆಯಲಿ   ಎಚ್ಚರದ,ಸುಪ್ತ ಕನಸುಗಳಲ್ಲಿ ಜಾಗೃತ  ನೀ ಬಂದು ಆವರಿಸಿ ನಿನ್ನ ರಕ್ಷಕ ತೊಟ್ಟಿಲಿನಲ್ಲಿ, ತೂಗಿ ಆತ್ಮವನ್ನೇ ಗಟ್ಟಿತಬ್ಬಿ ಸಂತೈಸುತ್ತೀಯಾ ಆದರೂ ನೀನಿಂದು  ಈ ಗ್ರಹ, ನಕ್ಷತ್ರಗಳ ಲೆಕ್ಕಾಚಾರ,  ಗೃಹಾಚಾರ ತಾಪತ್ರಯ ದಿಂದಲೇ ದೂರ ಗ್ರಾಹಕಗಳ ಹೆದರಿಕೆ,ಬೆದರಿಕೆಗಳ ನಿರ್ಲಕ್ಷಿಸಿ  ನಿರ್ಲಿಪ್ತಳಾದೆ  ನೀನಿಂದು, ಬಂಧನದ ಬೇಡಿ ಕಳಚಿ ಒಂಟಿತನದ ಅನಾಥ ಕಾರಾಗೃಹದಲ್ಲಿ  ನಾ ಮಾತ್ರ ಆಜೀವ ಆರೋಪ ಕೈದಿ  ಶಾಶ್ವತವಾಗಿ ಕಾಯುತ್ತೇನೆ  ನನ್ನ ಬಿಡುಗಡೆಗಾಗಿ ಹೋಗಿ, ಬಾ ಎಂದು ನಾನು ಹೇಳುವುದಿಲ್ಲ ನನಗೆ ಗೊತ್ತಿದೆ ನೀನು ಮರಳಿ ಬರುವುದೇಇಲ್ಲ ಬರುತ್ತೇನೆ ನಾನೇ ಇಂದಲ್ಲ ನಾಳೆ  ವಿಳಾಸ ಗೊತ್ತಿಲ್ಲ, ಅದರ ಅವಶ್ಯಕತೆ ಇಲ್ಲ  ನಿನ್ನನ್ನೇ ಬಿಟ್ಟುಹೋಗಿದ್ದಿಯ  ಕಣಕಣಗಳ  ಜೀವಾಣುಗಳಲ್ಲಿ. ನನ್ನ ವಿಸ್ತಾರದಲ್ಲಿ  ನಿನ್ನದೇ ವ್ಯಾಪ್ತಿಯಲ್ಲಿ ಕಷ್ಟವಾಗುವುದಿಲ್ಲ ನಿನ್ನ ಪತ್ತೆ ಹಚ್ಚಲು ಸರ್ವವ್ಯಾಪಿ ನೀ  ವಿಶ್ವವೇ ನಿನ್ನ ಹೊಕ್ಕಳು ಬಳ್ಳಿ  ಇದು ಪರಮಾಣು ಸಂಬಂಧ....ಬ್ರಹ್ಮಾ
Just a wild flow of thoughts. The terrestrial biome engulfed by the omnivorous and the phagomanic water mass. The whirling wild marine habitat with its ritualistic folk dance solidifies into mega tectonic ice sheets. And the tundra hides in the covert operation of the lava below the mantle of the crust. The polar ice caps melts and covers layer by layer like melting and overflowing wax around the globe. The shielded mountains, the hillocks and the forests submerge into just  protrusions of the brushing cliffs. Icicles like long sabre tears into the air, the colourless surface, the eyesore of the white vast emptiness. The deafening silence of the lifeless planet with rough winds run randomly, wheezing like a bullet and shatters your soul into million bits to prove the monotony and the waste and forlorn lethargic mental mode in a static mood. The inescapable and the universal loneliness echoes in the cosmos....the ripples rip our gravity into astronomical desert in the inanimate plan
Just a wild flow of thoughts . The terrestrial biome engulfed by the omnivorous and the phagomanic water mass. The whirling wild marine habitat with its ritualistic folk dance solidifies into mega tectonic ice sheets. And the tundra hides in the covert operation of the lava below the mantle of the crust. The polar ice caps melts and covers layer by layer like melting and overflowing wax around the globe. The shielded mountains, the hillocks and the forests submerge into just  protrusions of the brushing cliffs. Icicles like long sabre tears into the air, the colourless surface, the eyesore of the white vast emptiness. The deafening silence of the lifeless planet with rough winds run randomly, wheezing like a bullet and shatters your soul into million bits to prove the monotony and the waste and forlorn lethargic mental mode in a static mood. The inescapable and the universal loneliness echoes in the cosmos....the ripples rip our gravity into astronomical desert in the inani
ದಾಹ ಜಲವೆಲ್ಲ ನೆಲವಾಗಿ, ನೆಲವೆಲ್ಲ ಘನವಾಗಿ, ಹರಳಾಗಿ, ಹುರುಳಿಲ್ಲದ ಬಿಳಿಹುಡಿಯಾಗಿ ಹರಡಿ ವ್ಯಾಪಿಸುವ ವಿಸ್ತಾರ, ದಿಗಂತ ಶಾಂತ, ಶಿಲಾಸ್ಪಟಿಕ ಸಾಗರ ಮರುಭೂಮಿಯಲ್ಲೆಲ್ಲಾ ಪ್ರತಿಫಲನ ಆಸಾಧ್ಯವೇನೋ ? ಕಡಲಾಲಿಂಗನ ಕಂಗಾಲಾದ ವಿರಹಿ ಭೂಅಂಚಿನ ಜೋಡಿ ಕಣ್ಣಿದ್ದು, ಬೆಳಕಲ್ಲೇ ಕುರುಡು ಸೂರ್ಯನಿದ್ದೂ ಇಲ್ಲದ ವಿಚಿತ್ರ ಬೆಳಕು ಅಕ್ಶಿಪಟಲ ಅಂಧಕಾರ,ಶಾಶ್ವತ ಮಬ್ಬು ಪಾಪ ಅಪಾರದರ್ಶಕ ನಿಶ್ಚಲ ಗಾಳಿ ಚಲಿಸಲಾರದು,ಬಡಿದಿದೆ ಶ್ವಾಸಕ್ಕೇ ಪುರುಡು ಇರುಳುಗುರುಡು,ದೃಷ್ಟಿದೋಷ ಆಗಲೇಬೇಕಿದೆ ಶಾಪಮುಕ್ತ ಬೇಕಿದೆ ನಮ್ಮೆಲ್ಲರೊಳಗೊಬ್ಬ ಸಾತ್ವಿಕ ಶಬರಿ ಬೆರಗಾಗಿ,ದೃವಕರಗಿ ಬೆದರಿ,ಬೆವರಿದೆ, ಸೊರಗಿದ ಹಿಮನದಿ, ಹರಿದಿದೆ ಅಪಾಯ ವೇಗ ಪ್ರವಾಹ ನೀರೆಲ್ಲ ಆವಿ, ಗಗನ ಭಾಷ್ಪಹೊದಿಕೆ ಇಂಗಿಸಿ ಆಪೋಷನ ತೆಗೆದುಕೊಳ್ಳುವ ಬಾಯಾರಿದ ಧರೆ ವಾತಾಪಿ, ಮಂತ್ರ ಮರೆತ ನಾವು ಕೇವಲ ಪರತಂತ್ರ ಜೀವಂತ ಒಂಟೆಗಳ ಕೊರಳಗಂಟೆಯ ನಾದ ಸ್ಥಬ್ಧವಾಗಿದೆ ಓಯಸಿಸ್ ನಲ್ಲಿ ಬದುಕಿನ ತಂಟೆಯೇ ಇಲ್ಲ,?ಭಾವಗಳ ಗಂಟೇಕೇ ಆವಾಸದ ನಂಟೇಕೇ? ಊರ ಕಾಲು ದಾರಿ, ರಾಜಮಾರ್ಗ,ರಾಷ್ಟ್ರೀಯಹೆದ್ದಾರಿ ನದಿಯಾಗಿ ಸರಿದು ಜೀವಜಾಲ ಬಿರಿದು ಗಿರಿ,ಕಾನನದಲ್ಲಿ ಜಲಸ್ಪೋಟ, ಸಜೀವ ಸಮಾಧಿ ಅದಕೆಂದೇ ಬರಬೇಕಿದೆ ಗಂಗೆ ಮರಳಿ ಮತ್ತೊಮ್ಮೆ ಈ ಧರೆಗೆ ತೀರಿಸಲು ತೃಷೆ, ಬೇಕಿದೆ ಜೀವಾಧಾರ ತೀರ್ಥ ಬೇಕಿದೆ ತಕ್ಷಣ ಭೂಮಿಗೊಬ್ಬ ಭಗೀರಥ ಮಹಾತಪಸ್ವಿಹೂಡಬೇಕಿದೆ ಘನಗೋರ ತಪಸ್ಸು ವರಕೊಟ್ಟ ಶಿವನಡುಗಿ ಅಡಗಿ ನಾಪತ್ತೆ ಹಿಮಶಿಖರಗಳಲ್ಲಿ ಕೊ
ಕಾಣೆಯಾಗಿದ್ದಾರೆ. .... ಹಿರಿಯನಾಗರೀಕರೊಬ್ಬರ ನಾಪತ್ತೆಯ ಸುದ್ದಿ  ಹಳಸಿ, ಹದವಾಗಿ,ಸುಮಾರು ಸಮಯ ಆಯ್ತು, ಆತಂಕ,ಶ್ರೀಸಾಮಾನ್ಯನಂತೆ ಕಾಣುವ ಇವರು ಸ್ವಲ್ಪ ನಿಗೂಢ ಕಾರಣ ಇಷ್ಟೇ....ಮರೆವಿನ ರೋಗ ಡಿಮೆಂಷಿಯಾ.... ಇದ್ದಕ್ಕಿದ್ದಂತೆ ಮಾಯಾವಾಗುವ, ಅಭ್ಯಾಸ ರೂಢಿಸಿ ಕೊಂಡಿದ್ದಾರೆ ಇವರ ನಿಕಟವರ್ತಿಗಳಿಗೆ ಅನುಮಾನ ಬಾರದಹಾಗೆ ಕುರುಹು,ಸುಳಿವುಗಳಿಲ್ಲದೆ ಕಳೆದುಹೋಗುತ್ತಾರೆ ಆಗಾಗ್ಗೆ, ಆಪರೂಪವಲ್ಲದಿದ್ದರೂ ಮುದಿದೇಹಕ್ಕಾದರೂ ಮರುಕ ಮಡುಗಟ್ಟಬಹುದು ಮೌನದಲ್ಲಿ ಜ್ಞಾನಿಗಳಂತೆ ಭ್ರಮೆ ಬಿತ್ತುತ್ತಾರೆ ಮಾತಿಗೆ ಇಳಿದಾಗ ಮೊಳಕೆ ಕರಟಿ ನಿರ್ಜೀವ ಭ್ರೂಣ ಕರ್ಕಶ ಪ್ರತಿಧ್ವನಿ ಕಿವುಡಾಗಿಸುತ್ತದೆ.. ಅಡ್ಡಿ ಇಲ್ಲ... ಹುಚ್ಚರ ಸಹವಾಸವೇ ಹಾಗೆ ಅತಿ ಸ್ನೇಹಮಯಿ, ಕಂಡ,ಕಂಡವರನ್ನು ನಿಲ್ಲಿಸಿ ರಸ್ತೆಯಲ್ಲಿ ಮಾತಿಗೆಳೆಯುವ ಪರಿಗೆ ಮಾನಸಿಕ ಅಸ್ವಸ್ತ ಎಂಬ ಪ್ರಸಂಶೆ ಅದೇಕೋ ಈ ಬಾರಿ ಅವರ ಕಾಣದಿರುವಿಕೆ ಅಸಹಜ ಅನ್ನಿಸುತ್ತಿಲ್ಲ, ಕಾಲ ಮೀರಿಲ್ಲ ಮರೆಯುವಷ್ಟು ನೀವೆಲ್ಲಾ ಆಗಮಿಸಬಹುದು ಆಕಸ್ಮಿಕವಾಗಿ ನಿಮ್ಮಲ್ಲಿಗೆ ಬಂದಾಗ ಅಭಿನಯಿಸಿ, ಒಂದು ಫ್ಹೋನಾಯಿಸಿ ಖುದ್ದಾಗಿ ನಾನೇ ಬಂದು ಕರೆತರುತ್ತೇನೆ ಪುಸಲಾಯಿಸಿ ಮತ್ತೆ ಹೊರಹೋಗದ ಹಾಗೆ ಬೀಗ ಜಡಿಯುತ್ತೇನೆ ಸಹಕರಿಸಿ, ಕಳೆದುಹೋಗಿದ್ದಾರೆ ಮುದಿಪ್ರಾಯದವರು ಸುಳಿವು ಸಿಕ್ಕದ ಹಾಗೆ, ಎಲ್ಲ ಅಳಿಸಿ, ಕುರುಹುಗಳ ಕುರುಡಾಗಿಸಿ. ತನ್ನನ್ನೇ ಹುಡುಕುತ್ತಿರುವ ಅಲೆಮಾರಿ ಆತ್ಮ... ...
ವಿಕಾಸ,ಪ್ರಗತಿ,ವಿನಾಶ ಇತ್ಯಾದಿ ವಿವೀಕಿ ವಿಧ್ವಂಸಕಾರಕ, ನಿಜ,ಕೆಲವೊಮ್ಮೆ, ಕೆಲವರಿಗೆ ಹೆಸರು ಅನ್ವರ್ಥಕ ಜಾತಿ ಪ್ರಭೇದ ಸೂಚಕ, ನಿಜ ತೀರಾ ವೈಜ್ಞಾನಿಕ ಸಾಮಾನ್ಯರಿಗೆ ಚಿರ ಪರಿಚಿತನಾದರೂ ಅನಾಮಿಕ, ಭವಿಷ್ಯ ಬರೆದು ,ಭಾವ ಚಿವುಟಿದ ಭಾವುಕ! ಹೊತ್ತ ತನ್ನ ರೆಂಬೆಯನ್ನೇ, ತಾನೇ ಕಡಿವ ಸಾದಕ. ಮಹಾಕವಿ ಕಾಳಿದಾಸ! ಹಾಡುತ್ತಿದ್ದಾನೆ ಚರಮಗೀತೆ ಹಂಸಧ್ವನಿಯಲ್ಲಿ ಮೈಮರೆತು, ಕಿವುಡನಂತೆ....! ಜ್ಞಾನದಲ್ಲಿ ಮಿದುಳು ಅರಳಿ , ಭಕ್ತಿಯಿಂದ ಹೂವು ಮುಡಿಸಿ ಮಿದುಳಿನಲ್ಲೇ ಎಲ್ಲ ಕೆಡಿಸಿ, ಸೃಷ್ಟಿ ಯಿಂದ ಪುಷ್ಟಿ ಗೊಂಡು, ಕಂಡಿದೆಲ್ಲ ಕುಡಿದು ತಿಂದು, ಬಳೆದು ಬಾಚಿ ಖಾಲಿ ಮಾಡಿ, ಇದ್ದದೆಲ್ಲ ಕದಡಿ, ಕದಡಿ, ತೀಡಿ ಮಾಡಿ ಎಲ್ಲ ರಾಡಿ. ತಾಯ ಬಸಿರ ಹಸಿರು ಬಗೆದು, ಇದ್ದದೆಲ್ಲ ಹೊರಗೆ ತೆಗೆದು... ಯಶಸ್ವಿ ಮೆರೆದ ಸಾಧನೆ, ತಪಸ್ವಿ ಮರೆತ ವೇದನೆ ಅಳಿವಪ್ಪಿದೆ ಪರಿಸರ, ಗಾಳಿಗೂ ಬೀಸದ ಚಾಮರ, ಜರಡಿಯಾದ ಹಂದರ, ಭೂಮಿ ಸುಡುವ ಪಂಜರ, ನದಿಗಳಾಗಿವೆ ಕಂದರ, ಕಾವೇರಿದ ಚಂದಿರ, ಬತ್ತಿಹೋದ ಸಾಗರ, ಮರಳುಭೂಮಿ ಆಕರ, ಪರಿಹಾರ! ಸ್ಪೋಟಗೊಂಡ ಮಹಾ ಸಮರ... ಭಸ್ಮಾಸುರನ ಆತ್ಮಾಹುತಿಯ ಶಿವತಾಂಡವ ಕಳಚಿಹೋದ ಜೀವ ಕೊಂಡಿ, ಮಾಯವಾಗಿವೆ ಸರದಿಯಲ್ಲಿ, ದೂರಜಾರಿದ ಪರಧಿಯಲ್ಲಿ, ಜೀವಮಂಡಲ ಪ್ರಕ್ಷುಬ್ದ, ವಿವಿದತೆಯ ಭಾಗಕಾರ ಜೀವಮಂಡಲದ ಲೆಕ್ಕಾಚಾರದಲ್ಲಿ... ಭಾಗಲಬ್ಧ? ಉಳಿಯಬಲ್ಲದೇ, ಶೇಷ ಜೀವಾಣುವಾದರೂ?