Posts

Showing posts from October, 2017
ವಯಸು.  ನುಣುಚಿಕೊಳ್ಳುವ ನಿನ್ನ ನಯವಾದ ಶೈಲಿ, ಜೆಲ್ಲಿಯಂತೆ ಜಾರಿ ಚದುರುವುದಿಲ್ಲ,  ಸ್ಪೋಟಿಸದ ಲಾವ ಪಡೆವ ಘನರೂಪ ನಿಶ್ಚಲ ಉರುಳು ಸಿಕ್ಕ, ಸಿಕ್ಕ ಜಾಗದಲ್ಲಿ, ಜೋತುಬೀಳುವ ಮರುಳು ಹಿಡಿತಕ್ಕೆ ಜಿಡ್ಡಾಗಿ ಜಾರಿಹೋಗುವ ಶೂನ್ಯ  ನಿನ್ನಿರುವು, ಅನುಭವಕೆ ಬಾರದ ಅಸಂಗತ, ಎಲ್ಲೆಡೆ ಅವಿರ್ಭವಿಸುವ ನಿರಾಕಾರ ನೀನು, ಸುಪ್ತ ಚಲನೆಯ ಅನುಭವದ ಕ್ಷಣದಲ್ಲಿ ಆಗಂತುಕ ನಾನು ನನಗೆ, ವಿವರಿಸಲು ನಿನ್ನ ಏನೆಂದು, ಹೇಗೆಂದು ಏಕೆಂದು, ಯಾರೆಂದು, ಯಾರಲ್ಲಿ ಕೇಳುವುದು? ನಿನ್ನ ಅನೂಹ್ಯ ಭವಿಷ್ಯದ ಆದ್ಭುತ ವಿಶಾಲ ಚಾಚು ದಿಕ್ಕುಗಳಿಲ್ಲದ ಈ ಗುರುತ್ವರಹಿತ ಖಾಲಿತನದಲ್ಲಿ ತೂಗಿ, ಜೋಕಾಲಿ ಆಡುವ ಜೀವಿಗಳ ಸಂತೆಯಲ್ಲಿ ನೆಲದಮೇಲೆ ತೇಲುವ ಭ್ರಮೆ ಎಲ್ಲರಿಗೆ ಸಿಕ್ಕಷ್ಟೇ ಅನುಭವ, ಕಂಡಷ್ಟೇ ಕನಸು ಒಮ್ಮೊಮ್ಮೆ ನನಸಾಗುವ ಮನಸು ಅದೇ ಆ ಬೆರಗಾಗುವ ನಿಜ ವಯಸು.

ಇಕಾಲಜಿ....ಕಾಳಜಿ....

ಇಕಾಲಜಿ ಕಾಳಜಿ  ಪರಿಸರಪ್ರೇಮಿ ಈ ಆಸಾಮಿ.. ಕೇಳಬೇಡಿ ಮಹಾಸ್ವಾಮಿ, ಒಂಥರಾ ಇವನೇ ಭಯಂಕರ ಸುನಾಮಿ. ಜೋಕೆ ! ಜೋಕು..ಮಾರ... ಮಾತಿಗಿಲ್ಲ ಬರ, ಭಾರ! ಜ್ಞಾನ ವ್ಯವಹಾರ, ಅಭಿವ್ಯಕ್ತಿ ಅಪಾರ ಬೇಕೆ ಬೇಕು ಇವನಿಗೆ ಸನ್ಮಾನಗಳ ಸರಮಾಲೆ, ಇವನಿಗಿದೆ ಜನಪ್ರಿಯತೆ ಸಂಪಾದನೆಯ ಖಾಯಿಲೆ ಹೆಸರು ಮಾಡುವ ಒಂದು ವಿಧದ ಕಾಮಾಲೆ.. ಇದೆ ಇವನಿಗೊಂದು ಭದ್ರ ನೆಲೆ. ಗೊತ್ತಿದೆ ಚೆನ್ನಾಗಿ ಹಣ ಮಾಡುವ ಕಲೆ, ಪರಿಸರ ಸಂರಕ್ಷಣೆ.... ಟೈಮ್ ಸಿಕ್ಕರೆ ನೋಡೋಣ ಆಮೇಲೆ. ಸೆಮಿನಾರು, ಚರ್ಚೆ, ಸಮ್ಮೇಳನ, ಅಂತರರಾಷ್ಟ್ರೀಯ ವೇದಿಕೆ, ಇವರಿಗಿದೆ ಬಹಳ ಬೇಡಿಕೆ, ಸಧ್ಯಕ್ಕೆ ಡಿಸ್ಟರ್ಬ್ ಮಾಡ್ಬೇಡಿ, ಸಾಹೇಬರು ಬಹಳ ಬಿಸಿ. ತಲೆ ತುಂಬ ಇಕಾಲಜಿ, ನೀವು ಮಾಡ್ಬೇಡಿ ಕಾಳಜಿ.. ವಿಷಯ ಎತ್ತುತ್ತಾರೆ ಸೂಕ್ತ ಪರಿಸರ ನೋಡಿ. ಸಧ್ಯಕ್ಕೆ ನೀವು ನೋಡಿ ದೂರದರ್ಶನ, ಅಲ್ಲಿ ಪಡೆಯಿರಿ ಅವರ ದರ್ಶನ, ಕೊಟ್ಟೆ ಕೊಡುತ್ತಾರೆ ನಿಮಗೆ ಒಮ್ಮೆ ಸಂದರ್ಶನ ....

ವಿಕಾಸ ಗೀತೆ.....

                              ವಿಕಾಸ ಗೀತೆ  ಜಲಜ ಶಿಲಾ ಸುಪ್ಪತ್ತಿಗೆಯ ಚರಟದ ಚಾದರ ಹೊದ್ದು, ಮಲಗಿರುವ ಕುಂಭಕರ್ಣ. ಧರೆಗೆ ಹಿಡಿದಿತ್ತು ಗ್ರಹಣ, ಚಿರಂಜೀವಿ, ಭ್ರೂಣ ಬೆಳೆಯಲಿಲ್ಲ ಪೂರ್ಣ, ವಿಕಾಸದ ಅನಂತ ಪಯಣ ಆದಿ ಅಂತ್ಯ ಗಳೆರಡು ಅರಿಯದ ನಿರಂತರ ಮರಣ. ಆ ಕಾಲ ಒಂದಿತ್ತು ಧರೆ ಬೆಂಕಿ ಉಗುಳಿತ್ತು ನಿರ್ಜೀವ ಹೊಗೆ ಹೊರಹಾಕಿತ್ತು, ಭೂ ತಾಯಿ ನಿರ್ಜಲ ಬಸಿರು, ಪ್ರಕ್ಷುಬ್ದ ವಾಗಿತ್ತು ಮೈ ಮರೆತು ಹರಿಯಿತು ತೊರೆ, ಅಂದೇ ಮೈನೆರೆತ ವಸುಂಧರೆ, ತೊಟ್ಟಿದ್ದ ಆ ಹಸಿರು ಫ್ಯಾಶನ್ ಸೀರೆ ಅಂಚಿಗೆ ವರ್ಣಮಯ ವಿನ್ಯಾಸ ಬೇರೆ, ಸಪೂರ ಪಾರದರ್ಶಕ ತೆಳುವಾದ ಪೊರೆ, ನೀಲಹಸಿರು, ಬೂದಿ ಕೆಂಪು ಸತತ ವರ್ಷಧಾರೆ. ಏನೆಲ್ಲಾ ಕಲೆ ಅದರ ಮೇಲೆ? ಹೊರೆ, ಚಿತ್ತಾರದಲ್ಲಿ ಸೆರೆ, ಗೆರೆ, ಕೇಳುವುದಿಲ್ಲ ಯಾರ ಮೊರೆ, ಜೀವಜಾಲದಲಿ ಬದುಕಿನ ಶಾಶ್ವತ ಸೆರೆ, ನಡೆಯುತ್ತಲೇ ಇದೆ ಇಂದಿಗೂ ಅಸಂಖ್ಯಾತ ಕೊಲೆ, ಜನನ ಮರಣಗಳ ವಿನಿಮಯ ಲೀಲೆ, ವಸ್ತುಗಳ ವರ್ತುಲ ಮುಗಿಯದ ಜಾತ್ರೆ ಎಂದೂ ಮುಗಿಯದ ಜೈವಿಕ ಖಾತೆ... ಹರಿಸಿ, ಹಾರೈಸಿದಳು ಪ್ರಕೃತಿ ಮಾತೆ, ಜೀವಿ ವಿಸ್ಮಯ, ವಿವಿಧತೆಯ ಭಿಕ್ಷಾಪಾತ್ರೆ. ಅದಕ್ಕೆ ಇರಬೇಕು, ಸರ್ಪರಾಜನ ಶಾಪ, ಭಸ್ಮವಾಯಿತು, ಪಾಪ, ದೈತ್ಯ ಉರಗ, ಕವಲಾಯಿತು ಖಗ, ಮೃಗ.. ಮುಗಿಯಿತು ಸುವರ್ಣ ಯುಗ, ಶುರುವಾಯಿತು ಹೊಸ ರಾಗ ತಾಯಿಯ ತ್ಯಾಗ ಎದೆಹಾಲಿನ ವೈಭೋಗ ಇಂದಿನ ಹಾ
Life is too beautiful....dont destroy it... There is no values, ethics, principles or any religion or caste that are followed in its real spirit and in a real sense there is none anywhere in the world today. It is impossible to apply those impractical and outdated values in the present complicated and most complex social fabric where even their own Gods are contradicted and disrespected...but, still the followers of these different school of philosophy are waging wars in the name of these absurd identity. The same bi ological principle of survival for the fittest in a different dimension is expressed for the last few thousand years.... Even today it is expressed in a different way...In all the caste, religion, tribe,and creed only class is strictly followed..the struggle was always between resourceful the strong and mighty in physical power and non-resourceful the weak and non-combative species susceptible for extinction in the constantly changing environment. In our prese
ಯಾವಕಾಲಕ್ಕೂ ಯಾರು, ಯಾವುದೂ, ಅನಿವಾರ್ಯವಲ್ಲ ಇಲ್ಲಿ. ಪ್ರಪಂಚದ ಹಾಲಿ ಅಪಾಯಕಾರಿ, ಆತಂಕಕಾರಿ, ಕಳವಳದ ಪ್ರಕ್ಷುಬ್ಧ ಪರಿಸ್ಥಿತಿ ಸಹಾ ನೈಸರ್ಗಿಕ ಪ್ರಕ್ರಿಯೆ ಎಂಬುದು ನನ್ನ ಅನಿಸಿಕೆ. ಈಗ ಕಾಣುತ್ತಿರುವ ಅಸಹನೆ, ದ್ವೇಷ, ದೇಶ, ಭಾಷೆ, ಯುದ್ಧ, ಪ್ರಗತಿ, ಸೋಲು, ಗೆಲುವು, ಪ್ರಗತಿ, ಆಕ್ರಮಣ, ಪರಾಕ್ರಮ, ಸಾಮ್ರಾಜ್ಯ ಸ್ಥಾಪನೆ ಎಲ್ಲವೂ ಮುಂಬರುವ ಭಯಂಕರ ಭವಿಷ್ಯದ ಸೂಚಕಗಳು. ಎಲ್ಲವೂ ಮೌನವಾಗಿ ಪರಿಸರದ ಮುಂದುವರಿಕೆ ಯಿಂದಲೇ ನಿಯಂತ್ರಿಸಲ್ಪುಡಿತ್ತಿದೆ. ಈ ಕ್ರಿಯೆಗಳೆಲ್ಲಾ ಗುಪ್ತವಾಗಿ ಪರಿಸರ ಸಂತುಲನವನ್ನು ಕಾಪಾಡುವ ಒಂದು ತಂತ್ರ. ಈ ಪರಿಸರದ ನಿಷ್ಪಕ್ಷಪಾತ ಯೋಜನೆಯಲ್ಲಿ ನಾವು ಇರುವೆವೋ ಇಲ್ಲವೋ ನಿಸರ್ಗವೇ ನಿರ್ಧರಿಸಲಿದೆ. ಕೇವಲ ನಾವು ಮಾನವ ಕೇಂದ್ರಿತ ಅಸ್ತಿತ್ವವನ್ನು ಒಪ್ಪಿಕೊಂಡು ಮಿಕ್ಕಎಲ್ಲಾ ಪ್ರಾಕೃತಿಕ ಅಂಶಗಳನ್ನು ನಾವು ನಿಯಂತ್ರಿಸುತ್ತೇವೆ ಅಥವಾ ಅವುಗಳ ಇರುವಿಕೆ ದೇವರಿಂದ ನಮಗಾಗಿ ದೊರೆತ ವಿಶೇಷ ಕೊಡುಗೆಗಳು ಮಾತ್ರ ಎಂಬ ಭಾವನೆಯಲ್ಲೆ ಎಲ್ಲವನ್ನು ಹಿಗ್ಗಾ ಮುಗ್ಗಾ ಕೊಳ್ಳೆಹೊಡೆಯುತ್ತಿದ್ದೇವೆ. ನಮ್ಮ ಇತಿಹಾಸವನ್ನು ಕೆದಕಿದಾಗ ಇಂದಿನ ನಾವು, ಹೀಗಾಗಲೂ ಕೇವಲ ಕೆಲವೇ ಸಾವಿರವರ್ಷಗಳು ಮಾತ್ರ. ಈ ಅಲ್ಪಸಮಯದಲ್ಲಿ ಪರಿಸರದ ಎಲ್ಲಾ ಅಂಶಗಳನ್ನು ಗರಿಷ್ಟ ಮಟ್ಟದಲ್ಲಿ ಬಳಸಿ ಸಂಪನ್ಮೂಲ ಆಗರವನ್ನು ಬರಿದಾಗಿಸಿ ಮಜಾ ಉಡಾಯಿಸುತ್ತಿದ್ದೇವೆ. ಮುಂಬರುವ ಪೀಳಿಗೆ ಉಳಿಸಿಹೋಗುವುದು ಕೇವಲ ಬರಿದಾದ ಚಿಪ್ಪು. ನಮ್ಮ, ಈ ಗ್ರಹದಲ್ಲಿ ಜೀವವಿಕಾಸದ
ಅನ್ವೇಷಣೆ. ತೂಗುತಿದೆ ಮನಸು ಲೋಕದ ಲೋಲಕ ಗೌರಿಶಂಕರ ಶಿಖರದ ತುಟ್ಟತುದಿಯಿಂದ ಪೆಸಿಫಿಕ್ ಸಾಗರದ ಆಳದಲ್ಲಡಗಿರುವ ತಳರಹಿತ ಪ್ರಪಾತ  ಮಾರಿಯಾನ ಕತ್ತಲ ಕಂದಕದ ವರೆಗೆ, ನಿರಂತರ ಆವರ್ತನದಲ್ಲಿ ಜೋತುಬಿದ್ದಿವೆ ಅಪಾಯದಲ್ಲಿ ಉಯ್ಯಾಲೆಯ ತೂಗಾಟದಲ್ಲೇ ಭ್ರಮೆ, ತಲೆತಿರುಗಿ ಮಂಪರು ಎತ್ತರ, ಆಳಗಳ ವ್ಯತ್ಯಾಸವಿಲ್ಲ, ದಿಕ್ಕಿಲ್ಲದ ನೋಟ ದಿಗಂತ ಬಯಲಲ್ಲಿ ಗಾಳಿಯನು ಹಿಡಿಯದ ಗುರುತ್ವ ಅಲ್ಲಿ ಎಲ್ಲವೂ ನಿರ್ವಾತ... ಕಗ್ಗತ್ತೆಲೆಯ ಕಂದರದಲಿ ಅತಿ ಸಾಂದ್ರ ಒತ್ತಡ,ಬಾಳಿನ ವಿಸ್ಪೋಟ ಬದುಕೆಲ್ಲ ಛಿಧ್ರ,ಛಿಧ್ರ ಹರಡಿದೆ ಎಲ್ಲೆಲ್ಲೂ ಬೆಸೆದ ಕೊಂಡಿ ಲೋಹದ ಗುಂಡಿಗೆ ಬಿಗಿದು, ಸಿಡಿಗಂಬಕೆ ಕಟ್ಟಿ,ತೂಗುಬಿಟ್ಟ ದಾರದ ತುದಿ ತಿರುಗುತ್ತಲೇ ಇದ್ದಾನೆ ಜೋಗಿ ನುಂಕಪ್ಪ ತನ್ನದೇ ಬಂಡೆ ಗುಡ್ದಗಳ ಸಾಮ್ರಾಜ್ಯದಲ್ಲಿ ಹುಡುಕಿ,ಹೆಕ್ಕಲು ಹೊರಡಬೇಕಿದೆ ತ್ವರಿತದಲ್ಲಿ ಆರಂಭವಾಗಬೇಕಿದೆ ಮತ್ತೊಮ್ಮೆ ಮಹಾ ಅನ್ವೇಷಣೆ