Posts

Showing posts from June, 2015
ಮೌನಿ.... ಮಣ್ಣ ತುಂಬಿ, ನೀರ ಬೆರೆಸಿ, ಬೆಳಕ ಚುಂಬಿಸಿ ಆಕಾರ ತುಂಬಿಸುವ ಪ್ರಕೃತಿಯ ಅಕ್ಷಯಪಾತ್ರೆ ಸಕಲ ಜೀವಿಗಳಿಗೆ, ರಾಡಿ ಹರಿಸಿ, ಹಸಿರು ಕಲಸಿ, ಮೆತ್ತಿ ಕೆಸರ, ಬೆರೆಸಿ ಲವಣ, ಹೀರಿ ಕಿರಣ, ಪೋಣಿಸಿ ಕಟ್ಟುವ ಆಹಾರ ತೋರಣ ಭೂವಿಸ್ತಾರದಲಿ ವಿಸರಿಸಿ, ಹರಿದು ನೀರಲ್ಲಿ ನೀರಾಗುವ ಪಾಚಿ ಬೆಳಕಿನ ಬೆರಣಿಯಲ್ಲಿ ಹದಮಾಡುವ ಕಲೆಗಾರ ಸಂಸ್ಲೇಷಕನಾದರೂ, ಗಾಳಿ ಬೀಸುವ ವಿಶ್ಲೇಷಕ ಜೀವಶಕ್ತಿ ಹಂಚಿಕೆದಾರ. ಶಾಶ್ವತ ಮೌನಿ, ತುಂಬಾ ಸರಳ ಹೀಗೆ ನಮ್ಮಲ್ಲಿ ಅತಿ ವಿರಳ ದೇಹಕ್ಕೆ ಅಂಟಿರುವ ಉಸಿರಿನಂತೆ, ನೆಲಮರೆಯದ ನಿಶ್ಚಲ ಯೋಗಿ ಗುರುತ್ವ ಗುರುವರ್ಯರಲ್ಲಿ, ಭಕ್ತಿ ಅಪಾರ ಗುರು ಇದ್ದಲ್ಲೇ ನೆಲೆ, ಪ್ರಶ್ನಾತೀತ ವಿಧೇಯತೆ ಸೆಲೆ ಕದಲುವುದಿಲ್ಲ ಅಚಲ, ಕಿತ್ತಿ ಅಡ್ಡ ಮಲಗಿಸಿ, ತಲೆಕೆಳಗೆ ಮಾಡಿ ವ್ಯಾಮೋಹದ ನೀರುಣಿಸಿದರೂ ಮತ್ತೇ ಹುಡುಕಿಕೊಂಡು ಬರುವ ಅತಿವಿನಯ ಶಿಷ್ಯಭಕ್ತ ಒಣಮರದ ಬೇರಿಗೆ ಜರಡಿಯ ಪಾತ್ರೆಯ ಜಲಸಿಂಚನ ಕೃಷ್ಣ ಮರೆಯಲಿಲ್ಲ ಕರುಣಿಸಲು ಸಾಕ್ಷಾತ್ಕರ ಕಂಡಾಗ ಭೀಮನ ಹೆಣಹೊತ್ತ ಧರ್ಮರಾಯನ ವ್ಯಾಮೋಹ, ಸ್ವರ್ಗದಹಾದಿಯಲ್ಲಿ ಕವಲು,ಕವಲಾಗಿ ಕರಗಿ,ಮಾಯವಾಗುತ್ತಾ ಸ್ಥಿತಿಸ್ಥಾಪಕದಲ್ಲೇ ಇಳಿಯುವ, ಆಳ ಹುಡುಕುವ ವೇಷಧಾರಿ ಯಾರಿಗೂ ಕಾಣದ ಗುಹೆಯಲ್ಲಿ ಜಪಿಸುವ ಋಷಿ ತನ್ನೆಲ್ಲಾ ಜೀವಕವಲುಗಳ ಜೀವಜಲ ಉಣಿಸುವ ಜವಾಬ್ದಾರಿ ಯಜಮಾನ, ಗುರುತ್ವಕ್ಕೆ ಪ್ರಶ್ನೆಯಾಗುವ ಬೆಳಕಿಗೆ ವಿಮುಖನಾದ ಬಲಿ ಪಾತಾಳ ಹೊಕ್ಕು, ಕಣಕಣದಲ್ಲಿ ಅಭಿಸರಿಸಿ ಎತ್ತರಕ್ಕೆ ನೂಕಿ, ಗುರಿತಲು
The Western ghats and the monsoon... Yes... I am a seasonal and seasoned vagabond...roaming and loafing in the wilderness, squandering the pent up zeal for the needed hour for the monsoon rain that is as special as it is with its punctual regularity..... the clouds in the sky like light worms are attracted to the gigantic mountain range of Western Ghats...The dense mass of black cotton mass that is stuffed haphazardly to the brim of the hiding sky...that sometimes cracks open with thunderous sound with a prelude of linear light mark against the back drop of the blocked out pavilion...A glorious rainy life creator’s concert has begun....The basic notation is the rustling of the leaves and the regular rhythmic drum beat of the dripping drops from the gigantic trees... A sight to fill your inner eyes and the sound ever reverberates in your immortal soul.... Though physically alone in the wild you feel.....the life flows in every capillary that carries sap to the branches, twigs,
ಮೊಳಕೆ ಒಡೆಯದ ಬೀಜ ಮಾನವ,..ಮೂಳೆಮಾಂಸದ ತಡಿಕೆ...ದೇಹವೂ.... ಅಸ್ಥಿಯಲ್ಲೂ ನೀರು ಮಾಂಸದಲ್ಲಿಯೂ ಅಪಾರ ಜಲಸಂಪತ್ತು ಜೀವಿಗಳ ಅಸ್ತಿತ್ವವೆಲ್ಲವೂ ಮೂಲದಲಿ ಸಂತೃಪ್ತ ದ್ರಾವಣ.. ರಕ್ತವಾದರೂ ಜೀವದಾತುವಿನ ಜೀವ ನೀರು ಅಸಂತೃಪ್ತವಾಗುವುದು ಅಸಂಗತ ಜಲತಪ್ತ ದ್ರಾವಣ ಜೀವದಾತುವಿನ ಈ ಅತೃಪ್ತ ಕಾಯದಲ್ಲಿ ,ಜೈವಿಕಗೊಬ್ಬರಕ್ಕೆ ಬರವಿಲ್ಲ ಶಂಕು ರಕ್ತ ಸೀಸೆಯಲ್ಲಿ ಬೆಳಕೇ ಕಾಣದ ಮನಿಪ್ಲಾಂಟ್ ಗಿಡ ಮನೆಯಲ್ಲೇ ಬೆಳೆಯುತ್ತದೆ, ಚಿಗುರುತ್ತದೆ......ಹಸಿರಾಗಿಸಿ ಉಸಿರಾದರೂ ನಮ್ಮ ಎದೆಯ ನೆಲದಲ್ಲೇಕೇ ಕರುಣೆಯ ಜಲ ಕ್ಷಾಮ? ಯಾವುದರ ಕೊರತೆ,? ನೀರಿದೆ ಕೋಶರಸ ದ್ರವೀಕರಿಸಲು. ರಕ್ತಬಿಸಿಯಾಗಿ ಉಷ್ಣತೆ ಗೆ ಬರವಿಲ್ಲ ಕಿಣ್ವ ಪ್ರಚೋದಿಸಲು,ನಾವು ಬಿಸಿರಕ್ತ ಪ್ರಾಣಿಗಳು ಪೋಷಕಾಂಶಗಳು ಹೇರಳ...ಬೆಳದದ್ದು ಅಸಹನೆ,ಅಹಂ ಕೋಪ,ದ್ವೇಷ ಭಿತ್ತಿ ಬಿರಿದು,ಸ್ರವಿಸಬಾರದೇ ಹೃದಯರಸ? ಎಲ್ಲರ ಒಂದೊಂದೂ ಕೋಶಗಳಲ್ಲಿ? ನಮ್ಮೆದೆಯಲ್ಲಿ ಹಸಿರು ರಾಶಿಯ ಚೌಕಾಶಿ, ಇಲ್ಲಿ ಎಲ್ಲರೂ ಪರದೇಶಿ ಆದರೂ ಏಕೆ ಕೊಂಕು, ಕೊರತೆಯ ತಳಮಳ ಎದೆಯಾಕೆ ಬಂಜರು? ಸದಾಪರ್ಣಿ ಆವಾಸದಲ್ಲಿ ಪ್ರಶ್ನೆ ಮಾತ್ರ ತೀರಾ ಸರಳ, ನಿರುತ್ತರದ ಕಳವಳ ಪ್ರೀತಿಯ ಸಿಂಚನ, ಮಮತೆಯ ಖನಿ, ಹೃದಯದ ತಾಪ ಎಲ್ಲಾ ಸೂಕ್ತ ಸಾಮರಸ್ಯದಲಿ ಲಭ್ಯ. ಈ ಫಲವತ್ತಾದ ಮಣ್ಣಲ್ಲಿ, ಈದೇಹ ಆವಾಸದಲ್ಲಿ ಸುಗ್ಗಿಯ ಮಾತಿಲ್ಲ, ವ್ಯವಸಾಯವಿಲ್ಲದ ಬರಡು ಗೂಡಿಗೆ ಯಾರದೋ ಶಾಪ ಅಜ್ಞಾನದಲ್ಲಿ ಪ್ರತಿ ಋತುವಿನಲ್ಲಿ ಪ್ರೀತಿ