Posts

Showing posts from February, 2015
ಆಮೆ. ಸ್ಥಾನಕ್ಕೆ ತಕ್ಕಂತೆ ವೇಶ ಬದಲಿಸುವ ಹೊರೆ ಹೊತ್ತ ಈ ಧೀಮಂತ, ಸಂತ ನೀನಲ್ಲ ಉಭಯವಾಸಿ ನೀನೊಬ್ಬ ಸರೀಸೃಪ ಉರಗವಾಸಿ, ತಿಳಿದಿದೆ ನನಗೆ  ಈಜಿ,ನಡೆಯುವ ಚಲನಶೀಲ ಉರಗ ಚತುಷ್ಪಾದಿ ಪರ್ವತವೇ ಬೆನ್ನಾಗಿ, ಮುಖಮುಚ್ಚಿಕೊಂಡು ವಿಕಾಸದ ಹೆದ್ದಾರಿಯಲಿ ಗಂಭೀರ ನಡೆ ಹೊತ್ತ ಮಂದಗತಿ ನಿಧಾನವೇ ಪ್ರಧಾನವಾದ ಅಸಮಾನ್ಯ ಪ್ರಭೇದ ಸರಿಸಾಟಿಇಲ್ಲದ ತಾಳ್ಮೆ, ಹರಾಜಾಗಲಿದೆ ನಿನ್ನ ಮಾನ ನೆಲಬಿರಿದು, ಉಗುಳಲಿ ಜ್ವಾಲಾಮುಖಿ ಲಾವ ಕಲ್ಲಾದರೂ ಕದಲದ ಹೆದರದ ಪ್ರಶಾಂತಮೂರ್ತಿ ಗುರುತ್ವದ ಮೋಹಕೆ ಬಿದ್ದೂ ಒದ್ದಾದಡದ ಪ್ರೇಮಿ ವೇಗೋತ್ಕರ್ಷ ತಿರಸ್ಕರಿಸಿದ ಮಹಾಸಂಯಮಿ ವಿಶ್ವ ಮಾನ್ಯ ಸಮತೋಲನ ವೇಗಕ್ಕೆ ಚರ್ಚಾತೀತ ಮಾದರಿ ಎಲ್ಲ ಪಂದ್ಯ,ಓಟಗಳಲ್ಲಿ, "ತಾವು ಮೊದಲು" ಎಂದು ಮುಂದೆ ಕಳಿಸಿ ಎಲ್ಲರನು, ತಾನೇ ಹಿಂದಾಗುವ ಸಾಭ್ಯಸ್ಥ, ಸ್ಥಿರಗತಿಯಲ್ಲೇ ಜಯಶಾಲಿ ಎಲ್ಲಾ ರೇಸ್ ಗಳಲ್ಲಿ! ತನ್ನಂತೇ ಜಗವೆಲ್ಲ,ತನಗಾಗಿ ಇನ್ನೆಲ್ಲ ಆಗಲೇ ಇಲ್ಲ ಕ್ರಾಂತಿಕಾರಿ,ಶಾಶ್ವತ ತಟಸ್ಥ ನಿಶ್ಚಲ ನಿಂತಜಾಗದಲ್ಲೇ...ಕದಲಿಲ್ಲ ಒಂದಿಂಚೂ ಮಿಲಿಯಾನು ವರುಷಗಳಿಂದ,ಮೆರೆದ ಶ್ರೀಮಂತ ಓ ಆಮೆಯೇ, ಅನುಕಂಪನೀಯ ಯೋಗ್ಯ... ಜಗವನ್ನೇ ಧೀರ್ಘ ಆಳಿದ ಡೈನೋಸಾರಸ್ ಕುಲದವನು ಎಲ್ಲರಿಗೂ ಗೊತ್ತು, ಆದರೆ ಪೈಪೋಟಿಯಲ್ಲಿ ಆಗ ಹಕ್ಕಿಹಾರಿರಲಿಲ್ಲ,ಸ್ತನಿಯ ಎದೆಹಾಲು ಚಿಮ್ಮಿರಲಿಲ್ಲ, ಪರಿಸರ ಸಾರಿತ್ತು ನೀನೇ ಸರ್ವಶಕ್ತನೆಂದು ಬಂದಿದೆ ಹಾಲಿನಯುಗ, ಹಂಚಿಕೊಂಡಿವೆ ಎಲ್ಲ ಆವಾಸ ಸಮ,ಸಮ,ಆಗಸ ಹಕ್ಕಿಗಳ
My Village… Like words of Greek which force us to stammer, Like proverbs that never fit into the situation proper, Like Hi and bye that silence every conversation Like language that escapes all communication Strangely, a stranger ever forgotten, where, I was once born. The benthic field of eroded rock, finely polished and cut, The xeric land with smothered boulders that once swept And decorated with motherly care like fruits in a market, One above the other with a laborious task that was set. A colour aberration needs a meaningful narration. It is a roof under the shades of hell. A dormant volcano, smoking still... Below the mantle, a lovable nest, Where sun god never rests, A vast unending plateau expanse under the sky Where only two seasons share, Summer and severe summer..!! And it is a hot furnace out there in fact an urban idlers night mare where rains have lost their way like a polar bear, Ever-green canopies and rain are mysterious imagination                        
.... ಕೈಲಾಸ.... ಸರ್ವಾಧಿಕಾರಿ... ಕೊರೆಯುವ ಕ್ರೌರ್ಯ ಮಲಗಿಸುತ್ತದೆ ಶಾಶ್ವತವಾಗಿ. ಹೆದರಿಕೆಯ ನಡುಕದಲಿ ನಗ್ನವಾಗುವ ಹಸಿರು, ಚಳಿಯ,ಬಿಳಿಯ ಚಾದರಹೊದ್ದು ಮುಲುಗಿದ ನಿಟ್ಟುಸಿರು. ನೀರಿಗೂ ಕ್ಷಮೆಇಲ್ಲ, ಗಾಳಿಗೂ ಸುಂಕ ತಾಪ ಇಲ್ಲಿ ಅಪರೂಪದ, ದುಬಾರಿ ಸಗಟು ಸಹಜ ಬಾಳೇ ಅಗಿದೆ ಒಂದು ಒಗಟು, ಹೆಪ್ಪುಗಟ್ಟಿಸಿ, ರೂಪ ಬದಲಿಸಿ ಹರಡಿ ಪದರವಾಗಿ ಮೆರೆಯುವ ಮೆತ್ತನೆಯ ಅಟ್ಟಹಾಸ. ಹರಿವ ನೀರಮೇಲೇ ಬಿಳಿ ಬಟ್ಟೆ ಬಿಡಿಸಿದ ಕಲೆ ಅದರಮೇಲೆ ಬೆಟ್ಟ ಓಡಿಸುವ ಒರಸೆ, ಸಾವಕಾಶದಲ್ಲಿ ತಿರುಗಿಸುತ್ತಾನೆ ತನ್ನ ಚೂಪು ಮೀಸೆ, ಪ್ರತಿಧ್ವನಿಸುವ ಶಂಖನಾದಲಿ ನೀರ್ಗಲ್ಲ ಗರ್ಭಪಾತದಲಿ ಹರಿಯುವ ಹಿಮಪಾತ ನಿಶ್ಯಭ್ದ ಡಮರುಗಕೆ ಓಗೊಡದ ಕೈಲಾಸವಾಸಿ. ಪ್ರಾಣಿಗಳ ಸುಳಿವಿರದು ಈತನ ಪಾಳಿಯಲ್ಲಿ. ಪಾಪ! ಅವುಗಳಿಗಾದರೂ ಆಸರೆ ಎಲ್ಲಿ? ಗಿಡಮರಗಳು ಸೆಣಸಿ, ಸುಸ್ತಾಗಿ ಕುಸಿಯುವ ಕಣ್ಣಾ ಮುಚ್ಚಾಲೆ ಆಟ ಘಾಸಿತ ಅಂಗಾಂಗಳ ಶಶ್ರೂಷೆಯಲಿ ನಿರತ. ಹಸಿರುಟ್ಟ ಅನ್ನಪೂರ್ಣೆಯೇ ಕಂಗಾಲು ಕೈಲಾಸವಾಸಿ ಹರನ ಹರಿವಿನಲ್ಲಿ ಮಾಯಾವಿ ಶಿವ ಹೊರಬಿಡುವ ಭಂಗಿಯ ಧೂಮ ಶಿಖರಗಳಮೇಲೆ ನರ್ತಿಸುವ ತಾಂಡವ…..