Posts

Showing posts from May, 2017
ಆಗಂತುಕ. ನಿನ್ನ ಪದ್ಯ ಅರ್ಥವಾಗದ ನವ್ಯ ಕವಿತೆ,  ನಿನ್ನ ಗದ್ಯ ನನ್ನ ಹಣೆಬರಹದಂತೆ  ಬಿಡಿಸಲಾರದ ಒಗಟು, ಆ ಕಾರಣಕ್ಕೆ,  ನನ್ನ ಬಗ್ಗೆ ನಿನಗಿರುವ ತಿರಸ್ಕಾರ, ತಾತ್ಸಾರ,   ನಿನ್ನ ಗೀತೆಯ ಗದ್ಯ ಘನತೆಗೆ ಹೊಂದುವುದಿಲ್ಲ,     ಅತೀವ ಅನುಕಂಪ ನನಗೆ ಅದಕೆ.... ನಿನ್ನ ಬೈಗಳು ನನ್ನ ಚುಚ್ಚುವುದಿಲ್ಲ ದಿಕ್ಕುತೋಚದ ನಿರ್ಲಷ್ಯ ಧೋರಣೆ, ಮಾರ್ಮಿಕ ಚಾಟಿ ಏಟು ಹೃದಯನಾಟಿ,   ಹುಚ್ಚನಂತೆ ನಗುತ್ತೇನೆ ಏಕಾಂತದಲ್ಲಿ. ಕೋಲಾಹಲದಲಿ, ನಗುವಿಗೂ ಹೇರಿದ್ದಾರೆ ನಿಷೇಧ ಅಸಹಜ ನಡುವಳಿಕೆಗೆ ಸಿಗಬಹುದು ಶಿಕ್ಷೆ ಗಡಿಪಾರೇ ಸಾಕಾಗಿದೆ ನನಗೆ ಆದರೂ ಅದೇಕೋ ಓದುತ್ತೇನೆ ಹಲವು ಬಾರಿ ನಿನ್ನ ಸಾಲುಗಳಲ್ಲಿ ಹುಡುಕುತ್ತೇನೆ   ತೀವ್ರ ಹೃದಯ ಬಡಿತದ ಕೌತುಕದಲ್ಲಿ ನನಗಾಗಿ ನೀ ಬರೆದಿರಬಹುದೆಂಬ ಭ್ರಮೆಯಲಿ ಅರ್ಥ, ಅಂತರಾರ್ಥ, ತಡಕಾಡುತ್ತೇನೆ ಸುಮಧುರ ಸಂಗೀತದ ಧ್ವನಿಗಾಗಿ, ಆಲೈಸುತ್ತೇನೆ ಸಾಂತ್ವನದ ಪದಗಳಿಗೆ, ಓಲೈಸುವ ನಿರೀಕ್ಷೆಯಲಿ, ನಿನ್ನ ಭಾಷೆ ಕಾಲ, ದೇಶವನ್ನು ಮೀರಿದ್ದು   ಎಲ್ಲಾ ಎಲ್ಲೆಯ ಎಲ್ಲೆ ಮೀರಿದ, ಸರ್ವವ್ಯಾಪಿ,   ಸರ್ವಕಾಲಿಕ ನಿರುತ್ತರದ ನಿನ್ನಿರುವು ನನಗೆ ಗೊತ್ತು    ನಾನಿನ್ನೂ ಶಾಶ್ವತ ಅಸಮರ್ಥ ಅಗಂತುಕ.
ಒಂದು ಸಣ್ಣ ಕಥೆ... ವಾಯುವಿಹಾರಕ್ಕಾಗಿ ನಿರ್ಮಿಸಿದ ಯಾವುದೋ ಊರಿನ, ವ್ಯವಿದ್ಯಮಯ ಸಸ್ಯಗಳ ಸುಂದರ ಯಾವುದೋ ಉದ್ಯಾನವನಕ್ಕೆ ನುಗ್ಗಿ ಮೇಯುತ್ತಿದ್ದ ದನಗಳನ್ನು ಸಿಟ್ಟಿಗೆದ್ದ ಕಾಳಜಿಯುಕ್ತ ಜನಗಳು, ದನಗಳನ್ನು ಎಗ್ಗಾ ಮುಗ್ಗಾ ಹೊಡೆದು ಹೊರಗೆ ಓಡಿಸಿ..... ಕಾಪಾಡಿದರು.....ಗ್ರೇಟ್....!!!! ಎಲೆ, ಮಣ್ಣಿನ ಗರಿಕೆಯನ್ನು ಜಗಿಯುತ್ತಾ,ನೊರೆಯ ಜೊಲ್ಲು ಸುರಿಸುತ್ತಾ ನಿಧಾನವಾಗಿ, ಆಗಾಗ ಬಾಸುಂಡೆಗಳನ್ನು ಬಾಲದಿಂದರಮಿಸಿ, ನಿರ್ಭಾವದಿಂದ ಹೊರಬಂದ ದನಕರುಗಳು ಸಂಚಾರಿ ದಟ್ಟಣೆಯನ್ನು ಗಮನಿಸಿದವು...... ಧೀರ್ಘಕಾಲ ನಡೆಯುವ, ಮೂರನೆ ಮತ್ತು ಅಂತಿಮ ವಿಶ್ವ ಮಹಾಸಮರ ಆರಂಭ.............
Human fancy.... My lines of yesterday have failed to communicate what, in fact I wanted the readers to appreciate and think about the relationship between Man and his self centered, selective and manipulated Environment which has almost turned into a latent,silent and covert destructive Armageddon world war...The War.....not between the nations..it is now directly between the destroyer the MAN and the preserver the NATURE or environment with its natural principles of existence of the very  earth.... In this planetary war the winner is always the Nature BUT with entirely a new ecosystem and a unseen fresh environmental order...without even the traces of human race....!!!.Frighteningly true... Today's chaotic world order, unrest,injustice, inequality are all direct result of the corrective methods that are already set in motion by the nature...The war is an expression of nature's decision and an order...expressed through us between geographical boundaries..... in the n