ಮೊಳಕೆ ಒಡೆಯದ ಬೀಜ


ಮಾನವ,..ಮೂಳೆಮಾಂಸದ ತಡಿಕೆ...ದೇಹವೂ....
ಅಸ್ಥಿಯಲ್ಲೂ ನೀರು ಮಾಂಸದಲ್ಲಿಯೂ ಅಪಾರ ಜಲಸಂಪತ್ತು
ಜೀವಿಗಳ ಅಸ್ತಿತ್ವವೆಲ್ಲವೂ ಮೂಲದಲಿ ಸಂತೃಪ್ತ ದ್ರಾವಣ..
ರಕ್ತವಾದರೂ ಜೀವದಾತುವಿನ ಜೀವ
ನೀರು ಅಸಂತೃಪ್ತವಾಗುವುದು ಅಸಂಗತ
ಜಲತಪ್ತ ದ್ರಾವಣ ಜೀವದಾತುವಿನ ಈ ಅತೃಪ್ತ ಕಾಯದಲ್ಲಿ
,ಜೈವಿಕಗೊಬ್ಬರಕ್ಕೆ ಬರವಿಲ್ಲ ಶಂಕು ರಕ್ತ ಸೀಸೆಯಲ್ಲಿ

ಬೆಳಕೇ ಕಾಣದ ಮನಿಪ್ಲಾಂಟ್ ಗಿಡ
ಮನೆಯಲ್ಲೇ ಬೆಳೆಯುತ್ತದೆ,
ಚಿಗುರುತ್ತದೆ......ಹಸಿರಾಗಿಸಿ ಉಸಿರಾದರೂ
ನಮ್ಮ ಎದೆಯ ನೆಲದಲ್ಲೇಕೇ ಕರುಣೆಯ ಜಲ ಕ್ಷಾಮ?
ಯಾವುದರ ಕೊರತೆ,? ನೀರಿದೆ ಕೋಶರಸ ದ್ರವೀಕರಿಸಲು.
ರಕ್ತಬಿಸಿಯಾಗಿ ಉಷ್ಣತೆ ಗೆ ಬರವಿಲ್ಲ
ಕಿಣ್ವ ಪ್ರಚೋದಿಸಲು,ನಾವು ಬಿಸಿರಕ್ತ ಪ್ರಾಣಿಗಳು
ಪೋಷಕಾಂಶಗಳು ಹೇರಳ...ಬೆಳದದ್ದು ಅಸಹನೆ,ಅಹಂ
ಕೋಪ,ದ್ವೇಷ ಭಿತ್ತಿ ಬಿರಿದು,ಸ್ರವಿಸಬಾರದೇ ಹೃದಯರಸ?
ಎಲ್ಲರ ಒಂದೊಂದೂ ಕೋಶಗಳಲ್ಲಿ?
ನಮ್ಮೆದೆಯಲ್ಲಿ ಹಸಿರು ರಾಶಿಯ ಚೌಕಾಶಿ,
ಇಲ್ಲಿ ಎಲ್ಲರೂ ಪರದೇಶಿ

ಆದರೂ ಏಕೆ ಕೊಂಕು, ಕೊರತೆಯ ತಳಮಳ
ಎದೆಯಾಕೆ ಬಂಜರು? ಸದಾಪರ್ಣಿ ಆವಾಸದಲ್ಲಿ
ಪ್ರಶ್ನೆ ಮಾತ್ರ ತೀರಾ ಸರಳ, ನಿರುತ್ತರದ ಕಳವಳ
ಪ್ರೀತಿಯ ಸಿಂಚನ, ಮಮತೆಯ ಖನಿ, ಹೃದಯದ ತಾಪ
ಎಲ್ಲಾ ಸೂಕ್ತ ಸಾಮರಸ್ಯದಲಿ ಲಭ್ಯ.
ಈ ಫಲವತ್ತಾದ ಮಣ್ಣಲ್ಲಿ, ಈದೇಹ ಆವಾಸದಲ್ಲಿ
ಸುಗ್ಗಿಯ ಮಾತಿಲ್ಲ, ವ್ಯವಸಾಯವಿಲ್ಲದ ಬರಡು ಗೂಡಿಗೆ
ಯಾರದೋ ಶಾಪ ಅಜ್ಞಾನದಲ್ಲಿ

ಪ್ರತಿ ಋತುವಿನಲ್ಲಿ ಪ್ರೀತಿಬಿತ್ತುವ ನನ್ನ ಛಲ ಕಡಿಮೆಯಾಗಿಲ್ಲ
ಎಂದಿನಿಂದಲೋ ಮುಂದುವರಿಸಿದ್ದೇನ,ಅನುಸರಿಸಿ
ನನ್ನ ಅನುವಂಶೀಯ ಪುರಾತನ ಕೃಷಿ ಪ್ರೀತಿ ಪದ್ದತಿ..
ನೆಲದಲ್ಲಿ ಬಿರುಕಿಲ್ಲ ನೀರ ಒರತೆಯಲಿ ಕರಗಿರುವ ಘಟಕಗಳು
ಶೋಧನೆಗೆ ಯಾರ ಅಡ್ಡಿ? ಆಳಕ್ಕೆ ಇಳಿದಿಅಲ್ಲ
ಜಲಮಟ್ಟತಲುಪಲಿಲ್ಲ

ಬೇರು ಬಲಿಯದ, ಯಾವುದೋ ಮಿಶ್ರತಳಿ ಇರಬಹುದು
ಮಾನವತೆ ಬೀಜ ಏಕೋ ಮೊಳೆಯುತ್ತಿಲ್ಲ?..
ಮೊಳಕೆ ಒಡೆದು, ಸಸಿಯಾಗುವುದು ಕನಸಾಗಿರುವ
ಈ ಭಯಾನಕ, ಅಮಾನವೀಯತೆಯ ವಾಸ್ತವ.....ಯಾಕೆ. ?
ಭಾವಗಳ ಅಭಾವದಲಿ ಮಾಲಿನ್ಯ ವಿರಬಹುದೇ?
ಅರಿವಿಲ್ಲದ ಅಜ್ಞಾನಿ, ನಾನು, ಕೇವಲ ಎದೆಯೂಟ ಬಡಿಸುವ ರೈತ

Comments

Popular posts from this blog

ಕಾಗೆ....