6-7 poems

ಅಭಿವ್ಯಕ್ತಿ ವೃತ್ತಿಯಾದಾಗ, ತೀವ್ರತೆ
ಹಾಗು ಪ್ರಾಮಾಣಿಕ ಸೃಜನಶೀಲತೆ
ದಾರಿತಪ್ಪಿ ಕೇವಲ ಸುದ್ಧಿಯಾಗುತ್ತದೆ.
ಗ್ರಹಿಕೆ, ಸ್ಪಂದನೆಗಳ ನಡುವಿನ ಅಂತರ
ಸಾಮಾಜಿಕ ಸ್ವಾಸ್ಟ್ಯಕ್ಕೆ ಹಿತಕರ.
___________________________________________________________________________________
ಗೋಡೆ.
ಸಮಯಕ್ಕೆ ತಕ್ಕಂತೆ, ಅನುಕೂಲಕ್ಕನುಗುಣವಾಗಿ
ಕಟ್ಟಿನಿಲ್ಲಿಸಬಹುದು
ಗೋಡೆಗಳನ್ನು ಎಲ್ಲದರ ವಿಭಜನೆಯಲ್ಲಿ
ಎಲ್ಲ ಕಡೆಯಲ್ಲೂ.
ನಿರ್ಮಾಣ ಸಾಮಗ್ರಿಗಳ ಹೇರಳ ಲಭ್ಯತೆಯಲ್ಲಿ
ಎತ್ತರಕ್ಕೆ ಮಿತಿ ಇಲ್ಲ, ವಿವಿದತೆಗೆ ಕೊರತೆಇಲ್ಲ
ತಂತ್ರಜ್ಞಾನ ನವೀನ ಕಲಾಪ್ರಜ್ಞೆಯನ್ನು ಕೆಣುಕಿದಾಗ
ಅಗಲ, ಆಳ,ವರ್ಣಮಯ ವಿನ್ಯಾಸಗಳು
ದೃಶ್ಯಗ್ರಹಿಕೆಗೆ ಎಟುಕದೆ ದೃಷ್ಟಿದೋಶ
.
ಎಷ್ಟೋ ಸುತ್ತಿನ ಕೋಟೆಯಲಿ
ಒಳ ಕೇಂದ್ರ ಪದರ ಪಾರದರ್ಶಕ ಭಿತ್ತಿ
ಗೋಚರಿಸುವುದಿಲ್ಲ ಸಾಮಾನ್ಯದೃಷ್ಟಿಗೆ
ಯಾವ ಯಂತ್ರಕ್ಕೂ ಎಟುಕುವುದಿಲ್ಲ,
ಯಾವ ಮಂತ್ರಕ್ಕೂ ಮುಕ್ಕಾಗುವುದಿಲ್ಲ
ಪುರಾತನ, ಪೌರಾಣಿಕ, ಐತಿಹಾಸಿಕ ಗೋಡೆ
ಮಜಬೂತಾಗಿದೆ ಪ್ರಾಚೀನ ಗಾರೆಯ ತೇಪೆಯಿಂದ
ಧೂಳೆಬ್ಬಿಸದೆ, ಬೀಳಿಸಿ,ನಿರ್ಣಾಮ ಮಾಡುವುದು
ನಿಶ್ಯಭ್ದದಲಿ ಅಸಾಧ್ಯ, ಸುಲಭವೂ ಅಲ್ಲ
ತಮ್ಮ ಕೋಶದಲಿ ಅಧಿಕಾರನಡೆಸುವ ಸಾಮ್ರಾಜ್ಯಶಾಹಿಗಳು
ಗೋಡೆಗಳ ಒಳಗೆ, ಗೋಡೆ ಎಣಿಸಿ ಶ್ರೇಷ್ಟತೆಯ ಅಳೆಯುವರು.
ಗೋಡೆಗಳಿಲ್ಲದೆ ನಗ್ನತೆಯ ಕಳವಳ ಮುಸುಕಿನಲಿ
ಮುಖದ ಕಣ್ಣುಗಳಿಗೂ ಪೊರೆಬೆಳದಿದೆ.
ಏಕೋ ? ಇತ್ತೀಚೆಗೆ ನೇತ್ರತಜ್ಞರ ಕೊರತೆ
ಮಸುಕಿನ ಅಸ್ಪಷ್ಟತೆಯಲಿ
ಎಲ್ಲವೂ ಸಮರ ಸುಂದರ.
ಈಗ ಗೋಡೆ ಎಲ್ಲರಿಗೂ ಅನಿವಾರ್ಯ
ಗೋಡೆ ಕೆಡವುವ ಆತ್ಮಸ್ಥೈರ್ಯ ಯಾರಿಗೂ ಇಲ್ಲ
ಅನಿವಾರ್ಯವೂ ಅಲ್ಲ,
ಬಿದ್ದರೆ ಭಿತ್ತಿ, ಭೀತಿ ಬಟಾಬಯಲಲ್ಲಿ
ನಿರ್ಲಜ್ಯ ವಿಶ್ವದಲಿ ಎಲ್ಲರೂ ನಗ್ನ....
___________________________________________________________________________________

ಹುಟ್ಟುಹಬ್ಬ.
ಇಂದು ಈ ನನ್ನ, ಹೊತ್ತು
ವಯಸು ಅರವೊತ್ತೊಂಬತ್ತು
ಕುಣಿಕೆ ಕತ್ತಿನಸುತ್ತ,ಮುದಿತನದ ಗಮ್ಮತ್ತು
ಸೋತ ಪ್ರಾಯದ ಸೊಕ್ಕಿಗೆ ಆಪತ್ತು
ಪರಮಸತ್ಯದ ಅಪವಾದದ ಕಿಮ್ಮತ್ತು
ನೆರಿಗೆ ಸರ, ಹಾರಗಳ ಕರಾಮತ್ತು
ಬದುಕಿನ ಅನಿವಾರ್ಯ ಶರತ್ತು.
ಅಂತಿಮ ಅಜೇಯ ಕಾಲನ ಕರಾಮತ್ತು
ಅನುಭವಕೆ ಬರುತ್ತಿದ್ದಂತೆ ಸುಸ್ತು.
ಆತ್ಮಾವಲೋಕನಕೆ ಸಿಗಲಿ ಇನ್ನಾದರೂ ಪುರುಸೊತ್ತು.
___________________________________________________________________________________

It is strange...!
feeling the unbearable weight of
the heavy hollowness
in and around me.
An unfelt nothingness,
unexplained amnesia.
Fading humanity in the dried-up hearts
Cosmetically perfect measured body,
controlled by robots brain in disguise
In an optimistic and desperate search for the oasis.
The desert that is forever expanding
In vapourisation or fumigation,
Wriggling in the fickle biosphere like a mirage,
A devouring flame of frustration.
___________________________________________________________________________________

ಜೀವಿಸಬೇಕು
ಇದ್ದೂ ಇರದ ಬದುಕು,
ಜೀವಮಂಡಲದಲಿ ನಾವೂ
ಬಾಳ ಬೇಕು,
ಹವ್ಯಾಸಿ ಕಲಾವಿದರಂತೆ
ಟೀಕೆ, ಟಿಪ್ಪಣಿಗಳ ಮೀರಿ
ಸಹಿ ಯಾಗಿ ಸಾಕ್ಷಿಗೆ ವಿಶಿಷ್ಟತೆಯ ಅಸ್ತಿತ್ವಕೆ.
ಕರಟದಿರಲಿ ಪ್ರತಿಭೆ,
ಬಾಳು ಚಿಂತೆಯ ಚಿತೆಯಲ್ಲಿ
ಯಾವುದೋ ದುಶ್ಚಟದ ವ್ಯಸನಿಯಂತೆ
ವೃತ್ತಿಯಾಗದಿರಲಿ, ಉಳಿವು, ನಲಿವು
ಯಾಂತ್ರಿಕ ಸೆರೆಮನೆಯ ವಾಸದಂತೆ.
ಮುಕ್ತನಾಗಿರು ಎಲ್ಲರ ಹರುಷದಲಿ
ಏಕಾಂಗಿ ಸಂತನಂತೆ ಭಿತ್ತಿರಹಿತ ಆವರಣದಲ್ಲಿ
ಯಜಮಾನನಾಗಿರು, ನಿರ್ಭೀತ ಸೇವಕನಂತೆ.
___________________________________________________________________________________

ವಿವೇಕಿ, ವಿಲಾಸಿ ಜ್ಞಾನಿಗಳಿಗೆ
ಮಾತ್ರ ಅನುಭವವಾಗುವ ವಿಕಾಸ,ಸಾಮಾಜಿಕ ಪ್ರಗತಿ 
ಕರುಣಿಸಿ, ವರನೀಡಿವೆ ಪರಿಸರಕೆ ವಿನಾಶಕಾರಿ ಅಧೋಗತಿ.
__________________________________________________________________________________________
ಇಸವಿ-೨೦೧೯.
ಈಡೇರದ ಕನಸುಗಳ, ನನಸಾಗಿಸುವ ಹಿಡಿದ ಛಲದಲ್ಲಿ ಬಿಡಿಸಲಾರದ ಸಿಕ್ಕು,ಕಗ್ಗಂಟು.
ತಲುಪುವ ಗುರಿಯ ತವಕ, ಸ್ನಿಗ್ಧತೆಯಲಿ ಜಾರುವ ಬವಣೆಯಲಿ ಅಳಿಯಲಾರದ ನಂಟು
ಒತ್ತರಿಸುವ ಉನ್ಮಾದ, ಉತ್ಸಾಹ ಸ್ರಾವಿಕೆ, ಮತ್ತೆ ಹೊರಲಿದ್ದೇವೆ ಅದೇ ಆಸೆಯ ಬಿಡದ ನೆಂಟು...
ಹಿಂದಾಗಿದೆ ಹದಿನೆಂಟು, ತಂದಾಗಿದೆ ಆಸೆ ತುಂಬಿದ ಗಂಟು, ಮೂಟೆ, ಹೊಸ ಈ ಇಸವಿ ಹತ್ತೊಂಬತ್ತು.....ಯಾರಿಗೂ ತಗಲದಿರಲಿ ಯಾವುದೇ ಆಪತ್ತು.....ನೆಮ್ಮದಿ, ತೃಪ್ತಿ ಆಗಲಿ ಎಲ್ಲರ ಸಂಪತ್ತು....
_________________________________________________________________________________________________

ಆಗಂತುಕರು.
ಕರ ಪಡೆದ ಮನಸು, ಆಧುನಿಕತೆಯ ದಿರಿಸು
ಪೂರ್ವಿಕರ ಅನುಭವದ ಹೊರೆಯಲ್ಲಿ ಬುಧ್ದಿ.
ಆಳದಲ್ಲೆಲ್ಲೋ ಹೂತುಹೋದ ಆತ್ಮ
ಉತ್ಖನನಕೆ ಸಿಗದಷ್ಟು ಪಳೆಯುಳಿಕೆ ಪದರಗಳು
ಆಳದಲ್ಲಿ, ವ್ಯಾಖ್ಯಾನ ಇತಿಹಾಸಕಾರರ ಆರಿವಲ್ಲಿ
ಉತ್ಪರಿವರ್ತಿತ ರೂಪಾಂತರ ಜಡಕಾಯದಲ್ಲಿ
ಅಡ್ಡ ಮಲಗಿದ ಚೇತನ! ವಿಕಾಸದಲಿ ಕುಗ್ಗಿದ ಭೂಪಟ
ಸಂಕುಚನೆಯಲೇ ಹಿಗ್ಗಿ ಆಳವಾಗಿದೆ ಕಂದರ,
ಬಿಸಿಲುಕುದುರೆ ಬಾಳು, ಮರುಭೂಮಿಯಲಿ ಮರಳು
ಒಪ್ಪಿಕೊಳ್ಳುವುದು ಕಷ್ಟ ಮಾನವನೆಂದು
ನಾಮಾಂಕಿತವಾದರೂ ಏನಾಗಬಹುದು
ಯೋಚಿಸಿ ಹೆಸರಿಸಿ.
ದಿಕ್ಕು,ದೆಸೆ ಇಲ್ಲದ ಶಭ್ದ ತರಂಗಗಳು
ಅಲೆದಾಡಿವೆ ಅಲೆಗಳು ಬಯಲಲ್ಲಿ,ಧ್ವನಿಗಳ ಪ್ರತಿಕಂಪನ
ಗೊಂದಲಮಯ ಸಂಕಟ ಸುಗ್ಗಿಕಾಲ, ಪ್ರಗತಿ ಜಾಲ
ತುರ್ತು ನಿಗಾ ಘಟಕದ ಭಾರ ಉಸಿರಲ್ಲಿಂದು ಭೂಗೋಳ
ಒತ್ತರಿಸಿ ಕೆಣಕುವ ಪ್ರಚೋದನೆಗಳು ಅನೂಹ್ಯ
ಅಸಂಖ್ಯ, ಬಾಹ್ಯಾಂತರದಲ್ಲಿ, ತೂಗುತಿದೆ ಲೋಲಕ
ಗೊಂದಲದಲಿ ಗ್ರಾಹಕಗಳು,
ಸಾಮರಸ್ಯ ಕುಳಿತಿದೆ, ಅಸಹಾಕಾರ ಆಂಧೋಲನದಲ್ಲಿ
ನಿತ್ಯನೂತನ ಪ್ರಚೋದಕ ಆಕರ್ಷಣೆಗಳು ಅಗಾಧ
ಅರಿವಿಗೇ ಅಗೋಚರ ಪ್ರತಿಕ್ರಿಯೆಗಳು, ತೀರಾ ವಿಭಿನ್ನ
ಶಿಥಿಲ ಅಭಿವ್ಯಕ್ತಿಯಲಿ ತಾನೇ ಕೇಂದ್ರಬಿಂದು
ಅದಮ್ಯ ಚೇತನ,ಅಸಹ್ಯದಲಿ ಸಹನೆ,
ನಿಜ ಅಸಹಜ ಎಲ್ಲರ ಬದುಕು
ಮಿತಿಮೀರಿದ ತಿರಸ್ಕಾರದಲ್ಲಿ ದೈತ್ಯ ಬೇತಾಳ ಅಸಡ್ಡೆ
ಬದುಕಾಗಿದೆ ತಟಸ್ಥನಿಂತ ಹೊಸಿಲು
ಉತ್ಸಾಹದ ಉನ್ಮಾದ ಉತ್ತುಂಗದಲಿ
ಗಿರಿಕಿಹೊಡೆದು ಜೋಕಾಲಿಯಾಡುವ ನಾವು
ಎಲ್ಲರೂ ಸಂತರೇ, ಅರಿತರೂ ಅಪರಚಿತರು
ಒಬ್ಬರಿಗೊಬ್ಬರು ಎಲ್ಲರೂ ಆಗಂತುಕರು.
__________________________________________________________________________________

Comments

Popular posts from this blog

Reunited...at last..

ಕಾಗೆ....

The Crow.