ವಾಯುದೇವನ ಗಾಳಿ ಗೀತೆ... ಯಾರೂ ಕಂಡರಿಯದ ಕಣಿವೆ ಇದೆ ಅಲ್ಲೊಂದು ಯಾವ ಮನುಜನ ಹೆಜ್ಜೆ ಗುರುತಿಲ್ಲ ಈವರೆಗೂ ಒಂದೂ ಆ ಆವಾಸದಲ್ಲಿ, ಬೆಂಡಾಗಿ ಬದುಕಿವೆ ಕಂಗೆಟ್ಟ ಪಾಪಿಬದುಕು ರಕ್ತ ಬೆವರಾಗಿ, ಮಾಂಸ ಎಲುಬಾಗಿಸುವ ದುಡಿಮೆಯಲ್ಲಿ, ಅಲ್ಲಿ, ಸದ್ಗುಣಗಳ ಪ್ರತಿರೂಪ ಆ ಪುಣ್ಯಧಾಮದಲ್ಲಿ, ಧರೆಗಿಳಿಯಲಿವೆ, ನ್ಯಾಯ, ನೀತಿ, ಧರ್ಮ ಅತಿ ಶೀಘ್ರದಲ್ಲಿ, ಹತ್ತಿ ಉರಿಯುವ ಗುಂಡಿಗೆ, ಬೆಂಕಿಯ ಗೂಡಿಗೆ, ಸಕಲ ಕರ್ಮಗಳು ಮರಳುತ್ತವೆ ಅಲ್ಲಿಗೆ, ಮತ್ತೆ ಅಲ್ಲಿಗೆ... ಅಲ್ಲಿ, ಕಾವಾರದ ಪ್ರೇಮ, ಬಲಿತಿಲ್ಲ ಯವ್ವನ, ಹಾಡಾಗದ ಕಾವ್ಯ ಇನ್ನೂ ಮೌನ, ಸಾತ್ವಿಕ ಸಾಹಸ ಪ್ರದರ್ಶನ, ಇನ್ನೂ, ಉಸಿರುತಿದೆ ಮುಕ್ತವಾಗಿ,ತನ್ನೂರ ತಾಜಾ ಗಾಳಿಯಲ್ಲಿ, ಕೇಳಿದರೆ, ಆಲಿಸಿ, ಕೇಳಬಹುದಿಂದು, ಈಗಲೂ ಸಾಯಂ ಪ್ರಾರ್ಥನಾ ಗಂಟೆ... ನೋಡಬಹುದು... ಹಾದುಹೋಗುವ ಅಶರೀರ ಪುಣ್ಯಾತ್ಮಗಳ ನಡೆದಾಟ. ಕೇಳಿ.. ಆ ಅಶರೀರ ಆತ್ಮ, ಅನಂತ ಆಕಾಶ ನಡುವಿನ ಆತ್ಮಾವಲೋಕನ ಸಂವಾದ.... ಮೂಲ- ಹೆನ್ರಿ ತೋರೋ,
Posts
Showing posts from May, 2009