Posts

Showing posts from December, 2017
ನಾಳೆ. ಗಣಿತದ ಆರೋಹಣ ಲೆಕ್ಖದಲಿ ಹದಿನೆಂಟು ಬರುವುದು ಹದಿನೇಳರ ನಂತರೆವೇ. ಗೊತ್ತು ಮೂರು ನೂರಕ್ಕಿಂತಲೂ ಹೆಚ್ಚು ದಿನಗಳ ಲೆಕ್ಕ ಹಾಕಿ ಕ್ಷಣಗಳ ಎಣಿಕೆಯಲ್ಲಿ ಬದುಕಿ, ಅದೇ ಸ್ಥಿರ ಭೂ ಭ್ರಮಣ, ಸೂರ್ಯನ ಸುತ್ತಲೂ, ವೇಗ ಅದೇ ಸರಾಗ ಗತಿಯಲ್ಲಿ ಗತಿಸಿ ಮೂಡಲಿದ್ದಾನೆ ಮತ್ತೆ ಮತ್ತೆ ಅದೇ ಸೂರ್ಯ, ಅದೇ ಪ್ರಭಾವಳಿಯೊಂದಿಗೆ ನೀಲಿ ಬಾನಿನಲ್ಲಿ ತಿಂಗಳುಗಳ ಹಿಂದೆ ನೂಕಿ ಬರುವ ಹೊಸ ದಿನ, ಕಲ್ಪನೆ ನಶೆ, ಮತ್ತೊಂದು ವರುಷದ ಹರುಷ ಅಂಕಿಬದಲಾಗುವ ಲೆಕ್ಖದ ಕಳೆದ ವರ್ಷದಲ್ಲಿ ಅಷ್ಟೇ ದಿನಗಳು, ಕ್ಷಣ,ಗಂಟೆಗಳೂ ಅಷ್ಟೇ,   ಉರುಳಲೆಂದೇ ಆಗಮಿಸುವ ನಾಳಿನ ಮತ್ತೊಂದು ಹೊಸವರುಷದಲ್ಲಿ ಅದೇ ನಿರಾಸೆಗಳ ಸಮೀಕ್ಷೆ,   ಅದೇ ಕಾಡು, ಮರಳುಗಾಡು, ಅಭೇದ್ಯ ಕಾಂಕ್ರೀಟ್ ಸುಡುಗಾಡು,ಅದೇ ಮರಿಚೀಕೆಯ ಪರೀಕ್ಷೆ. ಛಲಬಿಡದ ತ್ರಿವಿಕ್ರಮರ ವಿಕೃತ ಪ್ರಭೇದ ಆಳ್ವಿಕೆಯಲ್ಲಿ, ಕನಸುಕಾಣಲು ಯಾರ ಅಪ್ಪಣೆ ಏಕೆ? ಬರಲೇ ಬೇಕು, ಮತ್ತೊಂದು ಹೊಸವರ್ಷ, ಹಳಸಿ ಯಾಂತ್ರಿಕವಾಗಿ ಜಡವಾಗಿ ಹುದುಗಲು ಕನಸು ಕರಗುವುದಿಲ್ಲ, ಬೆವರು ಬತ್ತುವುದಿಲ್ಲ, ಉಸಿರಾಟದ ಪೈಪೋಟಿಯ ಹೋರಾಟದಲ್ಲಿ   ನಿರ್ಲಕ್ಷ್ಯ, ಸ್ವಾರ್ಥ ಮೆರೆಯುವ ವಿಕೃತ ಕ್ರೂರ ಡೊಂಬರಾಟದ ಇನ್ನೊಂದು ಹೊಸದಿನ, ನಾಳೆ. ಯಾರಿಗೆ ಹೊಸವರುಷದ ಹಸಿದ ಮೊದಲದಿನ? ಯಾವ ಮದಿರಾಲಯದಲ್ಲಿ? ಅರ್ಧರಾತ್ರಿಯ ಬೆಳಗು!   ಹೆಂಡ ಹೊಡೆದು, ಶೀಶೆ ಒಡೆದು ಗಾಜು ಚೆಲ್ಲಿ, ಬೀದಿ,ಬೀದಿಗಳಲ್ಲಿ ವಾಂತ
ಮರ್ಲಹಳ್ಳಿ ಬಿಸಿಲು ಹಾಕಿದ ಬರೆಗೆ, ಸುಟ್ಟು ಕರಕಲಾಗಿದೆ ಬಯಲು ಬರಡು ರುಮಾಲು ಕಳಚಿದ ತುದಿ, ಬರೀ ಮೈ ತೆಂಗಿನ ಕಂಬ  ನಿರಂಬಳ ಆಕಾಶದ ತುಂಬ ಅದೃಶ್ಯ ಬಿಂಬ ಹೆಕ್ಕಳೆ ಕಳಚಲಿರುವ ಉಳಿದ ದೂರದ ಹಸಿರು ಆಗಲಿದೆ ನಿರ್ಜೀವ ಕೊರಡು, ಸ್ಥಭ್ದವಾದ ಉಸಿರು ಬಂಡೆಗಳ ರಾಶಿಯ ನಿರ್ಜಲ ತಪ್ಪಲಲಿ ತತ್ತರಿಸಿವೆ ದಾಹದಿಂದ ಕಳ್ಳಿಗಳ ರಾಶಿ ಜಾಲಿ, ತುಗ್ಗಲಿ ಬೇಲಿ ಕೇದಿಗೆಯ ಪೊದೆಯಲ್ಲಿ ಹಾವೂಇಲ್ಲ, ಹಾವರಾಣಿಯೂ ಇಲ್ಲ ಮಾಯವಾಗಿವೆ ಬೇಲಿಯಲಿ ಬೋರೆ, ಕಾರೆ, ಕವಳೆ, ಲೇಬೆ ಮರಒಣಗಿ ಅಬ್ಬೆಪಾರೆ ಪಾಪ ಗೂಬೆ ಹೊರಟಿತು ವಲಸೆ ಪೊಟರೆಯ ಜಾಡು ಹಿಡಿದು ಇದು ನನ್ನ ಹಳ್ಳಿ, ಸೌರಗರ್ಭದ ಕೂಪ ತಾಪ, ಅದೆಂತಹ ತಂಪು? ನೆಲಬಳ್ಳಿಯ ಅನುಭಂದ ನನ್ನ ಮರಳ ಹಳ್ಳಿ. ವರ್ಷಗಳ ಲೆಕ್ಖಕ್ಕೆ ಮೀರಿ ಮಳೆಕಾಣದೆ ಬಾಯಾರಿದೆ ಪ್ರಚೋದಿಸಿದೆ ನನಗೆ ಅರಳು,ಮರಳು.
Carefree..... Very few people can perceive the visible diversified language of the soil Hardly one can hear the melodious decibels of that echoes in the veins of earth and its diversified dwellers.... Strange...! The sight with its halo radiating around and the sound reverberating in the pitch dark dead silence.... We are colour blind in an obsession of a rainbow Deaf we are by default genes... We grope without hope holding to the invisible rope Our screams unheard in the hallucinating abyssal depth of a suicidal indifference...
The Right.. He is too strong to be weak that he seldom fight with anyone He is as dumb as a statue that he can argue none for fun Call him a squib.O.K.It is none of his concern as he avoids scorn He is happy to be called one,an intent listener of a wise silence Oh...An escapist ! He heard you ! it sounds too a lyrical melody An opportunist of chameleon caliber.! ever away from argument Yes...it is a fine adjective of a compliment, But, he rants hardly Without any resentment he enjoys your unpleasant outburst. He knows..He is as clever as a dead dormant volcanic granite Siting like a saint deep in meditation in a timeless space He never rejects your right to brand him as you will and wish A burden of silence he carries to pass on to the outsiders He hates to hate anyone as everyone is someone with their right He fears the senseless hate of revenge, you call him an impotent Is he an Idler? or may be even an imbecile corpse? you are free Name him an addled idiot,still he s
ಮನ್ವಂತರ... ಪ್ರಾಯ, ಎಪ್ಪತ್ತು ತಲುಪುವ ಎರಡು ವರ್ಷಗಳ ಅವಧಿಯಲ್ಲಿ, ಕಳೆದಾಗಿದೆ ಇನ್ನೊಂದು ವರ್ಷ, ಬಾಕಿ ಇರುವ ಬದುಕಿನ ಭಾಗಾಕಾರದಲ್ಲಿಅನಿರ್ಧಿಷ್ಟ ಶೇಷ, ನಿಖರತೆ ಇಲ್ಲದೇ ಇನ್ನೂ ಅಸ್ಪಷ್ಟ. ಅಡವಿ ಸಾಮಿಪ್ಯದ ಉನ್ಮಾದ, ಸಂತಸದ ವ್ಯಥೆಯಲ್ಲಿ, ಪಶ್ಚತ್ತಾಪ ನಿಲುವು, ತಪ್ಪಿತಸ್ಥ ಸದಾ ತಟಸ್ಥ ನಿರ್ಮೋಹಿ ನಿರ್ವಿಕಾರ ನಿಲುವು. ಪೆಡಸು ಕನಸುಗಳು ಬಲು ಬಿರುಸು, ಸಾದನೆಗೆ ವೇದನೆಯ ಬೇನೆ ಬೇರೆ, ಸುಮ್ಮನೆ, ಗುರಿ ಇನ್ನೂ ಗರಿಗರಿ, ಹಸಿಕೊಂಬೆಯ ಬುಗುರಿ, ಗಿರಿಕಿಹೊಡೆಯುತಿದೆ ಹೊಡೆಸಿಕೊಳ್ಳಲು ಗುನ್ನ. ಬಿಲಿಯಾನುಗಟ್ಟಲೆ ತುಂಬಿತುಳುಕುವ, ಜನರ ಸಂಕೀರ್ಣ ಸೂಕ್ಷ್ಮಬಲೆ ಅನಿವಾರ್ಯದಲಿ ಹೆಣೆಯಲ್ಪಟ್ಟ ಅಪರಿಚತರಲ್ಲಿ ದೊಡ್ಡ ಸಿಕ್ಕು ಒಬ್ಬರಿಗೊಬ್ಬರು ಶಾಶ್ವತ ಆಗುಂತಕರು, ಬ್ರಹ್ಮಗಂಟು ಬಿಡಿಸಿಕೊಳ್ಳಲೇ ಬೇಕು ಜಟಿಲತೆಯ ಕುಸೂತಿ,ಸಾವಧಾನದಲ್ಲಿ ನೆನಪಿನ ತೀವ್ರ ಕಂಪನ ನೆನಪಿನ ಕೋಶಗಳಲ್ಲಿ ಯಾರ ಅರಿವು, ಯಾರ ನಿಲುವು? ಯಾರ ಬದುಕು ಎಲ್ಲಿಗೆ, ಹೊಗೆಯಾಡಿ ಪ್ರಶ್ನೆಗಳು, ಜ್ವಲಿಸಿ ಉಳಿಯುವ ಬೂದಿ ಹೀಗೆ...ಮತ್ತೆ, ಮತ್ತೆ ಗೊಂದಲ ನಿರುತ್ತರ ಹಂದರ ಆಳವಾಗಿವೆ ಸಿದ್ಧಾಂತಗಳ ಕಂದರ. ಗ್ರಹಿಕೆಯಲೇ ನಾಂದಿ ಹಾಡಿ, ಹಂಸಗೀತೆಯ ಆರೋಹಣದಲಿ ಆತ್ಮಾಹುತಿ ಎಲ್ಲವೂ ಸ್ವಾಭಾವಿಕ, ಹುಟ್ಟಷ್ಟೇ ಅಲ್ಲ,ಸಾವು ಅಷ್ಟೇ ಸಹಜ, ಆದರೆ ಅಸ್ಪಷ್ಟ. ಮಾನವನ ಸ್ವಾರ್ಥಮಂಡನೆ ವಾದಕ್ಕೆ ಅದೆಷ್ಟು ಪದಗಳು? ಎಷ್ಟೊಂದು ವಿವರಣಾತ್ಮಕ ಅನುಭವ ಅಜ್ಞಾನ ಆಗರ! ಸಂದೋರ್ಬೋಚಿತ ಪದ ಬಳಕೆಯನ