Posts

Showing posts from January, 2010

ಹುಸ್ಸೇನ್ ಮತ್ತು ಕುದುರೆ.

ಹುಸ್ಸೇನ್ ಮತ್ತು ಕುದುರೆ ಮುಂದಿರುವ ಪುಟ್ಟ ವನ ಹಿಂದೆ ಚಿತ್ರ ಕಲಾ ಭವನ, ಚಿತ್ರ ವಿಚಿತ್ರ ಪ್ರವೇಶ ದ್ವಾರ, ಸ್ವಾಗತ ಬಯಸುವ ಹಿತಬೆಳಕಿನ ಮೌನ ಪುಷ್ಪಾಹಾರ. ವಿಶಾಲ ಹಜಾರ, ಪಡಸಾಲೆಯ ಆಚೆ ಪ್ರತ್ಯಕ್ಷವಾಗುವ, ಅಪರೂಪದ ಅಲಂಕಾರ, ನೆಲ, ವಿಗ್ರಹ, ಗೋಡೆ, ದೀಪ ಅಸಹಜ, ಆದರೂ ಅಸಮಾನ್ಯ ಅಯಸ್ಕಾಂತ, ಅಪರೂಪಕ್ಕೆ ಬರುತ್ತಾರೆ ಅಥಿತಿ, ಜೊತೆಗೆ ತಂದೇ ತರುತ್ತಾರೆ ಕಿತಾಪತಿ. ಪಾದರಕ್ಷೆಯ ಮಹಾ ಬ್ರಾಂತಿ. ಬಳಕುವ ಬಿಳಿ ತೊಗಲು ಕಾಲು, ಬೆತ್ತಲೆ ಅಂಗಾಲು, ತಬ್ಬಿದ ಕನ್ನಡಿ ಗ್ರಾನೈಟ್ ಹಾಸು ವಿಕಾರ ಮೌನ, ಸ್ತಬ್ದಚಿತ್ರಗಳಂತೆ ಕಾಣುವ ವೀಕ್ಷಕರು, ಮೂಕ ವಿಮರ್ಶಕರು , ಚಾವಣಿಯಲಿ ಹುದುಗಿರುವ ಹೊನಲು ದೀಪಗಳು, ಪ್ರತಿಧ್ವನಿಸುವ ನಿಶ್ಯಬ್ಧ. ಅಸಾಹಾಯಕ ವಿಗ್ರಹಗಳು, ಬಿಟ್ಟಿವೆ ಪಿಳಿ,ಪಿಳಿ ಕಣ್ಣು, ದಿಟ್ಟಿಸುತ್ತವೆ ವಿಶಾಲ ಗೋಡೆಯನ್ನು, ಏನನ್ನೋ ಅನುಭವಿಸಲು . ವರ್ಣಮಯ ಕಲಾ ಕೃತಿಯ ಬೆಚ್ಚಗಿನ ಗೋಡೆಯ ಆಲಿಂಗನ, ಕೊಬ್ಬಿದ ಕುದುರೆಗಳ ದಷ್ಟ ಪುಷ್ಟ, ಪೃಷ್ಟ, ಬೋಳು ಬೆಟ್ಟಗಳ ನಡುವೆ ಜಡೆಯ ಬಾಲ ಬಲು ಸ್ಪಷ್ಟ ಕಂದು, ಬೂದು, ಕಪ್ಪಿನೋಕುಳಿ ಬಣ್ಣ, ಕಾಲುಗಳು ಕೊಂಚ ಸಣ್ಣ, ಹಿನ್ನೋಟದ ತಲೆ, ನಿಮಿರಿದ ಕಿವಿ, ವಾವ್ ಅದ್ಭುತ ಕವಿ!! ಎರ್ರಾ ಬೇರ್ರೀ ಬಾರಿಸಿದ ಕುಂಚ. ಸೃಷ್ಟಿಸಿದೆ ಅದ್ಭತ ಪ್ರಪಂಚ ಹೆದರಿ ಮುದುಡಿದ ಹಾಳೆಯಮೇಲೆ ಓಡುತ್ತವೆ ನಾಗಾಲೋಟ, ಬಿಟ್ಟುಹೊಗುತ್ತವೆ, ಭಾರವಾದ ಹೆಜ್ಜೆಯನ್ನು, ಬೆಳ್ಳಿ ಗಡ್ಡದ

ಕಾಗೆ....

Image
ಕಾಗೆ  ನಾನು ಶಾ ಲೆ ಗೆ ಎಲ್ಲರಗಿಂತ ಮುಂಚೆ ಎಂಟು ವರೆಗೆ ತಲುಪಿದೆ. ಯಾರು ಬಂದಿರಲಿಲ್ಲ. ಬರುವುದು ಇಲ್ಲ. ಕಾರಣ ಅಕ್ಟೋಬರ್ ರಜೆ, ಇನ್ನು ನಮ್ಮ ಆಫೀಸ್ ನ ಸಹೋದ್ಯೋಗಿಗಳು ಬರುವುದಕ್ಕೆ ಕನಿಷ್ಠ ಇನ್ನೊಂದುಗಂಟೆಯಾದರೂ ಬೇಕು. ಮೇಷ್ಟ್ರುಗಳು ಹಾಗು ಹುಡುಗರು ಬರುವ ಪ್ರಶ್ನೆ ಇಲ್ಲ. ಹಿಂದಿನ ರಾತ್ರಿ ಮಳೆಜೋರಾಗಿ ಬಂದುದರಿಂದ ಚಾವಣಿಯಿಂದ ಇನ್ನು ನೀರು ಹನಿ ಹನಿ ಯಾಗಿ ತೊಟ್ಟಿಕ್ಕುತ್ತಿತ್ತು. ಪಕ್ಕದ ಹಾಲ್ ನಲ್ಲಿ ಮರಿಯಪ್ಪನವರು ತಮ್ಮ ಕಾಲೇಜ್ ಹುಡುಗರಿಗೆ ಕಾಮರ್ಸ್ ಟ್ಯುಶನ್ ಮಾಡುತ್ತಿದ್ದರು. ರೈನ್ ಕೊಟ್ ಬಿಚ್ಚಿ ಕುರ್ಚಿಗೆ ನೇತುಹಾಕಿ ಕುಳಿತು, ನನ್ನ ಪ್ರತಿನಿತ್ಯದ ಅಭ್ಯಾಸದಂತೆ ಸಾಮಾನ್ಯವಾಗಿ ಕಳಿಸುವ ಸ್ನೇಹಿತರಿಗೆಲ್ಲಾಮೆಸೇಜ್ ಕಳಿಸಿ, ಬೇರೇನೂ ಕೆಲಸ ತೋಚದೆ, ಟ್ಯೂಬ್ ಲೈಟ್ ಆನ್ ಮಾಡಿ, ಹತ್ತನೆಯ ತರಗತಿಯ ಜೀವವಿಜ್ಞಾನದ ಪುಸ್ತಕ ತಿರುವಿಹಾಕಲು ಶುರು ಮಾಡಿದೆ. ಯಾವುದು ಹೊಸ ವಿಷಯ ಇಲ್ಲ, ಕ್ಲಾಸ್ ಗೆ ತಯಾರಿ ಮಾಡಿಕೊಳ್ಳುವಷ್ಟು ಅಗತ್ಯವೂ ಇರಲಿಲ್ಲ. ಏನುತೋಚದೆ ಸ್ಟಾಫ್ ರೆಜಿಸ್ಟರ್ ತೆಗೆದು ಸಹಿ ಹಾಕಿದೆ. ಹೊರಗಡೆ ಮೋಡ ಕವಿದ ವಾತಾವರಣ. ಇವೊತ್ತು ಸಹಾ ಮಳೆ ಬರಬಹುದುಎನಿಸಿತು. ಮೂರನೇ ಮಹಡಿಯಿಂದ ಮಬ್ಬಾದ ಎದುರಿಗಿನ ಆಕಾಶ ನೋಡುವುದು ಒಂದು ಅನುಭವ. ಇದ್ದಕ್ಕಿದ್ದ ಹಾಗೆ ತೆರೆದ ಬಾಗಿಲಿನಿಂದ ಕಾಗೆ ಹಾರಿ ಬಂದು ನನ್ನ ತಲೆಯ ಮೇಲಿದ್ದ ಕಿಟಕಿಯ ಮೇಲೆ ಕುಳಿತು ಒಂದು ಪಕ್ಕದಿಂದ ಇನ್ನೊಂದು ಪಕ್ಕಕ್ಕೆ ಹದರಿ ಹೊರ