Posts

Showing posts from June, 2018
ಕನವರಿಕೆ. ಮಾತೆಯ ಮಮತೆಯ ಕುಡಿಯಾದರೂ...ಹುಟ್ಟಿದ್ದು ಊರಲ್ಲ, ಊದು ಕುಲುಮೆಯ ಗರ್ಭದಲ್ಲಿ,  ಜ್ವಾಲೆಯಲೇ ಕಳೆದ ಬಾಲ್ಯ ಕಾಡುಬಂಡೆಗಳಮೇಲೆ ಇವ ನಿಜಕೂ ಅಗ್ನಿಪುತ್ರನಲ್ಲ, ಜೂಟಾಟ, ಕಣ್ಣುಮುಚ್ಚಾಲೆ ಕೊರಕಲು ಪ್ರಪಾತಗಳಲ್ಲಿ ತಳರಹಿತ ಗವಿಯ ಸಂದು, ಗೊಂದುಗಳ ನೆರಳಲ್ಲೂತೀವ್ರ ತಾಪ. ಬಯಲ ದರ್ಶಿನಿಯ ನೇರಲೆ, ಕಾರೆ,ಕವಳೆ,ಲೇಬೆ, ಬೋರೆ, ಉಪಹಾರಕ್ಕೆ, ಶಿಲಾ ಶಿಖರ ದರ್ಶಿನಿ ಚಾರಣದ ಕ್ಯಾಂಟೀನಲ್ಲಿ ಸಿತಾಫಲ ಅನ್ ಲಿಮಿಟೆಡ್ ಬಹಿರ್ದೆಸೆಯ ದಿನಚರಿಯಲಿ ನುರಿತ ಪರ್ವತಾರೋಹಿ ನಿರ್ಜನ ಕಣಿವೆಯಲಿ ಸ್ವಗತ, ಶಾಶ್ವತ ಸಂಭಾಷಣೆ ಕೂಗೋಗುಡ್ಡದ ಪ್ರತಿಧ್ವನಿಯ ಕಂಪನ ರಾಕ್ಷಸ ಇಳಿಜಾರು ಬಂಡೆ ಬೈಗಳ ಪ್ರತಿಧ್ವನಿಯ ರೋಮಾಂಚನ ನೇಯ್ಗೆ ಮಗ್ಗಗಳ ನಿಲ್ಲದ ನಡಿಗೆಯ ರೇಶಿಮೆಯ ಹೆಜ್ಜೆ ಶಿಸ್ತಿನ ಸಾರೋಟು ಚಲನೆಯಲಿ ಲಾಳಗಳ ಓಟ ನಿರಂತರ ಧ್ವನಿಸುವ ಚಟಾ ಪಟಾ ಊರಿಗೊಂದು ಭಾಷೆ ಅದರ ಸಾಮಾನ್ಯದ ಅಸ್ತಿತ್ವ ಕರಡಿ ಗಂಗಣ್ಣನ ಘಮ,ಘಮ ಮಂಡಾಳ್ ಒಗ್ಗರಣಿ ಆದ್ಯಾತ್ಮ ತತ್ವ ಅತ್ತಿಕಾಯಿ, ಜೊತೆಗೆ ಮೆಣ್ಸಿನ್ಕಾಯ್ ಉಳ್ಳಾಗಡ್ಡಿ ಈಜಾಟ ಮನೋರಂಜನೆ ಆಟ, ನೀರಿದ್ದ ಆ ದೊಡ್ಡಬಾವಿ ಬಾನಿ ಎಳೆಯುವ ಹಗ್ಗದ ಮೇಲೆ ಜೋಕಾಲಿ ಶುಶ್ಕತೆಗೆ ಬಡಕಲಾಗಿ ಒಣಕಲಾಗಿ ನಿಂತ ಸೈಂಧವ ತಾಳೆಮರ ಈಚಲಿನ ವಿರಳದಲಿ ತೆಂಗು, ಆದರೂ ಹೆಸರು ಬಾಳೆತೋಪು ಮೇಕೆ,ದನಗಳ ಜಾಡೇ ಜಾರೋಬಂಡಿ ಹಟ್ಟಿಯಲಿ ಕತ್ತರಿಸಿ ಹಸಿರು ಜೋಳದ ಸಪ್ಪೆ. ಹಳಸಿದ ಹಿಂಡಿಗೆ ಆಕಳುಗಳು ಜೊಲ್ಲುಸುರಿಸುತಿತ್ತು ನಿಜವಾದ ಮಳೆ ನಿಜಕ್ಕೂ ಸು
ಇರುವೆ. ಬಾಗಿಲ ಹೊಸಿಲ ಸಂದಿನಿಂದ ಪುಟ್ಟ ಮಣ್ಣ ಸಡಿಲ ದುಂಡಾದ ಪಿರಿಮಿಡ್ ನ ಬಾಗಿಲನಿಂದ ಹೊರಬರುತ್ತಲೇ ಇರುವ, ಒಂದು ಕ್ಷಣವೂ ನಿಲ್ಲದ ಶಾಶ್ವತ ಚಲನಶೀಲರು, ಹಿಂಬಾಲಿಸಿ ಹೋದರೆ, ಹೊರಗೋ, ಒಳಗೋ, ಮೇಲೋ, ಕೆಳಗೋ? ಬಚ್ಚಲಲ್ಲೋ, ಸ್ವಿಚ್ ಬೋರ್ಡ್ ನ ಕಿಂಡಿಯಲ್ಲೋ ಮಾಯಾವಾಗುವ ಭೂಸೇನೆಯ ಇರುವೆಗಳ ತುಕಡಿ. ಶಿಸ್ತಿನ ಗಸ್ತಲ್ಲಿ ಸಮರಸಿದ್ಧ ಸಿಪಾಯಿಗಳು ಯುದ್ಧವೇ? ಯಾರಮೇಲೆ? ಯಾರುಸಾರಿದ್ದಾರೆ ಇದರಮೇಲೆ? ಸಮರೋಪಾದಿ ಮುಂಜಾಗ್ರತೆ ಸಂಗ್ರಹಣೆ ಆಹಾರಕೆ ಅಲೆದಾಟ ಆವಾಸದ ಬಿಲದಲ್ಲಿ ನಿಲ್ಲದ ಪರದಾಟ ನೈಸರ್ಗಿಕ ವಿಕೋಪದ ಋತುವಿಗೆ ಸಂರಕ್ಷಣೆ. ಆ ಸುಂದರ ನಗರ, ಮುಖ್ಯರಸ್ತೆ, ಕವಲು ದಾರಿಗಳು ಸುರಂಗದಲ್ಲಿ ಆಡ್ಡದಾರಿಗಳಲ್ಲಿ, ಮುಖ್ಯರಸ್ತೆಗಳಲ್ಲಿ ನೆಲಮಾಳಿಗೆಯ ನೆಲದುರ್ಗದ ನೆಲದಡಿ ನಗರ ಕಟ್ಟಿರುವ ಕಾರ್ಮಿಕರು, ರೂಪಿಸಿರುವ ಶಿಲ್ಪಿಗಳು ಉದ್ಯಾನವನಗಳಿಲ್ಲ, ಅಪ್ರತಿಮರ ಪ್ರತಿಮೆಗಳಿಲ್ಲ ಬಣ್ಣದ ಕಾರಂಜಿಗಳೂ ಇಲ್ಲ ಸಾಲುಮರಗಳು ಇಲ್ಲಿ ಬೇಕಿಲ್ಲ ಖಜಾಂಚಿಯೂಇಲ್ಲ, ಖದೀಮರಿಲ್ಲ ಅವರವರ ಕರ್ಮ, ಕರ್ತವ್ಯನಿಷ್ಟೆ, ಪಾಳಿಯಲಿ ನಡೆಯುವ ಸೈನಿಕರಿಗೆ ಸ್ಪರ್ಷ ಅನಿವಾರ್ಯ ಸಂವಹನ, ಅಭಿಪ್ರಾಯ ವಿನಿಮಯಕೆ ಅಸ್ಪ್ರುಷ್ಯರಾರಿಲ್ಲ, ಎಲ್ಲರೂ ನಿರ್ಲಿಂಗ ನಿಷ್ಕಾಮಕ ಸಲಿಂಗ ಮನ್ಮಥರು, ಅರಮನೆಯ ಅಂತಃಪುರದಲ್ಲಿ ರಾಣಿಒಬ್ಬಳೇ! ಸ್ವತಂತ್ರ ಭವ್ಯಮಹಲಿನ ಪರಿಸರ ಎಲ್ಲರು ಪರತಂತ್ರರು ಪರಾವಲಂಬಿ ಭಕ್ಷಕರು, ಪರಸ್ಪರಾಲಂಬಿ ರಕ್ಷಕರು ಇರುವು,ಅದರರಿವು, ಸಕಲ ಪ್ರಭೇದ ಸಮನ್ವಯ ಜಗದ ಉ
ಬಯಲು  ಬಲಿತ ನಿಶ್ಚಲ, ನಿಸ್ತೇಜ ಜಡ ದೇಹಗಳ ಹೊತ್ತು, ಶಿಶು ಶೂನ್ಯ ನೊಟದಲಿ, ಹಸುಳೆಗಳ ಪಾಳಿಯಲಿ ಚಲಿಸುವ ನೋವುಗಳು ಕೊಬ್ಬಿ ಕೊಳೆತ ಮೊಸಳೆಗಳ ರಾಗ, ರಗಳೆ ಬತ್ತಿದ ಕಣ್ಣೀರ ಜಲಪಾತದಲ್ಲಿ ನಿರ್ವಾತ ಅವಕಾಶ, ವಿಶಾಲ ಆಕಾಶದ ವಿಸ್ತಾರ ಜಲರಹಿತ ತಡೆರಹಿತ ಅಣು ಆವೀಕರಣ ತೂಗುಕಣಗಳು ಗುರುತ್ವದಲಿ ನಿಶ್ಚಲ ಅಲ್ಲಿ, ಆ ಗುಂಡಿಯ ಕಂದರ ಅಂತಃಕರಣ ಸದಾಸಿದ್ಧ ಹರಾಜಿಗೆ ಕಲ್ಲಾಗಿ ಬಡಿತ, ಸ್ಥಗಿತ ಗುಂಡಿಗೆ, ಏಳಲಾರದ ಹೆಣಭಾರ ಕ್ಕೆ ಮಂಕಾದ ಆತ್ಮ, ಬೆಳಕಿನಲಿ ಕುರುಡಾಗುವ ಮುಂಜಾನೆಯ ಕೊರಗು, ಕಂಗಾಲಾಗಿದೆ ಕಗ್ಗಕತ್ತಲು ಕಕ್ಕಾಬಿಕ್ಕಿಯಾಗಿ ಮಾನವತೆಯ ಜೀವಂತ ಪ್ರದರ್ಶನ.
ಗಾಳಿ ಮರ. ಕಡಲ ಪಕ್ಕ, ಹಾಸಿರುವ ಉಸುಕು ಕರ್ಲಾನ್ ಹಾಸಿಗೆ, ಮೃದು ನುಣಪು ಮುಂಗಾರಿನ ವರುಣಜಾತ್ರೆ ಆರಂಭ  ನಿಲ್ಲದ ಸಾಮೂಹಿಕ ಆತ್ಮಾಹುತಿ ಕಡಲಂಚಿನ ಕಾವಲುಗಾರ, ಯಾರ ಹರಕೆಗೋ? ಸಾಮುದಾಯಿಕ ಜಲಾರ್ಪಣೆ ಗಾಳಿಮರಗಳು ಜಲಸಮಾಧಿಯಲಿ ಅಂಗಾತ ಬಿದ್ದು ಹೊರಳುತ್ತವೆ, ವರುಷ, ವರುಷ, ಮುಂಗಾರ ವಿಕೃತ ಹರುಷ ನಿಜ, ಬೇರುಬಿಟ್ಟಿತ್ತು ಆಳವಾಗಿ ಮಣ್ಣಿನಲ್ಲೇ ಅಲ್ಲೇ ಅಪ್ಪ,ಅಜ್ಜನಕಾಲದಿಂದ ಕಣ,ಕಣಗಳು ಬೆಸದಿತ್ತು ನೆಲಮಾಳಿಗೆಯ ಸಂಬಂಧ ಕೋಶಬಲೆಯಲಿ ಸುಕ್ಕು,ಸುಕ್ಕಾಗಿ ಮರಳ ಹಾಸಿಗೆಯ ಬದಿಯೇ ಡೇರೆ ಹಾಕಿ ಶತ್ರುಗಳ ಉಬ್ಬರವಿಳಿತ ಕಂಡ ವೀಕ್ಷಕರು ದೈತ್ಯ ಶತ್ರುಅಲೆಗಳ ಹಿಮ್ಮೆಟ್ಟಿಸುವ ವೀರ ಯೋಧರು. ಯುದ್ಧಯಾತ್ರೆ ಮುಂಚೂಣಿಯ ಸಂರಕ್ಷಕರು ಪ್ರತಿ ಆಕ್ರಮಣ ಮೆಟ್ಟಿ ಬಹುಕಾಲ ನಿಂತವರು ನಿಶ್ಯಭ್ದ ಕದನವಿರಾಮದ ನಡುವೆಯೂ ಮಣ್ಣ ಕಾಯುವ ಜಾಗೃತ ಸಂರಕ್ಷಕರು. ಗತಕಾಲದ ಕುಲುಮೆಯಲಿ ಕಳೆದಿತ್ತು ಬದುಕಿನ ತಿದಿ ಬಿರು ಗಾಳಿಯನೂ ಎದುರಿಸಿ, ಸಾಗರ ಸ್ಥಬ್ಧಗೊಳಿಸಿ, ಜೀವನರಾಗ ಹಾಡಿದ ಸುಗಮ ಸಂಗೀತಕಾರ, ಸೂಜಿಎಲೆ ಸ್ವೀಕರಿಸಿತ್ತು ಸಮಯ ಮೇಲ್ವಿಚಾರಕನ ಜುಗಲ್ ಬಂದಿ ಸವಾಲು ಉಳಿಸಿಕೊಂಡಿದ್ದ ಈ ಸಮರ್ಥ ಸಂಭ್ರಮಿಸಿ ಓಲಾಡುತಿತ್ತು,ಮೈಮರೆತು ಹಾಡಿತ್ತು ಗಾಳಿ ಗುಂಯ್ಗುಡುವ ಜಾನಪದ ಹಾಡು ಕೇಳುಗರಿಲ್ಲದ ಕಾಲದಿಂದ ಯಾರಿಗೋ ಶೃತಿ ತಪ್ಪಿಲ್ಲ ಇಂದಿಗೂ, ಗಾಳಿ, ಬಿಸಿಲು, ಮಳೆ, ಕೆರಳಿಸಿದರೂ ಧೃತಿಗೆಡದೆ ನಿಭಾಯಿಸಿ, ಮುಗಿಸಿದ ತನ್ನ ಪ್ರದರ್ಶನ ದೃಷ್ಟಿ ಹಾಯುವವರೆಗೂ ಅನಾ