Posts

Showing posts from November, 2016
ಪ್ರಸ್ತುತ . ಈ ಕಾಲದಲ್ಲಿ ತೀರಾ ಅನಿರೀಕ್ಷಿತ, ದಾಖಲೆ ಮೀರಿ ಬೀಸುತ್ತಿರುವ ಈ ರಭಸದ ಗಾಳಿ! ಆಶಾಡ ಮುಗಿದಿದೆ,  ವಸಂತದ ಭರವಸೆ ಚಿಗುರಿದೆ! ಚಳಿಗಾಲದಲ್ಲಿ ಹಿತವಾದ ಬೆಚ್ಚನೆಯ ತಾಪ ಮೂಲ ಎಲ್ಲಿಂದಲೋ? ಹಾಗಾಗಿ ಆತಂಕ, ಅಪೇಕ್ಷಿತ ಹಿತಕರ ಮುಂಗಾರು ಕುಳಿರ್ಗಾಳಿಯೋ? ಪಶ್ಚಿಮ ಕರಾವಳಿಯ ಅಪ್ಪಳಿಸುವ ವಾಣಿಜ್ಯ ಮಾರುತವೋ ಬದಲಾಗ ಬಹುದೇನೋ ಕಾಲ? ಋತು? ಪೂರಕವೋ ? ಮಾರಕವೋ ?  ಕನಿಷ್ಟ ಇರುವಿಕೆಗೆ. ಧೃವ ಕರಗಿ ಹಿಮನದಿ, ಜಾರುತಲಿದೆ ದಿಕ್ಕುತಪ್ಪಿ ವಾಯಭಾರಕುಸಿತ ಯಾವುದೋ ಕೊಲ್ಲಿಯಲ್ಲಿ, ಮಂದಮಾರುತವೋ?  ಚಕ್ರವಾತ ಭೀಕರ ಸುಳಿಯೋ? ಸುಂಟರಗಾಳಿಯೋ? ಚಂಡಮಾರುತವೋ? ಹೊತ್ತು ತರಬಹುದೇನೋ ಮೋಡಗಳ ರಾಶಿಯನ್ನು? ಜಲರಾಶಿ ಘನಿಸಿ, ತೇವಾಂಶ ಹನಿಯಾಗಬಲ್ಲದೇ ಇಲ್ಲಿ? ಸಮಯಕ್ಕೆ ಹದವಾಗಿ ಸುರಿಯಬಹುದೇ ಮಳೆ? ಬೆಳೆಯಬಹುದೇ ಪೈರು ಸಮೃಧ್ದ, ಹೊಲ ಗದ್ದೆಗಳಲ್ಲಿ? ತುಂಬಬಹುದೇ ಫಸಲು ಎಲ್ಲರ ಮನೆಯ  ವಾಡೆ, ಕಣಜ? ಖಾಸಗಿ ಹವಾಮಾನದ ಒಂದು ಮುನ್ಸೂಚನೆಯಂತೆ ವೇಗದಲಿ  ಓಡುವಗಾಳಿ, ದಿಕ್ಕುಬದಲಿಸಬಹುದು ವಿನಾಶಕಾರಿ  ಚಕ್ರವಾತ ಅಪ್ಪಳಿಸಬಹುದು ಉಂಟುಮಾಡಬಹುದು ಭೀಕರ ಪ್ರವಾಹ ಕೋಡಿಯೊಡೆಯಬಹುದು ಕೆರೆ,ಕುಂಟೆಗಳು ಉಕ್ಕಿ ದಿನನಿತ್ಯದಲ್ಲಿನ ಜಂಜಾಟದಲಿ ಏರು,ಪೇರು, ಪ್ರವಾಹದಭೀತಿ, ಸಂಭವನೀಯ ಅಪಾರ ಹಾನಿ. ಆದರೂ...ತಂಪೆರೆಯುವ ವಾಯು ದೇಹಕ್ಕೆ ಹಿತ   ಕೊರೆತೆಯಲ್ಲೇ ಬೆಂದಿರುವ  ಈ ಕಾಯಕೆ ಮಳೆಯ ನಿರೀಕ್ಷತ ಸಿಂಚನ ರೋಮಾಂಚನಕೆ ಸ್ವಪ್ನ ಸ್ವಾಗತ ಹಸಿ
The flow..... Living.! Yes....yet is too elusive to be lived but lives are rare as bare for a public share lines scripted in a perplexed mood. An unique mode, sad but not bad A riddle, but not a psalm with greed... but be as patient as an idiot,a hybrid breed take a lethargic look at it and please...decode The scriptures hidden deep in fossil layers the cryptography script is not an engraved script puzzle or a riddle but one has to handle you may like the the disconnected lyrics like wordless grunting of baby in the cradle or orphaned scattered bricks of the ruined fort, oh.. is it a precious monument indeed.? yes.. it is a trick..or even may be a teasing gimmick... Yet trickles from the endless oblivion above sounds a note of notation in a concert haphazardly arranged to give a sense satisfaction of hollowness of deep stress or nothingness a confused mind stretched Being Just a sound, mere musical mess may never be as an aesthetic poem of Keats or as sacred and devoti
A silence of explosion... An unusual urban silence A latent volcanic violent patience Hear the humming ! a rural folk tune or a moan ?  Indeed it is too confusing Or is it so loud like a big bang ? But yet unheard, may be as a whisper Explosion during the time of creation The ear drum is punctured with violent waves The vibrating murmur unclearly echoed Trembling and shaking the pedestal A soundless unpredictability in and out A decibel wave that is inaudible to human An anticipated cold of December Sweeping and blowing too early in November....
ಹಾಗೆ ಸುಮ್ಮನೆ....  ಪರಿಸರವನ್ನೇ ಗುಲಾಮಗಿರಿಗೆ ತಳ್ಳಿದ ವಿಜ್ಞಾನದ ಕ್ರಾಂತಿ.... ನಮ್ಮ ವಯಕ್ತಿಕ ಸೇವೆಗೆ ನಿರತವಾಗಿದೆ ಮೌನವಾಗಿ. ಈಗ ಸದಾ ಎಲ್ಲಾ ಋತುಗಳು ಲಭ್ಯ ಒಂದೇ ಕಾಲದಲ್ಲಿ, ಯಾವುದಾದರೂ ಪ್ರದೇಶದಲ್ಲಿ, ಅಕಾಲ ಮಾವು ಈಗ ಪ್ರತಿನಿತ್ಯದೊರೆಯುವ ನಿತ್ಯಮಾವಿನ ಹಾಗೆ. ನಿಶ್ಚಲ ನಿಂತಿದೆ ಅನೂಹ್ಯ ನಾಗಾಲೋಟದಲಿ ಸಮಯ.....ಭೂಭ್ರಮಣದಲ್ಲಿ. ದೂರವಾಗಿದೆ ವ್ಯತ್ಯಾಸ ಹಗಲು,ರಾತ್ರಿಗಳಲ್ಲಿ.... ಇನ್ನಷ್ಟು ಈ ಕಾಲ ಮುಂದುವರಿಯಲಿದೆ ಹೀಗೆ, ಅನಿಸುತ್ತದೆ.. ಕಾಲ ಘಟನೆಗಳಂತೆ....ಬದುಕಿನ ಪರಿಕಲ್ಪನೆ. "ಬಳಸಿ....ಬಿಸಾಡಿ"..... ತತ್ವದ ಪರಾಕಾಷ್ಟೆಯಲ್ಲಿ ಎಲ್ಲವೂ ತಾತ್ಕಾಲಿಕ....ಎಂಥಹ ಮಹಾತತ್ವ....? ಎಲ್ಲರ ಧ್ವನಿಯೂ ಅವರಂತೆ, ಅವರಿಗೆ ಸರ್ವಕಾಲಿಕ ಅಮರಸತ್ಯ. ನಕಲಿನ ಪ್ರಪಂಚ, ವಿವಿದತೆ. ಸೃಜನಶೀಲತೆ ಒಂದು ಸಾಮಾನ್ಯ ಬಿಡಿಸಲಾರದ ಸೂತ್ರ. ಲೆಕ್ಕ ಕಗ್ಗಂಟು. ಬರವಣಿಗೆಗೆ ಬರಗಾಲ. ಕಲೆ, ಸಾಹಿತ್ಯಕ್ಕೆ ಇದೀಗ ಕಲಿಗಾಲ. ಓದುವ, ಬರೆಯುವ ಹವ್ಯಾಸ ಕ್ಕೆ ಮಾಡಲಾಗಿದೆ ಅಂತಿಮ ಸಂಸ್ಕಾರ. ಸ್ವೀಕರಿಸಿದೆ ತಿಲಾಂಜಲಿ ಅಂತರಾತ್ಮ. ಆದರ್ಶ.....ಅದೃಷ್ಯ...! ಆದರ್ಶವಾದಿಗಳು ಗೊಂದಲದಲ್ಲಿ ಗಸ್ತು ಹೊಡೆಯುತ್ತಿದ್ದಾರೆ ತಮ್ಮದೇ ಗುಹೆಗಳಲ್ಲಿ. ಬರವಣಿಗೆ ಕ್ಷೇತ್ರ ಕಂಡ ಈಚಿನ...ಭೀಕರ ಬರಗಾಲ. ಕವನ ಒಂದು ರೋಗ....ಮಾರಕಜಾಡ್ಯ. ಕವಿಗಳು...ರೋಗಿಗಳು ವೈದ್ಯರಿಲ್ಲದ ಆಸ್ಪತ್ರೆಯಲ್ಲಿ. ಎಬೋಲಾ ರೋಗಿಗಳ ಸಂಪರ್ಕಕ್ಕೆ ಬಂದವರಂತೆ ಪ್ರತ್ಯೇಕ ಉಳಿಸಿ
ವಿಚಿತ್ರ ವಾಸ್ತವ..... ಒಮ್ಮೆ ನಾನೂ ಬಾಲಕನಾಗಿದ್ದ ನೆನಪು. ಕಿರಿಯರು, ಚಿಣ್ಣರು....ನಿರ್ಲಕ್ಷಿತರು ಮನೆಯಲ್ಲಿ. ಲೆಕ್ಕಕ್ಕೆ ಉಂಟು ಆಟಕ್ಕೆ ಇಲ್ಲ. ಪರದೇಸಿ ಮಕ್ಕಳೆಲ್ಲ. ಆಗೋಮ್ಮೆ ಕಾಲ ಹಾಗೇ ಇತ್ತು....ದೊಡ್ಡವರದೇ ಆಗಿತ್ತು ಗತ್ತು,..ಗೌರವ, ಘನತೆ ಆಗಿತ್ತು ಅವರದೇ ಸ್ವತ್ತು....ಅವರು ಪ್ರಶ್ನಾತೀತರು...ವಂದನೀರು, ಪ್ರಾತಸ್ಮರಣೀಯರು. ದೇವರ ಹರಿಕೆಗೆ ಬಿಟ್ಟ ಬಲಿ ಅಬ್ಬೆಪಾರಿ ಮಕ್ಕಳು ಆಕಸ್ಮಿಕ ಲೋಕಕ್ಕೆ ಕಾಲಿಟ್ಟವರು. ವಿಧೇಯತೆಯೇ ಅವರಿಗಿದ್ದ ಪಾಲು ಶರಣಾಗತಿಯಲ್ಲಿ.ಭಯ,ಭಕ್ತಿ, ತಗ್ಗಿ ಬಗ್ಗಿ, ಹೆದರಿ ಕುಗ್ಗಿ ಪದಗಳ ಭರ್ಜರಿ, ಆರ್ಭಟ ಕಿವುಡಾಗಿಸುವ ಮೆರವಣಿಗೆ. ಹಬ್ಬ,ಹರಿದಿನಗಳಲ್ಲಿ,ಕಲೆತಿದ್ದ ಜನರ ಮುಂದೆ ಪ್ರದರ್ಶನ. ಉತ್ಕಟ ವಿಧೇಯತೆ, ಉನ್ಮಾದದಲಿ ವಿನಯ, ಅಪ್ಪನಿಂದ ಕೊಟ್ಟಶಿಸ್ತು. ಇದಕ್ಕೆ ಹಿರಿಯರದೆಲ್ಲಾ ಇತ್ತು ಅಸ್ತು. ಗುಲಾಮಿಯ ಹಿರಿಮೆ, ಗೌರವದ ಗರಿಮೆ. ದೊಡ್ಡವರಿಗೆ ಆದ್ಯತೆ. ಎದುರು ಮಾತು ಸಲ್ಲದು ಸಂಭಾವಿತ ಕಿರಿಯರಿಗೆ. ಅಶಕ್ತ ಮಕ್ಕಳು ಶೋಷಣೆ ಸಂಸ್ಕಾರ. ಮನೆತನದ ಲಕ್ಶಣ. ಅನುವಂಶೀಯ ಕೀರ್ತಿ. ಹಿರಿಯರಿದ್ದಾಗ ನಮ್ಮ ಹಸಿವು ಮರೆವ ಕಲಿಸಿದ್ದ ಕಲೆ., ಖಾಲಿಹೊಟ್ಟೆಯಲಿ ನೂರಾರು ಶೇಷಪ್ರಶ್ನೆಗಳು. ಉತ್ತರಿಸಲು ಯಾರಿಲ್ಲ...ಪ್ರಶ್ನಿಸುವ ಹಕ್ಕಿಗೇ ಮುಕ್ಕು. ದುರದೃಷ್ಟವಶಾತ್ ನನ್ನ ಹಿರಿಯರು ನಮ್ಮಪ್ಪ,ಅಮ್ಮ. ಅವರಿಗೂ ಇದ್ದರು ಮನೆತುಂಬ ಪ್ರಾಯದವರು ಮನೆತುಂಬ. ಪರಂಪರೆಯ ಗುಣಾಣುಗಳು ಅವರಿಂದಲೇ ವರ್ಗವಾಗಿತ್ತು. ಅದರಿಂದ