Posts

Showing posts from January, 2016
Ego. A dawn of diminutive definition has expanded into only silent shout An unlimited self egocentric criticism of everything and everyone is heard A mucous of plasma of vengeance and hatred diffusing into the living cells Souls are sacrificed at the altar of justice to please and solace the supreme self…..
ಮೆಗಾ ಧಾರವಾಹಿ. ಸ್ವರಮಾಧುರ್ಯ ಪ್ರತಿಫಲಿಸಿದು ಅಕ್ಷಿಪಟಲದಮೇಲೆ ಅದರೂ ಮೀಟುತ್ತಿದೆ ಹೃದಯ ಶ್ವಾಸದಲ್ಲಿ ನಿಂತಿಲ್ಲ ಕಂಪನ ಒಳಕಿವಿಯ ದ್ರವದಲ್ಲಿ ಪುಪ್ಪುಸಕೆ ಯಾಕೋ ಉಬ್ಬಸ, ಏದುಸಿರು ರಾಗ ಸಮಾಪ್ತಿ, ಮುಂದುವರಿದಿದೆ ಶಬ್ಧ ಶಿವನ ತಾಂಡವದ ಡಮರುಗದ ಹಾಗೆ ಕೇಳಬರುತಿದೆ  ಭವಿಷ್ಯ ವಾಣಿ,ಗೊರವಯ್ಯನ ಬುಡುಬುಡುಕೆಯಿಂದ ಬಾರಿಸುತಿದೆ ಬದುಕಿನ ಪಲ್ಲವಿ.... ತೇಲಿಬರುವ ಅಲೆಹಿಂದೆ ಅಂಡಲೆದು, ಬಿಸಿಲ ಕುದರೆ ಬೆನ್ನೇರಿ, ಗುಡ್ಡಹತ್ತಿ, ಕಣಿವೆ ಇಳಿದು ಸವಾರಿ ತಲುಪಿತು ಬಯಲು, ಆದರೂ ಮಾಂತ್ರಿಕ ಮೋಡಿಯ ಅಯಸ್ಕಾಂತದ ಸೆಳೆತಕ್ಕೆ ಗೋಡೆಗಳಿಲ್ಲ, ಹಿಂಬಾಲಿಸಿದೆ ಆದೇ ರಾಗ, ಅರ್ಥವಾಗದ ಅನುರಾಗ ಜೀವನರಾಗ ಮುಂದುವರಿದಿದೆ ಕಚೇರಿ ಗಾಯಕ, ಪ್ರೇಕ್ಷಕ, ವಾದ್ಯವೃಂದ ಮಾಯ ನಾನೊಬ್ಬ ಕುರುಡ ಕಾಣುವುದಿಲ್ಲ ಯಾರು ಪದವಿಲ್ಲದ ಭಾಷೆ,  ಮಧುರ, ಮೌನ ಮನಕಲಕುದ ಜಾನಪದವೋ, ನಿರ್ಭಾವ ಭಾವಗೀತೆಯೋ ಶಿಸ್ತಿನ ಕಠೋರ ಶಾಸ್ತ್ರೀಯ ಗಾಯನವೋ? ಮರೆವಿಗೆ ಮುದನೀಡುವ ವಾದ್ಯ, ಗುಲ್ಲೆಬ್ಬಿಸುವ ಸ್ವರಗಳು ಇಂದಿನ, ಚರಣ... ಅಂತ್ಯ ಕಾಣದ ಚಾರಣ....ಕೇಳದ ಯಂತ್ರಸಿದ್ದ ಸಂಗೀತ? ವಾದ್ಯ ವೃಂದದ ಪ್ರತಿಧ್ವನಿ ಕಿವಿಯಲ್ಲಿ ಅವಿಶ್ಕಾರ ಅಂತ ಅನ್ನಿಸ್ಸಿದ್ದು ಊಂಟು. ಉನ್ಮಾದ ವೆನಿಸಿದರೂ, ತಂಪೆರೆಯದ ಸಿಂಚನ ಲೋಹಾಲಿಂಗನ! ಮಾಸಿಹೋದ ಬಾಲ್ಯ, ಜಾರಿಹೋದ ತಾರುಣ್ಯ ನೆನಪಿನಿಂದಾಯ್ದ ಕವನ ಸಂಕಲನ ಅಥವಾ ಪ್ರತಿಯೊಂದು ಪುಟವೂ ಸ್ವತಂತ್ರ ಕಿರುಕಥೆಗಳ ಕಿರುಹೊತ್ತಿಗೆ
ಅನಿವಾರ್ಯ. ಮುದಿತನ ಬರೆಯುತಿದೆ ಮುನ್ನುಡಿ ಯವ್ವನದ ಬೃಹತ್ ಕಾದಂಬರಿಗೆ ನೆನಪಲ್ಲೇ ಕಲ್ಲಾದ ಪಳೆಯುಳಿಕೆಯ ಬಿಡುಗಡೆ ಪ್ರಾಯದ ಸ್ಥರಗಳಲ್ಲಿ ಹೂತ ಅಸ್ಪಷ್ಟ, ಅಪೂರ‍್ಣ ಅಸ್ಥಿಪಂಜರದ ಅಸ್ತವ್ಯಸ್ತ ಮೂಳೆ ಚಿಲ್ಲಾಪಿಲ್ಲಿ ಆವರಿಸದ ಕಲ್ಲು ಚೂರುಗಳು ದಾರಿಯಲ್ಲೆಲ್ಲ.. ದುರ್ಗಮ ರಸ್ತೆಯಲ್ಲಿ ಪ್ರತಿಧ್ವನಿಸುವ ಶಭ್ದ ಮಾಯವಾಗಿದೆ ಮಾಧುರ್ಯ, ದಿಕ್ಕಿಲ್ಲದ ಬಯಲಲ್ಲಿ ವೀಕ್ಷಣೆಯ ಕಂಪನದಲ್ಲಿ, ನಡುಕ ನಿರ್ಲಿಪ್ತ ಬೆನ್ನುಡಿಗೆ ಸ್ವಸ್ತುತಿಯ ಸ್ವಗತವೇ? ನಿಷ್ಟುರ ಪರಾಮರ್ಶೆ, ವಿಮರ್ಶಾತ್ಮಕ ನಿರೂಪಣೆ... ನಿಷ್ಪಕ್ಷಪಾತ, ನಿರ್ಲಿಪ್ತ ಆತ್ಮಾವಲೋಕನ ಇತಿಹಾಸದ ದಾಖಲೆ!!!!
ಜಿರಳೆ. ಕಾಫ್ಕಾನ ರೂಪಪರಿವರ್ತನೆ ಕಥೆಯ ನಾಯಕನಾಗಿ, ಅಂಗಾತ ಬಿದ್ದು ಪರದಾಡಿದ ನೀನು ಈಗ ಮಹಾತಪಸ್ವಿಯಂತೆ ಸುಖಾಸನದಲ್ಲೇ ಸಾರಿದ್ದೀಯಾ ಮನುಕುಲದ ಮೇಲೆ ಅಘೋಶಿತ ಸಮರ ಕೊರಕಲುಗಳಲ್ಲಿ, ಗಟಾರಿನ ಡೊಗರುಗಳಲ್ಲಿ ಸುಸಜ್ಜಿತ ನವೀನಆಡುಗೆ ಕೋಣೆಯಲ್ಲಿ ಕತ್ತಲು, ಮೂಲೆಗಳೇ ಇಲ್ಲದ ಆವಾಸ ಜಗತ್ತಿನಲ್ಲೇ ಇಲ್ಲ ಸರ್ವಂತ್ರಯಾಮಿ, ನೆಲ,ಜಲಆವಾಸದಲ್ಲಿ ತುಂಬಿ, ತುಳುಕುತ್ತಿದ್ದಾರೆ ವಜ್ರಾಸನದಲ್ಲಿ ನಿಶ್ಚಲ ನೀನು ಕತ್ತಲಲ್ಲೇ ಮೀಸಿ ತಿರುವಿ ಹೊಂಚುಹಾಕುವ ಸನ್ಯಾಸಿ ಬೆಳಕಿನಿಂದಲೇ ಬಹೀಷ್ಕೃತ ನೀನು ನೀನಲ್ಲ ತ್ರಿನೇತ್ರ, ಸಹಸ್ರ ನೇತ್ರ... ಹಸಿವ ವೈಸನಿ ನೀನು ನಿರಹಂಕಾರಿ, ಸರ್ವಭಕ್ಷಕ ನಿನ್ನ ಹೊಂದಾಣಿಕೆ ಬಲು ಅಪರೂಪ ಊಸರವಳ್ಳಿ ಸೋತು ಮಡಿಚಿದೆ ಬಾಲ ಶಾಶ್ವತವಾಗಿ ಅದ್ಯಾರಿಗೆ ಗೊತ್ತು? ಈ ಗುಟ್ಟು, ನನ್ನ ನಿನ್ನ ಬಿಟ್ಟು ಮಡಚಿದ ಕೀಲುಕಾಲಲ್ಲೇ ಪದ್ಮಾಸನ ನಿರಾಸಕ್ತ ಧ್ಯಾನಿ, ಹೊಂಚುಹಾಕುವ ಮೌನಿ ಸ್ಪರ್ಷ್ಯಜ್ಞಾನಿ ಗ್ರಾಹಕ, ಸಕಲ ಭಕ್ಷವಿನಾಷಕ ಮೂಳೆರಹಿತ ರೆಕ್ಕೆ ಕೇವಲ ತೋರಿಕೆ ಹಠಾಟ್ ಹಾರಿ ಎದುರಾಗುವ ನೀನು ಗೃಹಿಣಿಯರ ಕಂಠದಲಿ ಹಾಡಿಸುತ್ತೀಯಾ ಸಪ್ತಸ್ವರದ ಆರೋಹಣ ಏಳನೇ ಸ್ವರ ಮಾಡಿಸುತ್ತೀಯಾ ನರ್ತನ ಪ್ರದರ್ಶನ ನಿನ್ನ ಕಂಡು ಹೆದರದ ಧರ್ಯವಂತ ಅಸಹಾಯಕ ಭಂಡರಿಗೆ ಅಸಹ್ಯದಲ್ಲೇ ನಡುಕ ಹುಟ್ಟಿಸುವ ನೀನು ವರ್ತಮಾನದ ಅವಿಶ್ಕಾರಕ್ಕೆ ಸವಾಲು ಯುದ್ಧ ನೌಕೆಯಲ್ಲೇ ಬೀಡು ಬಿಡುವ ಧೀಮಂತ ಕೋವಿಗಳ ಕೊಳವೆಗಳಲ್ಲಿ ನಿನ್ನ ರಾಸಲೇಲೆ ಜೀವಕುಲ ವಿನಾಶ ಕಂಡ ಪ್ರೇಕ
ಬಂತು...ವರ್ಷ-2016..... ಈ ದಿನ ವರುಷದ ಕೊನೆಯದಿನ ಮಾತ್ರ! ಬದುಕು ಬಹು ಧೀರ್ಘ, ಮುಗಿಯುವ ವರೆಗೂ ಅನುಭವಿಸಿದ ನಲಿವು, ಕೊನೆ ಉಸಿರೆಳದ ನಿರ್ಧಾರಗಳು ಬೀಗಿದ ಗೆಲವುಗಳು, ಸಹಿಸಿದ ಸೋಲುಗಳು, ಬೀಳ್ಕೊಡುಗೆ ಸಮಾರಂಭ ಏರ್ಪಾಡು ಬರುವ ವರುಷ,ನಾಳೆ ಸ್ವಾಗತಕೆ ಸಂಭ್ರಮದ ತಯಾರಿ ನಶೆ ಏರಿದಂತೆ ನಿಷೆ ನಕ್ಕು ತೊದಲುವಳು ಈಗ, ನೆನಪು, ಸ್ವಪ್ನಗುರಿಗಳ ಸಂಕ್ರಮಣ ಪರ್ವ ಕಾಲ ಮರೆವಿನ ಮುಸುಕಲ್ಲಿ ಹುದುಗಲಿರುವ ಭೂತ ಕನಸುಗಳ ಆಶಾಕಿರಣ ಮೆರವಣಿಗೆಯ ಭವಿಷ್ಯ ಬಸಿರಾಗುವ ಸಂಕಲ್ಪಗಳ ಮೇಳ ಅದೇ ನಿಯಮಗಳ ಮಾಮೂಲು ಪಂದ್ಯ ಆರಂಭವಾದ ರಿಲೇ ಓಟದಲಿ ತುದಿಗಾಲಿನಲಿ ಸಿದ್ದ ವಿರುವ ಸ್ಪರ್ಧಿಗಳು... ಬ್ಯಾಟನ್ ಹಸ್ತಾಂತರಿಸಲು ಕಾಯುತ್ತಿರುವೆ ಅದೇ ದೂರ,ಅದೇ ಬದಲಿಸಲಾರದ ಜಾಡು ತಡೆರಹಿತ, ಕುರುಹಿಲ್ಲದ, ಮುನ್ಸೂಚನೆ !  ಮುಕ್ತಾಯ...ಮರುಆರಂಭ ನಾಳೆ,ಯಥಾ ಪ್ರಕಾರ.... ನೀನು.... ಓಡಲೇ ಬೇಕು, ರೇಸ್ ಇನ್ನು ಮುಗಿದಿಲ್ಲ ದಾಟಿ ಹೋಗುವ ಮೈಲಿಗಲ್ಲುಗಳ ಹಿಂದೆ ಹಾಕಿ, ನಿಲ್ಲುವಹಾಗಿಲ್ಲ, ಕಾಲ ಬಿಂದುವಿನ ನಡುವೆ ಹಿಂತಿರುಗಿ ನೋಡಲು ಅವಕಾಶ ಇಲ್ಲಿಲ್ಲ, ಸ್ಥಿರವೇಗದಲ್ಲಿ ನಿನ್ನ ಓಟವಿರಲಿ. ನೀ ನೀಡಲಿರುವ ಬ್ಯಾಟನ್ ಗಾಗಿ ಕಾಯುತ್ತಿರುವ ಆ ಸ್ಪರ್ಧಿ ಗೂ ತಿಳಿದಿಲ್ಲ ರೇಸ್ ನ ಮುಕ್ತಾಯ,ಗುರಿಯ ಪರಿ.... ಬರುವವರೆಗೂ ಮತ್ತೊಂದು ವರುಷ ನಿನಗೆ ಚಲನೆಯಷ್ಟೇ ಸಾಧ್ಯ..... ಓಡು.... ಹಿಂದಾಯಿತು ವರುಷ..... ಪ್ರದರ್ಶಿಸು ನಿನ್ನ ನಿಜ ಪೌರುಷ.....
Musing the Past…  Brooding over the ailing, ageing body.....                                                                                         Failing to experience the past with excitement and thrill    But without remorse or vague overlapping of abstract disconnects of past    Rare mild smile that escapes meaninglessly craves to freeze in the past  That stage of life lived galloping without past    But that time was squandered with a dreamy colorful future fantasy  The feeble body is desperate and begs for extension for some more time    Fearing the days that are dwindling as fast as divine disappearance  But for ever one feels that too many tasks that are still unfinished    My dear ones.....    Brood, but breed not the melancholic seed......  For...Life is too beautiful indeed....