Posts

Showing posts from August, 2012

UNMU(k)TH The Intoxicated.....!!!!!

UNMUKTH the intoxicated.....!!! It is really shocking to see the Unmukth's exam controversy which is blown out of proportion unduely by the media and the many cricketing world celebrities.And of course opportunists as ever the politicians have also joined the chorus to condemn the principal and even forcing the amendments of the university to allow our national hero to take his Exams. They are super humans and beyond the rules and regulations of an old institution like university.Greater shock is even so called intelligent Kapil Sibal also have joined the chorus. Yes..everyone agrees that sports should be encouraged and it has been being encouraged  for the past so many years since Independence. But today the University is being forced to amend its law to accommodate one head long, ego centric audacious cricketer.Yes,  without an iota of doubt the boy's talent  deserves to be appreciated. But for a moment we all think has this type of incident ever occur ed in the In

ಉತ್ಪರಿವರ್ತನೆ.

    ಉತ್ಪರಿವರ್ತನೆ. ಇದು ಒಂದು ಪದ . ಬದಲಾವಣೆ, ಏರುಪೇರು ಆಗುವುದು, ಎಂಬ ಅರ್ಥವನ್ನು ಕೊಡುವ ಪರಿವರ್ತನೆ ಎಂಬಪದದಿಂದ ಹುಟ್ಟಿಕೊಂಡ ಕನ್ನಡ ಪದ. ಕನ್ನಡದ್ದೇ . ಭಾಷೆಯೇ ಅಷ್ಟು ... ಮೂಲಪದ ಸಮಯಕ್ಕೆ ತಕ್ಕ ಹಾಗೆ ತನ್ನ ಮೂಲದ ಅಸ್ತಿತ್ವವನ್ನೇ ಕಳೆದು ಕೊಳ್ಳುತ್ತದೆ . ಪರಿವರ್ತನೆ . ಕ್ರಮೇಣ ಬದಲಾಗುವ ವಿಧಾನ. ಆದರೆ ವಿಜ್ಜಾನದ ಅದರಲ್ಲೂ ಜೀವಶಾಸ್ತ್ರದಲ್ಲ್ಲಿ ಉಪಯೋಗಿಸುವಾಗ ಅದಕ್ಕೆ ಬೇರೆ ಅರ್ಥ " ಇದ್ದಕ್ಕಿದ್ದಹಾಗೆ" ಎಂಬ ಅರ್ಥಪಡೆದಿದೆ. ಒಟ್ಟಿನಲ್ಲಿ ಮೂಲಪದದ ರೂಪ ಪೂರ್ಣ ಕಳೆದು ಕೊಳ್ಳದೆ ಇದ್ದರೂ ಆರಂಭಕ್ಕೆ ಮುನ್ನ ಸೇರುಸುವ ಪೂರ್ವ ಪದದಿಂದಲೋ ತನ್ನ ಮುಂದೆ ಅಂತ್ಯಪದದ ಜೋಡಣೆಯಿಂದ ತನ್ನ ಸಾಹಿತ್ಯಾತ್ಮಕ,ವೈಜ್ನಾನಿಕ ಹಾಗು ಪ್ರಚಲಿತ ವ್ಯವಹಾರಿಕ ಬಳಕೆಯಲ್ಲಿ ಬದಲಾಗಿ ಹೋಗುತ್ತದೆ . ಹಾಗೆ ಪರಿವರ್ತನೆ ಎಂಬ ಪದ ಬದಲಾಗಿ ವಿಜ್ಞಾನದ ಬಳಕೆಯಲ್ಲಿ ಹೊಸ ಅರ್ಥವನ್ನು ಕಂಡುಕೊಂದಿರುವುದರಿಂದ ಈಗ ಅದು ಕೆಲವರಿಗೆ ವಿಜ್ಞಾನದ ವಿದ್ಯಾರ್ಥಿಗಳಿಗೆ ಉತ್ಪರಿವರ್ತನೆ ಎಂದರೆ ಜೀವಶಾಸ್ತ್ರದ ತಳೀಶಾಸ್ತ್ರದಲ್ಲಿ ಬರುವ ಅಂಗ್ಲ ಪದ Mutation ಗೆ ಸಮಾನಾರ್ಥ ಪದ ಅರ್ಥ ಎನಿಸುತ್ತದೆ . ಇಲ್ಲಿನ ವೈಜ್ನಾನಿಕ ಗ್ರಹಿಕೆಗೆ ಡಿ.ಎನ್.ಎ. ಗುಣಾಣುವಿನಲ್ಲಿ ಉಂಟಾಗುವ ನೈಸರ್ಗಿಕ ರಾಸಾಯನಿಕ ಹಟಾತ್ ಬದಲಾವಣೆ ಎಂದು ವಿವರಿಸುತ್ತಾರೆ. ಆ ಪದದ ಇತಿಹಾಸದ ಬಗ್ಗೆ ತಲೆ

ಮೌನ

ನಿನ್ನ ಮೌನಕ್ಕೆ ನೂರಾರು ಅರ್ಥಗಳು ಅ ನುಮಾನದ ಹವನದಲಿ ಬುದಿಯಾಗದ ಭಾವನೆಗಳ ಹೊಗೆ ಹರಡಿದ   ಭಾಷೆಯಲಿ  ಚದುರಿದ  ವಾಖ್ಯಾನ ಅದು ಯಾರಿಗೋ ಸುಮಧುರ ಗಾನ.

ದೇವಕಣ.....

ಕ್ರಿಯೆಗೆ ಸಮ ಪ್ರತಿಕ್ರಿಯೆ ಸಮವೆಂದ ನ್ಯೂಟನ್ ಮಹಾ ದಡ್ಡ, ದ್ರವ್ಯರಾಶಿ ವೇಗ, ಶಕ್ತಿಗೆ ಸಮವೇ ಅಲ್ಲ, ಅಲ್ಲವೇ? ಐನ್ ಸ್ಟಿನ್ ಒಬ್ಬ ಸುಳ್ಳ, ನೋಡು ಆ ಡಾರ್ವಿನ್ ಮಹಾ ಬುದ್ದಿವಂತ . ವಿವರಿಸಿದ ವೈವಿದ್ಯ ಸಿದ್ದಾಂತ. ಬಳಸಿಕೊಂಡ ಸಾವಯವ ವಿಕಾಸಸಿದ್ದಾಂತ. ಪ್ರಕೃತಿ ಆಯ್ಕೆ ಬಿತ್ತಿ, ಹುಟ್ಟು ಹಾಕಿದ ಅಸಮಾನತೆಯ ಸಾಮಾಜಿಕ ರಾದ್ದಾಂತ. ಛಿದ್ರವಾಗದ ಅಣು ಇಂದೀಗ ಸೃಷ್ಟಿಸಿದೆ ದೇವಕಣ. ಮುಂದೇನು ಅವತಾರ? ಭೂಗೊಳವನ್ನೇ ಕುಗ್ಗಿಸಿದ ಹಿಗ್ಸ್ ಬೋಸಾನ್ ಶಿಷ್ಯರೇ ಕೊಡಲಿದ್ದಾರೆ ಉತ್ತರ... ಎಲ್ಲಾ ಪ್ರಶ್ನೆಗಳಿಗೂ ಸಿಗಲೆಬೇಕಿಲ್ಲ ಪರಿಹಾರ, ಪ್ರಶ್ನಾತೀತ ಬದುಕು ಬರಿ ಹುಡುಕಾಟವಲ್ಲ.ನಮ್ಮನ್ನೇ ಹುಡುಕುವ ಜಂಜಾಟ,   ಕಲಾವಿದನ ಕಲ್ಪನೆ, ವಿಜ್ಞಾನಿಯ ಆಲೋಚನೆ, ಎರಡರ ನಡುವಿನ ನಾವೊಂದು ನಮೂನೆ. ಹಾಡು ನಿಶ್ಯಬ್ಧ,, ಚಿತ್ರ,ವರ್ಣರಹಿತ  ಖಾಲಿ ಹಾಳೆ ಮಾತ್ರ, ಪದರಹಿತ ಆದರೂ ಮುದ್ರಿತ ಸಾಹಿತ್ಯ ವಿಜ್ಞಾನಿಯ ಸಂಶೋಧನೆ.....ಶೂನ್ಯವಾಗಲಿ ಎಲ್ಲರ ವೇದನೆ,ಅನ್ವೇಷಣೆ, ಅವಿಷ್ಕಾರ  ಅನ್ವಯವಾಗುವ  ನಿಯಮ  ಇಳಿಯಲಿ ತರಲೆಕಣದ  ಆಳಕ್ಕೆ, ಅನ್ವಯದ  ಉಪಯೋಗ  ಹರಡಲಿ  ಎಲ್ಲ  ಬ್ರಹ್ಮಾಂಡಗಳಿಗೆ. ತೊಲಗಲಿ  ಪ್ರಯೋಗಾಲಯದಿಂದ ಬಂಡವಾಳದ  ಸ್ವಾರ್ಥ. ಹೊರಬರಲಿ ಜ್ಞಾನ,  ಹರಾಜಾಗದಿರಲಿ ಮಾನವನ  ಮಾನ. ನಮಗೆ ಈಗಿರುವ  ಮಹಾಸ್ವಾರ್ತಿ ವಿಶ್ಲೇಷಕ, ಕೊಲೆಗಡುಕ  ಮಹಾ ಸಾದಕ ,  ಪರಿಸರ ಶತ್ರು ಕಿರಾತಕ,  ಬಿರುದುಗಳೇ ಸಾಕು. ಭಸ್ಮಾಸುರ    ನಂತೆ  ವಿದೂಷಕನಾಗ ಬೇಡ ಸೃಷ್ಟಿಕರ