ಹಾದಿ..... ಸದಾ ದಿಕ್ಕುತಪ್ಪುವ ಅಲೆಮಾರಿ ಆವಾಸಿಗೆ ಮಾರ್ಗದರ್ಶಿ ಬೆಳಕಿನೊಡೆಯನ ದಿಕ್ಸೂಚಿ ಬೆಳಗು. ಯೋಜನೆಗಳಿಲ್ಲದ ನಿರ್ಯೋಚನೆಯ ಆರಾಮಬದುಕು ಯವ್ವನದಷ್ಟೇ ಮುಕ್ತ ಉತ್ಸಾಹದ ಸರಕು. ಇರುವುದೊಂದೇ ಪಥ, ಅಂಕು ಡೊಂಕಿನ ಅಡ್ಡಾದಿಡ್ಡಿ ತಗ್ಗು ದಿನ್ನೆಯ ರಸ್ತೆ ಶಿಥಿಲಗೊಂಡ ಆ ಪುರಾತನ ರಥ, ಚಕ್ರ ಕಿರುಚಿ, ಕಿರುಚಿ ಸುಸ್ತು. ಆದರೆ, ತಂಗುದಾಣಗಳು ವಿರಳ ಕಾಲಿಡದ ಈ ಕಾಡುಜಾಡಿನಲ್ಲಿ ಕಂಡರೂ ಅಲ್ಲೊಂದು,ಇಲ್ಲೊಂದು ಬಿಸಿಲುಕುದುರೆಯ ಗೊಂದಲದದೂರ ಗಲಿಬಿಲಿಯಲ್ಲಿ ಬಳುಕುವ ಚಂಚಲ ಚಿತ್ರಗಳು ಆವಿಯಾಗುವ ಭ್ರಮೆ, ನಿರಂತರ ಸ್ಥಭ್ದ ಚಿತ್ರಕ್ಕೇಕೆ ಆಯಾಸದ ಭಾರ? ಬದಿಯಲ್ಲಿ ಕಾಣುವ ರೇಖಾದೃಶ್ಯ ಚಲಿಸುತ್ತಲೇ ಇದೆ ನನ್ನೊಟ್ಟಿಗೆ ನನಗೆ ಸಿಗದ ಹಾಗೆ ಸಮ ಹೆಜ್ಜೆಯಲಿ ನಮ್ಮಿಬ್ಬರ ನಡುವಿನ ದೂರ ಸೀಳುತ್ತಲೇ ಇದೆ ಚೂಪಾಗಿ, ಇಂದಿಗೂ.ಆಳವಾಗುತ್ತಿರುವ ಕಂದರ ಚಂದ್ರರಹಿತ ಚಪ್ಪರ ಭೂಚಿಪ್ಪುಗಳ ತಟ್ಟೆಗಳ ಕೊರಕಲಿನಲಿ ನಿರ್ವಾತದಲಿ ಸುಂಟರಗಾಳಿ ಅನಾಥ.
Posts
Showing posts from December, 2013