ಜೇಡ.. ನಾಲ್ಕು ಜೋಡಿ ಕೀಲು ಕಾಲುಗಳ ಅಷ್ಟಪದಿ, ಅಪರೂಪ ಸೃಷ್ಟಿ, ಬೆಳಕಿಲ್ಲದ ದೃಷ್ಟಿ ಮಯ್ಯೆಲ್ಲಾ ಕಣ್ಣು, ಸಹಸ್ರಾರು ಪ್ರತಿಬಿಂಬಗಳು ಜಿಗಿ ಹಲಗೆಯ ಹಗುರ ದೇಹ, ಕಾಲುಗಳು ಕಡ್ಡಿ ಬುದ್ದಿಯ ಬರ. ಒಮ್ಮೊಮ್ಮೆ ಬಹು ಭಾರ ವರ್ಣಾಂಧತೆಯ ಅಂಟು ಜಾಡ್ಯ, ಬದುಕು ನಿರ್ವರ್ಣ ಆದರ್ಶಪ್ರಿಯೆ, ಸದಾ ಏಕಾಂಗಿ, ಸಂಪರ್ಕ ನಿಷಿದ್ಧ ಆದರೂ ಹೊಂಚುಹಾಕುವ ಹುಟ್ಟುಗುಣ ಯಾರಿಗಾಗಿ? ಕಾದಿರುವ ಶಬರಿ? ತಾನೇ ನೇಯ್ದ ಸುಂದರ ಭವನದಲಿ ಹೆಣೆದ ನಿಶ್ಯಭ್ದ ಸಂಚು ಕದ್ದು,ಮುಚ್ಚಿ ಯಾವುದೋ ತನ್ನ ತೆವಲಿನ ಋತುವಿನಲ್ಲಿ ಕೂತಲ್ಲೇ ಬೀಸುತ್ತಾಳೆ ಮಾಯಾವಿ ಕಲೆಯ ಬಲೆ, ಸ್ವಜಾತಿ ಭಕ್ಷಕಿ ಮಳ್ಳಿ ಹೊಂಚುಹಾಕುವ ಮಸಲತ್ತು ಪ್ರಿಯತಮನ ಬರುವಿಕೆಗೆ ಏನೆಲ್ಲ ಕಸರತ್ತು.. ಮನಮೋಹಕ ಮೋಹದ ನುಣುಪಾದ ರೇಶಿಮೆಯ ಜಾಲ, ಬಿನ್ನಹದ ಸಂದೇಶ,ಸುವಾಸಿತ ತಂತಿಗಳ ಸ್ವಾಗತ ಕರೆ ರಾಸಲೇಲೆಯ ಕೂಟದ ಕಾಲ, ವಿರಹದಲಿ ಚಡಪಡಿಕೆ, ಗಿರಕಿಹೊಡೆಯುತ್ತಾನೆ ಭಾವೋದ್ವೇಗಿ ರೋಮಿಯೋ ಅಪಾಯ ಲೆಕ್ಕಿಸದೆ,ಕಾಮದ ಮಾರಕ ಕೋಟೆಯ ಸುತ್ತ. ಹೆದರಿ, ಹೈರಾಣು ವಿರಹಿ ವಿಹ್ವಲ ಅದರೂ ದಾಟಬೇಕಿದೆ ಕೂಟ ಸೇತುವೆಯನ್ನು ಅಪರೂಪದಲಿ ಘೋಷಣೆಯಾದ ಕದನ ವಿರಾಮ ಮೋಹದಲಿ ಹಾತೊರೆದ ಯೋಧ, ರಾಣಿಶಾಂತ, ನಿರ್ಲಿಪ್ತ ಒಪ್ಪಿಕೊಂಡಾಗಿದೆ ಆಹ್ವಾನ, ಆತ್ಮಾಹುತಿಗೆ ಹೋಗಲೇ ಬೇಕು ಪ್ರಿಯತಮೆಯ ಚುಂಬನಕೆ ಅನಿವಾರ್ಯ ಆಲಿಂಗನ, ಮರಣಾಂತಿಕ ಸಂಭೋಗ ಅನುಸರಿಸಬೇಕಿದೆ ವಂಶಪಾರಂಪರೆ, ಅಳಿಯಬಾರದು ಸಂತತಿ, ಆಗಲೇ ಬೇಕಿದೆ ಆಹುತಿ, ಕಾಮದ ಹವನದಲ್ಲಿ ಬಲಿಯಾಗಲ...
Posts
Showing posts from September, 2016