ಶಿಕಾರಿ. ಪ್ರಾಣಿಪ್ರಿಯರ ದಯೆ ಅನಿವಾರ್ಯವೇ ಪ್ರಾಣಿಗಳಿಗೆ? ಸ್ವಾರ್ಥಕ್ಕೆ ಬಳಸಿ, ಮಾಡಿದ ನಾಮಕರಣ "ಸಾಕುಪ್ರಾಣಿಗಳು" ಮನುಷ್ಯ! ನೀನೆಂತಹ ಪ್ರಾಣಿ? ವಿಕಾಸದ ವಿಲಕ್ಷಣ ಅಂತ್ಯದ ಕೊಂಡಿ ಗೆಲ್ಲಲಾರದ ಪ್ರಾಣಿಗಳಿಗೆ ಅಂಜಿ ವರ್ಗೀಕರಣ ಗೊಂಡ, ಕ್ರೂರಮೃಗಳು. ಎರೆ ಒಡ್ಡಿ, ಗಾಳ ಹಾಕಿ, ಅಡಗಿ, ಗುರಿ ಇಟ್ಟು ಬೆನ್ನಿಗೆ ಚೂರಿ ಹಾಕುವ ಸುಸಂಸ್ಕೃತ ಮಹಾ ಶಿಕಾರಿ, ನಾಗರೀಕ ಹವ್ಯಾಸಿ. ಮಹಾವಿಲಾಸಿ, ನಿಜಕೂ ಮಹಾದಾನಿ. ದುರಾಸೆಯ ನಿನ್ನ ಪ್ರಗತಿ, ಜೀವಸಂಕುಲ ಕಂಡ ಅಧೋಗತಿ. ಕುತೂಹಲದ ತೆವಲಿಗೆ ಎಲ್ಲಿಯ ಮಿತಿ? ಪಿಂಡಾರ್ಪಣೆಗೆ ಭೂಮಂಡಲವೇ ಆಹುತಿ ಈ ಗ್ರಹದ ಅನಪೇಕ್ಷಿತ ಅಥಿತಿ. ದಿಕ್ಕು,ದೆಸೆ ಇಲ್ಲದ ಅನ್ವೇಷಕ ಸ್ಥಿತಿ ನಿನ್ನಾತ್ಮಹತ್ಯೆಯ ನಿಲ್ಲದ ಗತಿ. ನೆನಪಿರಲಿ, ಆಗಲಿದೆ ಜೊತೆಯಲ್ಲಿ ನಿನ್ನದೂ ತಿಥಿ.
Posts
Showing posts from April, 2018