Posts

Showing posts from August, 2018
೨೧-೦೮-೧೯೧೮ ಜೀವ ಪ್ರಭೇದ ಉಪವಾಸ ಅಲೆದಾಟ,ಆವಾಸ ಹುಡುಕಾಟ, ನೀರಡಿಕೆಯ ಪರದಾಟ ಪ್ರಭೇದ ಸಮುದಾಯ ನಿಶ್ಯಬ್ಧ ಹೋರಾಟ  ನಿಲ್ಲದ ಪೀಕಲಾಟ, ಶಾಶ್ವತ ತೊಳಲಾಟ ಪರಿಸರದಾಲಯದಲ್ಲಿ ಪ್ರತಿನಿತ್ಯದ ಪಾಠ, ದೂರಿಲ್ಲ ಯಾರನ್ನೂ, ಕೂರಿಸಿಲ್ಲ ಗೂಬೆ, ಮೌನದಲಿ ಜಪಿಸದ ಸಂತ ವಿನಾಶದಲ್ಲೂ ಹಗೆ ಸಾಧಿಸದ ಶಾಂತಜೀವಿ ಸಹಜ ಬದುಕಿನ ಕಲೆ, ನಿಗಧಿಯಾದ ಪ್ರಕೃತಿಯ ಬೆಲೆ ಅನೂಹ್ಯ ಅವಲಂಬನದ ಜೀವಬಲೆ. ಬದುಕುಳಿಯುವ ಕೊಲೆಗಾರ ಅಪರಾಧಿಯಲ್ಲ ನ್ಯಾಯದೀಶನೂ ಅಲ್ಲ, ಕೇವಲ ಕಕ್ಷಿದಾರ ತನ್ನಿರುವಿಗೆ ತಾನೇಜವಾಬ್ದಾರ, ಹಕ್ಕುಪತ್ರದಾರ ನಿಭಾಯಿಸುವ ಶಿಸ್ತಿನ ನಿಸ್ವಾರ್ಥ ಪಾತ್ರಧಾರ, ಕಾಣದ ಪಾಳೇಗಾರನ ಶಿಸ್ತಿನ ಸರದಾರ. ಹುಟ್ಟ ಕಾಮಿ, ಸಂತತಿಯ ಮುನ್ನಡೆಗೆ ಸಂತನಾಗ ಬೇಕಿಲ್ಲ,ಸಂತಾನ ರಕ್ಷಣೆಗೆ ವ್ಯಭಿಚಾರಿಯಲ್ಲ ಪೀಳಿಗೆಯ ವರ್ಗಾವಣೆಗೆ ಲೈಂಗಿಕಾಸಕ್ತ....ವಿಕೃತನಲ್ಲ,ಬ್ರಹ್ಮಚಾರಿ ತಪಸ್ವಿ. ಸಾಯದಿರುವುದೇ ಗೆಲವು, ಅದು ಜೈವಿಕ ಹಕ್ಕು, ಜೀವನ್ಮರಣದ ಪೈಪೋಟಿಯಲಿ ಸೋಲು ಸಹಜ ನಿರ್ಮೋಹಿ ನಿಯಮಪಾಲಕ ಅಚಲತೆಯಲಿ ಅಸಹಜ ಜೀವಸಂಖ್ಯಾ ಸ್ಪೋಟ ಸರ್ವಕಾಲಿಕ ಪ್ರದರ್ಶನ ಸ್ವಪ್ರಭೇಧ ಪ್ರತಿನಿಧಿಯ ಆಯ್ಕೆಯಲಿ ಭೂಭಾರ ಅಪಾಯಕಾರಿ ಅಸಮತೋಲನ.. ಅಶಕ್ತ ನಿರ್ವಂಶದಲ್ಲಿ ಮುಕ್ತಾಯ, ಪ್ರಕೃತಿ ಆಜ್ಞೆ ಪಡೆದ ಸಾಲ ಹಿಂದಿರುಗಿಸುವ ಮರಣ ದುರಂತವಲ್ಲ ಬದುಕಿನ ತಟಸ್ಥಬಾಗಿದಾರ ಮಹಾತ್ಮ ಈ ಕಥೆಯ ಎಲ್ಲ ಪಾತ್ರಗಳು ಜೀವಂತ, ವಿನಯಸಂಪನ್ನ ಮಹಾಬಲರು ಖಳನಾಯಕ ಯಾರೆಂದು ನೀವೇ ತಿಳಿಸಿ. ...
ಬಾವುಲಿ. ನೆಲಹಂಗು ಧಿಕ್ಕರಿಸಿದ ಊರ್ಧ್ವಮುಖಿ ಶಾಶ್ವತ ಗುರುತ್ವವಿರೋಧಿ ವಾಯುಸಂಚಾರಿ, ಮರಆವಾಸಿ ಕತ್ತಲ ವಿಸ್ತಾರದಲಿ ಲೀನವಾಗಿ  ಅದೃಷ್ಯದಲಿ ಚಲಿಸಿ ತೇಲುತ್ತಾನೆ ಕೈ ಬೆರಳೇ ಕೊಡೆಯಾಗಿಸುವ ಪವಾಡ ಭುಜ, ತೋಳು, ಕೈ, ಮೂಳೆಗಳು ನೀಳ ಅಸಹಜದಲ್ಲಿ, ಮಡಚಿದ ಸಂಚಿಯಾಗುವ ಬೆರಗು ಅಪಾರದರ್ಶಕ ತೆಳು ಮಾಂಸಲ ಪದರ ಬಿಚ್ಚುತ್ತಾನೆ ತನ್ನ ವಂಶಜರ ಬಳುವಳಿಯ ಛತ್ರಿ ತೆರೆದು, ತೆಳುವಾಗಿ, ರೆಕ್ಕೆಯಾಗಿಸಿ ತೇಲುತ್ತಾನೆ ಸರಾಗ, ಹಗುರವಾಗಿ ಋಣಮುಕ್ತ ಭುವಿಗೆ, ಪರಕೀಯ ಆತ್ಮ, ನೆಲ ಮುಟ್ಟದ ಛಲವಾದಿ ಅತಿ ಸೋಜಿಗ ಕುರುಡನಲ್ಲ, ಆದರೂ ದೃತರಾಷ್ಟ್ರನ ಪಟ್ಟ ಶಬ್ದ ಸಂವೇದಿಯ ಕಿವಿ ಅತಿ ಚುರುಕು ಏಕಲವ್ಯನ ಶಬ್ದಬೇಧಿ ಕಲೆಯ ದೃಷ್ಟಿ ಯಾರಿಗೂ ಅಪ್ಪಳಿಸಿದ ಕತ್ತಲಸಂಚಾರಿ ಭಯಂಕರ ಬೇಟೆಗಾರ ಹೂಡುತ್ತಾನೆ ನಿರ್ಜನ ಗುಹೆಗಳ ಛಾವಣಿಯಲ್ಲೂ ಸಂಸಾರ ನೆಲ ಮೆಟ್ಟದ ವೀರ,ಹಾರಲಾರ ಹಕ್ಕಿಗಳಂತೆ, ಬೆರಳುಗಳೇ ತೆಳು ವಾಯು ಹಾಯಿ ತೇಲುತ್ತಾನೆ,ಮಣ್ಸೆಳತ ಗೆದ್ದ ಖುಷಿ ಜಾರುತ್ತಾನೆ ಸಾವಕಾಶದಲ್ಲಿ ಶಬ್ದ ನೇತ್ರ ತಲುಪದ ಎತ್ತರದಲಿ, ಛಲ ತಪಸ್ವಿಯ ಪ್ರಾಣಾಯಾಮ ನಿರ್ವಾಣದಲಿ ಹಟಯೋಗಿ, ಶೀರ್ಷಾಸನದಲೇ ವಿಶ್ರಾಂತಿಪಡೆಯುವ ಭೋಗಿ ಹವಾನಿಯಂತ್ರಿತ, ಸುಸಜ್ಜಿತ ಅಗೋಚರ ಮಾಯಹಾಸಿಗೆ ಕುಂಠಿತ ಹಿಂಗಾಲು, ಕೊಕ್ಕೆ ಉಗುರು ದಿಂಬಿಗೆ, ಗಟ್ಟಿಹಿಡಿತ, ಜೋತುಬಿದ್ದೇ ಗೊರಕೆಹೊಡೆಯುವ ಭೂಪ ಎಲ್ಲೋ ಜೋಗಪ್ಪ ನಿನ್ನ ಅರಮನೆ? ಎಲ್ಲೋ ಜೋಗಪ್ಪ ನಿನ್ನ ತಳಮನೆ? ಎತ್ತರಕೆ ನೇತುಬೀಳುವ ಗಗನಚುಂಬಿ ಆವಾಸಿ ಕಳ...