Posts

Showing posts from October, 2018
October 5, 2013,  ·  ಆದಿಪುರಾಣ. ಜಲಜ ಶಿಲಾ ಸುಪ್ಪತ್ತಿಗೆಯ ಚರಟದ ಚಾದರ ಹೊದ್ದು, ಮಲಗಿರುವ ಕುಂಭಕರ್ಣ. ಧರೆಗೆ ಹಿಡಿದಿತ್ತು ಗ್ರಹಣ, ಚಿರಂಜೀವಿ, ಭ್ರೂಣ ಬೆಳೆಯಲಿಲ್ಲ ಪೂರ್ಣ, ವಿಕಾಸದ ಅನಂತ ಪುರಾಣ ಆದಿ,ಅಂತ್ಯವಿಲ್ಲದ ನಿರಂತರ ಪಯಣ ಆ ಕಾಲ ಒಂದಿತ್ತು ಧರೆ ಬೆಂಕಿ ಉಗುಳಿತ್ತು ನಿರ್ಜೀವ ಹೊಗೆ ಹೊರಹಾಕಿತ್ತು, ಪ್ರಕ್ಷುಬ್ದ ವಾಗಿತ್ತು, ಭೂತಾಯ ನಿರ್ಜಲ ಬಸಿರು ಮೈ ಮರೆತು ಹರಿಯುತಲಿತ್ತು ಜಲ, ಜ್ವಾಲಾ ತೊರೆ, ಅಂದೇ ಮೈನೆರೆತ ಆ ವಸುಂಧರೆ, ತೊಟ್ಟಿದ್ದ ಆ ಅಂದಿನ ಹಸಿರು ಫ್ಯಾಶನ್ ಸೀರೆ ಅಂಚಿಗೆ ವರ್ಣಮಯ ವಿನ್ಯಾಸ ಬೇರೆ, ಜ್ವಾಲಾಮುಖಿಗಳ ಅಂಚು, ಸಾಗರದ ಸೆರಗು ಸಪೂರ ಪಾರದರ್ಶಕ ತೆಳುವಾದ ಪೊರೆ, ನೀಲಹಸಿರು, ಬೂದಿ ಕೆಂಪು, ಅಪರೂಪದ ಸುಧೀರ್ಘ ವರ್ಷಧಾರೆ ಮೆರಗು ಏನೆಲ್ಲಾ ಕುಸುರಿ ಕಲೆ ಅದರ ಮೇಲೆ? ಹೊರೆ, ಚಿತ್ತಾರದ ಬರೆಯಲ್ಲಿ ಗೆರೆ, ಕೇಳುವುದಿಲ್ಲ ಯಾರ ಮೊರೆ, ಜೀವಜಾಲದ ಬಹುವಿದ ಶಾಶ್ವತ ಸೆರೆ, ಗಡಿಪಾರು ಕಾರಾಗೃಹದಲ್ಲಿ ಎಗ್ಗಿಲ್ಲದ ಕೊಲೆ, ಸೃಷ್ಟಿ, ಲಯ ಸಹಜ ವಿನಿಮಯ ಲೀಲೆ...!!!