6-7 poems
Sheshagiri Jodidar November 23, 2018 · ಅಭಿವ್ಯಕ್ತಿ ವೃತ್ತಿಯಾದಾಗ, ತೀವ್ರತೆ ಹಾಗು ಪ್ರಾಮಾಣಿಕ ಸೃಜನಶೀಲತೆ ದಾರಿತಪ್ಪಿ ಕೇವಲ ಸುದ್ಧಿಯಾಗುತ್ತದೆ. ಗ್ರಹಿಕೆ, ಸ್ಪಂದನೆಗಳ ನಡುವಿನ ಅಂತರ ಸಾಮಾಜಿಕ ಸ್ವಾಸ್ಟ್ಯಕ್ಕೆ ಹಿತಕರ. ___________________________________________________________________________________ Sheshagiri Jodidar November 26, 2018 · ಗೋಡೆ. ಸಮಯಕ್ಕೆ ತಕ್ಕಂತೆ, ಅನುಕೂಲಕ್ಕನುಗುಣವಾಗಿ ಕಟ್ಟಿನಿಲ್ಲಿಸಬಹುದು ಗೋಡೆಗಳನ್ನು ಎಲ್ಲದರ ವಿಭಜನೆಯಲ್ಲಿ ಎಲ್ಲ ಕಡೆಯಲ್ಲೂ. ನಿರ್ಮಾಣ ಸಾಮಗ್ರಿಗಳ ಹೇರಳ ಲಭ್ಯತೆಯಲ್ಲಿ ಎತ್ತರಕ್ಕೆ ಮಿತಿ ಇಲ್ಲ, ವಿವಿದತೆಗೆ ಕೊರತೆಇಲ್ಲ ತಂತ್ರಜ್ಞಾನ ನವೀನ ಕಲಾಪ್ರಜ್ಞೆಯನ್ನು ಕೆಣುಕಿದಾಗ ಅಗಲ, ಆಳ,ವರ್ಣಮಯ ವಿನ್ಯಾಸಗಳು ದೃಶ್ಯಗ್ರಹಿಕೆಗೆ ಎಟುಕದೆ ದೃಷ್ಟಿದೋಶ . ಎಷ್ಟೋ ಸುತ್ತಿನ ಕೋಟೆಯಲಿ ಒಳ ಕೇಂದ್ರ ಪದರ ಪಾರದರ್ಶಕ ಭಿತ್ತಿ ಗೋಚರಿಸುವುದಿಲ್ಲ ಸಾಮಾನ್ಯದೃಷ್ಟಿಗೆ ಯಾವ ಯಂತ್ರಕ್ಕೂ ಎಟುಕುವುದಿಲ್ಲ, ಯಾವ ಮಂತ್ರಕ್ಕೂ ಮುಕ್ಕಾಗುವುದಿಲ್ಲ ಪುರಾತನ, ಪೌರಾಣಿಕ, ಐತಿಹಾಸಿಕ ಗೋಡೆ ಮಜಬೂತಾಗಿದೆ ಪ್ರಾಚೀನ ಗಾರೆಯ ತೇಪೆಯಿಂದ ಧೂಳೆಬ್ಬಿಸದೆ, ಬೀಳಿಸಿ,ನಿರ್ಣಾಮ ಮಾಡುವುದು ನಿಶ್ಯಭ್ದದಲಿ ಅಸಾಧ್ಯ, ಸುಲಭವೂ ಅಲ್ಲ ತಮ್ಮ ಕೋಶದಲಿ ಅಧಿಕಾರನಡೆಸುವ ಸಾಮ್ರಾಜ್ಯಶಾಹಿಗಳು...