"ಸವನಾಲು ಬಸದಿ" ಇದೇ ಸೆಪ್ಟಂಬರ್ ತಿಂಗಳ ಮೊದಲ ವಾರದಲ್ಲಿ ಇಲ್ಲೇ ಸಮೀಪದಲ್ಲಿರುವ ಅಷ್ಟಾಗಿ ಪ್ರಸಿಧ್ದಿಇಲ್ಲದ, ಬೆಟ್ಟದಬುಡದ ಹಸಿರುಕಾಡಲ್ಲಿ, ಎತ್ತರದ ಮರಗಳ ನೆರೆಳಿಲ್ಲಿರುವ ಒಂದು ಜೈನ ಬಸದಿ ಅದರ ಪರಿಸರ ಆಕರ್ಷಣೀಯವಾಗಿದೆ. ಯಾರಿಗೂ ನಿರಾಸೆ ಮಾಡುವುದಿಲ್ಲ ಈ ಸುಂದರ ತಾಣ. ಎಲ್ಲರೂ ನೋಡಬಹುದೆಂದು ನಮ್ಮ ಸ್ನೇಹಿತರೊಬ್ಬರು ಹೇಳಿದಾಗ....ತಿಂಗಳು ಗಟ್ಟಲೆ ಎಲ್ಲೂ ಹೋಗದೆ ಮನೆಯಲ್ಲೇ ಇದ್ದು ಸಾಕಾಗಿ ಕಾಯುತ್ತಿದ್ದ ನನಗೆ ಪ್ರಯತ್ನಪಡಬಹುದೆಂದು ಅನಿಸಿತು. ವಿರಳ ಜನಸಂದಣಿ ಇರುವ.....ಅತಿ ಚಿಕ್ಕದಾರಿ ಕಾಡು, ಆಡಿಕೆ, ಬಾಳೆ ತೋಟಗಳ ನಡುವೆ ಸಣ್ಣರಸ್ತೆಯಲ್ಲಿ ಒಂದು ಕಾರ್ ಮಾತ್ರ ಹೋಗಲು ಇರುವ ದಾರಿ. ಎರಡು, ಮೂರು ಕಿ.ಮಿ ಒಳಗೆಹೋಗುವಾಗ ನಿರ್ಜನರಸ್ತೆಗಳು. ಅಲ್ಲೊಂದು ಸೇತುವೆ ಇದೆ. ಆ ಸೇತುವೆಯಲ್ಲಿ ಸಣ್ಣ ಕಾರಿನ ಪಕ್ಕದ ಕನ್ನಡಿಗಳನ್ನೂ ಸಹಾ ಒಳಗೆಳೆದುಕೊಂಡು ಮಾತ್ರ ಹೋಗಬಹುದಾದ, ಸ್ವಲ್ಪ ಹೆದರಿಕೆ ಹುಟ್ಟಿಸುವ ಸೇತುವೆ. ನನ್ನಂತ ಅನುಭವವಿಲ್ಲದ ಹೊಸ ಚಾಲಕರಿಗೆ ನಿಜವಾದ ಸವಾಲು. ಸ್ಟೇರಿಂಗ್ ಕೊಂಚ ಯಾಮಾರಿದರು ಹೊಸಕಾರ್ ಉಜ್ಜಿಕೊಂಡುಹೋಗುವುದು ಖಾತ್ರಿ ಸೇತುವೆಯ ಕಬ್ಬಿಣದ ಕಂಬಿಗಳಿಗೆ. ಕೆಣಕಿದ ಹಾಗೆ ಅನಿಸಿ ನೋಡೋಣ ಪ್ರಯತ್ನ ಪಡೋಣ, ತೀರಾ ಆಗದಿದ್ದರೆ ಗಾಡಿಯನ್ನು ಅಲ್ಲೇ ನಿಲ್ಲಿಸಿ ನಡೆದುಕೊಂಡೇ ಹೋಗುವುದೆಂದು ನಿರ್ಧರಿಸಿ ಹೊರಟೆವು ಮೂರು ಮಂದಿ. ನನ್ನ ತಮ್ಮನ ಮಗ ಪ್ರತೀಕ್ ಜೋಡಿದಾರ್, ಲಕ್ಷ್ಮಿಯ ತಮ್ಮನ ಮಗಳು ಅರ್ಪಿತಾ ಶಾಮಪ್ರಸಾದ್...
Posts
Showing posts from September, 2020
- Get link
- X
- Other Apps
ಯಶಸ್ವಿ. ಯಶಸ್ಸಿಗೇಕೆ ಮೆಟ್ಟಿಲು ? ಎಸ್ಕಲೇಟರ್ ಗಳ ಕಾಲದಲ್ಲಿ ಜಾರೋಬಂಡೆಯಲ್ಲಿ ಮೇಲಕ್ಕೂ ಜಾರಬಹುದು ! ಕೆಳಕ್ಕೂ ಏರಬಹುದು ! ಗುರುತ್ವಮೀರಿದ ಗುರು, ಕಟ್ಟಬಹುದು ಸಂತಸದ ಬದುಕು ಕಣ್ಣಿದ್ದು ಕುರುಡಾಗಿ, ಸಾಗರದಡಿ ನಡಿಗೆಗೆ, ಭೂಮಿಯ ಋಣವೇಕೆ ಚಲನೆಗೆ, ಸಂಭಂದ ಕಳಚಿದ ತೇಲುವಿಕೆಗೆ, ಮೇಲ್ಮೈ ವಿಸ್ತಾರ ಅನಿವಾರ್ಯವಲ್ಲ. ಜಲನಿಯಮ ಉಲ್ಲಂಘನೆಯಲ್ಲ ಅನ್ವಯ..ತೇಲುಜೀವಿಗಳಿಗೆ ಮಾತ್ರ ಸಾಗರದಲ್ಲಿ. ಲವಣ ಸಾಂದ್ರತೆ, ತೂಕ ಕಳೆದುಹೋದ ಪದಗಳು ಗುರುತ್ವ ನಿಸರ್ಗದ ಅಪ್ಪನ ಸ್ವತ್ತಲ್ಲ ಸ್ವಾಮಿ. ಈ ಕಾಲದಲ್ಲಿ. ನಮ್ಮ ಯುಕ್ತಿಯ ಶಕ್ತಿ. ಹಗುರಾದ ವಿಮಾನಕೇ ಇಲ್ಲ ತೂಕದ ಹಂಗು, ಹಡಗಿಗೇಕೆ, ಪಾಪ, ಇನ್ನು ಭಾರದ ಹೊರೆ? ಹಕ್ಕಿಗಳ ಹಾರಾಟ ಭಾಗಶಹ ರದ್ದು ಹಿಮಗಿರಿ ಕರಗಿ ನದಿಯಾಗಿ ಹರಿವಾಗ ಅಣೆಕಟ್ಟಿಗಳಿಗೇಕೆ ಪಕ್ಷಪಾತ, ನದಿಯ ಹರಿವಿಗೆ ಉಕ್ಕಲಿ ಪ್ರವಾಹ, ಕೊಚ್ಚಿಹೋಗಲಿ ಹಳೆಯ ಕೊಳೆ ಮುಳುಗಿ ಹೋಗಲಿ ಆ ನಿಶ್ಚಲ ಕೊಳೆತ ಹೊಳೆ, ನಲುಗದ ನವ ವಿನ್ಯಾಸದ ಆವಾಸ ನಿಶ್ಚಲ ಪ್ರಕೃತಿ ವಿಕೋಪ ನಿರೋಧಕ ಸಂಶೋಧನೆಯಲಿ ಸ್ಥಿರ ನಿಲ್ಲುವ ಯಶಸ್ವಿ, ಕಂಡಿರದ ತಪಸ್ವಿ ಹಿಮಕ್ರೀಡೆಗಳ ಆಯೋಜನೆ ಮರುಭೂಮಿಯಲಿ ಕಡಲ ಒಡಲ ಕೊರೆತದಲ್ಲಿ ತೈಲ ಗಣಿ ಉದ್ಘಾಟನೆ ಕಾಡನು ಕರಗಿಸಿ, ಮೃಗಗಳ ಬೆದರಿಸಿ, ಗಿಡಮರಗಳ ಸವರಿ ಸಿಂಗರಿಸಿ, ನವ, ನವೀನ ಬಡಾವಣೆಯ ಶೃಂಗಾರ, ಇದು ನಮ್ಮ ಚಮತ್ಕಾರ, ಕೇಳದಿರಲಿ ಚೀತ್ಕಾರ ಹಾಕೊಂದು ಧಿಕ್ಕಾರ, ಮಾನವತೆಯ ಮಮಕಾರ ಸರ್ವರಕ್ಷಕ, ಆ ನಿರಾಕಾರನಿಗೊಂದು ಇರಲಿ ನಿನ...