Posts

Showing posts from August, 2022
  ಮಣ್ಣು. ನಿನ್ನ ಗ್ರಹಿಕೆಗೆ ಸಿಗದ ನಿರೂಪಣೆ....  ಮಣ್ಣು  ಅದಕೂ ಬೇಕು ದುರಾಸೆಗೆ ದೂರವಾದ ಕಣ್ಣು ಬರೀ ಮರಳಲ್ಲ, ಧೂಳಲ್ಲ, ಭೂ ಮೇಲ್ಪದರವೂ ಅಲ್ಲ  ಶಿಲೆಯ ಹುಡಿಯಲ್ಲ. ಜೀವರಸದ ರಸಾಯನ ಅದು  ಬದುಕಿಗೆ ಮಹಾ ಪ್ರಸಾದ ನಿನ್ನ ಜೈವಿಕ ಅಸ್ತಿತ್ವದ ಮೂಲ ಬಣ್ಣ.   ವಿಲಾಸಿ ಬದುಕ ಪೊರೆ ಸರಿಸು. ಮಣ್ಣಾಗುವ ಮುನ್ನ, ನಿರಾಕಾರನಾಗಿ ಅನಿಲದಲಿ ಅತಂತ್ರ ಅಲೆಯುವ ಮುನ್ನ ಅರಿವಿಲ್ಲದೆ, ಅಗೋಚರವಾಗಲಿರುವ ನೀನು ಮತ್ತೊಮ್ಮೆ ಬರುವೆ...ನೆನಪಿರಲಿ ಬರಲೇ ಬೇಕು ಇಲ್ಲಿಗೇ ಹೊಸ ರೂಪದಲಿ ಜೀವಿಯಾಗಿ ಮಣ್ಣಿನಿಂದಲೇ. ಈ ಪುರಾತನ ಪಳೆಯುಳಿಕೆಗೆ....