ನೆನಪು. ತಾಯಿಯ ಮಮತೆಯ ಅಂಟಿಕೊಂಡಿದ್ದು ಗರ್ಭದ ಗೋಡೆಗಾದರೂ ಹೊಕ್ಕಳು ಹುರಿ ಹರಿದು ಹುಟ್ಟಿದ್ದು ಊದುಕು ಲುಮೆಯ ತೊಟ್ಟಿಲಲ್ಲಿ. ಬಿಸಿಲ ಝಳದಲೇ ಜಾರಿದ ಬಾಲ್ಯ ಕಾಡುಬಂಡೆಗಳಮೇಲೆ ಚಿಗುರಿದ ಯವ್ವನ, ಜೂಟಾಟ, ಕಣ್ಣುಮುಚ್ಚಾಲೆ ಕೊರಕಲು ಪ್ರಪಾತಗಳಲ್ಲಿ, ತಳರಹಿತ ಗವಿಯ ಸಂದು, ಗೊಂದುಗಳ ನೆರಳಲ್ಲೂ ತೀವ್ರ ತಾಪವೇ ಹವಾ ನಿಯಂತ್ರಿತ ಆವಾಸ. ಬಂಡೆಗಳನ್ನೇ ಯಾಮಾರಿಸಿ ಕೊರಕಲಲ್ಲೇ ಆವಾಸ ಕಂಡ ನೇರಲೆ,ಕಾರೆ,ಕವಳೆ,ಲೇಬೆ, ಬೋರೆ ಗಂಜಿಗೆ. ಕೊರಕಲುಗಳಲ್ಲಿ ತಲೆ ಎತ್ತಿರುವ ಗುಲಗಂಜಿ. ಉಪಹಾರ ಯಾವುದಾದರೇನು ಹಸಿವುಮಾತ್ರ ಪಂಚತಾರ ಹೋಟೆಲ್ ಗಳಂತೆ.ಆಲ್ಲಿ ಸ್ವಸಹಾಯ ಪಧ್ದತಿ ಕಡ್ಡಾಯ. ಬಹಿರ್ದೆಸೆಯ ಚಾರಣದಲ್ಲಿ ಸಿತಾಫಲ ಅನ್ ಲಿಮಿಟೆಡ್ ನುರಿತ ಪರ್ವತಾರೋಹಿಗೆ. ನಿರ್ಜನ ಕಣಿವೆಯಲಿ ಸ್ವಗತ, ಶಾಶ್ವತ. ಸಂಭಾಷಣೆ ಕೂಗೋಗುಡ್ಡದ ಪ್ರತಿಧ್ವನಿಯಲಿ ಕಂಪಿಸಿ, ರಾಕ್ಷಸ ಇಳಿಜಾರು ಬಂಡೆ ಬೈಗಳ ಪ್ರತಿಧ್ವನಿಯ ರೋಮಾಂಚನ ಶ್ರವಣ. ನೇಯ್ಗೆ ಮಗ್ಗಗಳ ನಿಲ್ಲದ ನಡಿಗೆಯ ರೇಶಿಮೆಯ ಹೆಜ್ಜೆ. ಶಿಸ್ತಿನ ಸಾರೋಟು ಚಲನೆಯಲಿ ಲಾಳಗಳ ಓಟ, ನಿರಂತರ ಧ್ವನಿಸುವ ಬದುಕಿನ ಚಟಾ ಪಟಾ. ಊರಿಗೊಂದು ಭಾಷೆ ಅದರ ಸಾಮಾನ್ಯದ ಅಸ್ತಿತ್ವ. ಕರಡಿ ಗಂಗಣ್ಣನ ಘಮ,ಘಮ ಮಂಡಾಳ್ ಒಗ್ಗರಣಿ ಆದ್ಯಾತ್ಮ ತತ್ವ. ಅತ್ತಿಕಾಯಿ, ಜೊತೆಗೆ ಮೆಣ್ಸಿನ್ಕಾಯ್ ಉಳ್ಳಾಗಡ್ಡಿ, ಮಂಡಕ್ಕಿ ಭರ್ಜರಿ ಭೋಜನ. ಈಜಾಟ ಮನೋರಂಜನೆ ಆಟ, ನೀರಿದ್ದ ಆ ದೊಡ್ಡಬಾವಿ, ಬಾನಿ ಎಳೆಯುವ ಹಗ್ಗದ ಮೇಲೆ ಜೋಕಾಲಿ, ಹಿಂಬದಿಯ ನಡಿಗೆಯ...
Posts
Showing posts from September, 2023