Friday, June 19, 2009

ಎರೆಹುಳು.......

ಎರೆಹುಳು 

ಹೊರಳುತಿದೆ ಕೆರಳಿ,

ಮನಸು.
ತೆವಳಿ ಜಾರುತಿದೆ, ಸಾಗುತಿದೆ ದೂರ..
ಸಾವಕಾಶವಾಗಿ,
ಆಮೆಯೊಂದಿಗೆ ಎರೆ ಹುಳು ನಡೆಸಿದೆ ಓಟದ ಪೈಪೋಟಿ.


ನೆಲಕೆಳಗಣ ವಿಶಾಲ ಮೈದಾನ,
ಕಲ್ಲ ಒರಟು ಕಣಗಳ ನೂಕಿ ಮುನ್ನುಗ್ಗಿ
ಕೆದರಿ, ಬಿರುಗೂದಲು ಸರಿಸಿ,
ಪಕ್ಕಕೆ ಹಾರಿ ಮೇಲೇರುವ ತವಕ,

ಆಸೆ...
ಬೆಳಕ ಹಿಡಿಯಲು ಬೊಗಸೆಯೊಳಗೆ,
ಆಕ್ರಮಿಸಲು ಆಕಾಶ ವಾಮನನಂತೆ,
ಸರಾಗ ಸಾಗುತಿದೆ.....ಭ್ರಮೆ.ಕತ್ತಲ ಸಾಮ್ರಾಜ್ಯದಲಿ ಅಧಿಪತಿಯ ಗಸ್ತು,
ಎಲ್ಲವು ಶಾಂತ ಬಿರುಗಾಳಿಯ ಮುನ್ನ,
ಗುಡುಗಿಲ್ಲ, ಸಿಡಿಲಿಲ್ಲ,
ಮೋಡವಿನ್ನು ಬಿರಿದಿಲ್ಲ.
ಭಯವಿಲ್ಲ,
ಇನ್ನು ನಾನು ಮುಳುಗುವುದಿಲ್ಲ, ಕೊಚ್ಚಿಹೋಗುವುದಿಲ್ಲ,
ಉಸಿರುನಿಲ್ಲುವುದಿಲ್ಲ, ಚರ್ಮಹಸಿ ಇರುವತನಕ.

ಮಣ್ಣ ನುಂಗಿದ ಅಸ್ತಿತ್ವ
ಪಿಸುಗುಡುತಿದೆ ಸದಾ ಗೊಡ್ಡು ತತ್ವ.

ಸುರಂಗ ಚಕ್ರಾಧಿಪತಿ ಮೆರವಣಿಗೆ,
ಅಂಧ ನಗರಿಯ ರಂಧ್ರಮಯ ರಾಜ ಬೀದಿಗಳಲ್ಲಿ,
ಮೌನ ಸಂಗೀತ,
ಓಲಗದ ಸಂಭ್ರಮ,ಮಣ್ಣ ವಾಸನೆಯ ಘಮ ಘಮ,
ನಿರ್ವಾತ, ನಿಶ್ಯಬ್ದ ಕತ್ತಲ ಪಲ್ಲಕ್ಕಿ
ಗಿರಕಿ ಹೊಡೆಯುತಿದೆ ವರ್ತುಲ ರೈಲಿನಂತೆ.


ಕಾಡಿಲ್ಲದ ನಾಡಿನಲ್ಲಿ ಹೋಗುವುದಾದರೂ ಎಲ್ಲಿ?
ಅರಿವಿಲ್ಲ ಅದಕೆ ಅದರ ದಿಕ್ಕು ದಾರಿ,
ಗೊತ್ತಿಲ್ಲ ಗುರಿ.. ಇಲ್ಲಿ ಚಲನೆಯೊಂದೆ ಸರಿ.
ಮಿಕ್ಕೆಲ್ಲವೂ ಅರ್ಥರಹಿತ ಮರಿ.

ಹಸಿಯಾದ ನೆಲ ಬಿರಿದು ಬಿರುಕು,
ನಸುಕೇ ಇಲ್ಲದ ಬದುಕು,
ಮರಳುಗಾಡಿನ ಉಸುಕು,ತುಂಬಾ ತೊಡಕು,
ಬಿಸಿಲ ಕುದುರೆಯ ಹಿಂದೆ ಓಡಲೇ ಬೇಕು.
ಹಿಡಿಯಲೇ ಬೇಕು ಮರಿಚಿಕೆಯನ್ನ,
ಅನುಭವಿಸಲೇ ಬೇಕು ಅಸಂಗತವನ್ನ.

ಕಣ್ಣಾಗಿದೆ ಬಾಯಿ, ಮಣ್ಣಾಗಿದೆ ಕರಳು,
ಹುಣ್ಣಾಗಿದೆ ಮಿದುಳು, ಹಣ್ಣಾಗಿದೆ ಬಾಳು,
ನೀನೆ ಹೇಳು.
ನಾನೇ ಅವಳೂ, ಅವಳೂ ನಾನೇ,
ವಿಕಾಸದ ವಿಕಟನಗೆಯಲಿ ನಾನು ಸಮಲಿಂಗಿ,
ಹೌದು.. ದ್ವಿಲಿಂಗಿ.
ಹಾದರದ ಬದುಕಲ್ಲಿ ಪಾಪವೆಲ್ಲಿಯ ಲೆಕ್ಕ?

ಹೌದೋ ಮುಕ್ಕಾ.....

ಅಹಂ ಬ್ರಹ್ಮಾಸ್ಮಿ ...

ಸತ್ಯಂ, ಶಿವಂ, ಸುಂದರಂ.......

6 comments:

Anonymous said...

Not bad for long gap of rewriting the poetry... but still lots of things are missing...so sounds confusing.. whether you are a sympathiser of homo or what? di'nt get you.. rather cannot follow for sure.. or just describing the worm? but as a poem it is readable..dont get into tones and unertones and moral etc.. just read it and it gives a good impression.. that is all.. very very abstract....the last line is quite intriguing... not precise and exact.. it leaves you for thinking for an unknown dimension.. good effort... but needs little....clarity...

Anonymous said...

Good one

Anonymous said...

ಬರೆಯಲೇ ಬೇಕೆಂಬ ಹಠದಿಂದ ಬರೆದ ಹಾಗಿದೆ... ಸ್ವಾಭಾವಿಕ ಅನ್ನಿಸುವುದಿಲ್ಲ...ಬಲವಂತ ಮಾಘಸ್ನಾನ.. ಬರವಣಿಗೆಯಲ್ಲಿ ತೋಯುವುದಿಲ್ಲ... ಓದುಗನಿಗೆ ಚಳಿ ಅಷ್ಟೇ.. ಬೆಚ್ಚಗಿನ ಮುದ ವಾಗಲಿ, ಅನುಭವದ ಹದವಾಗಲಿ ಬರಹಗಳಲ್ಲಿ ಕಾಣ ಬರುವುದಿಲ್ಲ..ಘಟನೆಗಳ ಗಟ್ಟಿ ಅನುಭವದ ಸಪ್ಪೆಯಾದ ಅಭಿವ್ಯಕ್ತಿ. ಸಾಲು ಸಾಲುಗಳಲ್ಲಿಯು ನುಸುಳುತ್ತದೆ..ಅನುಭಾವದ ಕೊರತೆ..
ಅವರ ಅನಿಸುವಿಕೆಯ ಹೇಳುವ ತೆವಲು ಮತ್ತು ತೀವ್ರತೆ ಮತ್ತು ಹೇಳಲೇಬೇಕೆಂಬ ಉತ್ಸಾಹ ಮಾತ್ರ ಮೆಚ್ಚುವಂತಹ ಅಂಶ..ಪದಗಳ ಬಳಕೆ ಕಾವ್ಯಾತ್ಮಕ ವಾಗಿ ಕಾಣದಿದ್ದರೂ ರಹಸ್ಯಾತ್ಮಕ ಕಲ್ಪನೆಗಳನ್ನು ಹುಟ್ಟುಹಾಕುವುದರಲ್ಲಿ ಸೋತಿಲ್ಲ ಅನಿಸುತ್ತದೆ..ಉದಾಹರಣೆಗೆ..
ಕೊನೆಯ ಸಾಲು ಹಾದರದ ಬದುಕಲ್ಲಿ ಪಾಪವೆಲ್ಲಿಯ ಲೆಖ್ಖ?
ಹಾಗು ಅದರ ಹಿಂದಿನ ಸಾಲು...
" ಹೌದು ದ್ವಿಲಿಂಗಿ...
ಇನ್ನು ಕವನ ಮುಗಿಸುವ ಸಾಲು.... ಅದೇಕೆ
'ಅಹಂ ಬ್ರಹ್ಮಾಸ್ಮಿ .....ಸತ್ಯಂ ಶಿವಂ ಸುಂದರಂ'... ಸಾಲುಗಳನ್ನು ಸೇರಿಸಿದ್ದಾರೆಯೋ ನನಗಂತೂ ತಿಳಿಯದ ವಿಷಯ.. ಒಂದು ರೀತಿಯ ಅಲೌಕಿಕ ಭಾವನೆಗಳನ್ನು ಪ್ರಚೋದಿಸುತ್ತದೆ...ಒಂಥರಾ.. ಮಿಸ್ಟಿಕ್ ಹಾಗು ವಿಚಿತ್ರ ಅನುಭವ ಕೊಟ್ಟರು ಸ್ಪಷ್ಟವಾಗಿ ಏನನ್ನು ಅರ್ಥೈಸುವುದು ಅಸಾಧ್ಯವೆನಿಸುತ್ತದೆ... ಎಲ್ಲವು ಅಪೂರ್ಣ ಮತ್ತು ಅರ್ಥರಹಿತ ಎನ್ನುವ ಭಾವನೆ ಮಾತ್ರ ಉಳಿಯುತ್ತದೆ..

vidyarashmi said...

anna,

nimma ee kavana odidaga devara dasimayyana ondu vachana nenapaguttade- it goes--- hennu maaye embaru hennu mayeyalla,
gandu maaye embaru, gandu maaye alla...
naduviruva aatmanu hennu alla gandu alla kana ramanatha.
nimma manassinalli helabekaddu ellavannu oduganige transfer maduvashtu shaktavagide annisuvudilla kavite,
but has a lot of stuff.
-vidyarashmi

mohan said...

sheshi,
at last you are successful in getting some reactions for your blog; specially the poems.
Good
keep it up
Mohana

Anonymous said...

nothing remains in our head except confusion after reading the poem.. but strange.. it sounds like a poem..

Blog Archive