ಕಪ್ಪೆ....

ಕಪ್ಪೆ ಭಾವಿಯಲ್ಲೇ ಇರಬೇಕೆಂಬ ನಿಯಮ ವಿಲ್ಲ.
ಶೀರ್ಷಿಕೆ ಸರಿಮಾಡಬೇಕು,
ಆದರೂ ಸ್ವಾಮಿ..
ಜಲಜೀವಿ,
ಅಭ್ಯಂತರ ವಿಲ್ಲ.

ಬದುಕು ಸಾಗರದಲ್ಲಿ, ಉಸಿರಾಟ ಗಾಳಿ,
ಪೋಷಕ ಹೊರೆ ಕಡಲಾಚೆ,
ನದಿ ಕೆರೆಗಳಲ್ಲಿ ಸರ್ವವ್ಯಾಪಿ, ಉಭಯವಾಸಿ.
ತಂದೆ ಕರ್ಮ ಜೀವಿ, ತಾಯಿ ಮಹಾ ಮೋಹ ತ್ಯಾಗಿ,

ಕರುಳ ಬಳ್ಳಿ ಕಳಚಲಿಲ್ಲ,
ಗರ್ಭರಸ ಚಿಮ್ಮಲಿಲ್ಲ,
ತಾಯಿ ಇಲ್ಲದ ತಬ್ಬಲಿ, ತಂದೆ ತೊರೆದ ಹೆಬ್ಬುಲಿ.

ಅಮಾಯಕ,
ಹುಟ್ಟಲ್ಲೇ ಅನಾಥ,
ಪ್ರಸವ ವೇದನೆ ಅರಿಯದ ಅಮ್ಮ,
ವಿಳಾಸ ವಂಚಿತ ಅಪ್ಪ.
ಪಾಪ ಈತ ಒಬ್ಬ ಅಬ್ಬೆಪಾರಿ,
ಅಪವಾದ ಬೇರೆ,
ಅನಾಮಧೇಯ ಪಿಂಡ.

ಭಂಡ,
ಹೋಲುವುದಿಲ್ಲ
ಯಾವರಿತಿಯಲ್ಲೂ ತನ್ನ ಜನಕನ ರೂಪ,
ಜೊತೆಯಲ್ಲಿ ದುಂಡಾದ ರುಂಡಕ್ಕೆ ಬಾಲ ಬೇರೆ.

ಕಪ್ಪು ಕಾಯ, ಎಳೆಯ ಪ್ರಾಯ,
ಮಹಾ ಈಜುಗಾರ,
ಬೆಳೆದ ತ್ರಿವಿಕ್ರಮ,
ಬಲು ಮೋಜುಗಾರ,
ಕಳಚಿ ತನ್ನ ಬಾಹ್ಯರೂಪ ಉರಗದಂತೆ,
ಚತುಶ್ಪಾದಿ.
ಎದ್ದು ಮತ್ತೆ ಮೇಲೆ ಬಂದ ಒಂಟಿ ಸಲಗನಂತೆ,

ಬದುಕುಳಿದ ಪಪ್ಪುಸದ ವಿಚಿತ್ರ ಜೀವಿ,
ಷಂಡ ಪ್ರಭೇದ,
ಕೊನೆಗೆ ತನ್ನುಳಿವಿಗೆ ಬಿಡಲಿಲ್ಲ ತನ್ನದೇ ಚರ್ಮ,
ಉದ್ಭವಿಸಿದ ಪಿತಾಮಹ,
ಭೂವಾಸಿ ಹಾವು ಹಲ್ಲಿಗಳಿಗೆ.
ಬಾಯಂಚಿನ ನಾಲಗೆ ಅಂಟು,
ಈತನಿಗಿಲ್ಲ ವಿಷದ ನಂಟು,

ಬಾಲ ಕರಗಿ, ಮಿದುಳು ಬೆಳಗಿ,
ಅಸ್ಥಿ ಬೆಳೆದು, ಹೃದಯ ಒಡೆದು
ಸ್ನಾಯು ಕೊಬ್ಬಿ,
ಯಾರೂ ಬಾಚಿ ತಬ್ಬದಾದ
ಅನಾಮಿಕ.
ನಮಗೆಲ್ಲಾ ತೀರ ಆಗಂತುಕ.....

Comments

anna,
kavana odide. you are trying to tell much more through these words.

ಕಪ್ಪು ಕಾಯ, ಎಳೆಯ ಪ್ರಾಯ,
ಮಹಾ ಈಜುಗಾರ,
ಬೆಳೆದ ತ್ರಿವಿಕ್ರಮ,
ಬಲು ಮೋಜುಗಾರ,
ಕಳಚಿ ತನ್ನ ಬಾಹ್ಯರೂಪ ಉರಗದಂತೆ,
ಚತುಶ್ಪಾದಿ.
ಎದ್ದು ಮತ್ತೆ ಮೇಲೆ ಬಂದ ಒಂಟಿ ಸಲಗನಂತೆ,
-ee lines odovaga mikhel jackson na nenapu bantu.
kappe aaganthuka aanodakkinta theera anadarakkolagada parichitaneno.
neevu science meshtru anta sariyagi gottagutte anna.
-vidyarashmi
Anonymous said…
ಕವನ ಓದಿ ಮುಗಿಸಿದ ನಂತರ ತಲೆಯಲ್ಲಿ ಏನು ಉಳಿಯುವುದಿಲ್ಲ. ಸಂಭಂದ ಇಲ್ಲದ ಯಾವ ಪ್ರತಿಮೆಯು ಪೂರ್ಣವಾಗದ, ಅರ್ಥವಾಗದ ಒಗಟಿನಂತೆ. ಎಲ್ಲೆಲ್ಲೊ ಬಿರುಕುಗಳು, ಸಂದುಗಳು ಕಂಡು ಬಂದರೂ ಕವನ ಓದುವಾಗ ಖುಷಿ ಯಾಗುತ್ತದೆ.

Popular posts from this blog

ಕಾಗೆ....