ವಿಕಾಸ ಗೀತೆ.....

         




         
          ವಿಕಾಸ ಗೀತೆ 

ಜಲಜ ಶಿಲಾ ಸುಪ್ಪತ್ತಿಗೆಯ ಚರಟದ ಚಾದರ ಹೊದ್ದು,
ಮಲಗಿರುವ ಕುಂಭಕರ್ಣ.
ಧರೆಗೆ ಹಿಡಿದಿತ್ತು ಗ್ರಹಣ,
ಚಿರಂಜೀವಿ, ಭ್ರೂಣ ಬೆಳೆಯಲಿಲ್ಲ ಪೂರ್ಣ,
ವಿಕಾಸದ ಅನಂತ ಪಯಣ
ಆದಿ ಅಂತ್ಯ ಗಳೆರಡು ಅರಿಯದ ನಿರಂತರ ಮರಣ.
ಆ ಕಾಲ ಒಂದಿತ್ತು ಧರೆ ಬೆಂಕಿ ಉಗುಳಿತ್ತು
ನಿರ್ಜೀವ ಹೊಗೆ ಹೊರಹಾಕಿತ್ತು,
ಭೂ ತಾಯಿ ನಿರ್ಜಲ ಬಸಿರು, ಪ್ರಕ್ಷುಬ್ದ ವಾಗಿತ್ತು
ಮೈ ಮರೆತು ಹರಿಯಿತು ತೊರೆ,
ಅಂದೇ
ಮೈನೆರೆತ ವಸುಂಧರೆ,
ತೊಟ್ಟಿದ್ದ ಆ ಹಸಿರು ಫ್ಯಾಶನ್ ಸೀರೆ
ಅಂಚಿಗೆ ವರ್ಣಮಯ ವಿನ್ಯಾಸ ಬೇರೆ,
ಸಪೂರ ಪಾರದರ್ಶಕ ತೆಳುವಾದ ಪೊರೆ,
ನೀಲಹಸಿರು, ಬೂದಿ ಕೆಂಪು ಸತತ ವರ್ಷಧಾರೆ.
ಏನೆಲ್ಲಾ ಕಲೆ ಅದರ ಮೇಲೆ? ಹೊರೆ,
ಚಿತ್ತಾರದಲ್ಲಿ ಸೆರೆ,
ಗೆರೆ,
ಕೇಳುವುದಿಲ್ಲ ಯಾರ ಮೊರೆ,
ಜೀವಜಾಲದಲಿ ಬದುಕಿನ ಶಾಶ್ವತ ಸೆರೆ,
ನಡೆಯುತ್ತಲೇ ಇದೆ ಇಂದಿಗೂ ಅಸಂಖ್ಯಾತ ಕೊಲೆ,
ಜನನ ಮರಣಗಳ ವಿನಿಮಯ ಲೀಲೆ,

ವಸ್ತುಗಳ ವರ್ತುಲ ಮುಗಿಯದ ಜಾತ್ರೆ
ಎಂದೂ ಮುಗಿಯದ ಜೈವಿಕ ಖಾತೆ...
ಹರಿಸಿ, ಹಾರೈಸಿದಳು ಪ್ರಕೃತಿ ಮಾತೆ,
ಜೀವಿ ವಿಸ್ಮಯ, ವಿವಿಧತೆಯ ಭಿಕ್ಷಾಪಾತ್ರೆ.
ಅದಕ್ಕೆ ಇರಬೇಕು, ಸರ್ಪರಾಜನ ಶಾಪ,
ಭಸ್ಮವಾಯಿತು, ಪಾಪ,
ದೈತ್ಯ ಉರಗ, ಕವಲಾಯಿತು ಖಗ,
ಮೃಗ..
ಮುಗಿಯಿತು ಸುವರ್ಣ ಯುಗ,
ಶುರುವಾಯಿತು ಹೊಸ ರಾಗ
ತಾಯಿಯ ತ್ಯಾಗ ಎದೆಹಾಲಿನ ವೈಭೋಗ
ಇಂದಿನ ಹಾಲಿನ ಯುಗ,
ಉಳಿಸಲು ಬೇಕಿದೆ ಮಹಾ ತ್ಯಾಗ,
ತೀರಿಸಲು ತಾಯ ಋಣ ತ್ಯಜಿಸಬೇಕಿದೆ ಭೋಗ
ಕೇಳಿ ಕಿವಿಗೊಟ್ಟು ಒಮ್ಮೆ ,
ಬರಲಿರುವ ಜೀವಿ ಸಂಕುಲ ಪೀಳಿಗೆಯ ಕೂಗು
ಸಾಕಿನ್ನು ನಮ್ಮ ಸೋಗು...






Comments

Popular posts from this blog

ಕಾಗೆ....

Reunited...at last..