11/3/2o11....ಸುನಾಮಿ.




ಬಾಂಗ್ಲ ಮತ್ತು ಇಂಗ್ಲಂಡ್ ನಡುವೆ ನಡೆಯುತ್ತಿದ್ದ ಮಹಾ ಬೋರಿಂಗ್ ಕ್ರಿಕೆಟ್ ಮ್ಯಾಚ್ ನೋಡುತ್ತಿದ್ದ ಸಮಯದಲ್ಲಿ,ನನ್ನ ಅಭ್ಯಾಸ ಬಲದಂತೆ ಹಾಗೆ ಸುದ್ದಿಗಾಗಿ  ಚಾನಲ್ ಬದಲಾಯಿಸಿದೆ. ಬಿ.ಬಿ.ಸಿ.ಸುದ್ದಿವಾಹಿನಿಯಲ್ಲಿ ಕಂಡಚಿತ್ರ, ಜೀವನ ಪೂರ್ತಿ ಮರೆಯಲಾಗದು.  ಇದುವರೆವಿಗೂ  ಕೇವಲ ಹಾಲಿವುಡ್  ಸಿನೆಮಗಳಲ್ಲಿ ಮಾತ್ರ ಮಾನವ ನಿರ್ಮಿತ ಕೃತಕ ವಿನಾಶದ 
ದೃಶ್ಯಗಳನ್ನು ನೋಡುತ್ತಿದ್ದೆವು. ಎರಡು ವರ್ಷಗಳ  ಹಿಂದೆಬಿಡುಗಡೆಯಾದ 2012 ಚಿತ್ರದ  ದೃಶ್ಯಗಳು  ಭಯಾನಕ ವಾಗಿದ್ದವು.  ಆದರೆ ಈಗ ನಾನು ಕಾಣುತ್ತಿದ್ದುದು ಸಿನೆಮ  ಸೆಟ್ ಆಗಲಿ, computerized graphics ಅಥವಾ special effects ಅಥವಾ computer generated  ದೃಶ್ಯಗಳಲ್ಲ. ನಿಜವಾಗಿ ನಡೆದ ಮನುಷ್ಯನನ್ನು  ಗೇಲಿಮಾಡುವ, ಪ್ರಳಯದ  ನಿಜವಾದ  ಸಾಂಕೇತಿಕ ಒಂದು  ಝಾಲಕ್.  ಮ್ಯಾಚ್  ಪೂರ್ಣ  ರದ್ದು  ಗೊಳಿಸಿ ಎಲ್ಲಾ ಸುದ್ದಿ   ಚಾನಲ್ ಗಳನ್ನು ಬದಲಿಸುತ್ತ  ನೋಡುತ್ತಾ ಕುಳಿತೆ. 

ಪ್ರಕೃತಿ ನಮ್ಮನ್ನು ಮತ್ತೊಮ್ಮೆ ಎಚ್ಚರಿಸಂತಿದೆ. ಕಾರಣ ನಾವು 2004 ರ ಸುನಾಮಿಯನ್ನು ಮರೆತಿದ್ದೆವು. ಅದರ ಶಕ್ತಿಯ ಮುಂದೆ ನಮ್ಮ ಅವಿಷ್ಕಾರಗಳು,ಸಾಧನೆಗಳು ಶೂನ್ಯ ಎನ್ನುವುದು ನಿಜವಾಗಿದೆ.ಒಮ್ಮೊಮ್ಮೆ ನಾವು ಎಷ್ಟು ದಡ್ದರಂತೆ ಮಾತನಾಡುತ್ತೇವೆ ಎಂದರೆ ಇಂದಿನ ಮಾನವ ಪ್ರಕೃತಿಗೆ ಸವಾಲಾಗಿದ್ದಾನೆ.ಏನನ್ನು ಬೇಕಾದರೂ,ಎಲ್ಲಿ ಬೇಕಾದರೂ,ತನ್ನ ಅನುಕೂಲಕ್ಕೆತಕ್ಕಂತೆ ಪರಿಸರವನ್ನೇ ಬದಲಿಸ ಬಲ್ಲ ಎಂಬ ಒಂದು ರೀತಿಯ ಅಜ್ಞಾನದ ಅಹಂಕಾರ  ತುಂಬಿದೆ. ಈಗಾಗಲೇ  ಆರಂಭಗೊಂಡಿರುವ ಪ್ರಕೃತಿ ಅಸಮಸಂತೊಲನ ಪ್ರಕ್ರಿಯೆಗಳು ನಿಧಾನವಾಗಿ  ಕಾಣಹತ್ತಿದೆ.ಆದರೆ ಅವುಗಳನ್ನು ನಾವು ಕಂಡು ಕಾಣದವರಂತೆ, ಅರಿತರೂ ಅರಿಯದವರಂತೆ  ಮುಖ ತಿರುಗಿಸಿದ್ದೇವೆ. ಆದುದರಿಂದಲೇ green house effect ಆಗಲಿ, ಪೆರು ಬಳಿ ಏಳುವ ಎಲ್-ನಿನೋ(El-Nino) ಪ್ರಕ್ರಿಯೆಗಳಬಗ್ಗೆ  ತಲೆ   ಕೆಡಸಿಕೊಂಡಿಲ್ಲ,  ಹಿಮ ಟೊಪ್ಪಿ ಕರಗಿಶೀತ ಮರುಭೂಮಿ  ಸೃಷ್ಟಿ ಯಾಗುತ್ತಿದೆ ಎಂದರೆ  ಯಾರೂ   ನಂಬುವುದಿಲ್ಲ. 

ನಿಜ ಇದು ಒಂದು ಪ್ರಾಕೃತಿಕ ವಿಕೋಪವೇ  ಹೊರತು,ಮಾನವನಿರ್ಮಿತ ಎಂದು ನೇರವಾಗಿ ಮನುಕುಲವನ್ನು  ದೂರಲಾಗದು.  ಕಾರಣ,  ಸಮುದ್ರದತಳದಲ್ಲಿ ಅಗೋಚರವಾಗಿ ಜರಗುತ್ತಿರುವ ಭೂಗರ್ಭ ಚಲನೆಯ   ವಿದ್ಯಮಾನಗಳು,  ಭೂ-ಹಲಗೆಗಳ(Tectonic plates)  ಚಲನೆ, ಅವುಗಳ ಸರಿತದಿಂದ ಉಂಟಾಗುವ ಈ  ವಿನಾಶಕಾರಿ ಭೂಕಂಪ, ಈ ಕಂಪನದಿಂದ ಉಂಟಾದ  ಸುನಾಮಿ ಅಲೆಗಳನ್ನು ಮಾನವ ಸಮರ್ಥವಾಗಿ ಎದುರಿಸ ಬಲ್ಲನೇ?ಎದುರಿಸಿ ಶಾಂತ ಜೀವನ ನಡೆಸಬಲ್ಲನೆ?ಎಂಬಪ್ರಶ್ನೆ  ಕಾಡುತ್ತದೆ. ಕೇವಲ ಕಣ್ಣಿಗೆ ಸ್ಪಷ್ಟವಾಗಿ ಕಾಣುವ ಸುನಾಮಿ, ಭೂಕಂಪ  ಅಥವಾ ಜ್ವಾಲಾಮುಖಿಗಳ ಚಿಮ್ಮುವಿಕೆ,ಅನೀರಿಕ್ಷಿತ ವಾಗಿ ಉಂಟಾಗುವ ಚಂಡಮಾರುತ,ಸುಂಟರಗಾಳಿ (Twister,Typhoon,Tornado)  ಇತ್ಯಾದಿ ನೈಸರ್ಗಿಕ ಪ್ರಕ್ರಿಯೆಗಳು ಪರಿಸರದ ಅಂಶಗಳ ಸಮತೋಲನಕಾಪಾಡುವುದರಲ್ಲಿ ಅನಿವಾರ್ಯ.ಆದರೂಅವುಗಳು ಒಂದು ನಿರ್ಧಿಷ್ಟ ಪ್ರಾಕೃತಿಕ  ವ್ಯವಸ್ತೆಯಂತೆ ವರ್ತಿಸುತ್ತಿದ್ದು,  ನಾವುಗಳು  ಅದಕ್ಕೆ ಈಗಾಗಲೇ  ಪೂರ್ಣವಾಗಿ    ಹೊಂದಿಕೊಂಡಿದ್ದೆವು. ಉದಾಹರಣೆಗೆ ಗಾಳಿಯಚಲನೆಯಿಂದ ಉಂಟಾಗುವ ಮಳೆ ಅಥವಾ ಒಮ್ಮೊಮ್ಮೆ ಚಂಡಮಾರುತ ,ಪ್ರವಾಹ, ಹಾಗೂ  ಅದರಿಂದ  ಆಗುವ  ಸಾಧಕ  ಭಾಧಕಗಳಿಗೆ  ನಮ್ಮ  ಬದುಕನ್ನು  ಒಗ್ಗಿಸಿಕೊಂಡಿದ್ದೆವು ಹಾಗೂ ಒಪ್ಪಿಸಿಕೊಂಡಿದ್ದೆವು..  ಆದರೆ ಈಗ  ಹಾಗಲ್ಲ.  ಪ್ರಾಕೃತಿಕ  ಘಟನೆಗಳು  ಮೌನವಾಗಿ,  ಅಗೋಚರವಾಗಿ  ನಮ್ಮ ವೈಜ್ಞಾನಿಕ  ಅವಿಷ್ಕಾರಗಳಿಗೆ ತನ್ನದೇ ರೀತಿಯಲ್ಲಿ  ಉತ್ತರ ಕೊಡುತ್ತಿದೆ. ಈಗ  ನಾವು  ಎಂಥಹ  ಸಂಧಿಘ್ದ  ಪರಿಸ್ಥಿತಿಯಲ್ಲಿ  ಇದ್ದೇವೆ ಎಂದರೆ ಯಾವ ವಿಜ್ಞಾನಿಯೇ ಆಗಲಿ ನಿಖರವಾಗಿ ತನ್ನ ವೈಜ್ಞಾನಿಕ ಆವಿಷ್ಕಾರದ ತಂತ್ರದ ಉಪಯೋಗ ಕಂಡು ಸಂತಸ ಪಡುತ್ತಾನೆ,ಆದರೆ  ಅದೇ ತಂತ್ರಜ್ಞಾನದಿಂದ ಉಂಟಾಗುವ  ಹಾನಿಕರ ಪರಿಣಾಮವನ್ನು ಯೋಚಿಸಿರುವುದಿಲ್ಲ,ಹಾಗೂ  ಅದರ ಅನ್ವಯಾ ಅಥವ ಉಪಯೋಗಗಳ ಬಗ್ಗೆಯೂ ತಲೆಕೆಡಿಸಿ ಕೊಂದಿರುವುದಿಲ್ಲ.ಆತನವಿಶಿಷ್ಟ  ಯೋಚನಾ ಸಾಮರ್ಥ್ಯ, ವೈಜ್ಞಾನಿಕ ಕಲ್ಪನೆ, ಬುದ್ಧಿ,ಕುತೂಹಲ ಮತ್ತು ಅನ್ವೇಷಣೆಯ
ಛಲದಿಂದ ಹೊಸ ಅವಿಷ್ಕಾರಗಳು ಜನಿಸುತ್ತವೆ. ಆದರೆ,ಅವರ ವೈಜ್ಞಾನಿಕ ಆವಿಷ್ಕಾರದ  ಹಿಂದೆ  ತಾವು ತಮ್ಮ ಪೂರ್ಣ ಜೀವನವನ್ನೇ   ತ್ಯಾಗಮಾಡಿರುತ್ತಾರೆ. ತಮ್ಮಸಾಧನೆಯ ಬಗ್ಗೆ   ಹೆಮ್ಮೆ  ಪಡುವುದು   ಸಹಜ.  ಆದರೆ  ಸಂಶೋಧನೆಯ ನಂತರ  ಅವರ ಸಾಧನೆಯೆಲ್ಲಾ   ಸರ್ಕಾರ, ರಾಜಕೀಯ ಧುರೀಣರು,ವ್ಯಾಪಾರಿಗಳ ಅಧೀನವಾಗುತ್ತದೆ. ಅವರು ಅದನ್ನು ತಮ್ಮ 
ಇಚ್ಚೆಗೆ ಅನುಗುಣ ವಾಗಿ, ಸಾದಕ, ಬಾಧಕಗಳನ್ನು ಯೋಚಿಸದೆ, ಕೇವಲ ವ್ಯಾಪಾರ, ಮಾರುಕಟ್ಟೆ, ಅದರಿಂದ ಬರುವ ಲಾಭ ಇತ್ಯಾದಿಗಳ ಬಗ್ಗೆ  ಹೆಚ್ಚು  ಆಸಕ್ತಿ.  ಇದಕ್ಕೆ  ನನಗೆ  ನೆನಪಿಗೆ  ಬರುವ  ಉದಾಹರಣೆ ಯೆಂದರೆ, D.D.T  ಸಂಶೋಧನೆಯನ್ನು   ನೊಬೆಲ್ ಪಾರಿತೊಶಕದಿಂದ  ಸತ್ಕರಿಸಿ, ಕೆಲವೇ ದಶಕಗಳ ನಂತರ ಅದರ  ತಯಾರಿಕೆಗೆ  ವಿಶ್ವವ್ಯಾಪಿ  ನಿಷೇದ  ಹೇರಿದ್ದು  ಮಾನವನ ದೂರಾಲೋಚನೆಯ ಮಿತಿಯನ್ನು ಸಾರುತ್ತದೆ. ವಿಜ್ಞಾನಿಗಳ ತತ್ವಅಥವಾ ನಿಯಮಗಳನ್ನು ಅಥವಾ ಅದರಿಂದ  ಆವಿಷ್ಕರಿಸಲ್ಪಟ್ಟ  ಬಹುಉಪಯೋಗಿ ವಸ್ತುಗಳ ಬಳಕೆಯಿಂದ ಮುಂದಾಗಬಹುದಾದ ಘಟನೆ, ಪರಿಣಾಮಗಳನ್ನು  ರಾಜಕೀಯ ಸೂತ್ರಹಿಡಿದ ಅಲ್ಪಮತಿವೈಕ್ತಿಗಳಿಗತಿಳಿಯುವುದಿಲ್ಲ. ತಿಳಿದರೂ  ಗೊತ್ತಿಲ್ಲದಂತೆ  ಇದ್ದುಬಿದುವಷ್ಟು  ಸ್ವಾರ್ಥಿಗಳಾಗಿರುತ್ತಾರೆ. ಇವರುಗಳು  ಹೊಸ  ಅನ್ವೇಷಣೆಗಳ  ಅಪಾಯಕಾರಿ  ಪರಿಣಾಮಗಳನ್ನು ಪರಿಗಣಿಸುವುದಿಲ್ಲ. ಪ್ರಕೃತಿಯ  ಅತಿ ಸೂಕ್ಷ್ಮ ಸಮತೋಲನವನ್ನು  ಗ್ರಹಿಸಲಾರರು. ಪ್ರಕೃತಿಕ್ರಿಯೆಯೇ  ಒಂದು  ರಹಸ್ಯ. ಇದೊಂದು   ಅತಿ ಜಟಿಲ ಹಾಗು ಕ್ಲಿಷ್ಟಕರ ತಂತ್ರ. ಅತಿ  ಸೂಕ್ಷ್ಮವಾಗಿ ಹೇಳಬೇಕೆಂದರೆ  ಮಾನವ  ಅತ್ಯಂತ  ವಿಶಿಷ್ಟ, ವಿಶೇಷ  ದೇವಪ್ರಿಯ ಪ್ರಭೆದವಲ್ಲ.ಎಲ್ಲಾ ಜೀವಿಗಳಂತೆ ಅವನೂ ಸಹಾ ಪರಿಸರದ ಒಂದು ಅವಿಭಾಜ್ಯ ಘಟಕ. ಜೀವಿ ಸಮುದಾಯದ ಒಂದು ಪ್ರಬೇಧ.ಅಷ್ಟೇ.ನಿಜ,ವಿಕಾಸದ ಧೀರ್ಘ ಹಾದಿಯಲ್ಲಿ ಹೆಚ್ಚು ವೃದ್ಧಿ ಗೊಂಡಿರುವ ಮಿದುಳಿನ ಪ್ರಾಣಿ. ಹಾಗೆ ಯೋಚಿಸುವುದಾದರೆ ಒಂದಾನೊಂದು ಕಾಲದಲ್ಲಿ  ಡಯನೋಸಾರಸ್  ಅಥವಾ ಭಯಂಕರ ಹಲ್ಲಿಗಳೇ ಇತರ ಜೀವಿಗಳಿಗಿಂತಪ್ರಭಲವಾಗಿದ್ದವು.

ಇಂದು ಮಾನವ ಬುದ್ಧಿವಿಕಾಸದಿಂದ ಅತ್ಯಂತ ಪ್ರಭಲ  ಪ್ರಭೇಧ   ಜೀವಿ ಯಾಗಿರಬಹುದು. ಆದರೆ  ತನ್ನ  ಈ ಬುದ್ಧಿ  ಹಾಗು  ಯೋಚನಾ ಸಾಮರ್ಥ್ಯದಿಂದ ತನ್ನ ಇಡೀ  ಪರಿಸರದೊಂದಿಗೆ  ಬೇಕಾಬಿಟ್ಟಿಯಾಗಿ  ವರ್ತಿಸಲು  ಸಾಧ್ಯವಿಲ್ಲ.  ಇತರ ಎಲ್ಲ ಜೀವಿಗಳನ್ನು  ತನ್ನ ಉಪಯೋಗಕ್ಕೆ ನಾಶ ಪಡಿಸಿ ತಾನು ಮಾತ್ರ ಸುಖವಾಗಿ ಜೀವಿಸಬಹುದೆಂದು ನಮ್ಮ ಕಲ್ಪನೆಯಾಗಿದ್ದರೆ ನಮ್ಮಂಥಹ ಅವಿವೇಕಿಗಳು ಯಾರು ಇರುವುದಿಲ್ಲ.ಅವನ ಐಶೋಆರಾಮ ಜೀವನಕ್ಕೆ ಯಾವುದೇ ಅಂಶ ಅಥವಾ ಘಟಕ ಅಡ್ಡ ಬಂದರೂ,  ಅದನ್ನು ತನ್ನ ಅನುಕೂಲಕ್ಕಾಗಿ,ಸಂಪೂರ್ಣವಾಗಿ ನಾಶ ಮಾಡ ಬಲ್ಲ ರಾಕ್ಷಸ ಶಕ್ತಿಯನ್ನು ಗಳಿಸಿದ್ದಾನೆ. ಆದರೆ ಈ  ಜೀವ ಮಂಡಲದಲ್ಲಿ   ವಿವಿಧ ಯುಗಗಳಲ್ಲಿ  ಬೇರೆ, ಬೇರೆ  ಜೀವಿಗಳು ಉತ್ತುಂಗ ಶಿಕರಕ್ಕೆ ಏರಿ,  ಮಿಲಿಯಾಂತರ  ವರ್ಷಗಳ  ತಮ್ಮ  ಸಾರ್ವಭೌಮತ್ವವನ್ನು  ಸ್ಥಾಪಿಸಿ ಮೆರೆದಿವೆ ಹಾಗೂ ಇಂದಿನ ವಿವೇಕಿ     ಮಾನವ ಮೆರೆಯುತ್ತಿದ್ದಾನೆ. ಆದರೆ ಆ ಪ್ರಕ್ರಿಯೆ ಕೇವಲ ಜೈವಿಕ ಹೋರಾಟ ಹಾಗು ಪ್ರಕೃತಿಯಿಂದಲೇ   ರ್ದೇಶಿಸಲ್ಪಡುತ್ತಿರುವ ಘಟನೆ. ಪ್ರಕೃತಿ  ಆಯ್ಕೆಯಿಂದಲೇ,  ಆಯ್ಕೆಯಾದ ಆಯ್ದ ಪ್ರಭೆಧವಾದರೂ, ಕಾಲಾನುಕ್ರಮದಲ್ಲಿ ಪ್ರಕೃತಿಯೇ  ಈ  ಮಾನವನನ್ನು,  ಈ ಪ್ರಭೆಧದಿಂದಲೇ
ವಿಕಸಿಸಲಿರುವ ಹೆಚ್ಚುಯೋಗ್ಯ ಹಾಗೂ ಮಾರ್ಪಾಡುಗಳಿಗೆ ಒಳಗಾಗಿ ಯಶಸ್ವಿಯಾಗಿ ಪರಿಸರದಲ್ಲಿ ಉಳಿಯಬಲ್ಲ  ಜೀವಿಯಿಂದ ಸ್ಥಾನಪಲ್ಲಟ ಗೊಳಿಸಿ ತನ್ನ ಪ್ರಶ್ನಾತೀತ ಬಲವನ್ನು ಪ್ರದರ್ಶಿಸಿರುವ  ಘಟನೆಗಳನ್ನು ನಾವು ಈಗಾಗಲೇ  ನೋಡಿದ್ದೇವೆ. ಅದರೂ ನಾವೇ ಅಂತಿಮ ಗೆಲುವು ಸಾದಿಸಿರುವ  ಶೂರರುಎಂದು ಭ್ರಮಿಸಿದ್ದೇವೆ. ಪ್ರಪಂಚದ ಇಂದಿನ ಅಶಾಂತಿ, ದ್ವೇಷ, ರಾಜಕೀಯ  ಏರು ಪೆರು, ಅನುಭವಿಸುತ್ತಿರುವ ಅಲ್ಲೋಲ ಕಲ್ಲೋಲ  ಅಜಾಗರೂಕತೆಯ  ಸ್ತಿತಿ  ಮತ್ತು   ವಿದ್ಯಮಾನಗಳು  ಮುಂದಾಗುವ ಅಪಾಯಕಾರಿ ಅನಿವಾರ್ಯ  ಚಿತ್ರಣವನ್ನು ಪ್ರದರ್ಶಿಸುತ್ತಿದೆ.

ವಿಕಾಸದ ಇತಿಹಾಸದಿಂದನಾವು ಕಲಿಯುವುದು ಬಹಳ ಇದೆ.ಜೀವಮಂಡಲದ  ಸತತ  ಬದಲಾವಣೆಗಳೇ  ಪ್ರಕೃತಿಯ ಸ್ವಭಾವ ಮತ್ತು ನಿಯಮ. ಈ  ವ್ಯತ್ಯಾಸಗಳು  ಯಾವುದೇ  ರೂಪದಲ್ಲಿ  ವ್ಯಕ್ತವಾಗಬಹುದು. ಮಹಾ ವಿಶ್ವಸಮರಗಳು, ಅಶಾಂತಿ, ಬಡತನ, ಹಸಿವು, ಈರ್ಷೆ,ನೈಸರ್ಗಿಕ ಅಸಮತೊಲನದಿಂದಾಗುವ ಭೌಗೋಳಿಕ ಹವಾಮಾನ ವೈಪರೀತ್ಯಗಳು ಇತ್ಯಾದಿ .......
ಇವೆಲ್ಲ ಮಾನವನ ಪದಕೋಶದಲ್ಲಿರುವ, ಅವನೇ ನಿರೂಪಿಸಿರುವ  ಅರ್ಥಗಳು ಹಾಗೂ  ನಿರೂಪಣೆಗಳು.ಆದರೆ ಪರೋಕ್ಷವಾಗಿ ಇವೆಲ್ಲ ಪ್ರಕೃತಿಯ ಕಾರ್ಯತಂತ್ರದ   ಪರೋಕ್ಷ ಅಭಿವ್ಯಕ್ತಿ. ಉಳಿವಿಗಾಗಿ  ಜೀವಿಗಳ ಹೋರಾಟದಿಂದ   ಸ್ವಾಭಾವಿಕವಾಗಿ   ವೈಕ್ತವಾಗುವ  ಕೋಲಾಹಲಆರಂಭವಾಗಿದೆ. ಅದರ ಸ್ವರೂಪಗಳು ಮಾತ್ರ ಭಿನ್ನವಾಗಿರುತ್ತವೆ. ಈಗ  ನಾವು  ಕಂಡಿರುವ ಸಾಮಾಜಿಕ  ಹಾಗು ಸಾಂಸ್ಕೃತಿಕ ಉನ್ನತಿಗೆ ಮೂಲಭೂತವಾಗಿ ಜೈವಿಕ ಹೋರಾಟವೆ ಆಧಾರ.ಕೇವಲ ಸುಮಾರು ಹತ್ತುಸಾವಿರ ವರ್ಷಗಳ ಇತಿಹಾಸ ಹೊಂದಿರುವ ಇಂದಿನ ಮಾನವ ತನ್ನ ವಾಸ್ತವ ಅಸ್ತಿತ್ವವನ್ನೇ ಮರೆತಹಾಗೆ  ಕಾಣುತ್ತದೆ.ಎಲ್ಲವನ್ನು ತನ್ನ ಅರಿವಿಗೆ ತಕ್ಕ ಹಾಗೆ ವಿಶ್ಲೆಶಿಸಿದ್ದಾನೆ.ಕೇವಲ 20-21ನೆ ಶತಮಾನದ 60-70ವರ್ಷಗಳಲ್ಲಿ, ಊಹೆಗೆ ನಿಲುಕದ ಹೊಸ, ಹೊಸ ಅಸಂಖ್ಯಾತ  ಅನುಕೂಲಕರ ಭೋಗದ  ವಸ್ತುಗಳನ್ನು ಕಂಡು ಹಿಡಿದ್ದಾನೆ.ಈ ಅನುಕೂಲಗಳಿಂದ ಆಗುವ ಅವಾಂತರಗಳು ನಿಧಾನವಾಗಿ ತಿಳಿಯುತ್ತಿದೆ.ಆದರೆ ಒಪ್ಪಲು ಅಸಾಧ್ಯ.  ಈ  ಅಭೂತಪೂರ್ವ    ಪ್ರಗತಿಯ ಗತಿಯನ್ನು  ಕಡಿಮೆಗೊಳಿಸುವುದಾದರೂ  ಹೇಗೆ?  ಎಂಬ  ಪ್ರಶ್ನೆ  ಎಲ್ಲರನ್ನೂ  ಕಾಡುತ್ತಿದೆ. ಸ್ವಾಭಾವಿಕತೆಗೆ  ಹಿಂದುರಿಗಿ ಬಾರದಷ್ಟು ದೂರ ಬಂದು ಬಿಟ್ಟಿದ್ದೇವೆ.ಮರಳಿ ನೈಸರ್ಗಿಕ ಶಾಂತ ಜೀವನಕ್ಕೆ ಒಗ್ಗಿಕೊಳ್ಳುವುದು ಅಸಾಧ್ಯ ಎಂದು ಜನಗಳ ಭಾವನೆ.ಆದರೆ ಪ್ರಕೃತಿ ಮತ್ತೆ ನಮ್ಮನ್ನು ಹತ್ತುಸಾವಿರವರ್ಷ ಹಿಂದಕ್ಕೆ ತಳ್ಳಬಹುದು.ಆಗ ನಾವು ಒಪ್ಪುವುದು ಬಿಡುವುದು ಎಂಬ ಪ್ರಶ್ನೆ ಬರುವುದಿಲ್ಲ. ಕಾರಣ ನಿಸರ್ಗದ ತೀರ್ಪುಅಂತಿಮ ವಾಗಿರುತ್ತದೆ.

ಈಗ ನೋಡಿ..ಜಪಾನಿನ ಒಂದು ನಿದರ್ಶನ ನಮ್ಮ ಮುಂದೆ ಜೀವಂತವಾಗಿ ಪ್ರಕೃತಿಯ ದೈತ್ಯ  ಶಕ್ತಿಯನ್ನು ಪ್ರದರ್ಶಿಸಿ ನಮ್ಮ ಅಸಹಾಯಕತೆಯನ್ನು ಮತ್ತೊಮ್ಮೆ ಅಣಕಿಸಿದೆ. ಹೆಚ್ಚು ಕಡಿಮೆ 100-150 ವರ್ಷಗಳ ಕಠಿಣ ಪರಿಶ್ರಮದಿಂದ ಕಟ್ಟಿದ ಬೆಳೆಸಿದ ದೇಶ ಜಪಾನ್.ಎರಡನೇ ಮಹಾಯುದ್ಧದ ಅಣು ಸ್ಪೋಟನೆಯಿಂದಾದ  ಅಪಾರ ನಷ್ಟವನ್ನು ಎದುರಿಸಿಯೂ  ವಿಶ್ವದಲ್ಲೇ ಅರ್ಥಿಕ ವಾಗಿ  ಮೂರನೆಸ್ತಾನದಲ್ಲಿದೆ,ಎಂದರೆಈ ಜಪಾನೀಯರನ್ನು ನಾವು ಒಪ್ಪಿಕೊಳ್ಳಲೇ ಬೇಕು. ಪ್ರಾಕೃತಿಕ ವಿಕೋಪಗಳನ್ನು ಎದುರಿಸಿ ಬದುಕಲೆಂದೇ ವಿಶೇಷವಾದ ರೀತಿಯಲ್ಲಿ ತಮ್ಮ ಮನೆ, ರಸ್ತೆ, ಕಾರ್ಖಾನೆ ಇಡೀ ದೇಶವನ್ನೇ ಒಂದು ರೀತಿಯಲ್ಲಿ ಭೂಕಂಪ ನಿರೋದಕ ಮಾದರಿಯಲ್ಲಿ ಕಟ್ಟಿದರು. ನಿಜ  ಜಪಾನಿನ  ಎಲ್ಲಾ  ಪ್ರದೇಶಗಳು  ಭೂಕಂಪಪೀಡಿತ  ವಾಗಿವೆ. ಹಾಗಾಗಿ  ಅಲ್ಲಿ ನಿರ್ಮಿತವಾಗಿರುವ ಎಲ್ಲಾಅಣುಸ್ತಾವರಗಳು ಭೂಕಂಪಪೀಡಿತ ಐದನೇ ವಲಯದಲ್ಲೇ ಇದ್ದು, ಸುನಾಮಿಯ ಅಪಾಯವನ್ನು ಮೊದಲೇ ಊಹಿಸಿ ಭೂಕಂಪನಿರೋಧಕದ ಎಲ್ಲಾ ಮುಂಜಾಗ್ರತೆಗಲ್ಲನ್ನು ಅಳವಡಿಸಿಕೊಂಡಿದ್ದಾರೆ. ಆದರೂ
ಮೊನ್ನಿನ ಭೂಕಂಪ ಎಲ್ಲವನ್ನು ಧೂಳಿಪಟ ಗೊಳಿಸಿದೆ.  ಅವರು ತೆಗೆದುಕೊಂಡ ಎಲ್ಲಾ ಮುಂಜಾಗ್ರತ ಎಚ್ಚರಿಕೆಗಳು ಮೊನ್ನೆ ಕೆಲಸಕ್ಕೆ ಬಾರದಾಯಿತು.ಮಾರ್ಚ್ ಹನ್ನೊಂದರ ಭೂಕಂಪ, ಅದರಿಂದ ಎದ್ದ ಸುನಾಮಿ ಯಿಂದ ಹತ್ತಾರು ಸಾವಿರ ಜನ ಪ್ರಾಣ ಕಳೆದುಕೊಂಡಿದ್ದಾರೆ.ಇನ್ನು ಜೀವಂತವಾಗಿದ್ದು ಅನಿಶ್ಚಿತ ಕಠಿಣ ಬದುಕನ್ನು ಎದುರಿಸುತ್ತಿರುವ ಜನ ಅಸಂಖ್ಯಾತ. ನ್ನು ಆಗಿರುವ  ನಷ್ಟ ನಮ್ಮ ಕಲ್ಪನೆಗೆ ಮೀರಿದೆ.ಮಿಲಿಯನ್, ಬಿಲಿಯನ್ ಗಳು ಕೇವಲ ಸಂಖ್ಯೆಗಳಾಗಿ ತೋರುತ್ತದೆಯೆ ಹೊರತು ಹಾನಿಯನ್ನು ಅಂದಾಜು ಮಾಡುವುದು ಅಸಾಧ್ಯ.ಆದರೆ ಟಿವಿ ಗಳಲ್ಲಿ ಕಂಡ ದೃಶ್ಯ ಹೆದರಿಕೆ ಹುಟ್ಟಿಸುತ್ತದೆ. ಹಡಗುಗಳೂ ಸಹಾ ಊರಿನ ದಾರಿಯಲ್ಲಿ.ಮನೆಗಳು ಸಮುದ್ರದಲ್ಲಿ!ರಫ್ತುಮಾದಳು ಬಂದರಿನಲ್ಲಿ ಜೋಡಿಸಿಟ್ಟ ಹೊಸ ಕಾರ್ ಗಳು ಹಲಗೆಯ ಮೇಲಿನ  ಕವಡೆಯಂತೆ ಚದುರಿರುವ ದೃಶ್ಯ.ನೀರಿನ ನಡುವಿನಲ್ಲಿ ಬೆಂಕಿ, ಆಕಾಶ ಮುಟ್ಟುವ   ದಟ್ಟ ಹೊಗೆ. ಮಡುವಿನಲ್ಲಿ ಚೆಲ್ಲ ಪಿಲ್ಲಿಯಾಗಿ ಬಿದ್ದಿರುವ ಮನೆಗಳ ಅವಶೇಷಗಳು.ಮರದ ಹಲಗೆಗಳು.ಯಾವ ಕಾಡಿನ,ಯಾವ ಮರದ ಹಲಗೆ ತುಂಡುಗಳೋ?  ನಿರ್ಜೀವವಾಗಿ ತೇಲುತ್ತಿವೆ ಅಡ್ಡಾದಿಡ್ಡಿ. ಇದನ್ನೆಲ್ಲಾ ಪುನಃ ಸರಿಪಡಿಸುವುದಾದರೂ ಹೇಗೆ?ಎಷ್ಟು ಸಮಯ ಹಿಡಿದೀತು? ಅಲ್ಲಿಯವರೆಗೂ ಜನಗಳ ಗತಿ?

ಇವೆಲ್ಲ ಸಹಿಸಿ ಕೊಳ್ಳಬಹುದೇನೋ,? ಸಾಧ್ಯ. ನಿಜ. ಹಾಗು ಹೀಗೂ ಸ್ವಲ್ಪ ಕಾಲ ಕಷ್ಟಪಟ್ಟು ಜೀವನವನ್ನು ಪುನಃ ನಿರ್ಮಿಸಿಕೊಳ್ಳಲೂಬಹುದು. ಆದರೆ ಇಡೀ ದೇಶಕ್ಕೆ ವಿದ್ಯುತ್ ಪೂರೈಸುವ ಅಣು ವಿದ್ಯುತ್ ಸ್ಥಾವರಗಳೇ ಹಾನಿಗ ಒಳಗಾಗಿ.ವಿಕಿರಣ ಸೋರಿಕೆಯ ಭಯ ದೇಶವನ್ನೇ ಕಾಡುತ್ತಿದೆ. ಅಷ್ಟೇ ಏಕೆ ಜಗತ್ತಿನ ಎಲ್ಲಾ ದೇಶಗಳು ಕಾತುರದಿಂದ  ಜಪಾನಿನತ್ತ ನೋಡುತ್ತಿದ್ದಾರೆ.  ಪರಿಣಾಮದ  ಬಗ್ಗೆ  ನಿಖರ  ಸುಳಿವು ಕೊಡದೇ ಇರುವುದು ರಾಜಕೀಯ ತಂತ್ರವೋ
ಅಥವಾ ವಿಜ್ಞಾನಿಗಳಿಗೆ ಅಜ್ಞಾನವೋ?ನಿಜಕ್ಕೂ ಇದರ ಹಾನಿಕರ ಪರಿಣಾಮದ ಅರಿವು ಯಾರಿಗೂ ಇಲ್ಲವೇ? ತಿಳಿಯದಾಗಿದೆ.  . ಪರಿಣಾಮಕಾರಿಯಾಗಿ  ಅಣುವಿಕಿರಣ  ಮಾಲಿನ್ಯ  ವನ್ನು ನಿಯಂತ್ರಿಸುವುದು, ಅಥವಾ  ಯಶಸ್ವಿಯಾಗಿ ತಡೆಗಟ್ಟಲು,  
ವಿವಿದ ದೇಶಗಳು ಪ್ರಯತ್ನಿಸುತ್ತಿವೆ.ಸಾವಿರಾರುಮೈಲಿ ದೂರವಿರುವ  ನಮಗೂ ಮೊಬೈಲ್ ನಲ್ಲಿ ವಿಕಿರಣದ  ಭೀತಿಯ ಸಂದೇಶಗಳು  ಬರುತ್ತಿವೆ.  ಎಂದರೆ  ವಿಕಿರಣ  ಮಾಲಿನ್ಯದ ಪರಿಣಾಮಕ್ಕೆ ಎಲ್ಲರೂ ವಿಚಲಿತರಾಗಿದ್ದರೆ ಎಂಬುದು ಸ್ಪಷ್ಟ.

ಒಮ್ಮೊಮ್ಮೆಆಶ್ಚರ್ಯವಾಗುತ್ತದೆ. ಇಷ್ಟೆಲ್ಲಾ  ಪ್ರಗತಿ ಸಾದಿಸಿದ ನಾವು ವಿಕಿರಣಸೋರಿಕೆಯನ್ನು ಪರಿಣಾಮಕಾರಿಯಾಗಿ   ನಿಯಂತ್ರಿಸಲು ಸಾಧ್ಯವಿಲ್ಲವೇ.ಒಂದು  ವೇಳೆ ಹಾಗಿದ್ದ ಪಕ್ಷದಲ್ಲಿ,ಯಾವುದನ್ನು ನಾವು ನಿಯಂತ್ರಿಸಲು ಸಾಧ್ಯವಿಲ್ಲವೋ ಅಂಥಹ ಆವಿಷ್ಕಾರಗಳ ಜೊತೆಯಲ್ಲಿ ಚೆಲ್ಲಾಟವೇಕೆ? ಇದು ಮೊದಲನೆಯ ಘಟನೆಯೆಲ್ಲ. ಈಗಾಗಲೇ ಅನೇಕ ಚೆರ್ನೋಬಿಲ್ ಅನುಭವಗಳು ನಮಗೆ ಆಗಿವೆ. ಒಂದು ನಾವು ಅಣುಶಕ್ತಿಯನ್ನು ಬಳಸಿಕೊಳ್ಳುವುದೇ ಆದರೆ,ಮುಂದಿನ ಅನಾಹುತಗಳಿಗೆ ನಾವು ಸಿದ್ಧರಿರಬೇಕು.

ಮನುಷ್ಯ ಬೆಂಕಿ ಉಪಯೋಗ ಕಂಡುಕೊಂಡ ಸಮಯದಿಂದ ನಾವು ಶಕ್ತಿಯನ್ನು ಒಂದಲ್ಲ ಒಂದು ರೀತಿ ಬಳಸಿಕೊಳ್ಳುತ್ತಿದ್ದೇವೆ. ಎಲ್ಲ ಕಾಲದಲ್ಲೂ, ಅಂದರೆ, ಉರುವಲು ಸೌದೆ, ಕಲ್ಲಿದ್ದಲು, ಪೆಟ್ರೋಲ್, ವಿದ್ಯುತ್ ಇತ್ಯಾದಿಗಳನ್ನು ಬಳಸಿಕೊಂಡು ಬಂದಿದ್ದೇವೆ. ಈ ಎಲ್ಲ ಇಂಧನ ಬಳಕೆ ಯಿಂದಲೂ ಪರಿಸರ ಮಾಲಿನ್ಯ ವಾಗುತ್ತಿತ್ತು. ಆದರೆ ಪಳೆಯುಳಿಕೆ ಇಂಧನದ ಬಳಕೆಯ ನಂತರ ಪರಿಸರ ಮಾಲಿನ್ಯದ ಪ್ರಮಾಣ ಅತಿಹೆಚ್ಹಾಗಿ. ಆಮ್ಲಮಳೆ, ಹಸಿರು ಮನೆ ಪರಿಣಾಮ, ಓಜೋನೆ
ಪದರದ ಶಿಥಿಲತೆ.....ಇತ್ಯಾದಿಗಳಿಂದ ಉಂಟಾಗಿರುವ ಅಸಮತೋಲನ ಹಾಗೂ ಮಾಲಿನ್ಯ ವನ್ನು ಮನಸ್ಸು ಮಾಡಿದರೆ ನಾವು ಯಶಸ್ವಿಯಾಗಿ ತಡೆಗಟ್ಟಬಹುದು. ಈಗಾಗಲೇ ಸೌರ ಶಕ್ತಿಯ ಬಳಕೆ, ಜಲ ವಿದ್ಯುತ್, ಸಾಗರ ಅಲೆಗಳಿಂದ ಶಕ್ತಿ, ವಾಯು ಶಕ್ತಿ ಎಲ್ಲಾ ಪರ್ಯಾಯ ಗಳನ್ನೂ ಕಂಡು ಕೊಂಡಿದೆ. ಮಾಲಿನ್ಯ ಉಂಟುಮಾಡದ ಬೆಳಕು, ಗಾಳಿ, ನೀರು ಇತ್ಯಾದಿಗಳಿಂದ ಉತ್ಪತ್ತಿಯಾಗುವ ಶಕ್ತಿ ಮಾಲಿನ್ಯ ವನ್ನು ಉಂಟುಮಾಡುವುದಿಲ್ಲ. ಆದರೆ ನಾವು ಕಲ್ಲಿದ್ದಲು , ಪೆಟ್ರೋಲ್, ಈಗ ಅಣು ಶಕ್ತಿಯನ್ನೇ ನಂಬಿದ್ದೇವೆ ಏಕೆ? ಉತ್ತರ ಸುಲಭ. ಕುದುರೆ ಕಂಡರೆ ಕಾಲು ನೋವು ಎಂಬ ಒಂದು ಗಾದೆ ಯಂತೆ ನಮ್ಮ ಬುದ್ಧಿ.ಇವೆಲ್ಲ ಸುಲಭವಾಗಿ ಸಿಗುತ್ತಿರುವಾಗ ಅಲ್ಪ ಪ್ರಮಾಣದ, ನಿದಾನವಾದ  ಹಾಗೂ ಕೆಲವೊಮ್ಮೆ ಅವಲಂಬನೆ  ಕೆಲವೊಮ್ಮೆ  ಅನುಮಾನ ವಾದುದರಿಂದ ನಾವು ಈಗ ಪೆಟ್ರೋಲ್ ಹಾಗೂ ಅಣು  ಶಕ್ತಿಗೆ  ಮೊರೆ  ಹೋಗಿದ್ದೇವೆ.

ಒಂದು ಪಕ್ಷ ಪೆಟ್ರೋಲ್  ಹಾಗು ಅದರ ಉಪ ಉತ್ಪನ್ನಗಳಾದ  ಡೀಸೆಲ್,  ಕೆರೋಸಿನ್   ಇಲ್ಲದಿದ್ದರೆ, ಅಥವಾ  ಉರೆನಿಯಂ  ಮತ್ತು ಪ್ಲುಟೋನಿಯಂ ಕಂಡುಹಿಡಿದಿಲ್ಲವಾದರೆ, ಅಣು ಶಕ್ತಿಯ  ಅವಿಷ್ಕಾರ ವಾಗಿಲ್ಲದ್ದಿದ್ದರೆನಾವು   ಏನು  ಮಾಡುತ್ತಿದ್ದೆವು? ಇಂದಿನವರೆವಿಗೂ ಕೇವಲ ಕಲ್ಲಿದ್ದಲೇ ಮಾತ್ರ ಎಲ್ಲ ಕೈಗಾರಿಕಾ ಚಟುವಟಿಕೆಗಳಲ್ಲಿ,ವಾಹನಗಳಲ್ಲಿ,ಕೃಷಿ ಯಲ್ಲಿ ಉಪಯೋಗಿಸಲ್ಪಟ್ಟಿದ್ದರೆ,   ಇಷ್ಟು ಹೊತ್ತಿಗೆ ಇಡಿ ಭೂಮಿ ಕಪ್ಪು ಹೊಗೆಯಿಂದ ಆವರಿಸಲ್ಪಟ್ಟಿದ್ದು ಸದಾ ಮಬ್ಬಾದ ಸೂರ್ಯನ ಬೆಳಕು ಮಿನುಗುತ್ತಿತ್ತೇನೋ? ಊಹಿಸಲು ಅಸಾಧ್ಯವಾದ  (ಜಾವದ ಕ್ರಕಟೋವ ಜ್ವಾಲಮುಖಿ ಸ್ಪೋಟಿಸಿದಾಗ ಒಂದು ವಾರ ಇಡೀ ಭೂಮಂಡಲ,ಜ್ವಾಲಾಮುಖಿ ಹೊರಹಾಕಿದ ಹಾರು ಬೂದಿ ಹಾಗು ಇತರ ವಿಷಾನಿಲಗಳಿಂದ ಅವೃತ್ತವಾಗಿ  ಭೂ ತಾಪಮಾನ ಗಣನೀಯ  ಪ್ರಮಾಣದಲ್ಲಿ ಕಡಿಮೆಯಾಗಿತ್ತು   ಎಂದು  ತಿಳಿದು  ಬಂದಿದೆ.)    ವಾಯುಮಾಲಿನ್ಯ ಉಂಟಾಗಿ,
ತೀವ್ರ ವಾಯು ಮಾಲಿನ್ಯದಿಂದ  ಆಮ್ಲ ಮಳೆ, ಸ್ಮಾಗ್ ಎಲ್ಲೆಲ್ಲೂ  ಸಾಮಾನ್ಯ ವಾಗಬಹುದಾಗಿತ್ತು.

ಇಯಾವುವು ಅತಿಶಯೋಕ್ತಿ  ಅಲ್ಲ. ಈಗಾಗಲೇ ಪ್ರಕ್ರಿಯೆಯ ಸೂಚನೆಗಳು ಸ್ಪಷ್ಟವಾಗಿ ಕಾಣತೊಡಗಿದೆ. ಅನೇಕ ದೇಶ ಹಾಗು  ಮಹಾ ನಗರಗಳಲ್ಲಿ  ಆಮ್ಲ ಮಳೆ ಮತ್ತು ಸ್ಮಾಗ್ ಸಾಮಾನ್ಯ ವಾಗಿದೆ. ಹಾಗಾದರೆ ಪೆಟ್ರೋಲ್ ಉತ್ಪನ್ನಗಳ ಬಳಕೆಯಿಂದ  ಇವೆಲ್ಲಾ ಕಡಿಮೆ ಯಾಗಬೇಕಿತ್ತಲ್ಲ ಎಂಬುದು ನಿಮ್ಮ ಪ್ರಶ್ನೆ? ಇಲ್ಲ, ಖಂಡಿತ ಇಲ್ಲ. ಆದರೆ ವಾಯುಮಾಲಿನ್ಯ ಕಪ್ಪು ಹೊಗೆಯಿಂದ ಎದ್ದು ಕಾಣುತ್ತಿತ್ತು.ಈಗ ಉತ್ಪತ್ತಿ ಯಾಗುತ್ತಿರುವ ಎಲ್ಲಾ ಮಲಿನಕಾರಿಗಳು ಹೊಗೆಯ ರೂಪದಲ್ಲಿ ನಮಗೆ ಕಾಣುತ್ತಿಲ್ಲ. ಹೊಗೆ ಅಂದ್ರೆ ಮಾಲಿನ್ಯ ಎಂದು ಭಾವಿಸುವ ಜನಕ್ಕೆ ಹೆಚ್ಚು ಪರಿಣಾಮಕಾರಿಯಾಗಿ ಕಾಣುತ್ತಿತ್ತು.

ಈ ವಿಕಿರಣ ಮಾಲಿನ್ಯವೂ ನಮ್ಮ ಕಣ್ಣಿಗೆ ಕಾಣಿಸುವುದಿಲ್ಲ.ನಮ್ಮ ದೇಹವನ್ನು ಅಗೋಚರವಾಗಿ ಪ್ರೆವೆಶಿಸಿದರೂ ನಮಗೆ ಅರಿವಾಗುವುದಿಲ್ಲ. ಏನಿದ್ದರು ಇದರ ಪ್ರಭಾವ ಸ್ವಲ್ಪ ಸಮಯದ ನಂತರ ಪರೋಕ್ಷ ವಾಗಿ ತೋರಬಹುದು.ವಿಕಿರಣದ ತೀವ್ರತೆ ಅತಿಯಾಗಿದ್ದರೆ ಮಾತ್ರ ಸಾವು ಸಂಭವಿಸಬಹುದು.ಉದಾಹರಣೆಗೆ ಮೇಡಂ ಕ್ಯೂರಿ ಗಂಟೆ ಗಟ್ಟಲೆ ಯುರೇನಿಯಂ  ಅದಿರು,   ಪಿಚ್ ಬ್ಲೆಂಡ್ ನಿಂದ ರೇಡಿಯಂ ಪ್ರತ್ಯೆಕಿಸುವಾಗ ತಾನು  ವಿಕಿರಣತೆ  ಒಳಗಾಗುತ್ತಿರುವುದನ್ನು ಲೆಕ್ಕಿಸದೆ ಕೊನೆಗೆ ವಿಕಿರಣ  ಪರಿಣಾಮದಿಂದಲೇ ಸತ್ತು ವಿಜ್ಞಾನದ ಕ್ಷೇತ್ರದಲ್ಲಿ ಹುತಾತ್ಮಳಾದ  ಸಂಗತಿ ನಮಗೆಲ್ಲ ಗೊತ್ತಿದೆ.ಇದರ ಪರಿಣಾಮ ವಿಕಿರಣತೆಯ ತೀವ್ರತೆ ಮತ್ತು ಆತೀವ್ರತೆಗೆ  ನಮ್ಮ ದೇಹ ಒಳಗಾಗುವ ಸಮಯವನ್ನು ಅವಲಂಬಿಸಿರುತ್ತದೆ.

ಹೀಗಾಗಿ ಅಣುಶಕ್ತಿಯಿಂದ ಉತ್ಪತ್ತಿಯಾಗುವ ಅಗಾಧ ಶಕ್ತಿ ಅತಿ ಅಪಾಯಕಾರಿ.ಅದಕ್ಕಾಗಿಯೇ ಇದರ ಬಳಕೆಯಲ್ಲಿ ಎಷ್ಟು ಎಚ್ಚರ ವಹಿಸಿದರೂ ಸಾಲದಾಗುತ್ತದೆ. ಒಂದು ವಿಕಿರಣದ ಶಕ್ತಿಯನ್ನು ನಿಯಂತ್ರಿಸಿ ಅದರ ಗರಿಷ್ಟ ಪ್ರಯೋಜನವನ್ನು ಪಡೆಯ ಬಹುದು ನಿಜ. ಆದರೆ ಅದರಿಂದ ಉತ್ಪತ್ತಿಯಾಗುವ ವಿಕಿರಣ ಮಲಿನಕಾರಿಗಳ ಪರಿಣಾಮಕಾರಿ ವಿಸರ್ಜನೆ ಬಹಳ ಕಷ್ಟ ಹಾಗು ತುಟ್ಟಿ. ಸ್ವಲ್ಪ ಎಚ್ಚರ ತಪ್ಪಿದರು ಭಯಂಕರ ದುಷ್ಪರಿಣಾಮ ತಪ್ಪಿದ್ದಲ್ಲ. ಈ ಅಪಾಯಕಾರಿ ನ್ಯೂಕ್ಲಿಯಾರ್  ತ್ಯಾಜ್ಯಗಳನ್ನು   ತಟಸ್ತ ಗೊಳಿಸಿ ಅಥವಾ ನಿಷ್ಕ್ರಿಯೆಗೊಳಿಸಿ ಸೂಕ್ತ ಸ್ತಳಗಳಲ್ಲಿ ವಿಸರ್ಜಿಸುವುದೇ ಒಂದು ದೊಡ್ಡ ತಲೆ ನೋವಿನ ಕೆಲಸ. ಎಲ್ಲಂದರಲ್ಲೇ  ಮನೆಯ  ಕಸವನ್ನು  ಬೀದಿಗೆ  ಎಸೆಯುವಂತೆ  ಮಾಡಲಾಗದು. ಇದರಿಂದಾಗಿಯೇ  ಈ  ಅಣು  ಶಕ್ತಿ ಕೇವಲ ಅಪಾಯಕಾರಿ ಮಾತ್ರವಲ್ಲ ತುಂಬಾ ದುಬಾರಿಯಾಗುತ್ತದೆ. ಯಾವ ದೇಶವೂ ಸಹಾ ಇದುವೆರೆವಿಗೂ ಇದರ ತ್ಯಾಜ್ಯಗಳನ್ನು ಗೊತ್ತಿಲ್ಲದೇ ಬಡ ದೇಶಗಳಿಗೆ ಯಾವ ರೂಪದಲ್ಲಿ ರವಾನಿಸುತ್ತಾರೋ ತಿಳಿಯದು.ಇದೊಂದು ಅಂತಾರಾಷ್ಟ್ರೀಯ ಸಂಚು, ರಹಸ್ಯ.ಅಣುಶಕ್ತಿಯ ನಿಷೆಧಿಸಲೇ ಬೇಕೆಂದುಇತರಪ್ರಗತಿಶೀಲರಾಷ್ಟ್ರಗಳ ಮೇಲೆ ಅತಿ ಕಟಿಣ ಷರತ್ತುಗಳನ್ನು ವಿಧಿಸುವ ಮೂಲಕ
ತಮ್ಮ ಪ್ರಭುತ್ವವನ್ನು ಹೆರುವ ಮುಂದುವರೆದ ದೇಶಗಳೇಅತ್ಯಂತ  ಅಪಾಯಕಾರಿ ಪ್ರದೇಶಗಳಾಗಿವೆ."ಕೋತಿ,ಮೊಸರುಅನ್ನ ತಿಂದು ಮೇಕೆ ಬಾಯಿಗೆ ಒರೆಸಿತಂತೆ".  ಆಗಿದೆ ಈ ಬಲಿಷ್ಠ ರಾಷ್ಟ್ರಗಳ ಧೋರಣೆ. ಜಪಾನಿನಲ್ಲಿ ಸಂಭವಿಸಿದ ಹನ್ನೊಂದನೇ ತಾರೀಕಿನ ಸುನಾಮಿ ಇಡಿ ಪ್ರಪಂಚವೇ ಅಣುಶಕ್ತಿಯ ಉತ್ಪಾದನೆ  ಮತ್ತು ಬಳಕೆಯ ಬಗ್ಗೆ ಯೋಚಿಸ ಬೇಕಾಗಿದೆ. ಕಾರಣ ಈಗ ಜಪಾನ್ ಸರ್ಕಾರವೇ ಫುಕುಶಿಮದ ಅಣು ಸ್ಥಾವನ್ನು ಸಂಪೂರ್ಣವಾಗಿ ಮುಚ್ಚಲು ಯೋಚಿಸುತ್ತಿರುವ ಸಮಯದಲ್ಲಿ ಇನ್ನೂ ಹತ್ತಾರು ಅಣು ಸ್ಥಾವರಗಳನ್ನು ಸ್ಥಾಪಿಸಲು ನಮ್ಮ ದೇಶ ತಯಾರಿ ನಡೆಸಿದೆ.ಫ್ರಾನ್ಸ್ ದೇಶದ ನವೀನ ತಂತ್ರಜ್ಞಾನದೊಂದಿಗೆ ತಯಾರಾಗುತ್ತಿರುವ ಅಣು ಶಕ್ತಿ ಉತ್ಪಾಧನ ಘಟಕ ದ ಬಿಡಿ ಭಾಗಳನ್ನು ನಮ್ಮಲ್ಲಿ ಸ್ಥಾಪಿತ ಗೊಳ್ಳಲಿರುವ ಘಟಕಗಳಲ್ಲಿ ಬಳಸಿಕೊಳ್ಳುವ ಯೋಜನೆಯನ್ನು ನಾವು ನೂರು ಬಾರಿ ಯೋಚಿಸಬೇಕಾಗಿದೆ.ಹೊಸ ಯಂತ್ರಗಾರಿಕೆ ಹಾಗೂ ತಂತ್ರಗಾರಿಕೆಯಿಂದ ಹೆಚ್ಚು ಶಕ್ತಿ ಉತ್ಪಾದನೆಯ ಹುಚ್ಚು ನಮ್ಮ ಸಾದಕ ಬದಕಗಳ ಆಧಾರದ ಮೇಲೆ ನಿರ್ಧರಿಸಿ ಮುಂದುವರೆಯುವುದು ಸೂಕ್ತ. ಅಲ್ಲವೇ?


 

















Comments

Popular posts from this blog

ಕಾಗೆ....