Monday, April 11, 2011

ನೆಲ ನುಂಗಿದ ಕಡಲು.....

2011, ಮಾರ್ಚ್, ಹನ್ನೊಂದು ಮಧ್ಯಾನ್ಹ 2.46 ಕ್ಕೆ ಜಪಾನಿನ ಸನ್ಡಾಯ್ ನಗರದ ಉತ್ತರ ಪೂರ್ವ ಕಡಲತೀರದಲ್ಲಿ ಸಂಭವಿಸಿದ ಭೂಕಂಪ ಪ್ರಪಂಚದಲ್ಲಿನ ಅತ್ಯಂತ ಶಕ್ತಿಶಾಲಿ ಹಾಗು ವಿಧ್ವಂಸಕ ಭೂಕಂಪವೆಂದು ಅಮೇರಿಕಾದ ಭೂವಿಜ್ಞಾನ ಸಮೀಕ್ಷಣ ಸಂಸ್ತೆ ತಿಳಿಸಿದೆ.ಸನ್ಡಾಯ್ ನಗರದಿಂದ ಸುಮಾರು 134,ಕಿ.ಮಿ ದೂರದಲ್ಲಿ ಪೆಸಿಫಿಕ್ ಸಾಗರದ ಗರ್ಭದಲ್ಲಿ ಉಂಟಾದ ಈ ಭೂಕಂಪದ ತೀವ್ರತೆ ರಿಟರ್ ಮಾಪಕದಲ್ಲಿ 9 ಆಗಿತ್ತು.

ಕೆಲವೇ ಕ್ಷಣಗಳಲ್ಲಿ ಈ ಭೂಕಂಪದ ಪರಿಣಾಮದಿಂದ ಕಡಲ ಆಳದಲ್ಲಿ ಎದ್ದ ಪ್ರಚಂಡ ಸುನಾಮಿ 30ಅಡಿ ನೀರಿನ ಗೋಡೆ ಅಲೆಗಳು,ಹಲವು ಕಿ.ಮಿ.ಗಳು ಒಳನಾಡಿಗೆ ನುಗ್ಗಿ ಪೂರ್ವ ಕರಾವಳಿಯಲ್ಲಿ ಅಲ್ಲೋಲ ಕಲ್ಲೋಲ ಉಂಟುಮಾಡಿದೆ. ಇದರಿಂದಾದ ಪ್ರಾಣ ಹಾನಿಯ ಅಂದಾಜು ಇನ್ನು ನಿಖರ ವಾಗಿತಿಳಿದು ಬಂದಿಲ್ಲ. ಇನ್ನು ಇದರಿಂದ ಜಪಾನ್ ದೇಶಕ್ಕೆ ಉಂಟಾಗಿರುವ ಆರ್ಥಿಕ ಹಾನಿಯನ್ನು ಸುಮಾರು 235 - 300 ಬಿಲಿಯನ್ ಅಮೇರಿಕನ್ ಡಾಲರ್ ಗಳು ಎಂದು ಅಂದಾಜು. ಅಷ್ಟೇ. ಈ ಭೂಕಂಪದ ಪರಿಣಾಮದಿಂದಾದ ಸುನಾಮಿಯ ಪ್ರಭಾವ ಕೇವಲ ಜಪಾನಿಗಷ್ಟೇ ಸೀಮಿತವಾಗಿರುವುದಿಲ್ಲ.ಪರೋಕ್ಷವಾಗಿ ಇದರ ನೇರ ಪರಿಣಾಮ ಜಪಾನಿನ ಆಸುಪಾಸಿನ ನೆರೆ ರಾಷ್ಟ್ರಗಳಲ್ಲಿ ಕಂಡು ಬಂದಿಲ್ಲ.ಆದರೆ ಈ ಸುನಾಮಿ ಅಲೆಗಳಿಂದ ಫುಕುಶಿಮ ಅಣುಸ್ತಾವರದ ಮೇಲೆ ಉಂಟಾದ ಅನೀರಿಕ್ಷಿತ ಹಾನಿ ಕೇವಲ ಜಪಾನಿಗಷ್ಟೇ ವಿನಾಶಕಾರಿ ಯಲ್ಲ,ಇಡಿ ಜಗತ್ತಿನ ಆರ್ಥಿಕ ವಲಯದಲ್ಲಿ ಏರುಪೇರು ಮಾಡಲಿದೆ.ಇನ್ನು ಈ ಅಣುಸ್ಥಾವರಗಳಿಂದ ಉಂಟಾಗಿರುವ ಸೋರಿಕೆಯಿಂದ ಅಗೋಚರ ವಿಕಿರಣ ಮಾಲಿನ್ಯ ಹೇಗೆ? ಎಲ್ಲಿ? ಯಾವಾಗ? ಎಂತಹ ಪರಿಣಾಮ ಬೀರುತ್ತದೆ, ಎಂಬುದನ್ನು ಈಗಲೇ ಊಹಿಸುವುದು ಕಷ್ಟ. ಪರಿಸರದ ಜೈವಿಕ ಹಾಗೂ ಅಜೈವಿಕ ಘಟಕಗಳ ಮೇಲೆ ಇದರ ಅಪಾಯಕಾರಿ ಪರಿಣಾಮ ಕಟ್ಟಿಟ್ಟ ಬುತ್ತಿ.ಈ ಹಾನಿಯ ತೀವ್ರ ಸ್ವರೂಪ ಕೇವಲ ಸಮಯವೇ ನಿರ್ಧರಿಸಬೇಕಾಗಿದೆ.

ಭೂಕಂಪ ಹಾಗು ಸುನಾಮಿ ಅಲೆಗಳಿಗೆ  ಸಂಭಂದವಾದರೂ ಏನು? ಏಕೆಂದರೆ ಈ ಸುನಾಮಿ ಪದದ ಮೂಲ ಜಾಪಾನ್ ಭಾಷೆ. ಜಾಪಾನಿ ಭಾಷೆಯಲ್ಲಿ tsu- ಎಂದರೆ ಬಂದರು. ಹಾಗೂ nami- ಎಂದರೆ ಅಲೆ. ಹೀಗಾಗಿ, tsunami ಎಂದರೆ ಸರಿಯಾದ ಅರ್ಥ ಕೇವಲ ಬಂದರು ಅಲೆಗಳು ಎಂದು ಭಾಷಾಂತರಿಸಬಹುದು. ಆದರೆ  ಈ  ಅಲೆಗಳ  ಪ್ರಭಾವಕ್ಕೆ  ಒಳಗಾಗಿರುವ  ಜನ ಮಾತ್ರ ಜಪಾನಿಯರು.ಅವರಿಗೂ ಇದ್ದಕ್ಕಿದ್ದ ಹಾಗೆ ಬರುವ ಅಲೆಗಳ ಮೂಲ ಕಾರಣ ಯಾವುದು ಅದಕ್ಕೆ ಮತ್ತು ಚಂದ್ರ ನಿಂದಾಗುವ ಸ್ವಾಭಾವಿಕ ಗುರುತ್ವದ ಸಾಗರದ ಉಬ್ಬರ, ಇಳಿತಗಳಿಗೆ ಸಂಭಂದ ಇದೆಯೇ ಅದು ಗೊತ್ತಿರಲಿಲ್ಲ. ಇಲ್ಲ. ಯಾವ ಸಂಭಂದವೂ ಇಲ್ಲ.ನಿಜ.ಕೇವಲ ಭೂಮಿಯ ಒಡಲಾಳದಲ್ಲಿ ಸಾಮಾನ್ಯವಾಗಿ ನಡೆಯುತ್ತಲೇ ಇರುವ ಭೂ-ಚಪ್ಪಡಿಗಳ ಚಲನೆಯಿಂದ ಉಂಟಾಗುವ ಭೂಕಂಪದಿಂದ ಈ ಅಲೆಗಳು ಏಳುತ್ತವೆ.ವೈತ್ಯಾಸ ಇಷ್ಟೇ.  ನೆಲದ ಮೇಲೆ ಭೂಕಂಪ ಸಂಭವಿಸುವುದನ್ನು ನಾವು ನೇರವಾಗಿ ಅನುಭವಿಸುತ್ತೇವೆ.ಅಂದರೆ ಭೂಮಿ ನಡುಗುವುದು,ಮನೆ ಕಟ್ಟಡಗಳೆಲ್ಲ ಹೊಯ್ದಾಡುವುದು ಇತ್ಯಾದಿ.ಆದರೆ ಸಾವಿರಾರು ಮೈಲಿ ದೂರದ ಸಾಗರದ ತಳದಲ್ಲಿ ಸಂಭವಿಸುವ ತೀವ್ರ ಭೂಕಂಪಗಳು, ಅದರ ಪ್ರಚಂಡ ಶಕ್ತಿಯಿಂದ ಬೃಹತ್ ಪ್ರಮಾಣದ ನೀರಿನ್ನು ಸ್ಥಾನಪಲ್ಲಟ ಗೊಳಿಸುವುದರಿಂದ ಭೂಭಾಗದಿಂದ ಬಲು ದೂರದಲ್ಲಿ ಅಲೆಗಳು ಉತ್ಪತ್ತಿಯಾಗಿ ಕಡಲ ತೀರದ ಕಡೆಗೆ ಚಲಿಸಲಾರಂಭಿಸುತ್ತದೆ.ತೀರವನ್ನು ತಲುಪುವ ಹೊತ್ತಿಗೆ ಅಗಾದ ದೈತ್ಯಾಕಾರದ ಅಲೆಗಳಾಗಿ ಅಪ್ಪಳಿಸುವುದರಿಂದ,ಶಾಂತವಾಗಿದ್ದ ಸಾಗರ ಯಾವ ಮುನ್ಸೂಚನೆಯೂ ಇಲ್ಲದೆ ಇದ್ದಕ್ಕಿದ್ದಂತೆ ಪ್ರಕ್ಶುಬ್ಧವಾಗಿ ಸಮುದ್ರದ ಬೃಹತ್ ಅಲೆಗಳು ಪ್ರವಾಹ ರೂಪದಲ್ಲಿ ಒಳನಾಡಿಗೂ ನುಗ್ಗುತ್ತದೆ.ಈ ನೀರಿನ ಪ್ರವಾಹದ ದಾರಿಯಲ್ಲಿ ಸಿಕ್ಕ ವಸ್ತುಗಳೆಲ್ಲಾ ಧೂಳಿಪಟ ವಾಗುತ್ತವೆ.

ಪೆಸಿಫಿಕ್ ಶಿಲಾ ಚಪ್ಪಡಿಯ ಮತ್ತು ಉತ್ತರ ಅಮೇರಿಕಾದ ಶಿಲಾ ಚಪ್ಪಡಿಗಳು ಸಂದಿಸುವ ಜಾಗ ಇದು.ಇಲ್ಲಿ ಉತ್ತರಅಮೇರಿಕಾದ ಶಿಲಾಸ್ಥರವು ಮೇಲಕ್ಕೆ ತಲ್ಳಲ್ಪಡುವುದರಿಂದ,ಸ್ವಾಭಾವಿಕವಾಗಿ ನಡೆಯುತ್ತಲೇ ಇರುವ ಈ ಶಿಲಾ ಚಪ್ಪಡಿಗಳ ಕೆಳ ಜಾರುವಿಕೆಗಳಿಂದ ಭೂಕಂಪಗಳು ಉಂಟಾಗುತ್ತಲೇ ಇರುತ್ತವೆ.ಅದೃಷ್ಟವಶಾತ್ ಸಾಮಾನ್ಯವಾಗಿ ಹೆಚ್ಚಿನ ಭೂಕಂಪಗಳು ಸಾಗರತಳದಲ್ಲೇ ನಡೆಯುತ್ತಿರುವುದರಿಂದ ಅವುಗಳ ಪರಿಣಾಮ ನಮಗೆ ಅಷ್ಟಾಗಿ ತಿಳಿಯುತ್ತಿಲ್ಲ. ಸಾಗರಗರ್ಭದಲ್ಲಿ ಸದಾ ಉಂಟಾಗುವ ಭೂಕಂಪನಗಳು ಹೊಸ ದ್ವೀಪಗಳ ಉದಯಕ್ಕೆ ಕಾರಣವಾಗಿವೆ. ಭೂಮಿಯ ಕೆಳಗೆ ಸತತವಾಗಿ ನಡೆಯುತ್ತಲೇ ಇರುವ ಈ ಪ್ರಕ್ರಿಯೆಯನ್ನು subduction ಎನ್ನುತ್ತಾರೆ. ಈ ಪ್ರಕ್ರಿಯೆ ಅಗಾಧ ಶಕ್ತಿಯನ್ನು ಉತ್ಪತ್ತಿ ಮಾಡುತ್ತದೆ.ಉತ್ತರ ಅಮೇರಿಕಾದ ಈ ಶಿಲಾ ಸ್ತರದ ಸಿಡಿತದಿಂದ ಉತ್ಪತ್ತಿಯಾದ ಭಯಂಕರ ಶಕ್ತಿ ಸಾಗರದ ನೀರನ್ನು ಮೇಲೆಕ್ಕೆ,ಕೆಳಕ್ಕೆ ನೂಕಿದಾಗ,ಉತ್ಪತ್ತಿಯಾಗುವ ಅಗಾಧ ಶಕ್ತಿಯಿಂದ  30ಅಡಿಗಳಷ್ಟು ಎತ್ತರದ ದೈತ್ಯ ಅಲೆಗಳು ಕೊಳದಲ್ಲಿನ ವರ್ತುಲ ಅಲೆಗಳಂತೆ ಚಲಿಸಿ ಹತ್ತಿರವಿದ್ದ ಜಪಾನಿನ ತೀರಕ್ಕೆ ಅಪ್ಪಳಿಸಿದವು.ಈ ಅಲೆಗಳು ಮುಖ್ಯ ಭೂ ಪ್ರದೇಶದ ಒಳ ಪ್ರದೇಶಗಳಿಗೆ ಪ್ರವಾಹದಲ್ಲಿ ಮುನ್ನುಗ್ಗಿ ಎದುರಿಗೆ ಸಿಕ್ಕ ಎಲ್ಲ ವಸ್ತುಗಳನ್ನು ಅಂದರೆ, ಪ್ರಾಕೃತಿಕ, ಮಾನವ ನಿರ್ಮಿತ,  ಜೈವಿಕ,  ಅಜೈವಿಕ, ಯಾವ   ಭೆಧಭಾವ ವಿಲ್ಲದೆ ಎಲ್ಲವನ್ನು ಕೊಚ್ಚಿಕೊಂಡು ಹೋಗುತ್ತದೆ. ಭೂ ಶಿಲಾ ಸ್ಥರಗಳ ಜರುಗುವಿಕೆ, ಒಳ ಇಳಿಯುವಿಕೆ ಮುಂತಾದ ಚಲನೆಗಳು ನಿಧಾನವಾಗಿ ತಮ್ಮ ಸ್ಥಿರ ಸ್ಥಿತಿಗೆ ಬರುವ ಮುನ್ನ ಲಘುಕಂಪನಗಳು (After shocks) ಉಂಟಾಗುತ್ತಲೇ ಇರುತ್ತದೆ. ಈ ಲಘು ಕಂಪನಗಳು ಸ್ಥಿತಿಯನ್ನು ಇನ್ನಷ್ಟು ಹದ ಗೆಡಿಸುತ್ತದೆ.

ಉತ್ತರ ಅಮೇರಿಕ,ದಕ್ಷಿಣ ಅಮೇರಿಕ,ಏಶಿಯ,ಆಸ್ಟ್ರೇಲಿಯ ಮತ್ತು ಇತ್ತೀಚೆಗಷ್ಟೇ ಭೂಕಂಪ ಸಂಭವಿಸಿದ ನ್ಯೂಜಿಲೆಂಡ್ ಎಲ್ಲವೂ  ಈ ಪೆಸಿಫಿಕ್ ಪ್ರಮುಖ ಶಿಲಾಸ್ಥರದ ಅಂಚಿನಲ್ಲಿದ್ದು,ಈ ಪ್ರದೆಶಗಳೆಲ್ಲಾ ಭೂಕಂಪ ಹಾಗು ಜ್ವಾಲಾಮುಖಿಪೀಡಿತ ಪ್ರದೇಶಗಳಾಗಿವೆ. ಇಲ್ಲಿ ಭೂ ಗರ್ಭದ ಎಲ್ಲಾ ವಿದದ ಚಲನಾ ಚಟುವಟಿಕೆಗಳು ಉಂಟಾಗುತ್ತಲೇ ಇರುವುದರಿಂದ ಈ ಬೃಹತ ಪೆಸಿಫಿಕ್ ಶಿಲಾ ಚಪ್ಪಡಿಯನ್ನು ಪಸಿಫಿಕ್ ಜ್ವಾಲ ವರ್ತುಲ (pacific ring of fire) ಎಂದು ಕರೆಯುತ್ತಾರೆ. ಈ ಶಿಲಾ ಚಪ್ಪಡಿಯ ಅಂಚಿನಲ್ಲಿ ಕಂಡುಬರುವ ಎಲ್ಲಾ ದೇಶಗಳಲ್ಲೂ ಈ ರೀತಿಯ ಭೂಕಂಪ ಮತ್ತು ಜ್ವಾಲಮುಖಿಗಳು ಸಾಮಾನ್ಯ ವಾಗಿವೆ. ಜಪಾನ್ ಸಹಾ ಈ ವರ್ತುಲದಲ್ಲೇ ಬರುವುದರಿಂದ ಇದು ಭೂಕಂಪದ ದೇಶ ಎಂತಲೇ ಹೆಸರು ಮಾಡಿದೆ.

ಈ ಸುನಾಮಿಯ ಬಗ್ಗೆ ಹೆಚ್ಚು ಯಾವದೇಶದ ಜನರೂ ಸುನಾಮಿಯಬಗ್ಗೆ ಪರಿಚಿತರಾಗಿಲ್ಲ.ಅಷ್ಟೇ ಏಕೆ ಆ ಹೆಸರೇ ಕೇಳದೆ ಇರುವವರು ಸಾಕಷ್ಟು ಮಂದಿ ಇದ್ದಾರೆ. ಕೇವಲ ಹವಾಮಾನ ಶಾಸ್ತ್ರಜ್ಞರು, ಭೂ ವಿಜ್ಞಾನದ ಪಂಡಿತರು, ಪರಿಸರಸಂಬಂಧಿ ಹೋರಾಟಗಾರರು ಮತ್ತು ಜಪಾನ್ ಜನಗಲಿಗಷ್ಟೇ ಇದರ ಅರಿವು ಇತ್ತು.ನಮಗೆ ಇದರ ಬಗ್ಗೆ ಗೊತ್ತಾಗಿದ್ದು ಕೇವಲ 2004 ಡಿಸೆಂಬರ್ 26 ನೆ ತಾರೀಕು ನಮ್ಮ ದೇಶದ ಪೂರ್ವ ಕರಾವಳಿ ಇದರಿಂದ ಸಾಕಷ್ಟು ಹಾನಿ ಅನುಭವಿಸಿದಾಗ. ಅಂದಿನ ಟಿ.ವಿ. ಯಲ್ಲಿ ಬಿಟ್ಟರೆ ವಾದ ಚಿತ್ರಗಳನ್ನು ಕಣ್ಣಾರೆ ಕಂಡಾಗ ಅದರ ಬಗ್ಗೆ ತಿಳುವಳಿಕೆ ಬಂತು.ನಾವೇ ಪ್ರತ್ಯಕ್ಷದರ್ಶಿಗಳಾಗಿ ನೋಡಿದ ಚಿತ್ರಗಳೆಲ್ಲವೂ ನೆನಸಿಕೊಂಡರೆ ಮೈ ಜುಮ್ಮೆನ್ನುತ್ತದೆ.ಹಾಗೂ ಆ ಸುನಾಮಿ ಅಲೆಗಳು ಬರುವ ಮುನ್ನ ಯಾವುದೇ ರೀತಿಯ ಭಯಂಕರ ಮುನ್ಸೂಚನೆಯ ಭೂನಡುಕವನ್ನು ಯಾರು ಅನುಭವಿಸುವುದೆಲ್ಲ.ಭೂಕಂಪದ ಕೇಂದ್ರ ಇಂಡೋನೇಶಿಯ ಸಾಗರದಲ್ಲಿಹಲವು ಕಿ.ಮಿ. ಆಳದಲ್ಲಿ ಆದ ನಂತರ ಹಲವಾರು ಗಂಟೆಗಗಳ ಬಳಿಕ ನಾವು ವಿಪತ್ತಿನ ಯಾವ ಮುನ್ಸೂಚನೆಯೂ ಇಲ್ಲದೆ ಹಿಂದೆಂದೂ ಕಾಣದಂತಹ ಪ್ರಕೃತಿ ವಿಕೋಪವನ್ನು ಕಂಡೆವು.ಆ ಘಟನೆಯ ನಂತರ ಸಂಬಂಧಿಸಿದ ಅತ್ಯಂತ ಭಯಾನಕ ಹಾಗೂ ವಿನಾಶಕಾರಿ ಸುನಾಮಿಯೆಂದರೆ 2011ರ ಮಾರ್ಚ್ ರಂದು ಉಂಟಾದ ಜಪಾನಿನ ಪೂರ್ವೋತ್ತರ ಕಡಲಾಳದಲ್ಲಿ ಉಂಟಾದ ರಿಕ್ಟರ್ ಮಾಪಕದಲ್ಲಿ ದಾಖಲಾಗಿರುವ  ರಷ್ಟು  ತೀವ್ರತೆಯಭೂಕಂಪ.ಹಾಗೂ ಅದರಿಂದಾದ ಅನಾಹುತಗಳನ್ನೂ ಇಂದೂ ಸಹಾ ಪ್ರತಿ ನಿತ್ಯ ಪ್ರತ್ಯಕ್ಷವಾಗಿ ನೋಡುತ್ತಲೇ ಇದ್ದೇವೆ.

ಮೊನ್ನೆ ಸಂಬಸಿಧ ಭೂಕಂಪ ಮತ್ತು ಸುನಾಮಿಯ ಪರಿಣಾಮಗಳು ಬಗ್ಗೆ ಕೇವಲ್ ಜನಗಳ ಪ್ರಾನಹಾನಿಯನ್ನು ಮಾತ್ರ ಅಂದಾಜು ಸಿಕ್ಕಿದೆ. ಸುಮಾರು 21000 ಮಂದಿ. ಇದರಲ್ಲಿ ಕಾಣೆಯಾದವರು ಬಹಳ ಇದ್ದಾರೆಂದು ವರದಿ.ಇನ್ನು ಆಸ್ತಿ ಪಾಸ್ತಿಯ ಮೇಲಿನ ಹಾನಿಯನ್ನು ಲೆಕ್ಕ ಹಾಕಲು ಸಾಧ್ಯವಾಗಿಲ್ಲ.ಒಮ್ಮೊಮ್ಮೆ ಒಂದೊಂದು ಅಂಕಿ ಅಂಶ ಗಳನ್ನೂ ನೀಡುತ್ತಿದ್ದಾರೆ. ಕಾರಣ ಫುಕುಶಿಮದ ಅನುಸ್ಥಾವರಗಳು ಇನ್ನು ಪೂರ್ಣ ಹತೋಟಿಗೆ ಬಂದಿಲ್ಲ. ಅದರಿಂದ ಇನ್ನು ಮುಂದೆ ಆಗಬಹುದಾದ ನಷ್ಟಗಳನ್ನು ಈಗಳೇ ಹೇಳುವುದು ಕಷ್ಟ. ಹೆಚ್ಚು ಕಡಿಮೆ 300 ಬಿಲಿಯನ್ ಯು ಎಸ ಡಾಲರ್ ಗಳು ಎಂಬುದು ಅಂತರರಾಷ್ಟ್ರೀಯ ವಾಣಿಜ್ಯ ಪಂಡಿತರ ಅಭಿಪ್ರಾಯ.ಜಪಾನ ತನ್ನ ಮೊದಲಿನ ಸಾಮಾನ್ಯ ಜೀವನಕ್ಕೆ ಮರಳಲು ಇನ್ನು ಅನೇಕ ವರ್ಷಗಳೇ ತೆಗೆದುಕೊಳ್ಳಬಹುದು.(ಪ್ರಭಾವಕ್ಕೆ ಒಳಗಾದ ಎಲ್ಲ ಸ್ಥಳಗಳಿಗೆ ಈ ತಕ್ಷಣ ಹೋಗಿ ರಕ್ಷಣಾ ಕಾರ್ಯಗಳನ್ನು ಹಾಗೂ ಜನಗಳ ಮೂಲಭೂತ ಸೌಕರ್ಯಗಳನ್ನೂ ಒದಗಿಸುವುದು ಇನ್ನು ಸಾಧ್ಯವಾಗಿಲ್ಲ.ಕಾರಣ ಅಲ್ಲಿ ವಿಪರೀತ ಚಳಿ,ಹಾಗೂ ಮಂಜು ಸುರಿಯುತ್ತಲೇ ಇದೆ.)ಈ ಪ್ರಾಕೃತಿಕ ವಿಕೋಪದ ವಿನಾಶಕಾರಿ ಹಾನಿ ಹೆಚ್ಚು ಜಪಾನಿನ ಉತ್ತರಭಾಗಕ್ಕೆ ಆದರೂ ಇದರ ಪ್ರಭಾವ ಇಡೀ ವಿಶ್ವವನ್ನೇ ಕಾಡುತ್ತದೆ ಪರೋಕ್ಷವಾಗಿ. ಇನ್ನು ಫುಕುಶಿಮದ  ರಿಯಾಕ್ಟರ್  ಗಳಿಗೆ ಉಂಟಾದ ಹಾನಿಯನ್ನು ಸರಿಪಡಿಸಲಾಗದೆ ಇರುವುದರಿಂದ ಅವುಗಳಿಂದ ವಿಕಿರಣ ಸೋರಿಕೆಯಾಗುತ್ತಿದೆ.ಆ ವಿಕಿರಣ ತೀವ್ರತೆಯ ಬಗ್ಗೆ ಸಾಕಷ್ಟು ಗೊಂದಲಮಯ ವರದಿಗಳು ಬಂದಿವೆ. ಆದರೆ ಒಂದಂತೂ ನಿಜ ಈ ಅಣು ಸ್ಥಾವರದ 20ಕಿ.ಮಿ. ಸುತ್ತಲಿನ ಪ್ರದೇಶದಲ್ಲಿ ಅಲ್ಲಿಯ ನಿವಾಸಿಗಳನ್ನು ಈಗಾಗಲೇ ಸ್ಥಳಾಂತರ ಮಾಡಲಾಗಿದೆ. ಹಾಗು ವಿಕಿರಣದ ತೀವ್ರತ ಅಂತರರಾಷ್ಟ್ರೀಯ ನಿಯಮದ ಪ್ರಕಾರ 50 ಮೈಕ್ರೋ ಸೀವರ್ಟ್. ಅಂದರ ಸಹಜವಾಗಿ ನಮ್ಮ ಸೌರವಿಕಿರಣದಲ್ಲಿ ಇರುವ ಹಾಗೂ ಮಾನವನ ದೇಹ ತಡೆದುಕೊಳ್ಳಬಹುದಾದ ಪ್ರಮಾಣ ಇದು. ಆದರೆ ವಿಕಿರಣದ ಮಿತಿಯ ಪ್ರಮಾಣ ಜಪಾನಿನ ಕೆಲವು ಪ್ರದೇಶಗಳಲ್ಲಿ ನೂರಾರು ಪಟ್ಟು ಹೆಚ್ಚಾಗಿ ಕಂಡುಬಂದಿದೆ.ನಮ್ಮ ದೇಶ ಇದರಪ್ರಭಾವಕ್ಕೆ ನೇರವಾಗಿ ಒಳಗಾಗಲಾರದು.ನಾವು ಸುಮಾರು 6000 ಕಿ.ಮಿ. ದೂರದಲ್ಲಿದ್ದೇವೆ. ಭೌಗೋಳಿಕವಾಗಿ. ಹಾಗೂ ಅಗಾಧ ಭೂಪ್ರದೇಶ ನಡುವೆ ಇರುವುದರಿಂದ. ವಿಕಿರಣದ ಹಾನಿಯ ಪ್ರಭಾವ ಕಡಿಮೆ. ಆದರೆ ಈಗಾಗಲೇ ಹೇಳಿದಂತೆ ಜಪಾನಿನ ಆಸುಪಾಸಿನ ದೇಶಗಳಾದ ಚೈನಾ,ರಷ್ಯ,ದಕ್ಷಿಣ ಹಾಗೂ ಉತ್ತರ ಕೊರಿಯ ಇತ್ಯಾದಿ ರಾಷ್ಟ್ರಗಳ ಮೇಲೆ ಇದರ ಪರಿಣಾಮ ನೇರವಾಗಿಯೇ ಆಗಬಹುದು.ನಿಖರವಾಗಿ ಹೀಗೆ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ.ಮುಖ್ಯವಾಗಿ ನಿಧಾನವಾಗಿ ವೈಕ್ತವಾಗುವ ಅನೇಕ ಖಾಯಿಲೆಗಳಿಗೆ ತುತ್ತಾಗ ಬಹುದು ಹಾಗು ಕ್ರಮೇಣ ಸಾವು ಸಂಭವಿಸಬಹುದು.ಈಗ ವಿಷಯ ಬಿಸಿಯಾಗಿರುವುದರಿಂದಎಲ್ಲರೂ ಅದರ ಬಗ್ಗೆ ಅಲ್ಲಿಯ ಜನಗಳ ಕಷ್ಟ ಕಾರ್ಪಣ್ಯಗಳಬಗ್ಗೆ ಯೋಚಿಸುವ ಹೃದಯವಂತರಾಗಿದ್ದಾರೆ.ಆದರೆ ಈ ಹೃದಯವಂತಿಕೆ ಬಹುಕಾಲ ಉಳಿಯುವಸರಕಲ್ಲ. ಕಾರಣ ಎಲ್ಲವನ್ನು ಬೇಗ ಮರಿಸುವಂಥಹ ಮಾಹಿತಿ ತಂತ್ರಜ್ಞಾನದ ಸೃಷ್ಟಿ ಯಾಗಿದೆ.ಹೀಗಾಗಿ ಈ ಸಮಾಜದ ಮಾನವ ತಕ್ಷಣ ಪ್ರತಿಕ್ರಿಯಿಸಿ ಇನ್ನೊಂದರ ಬಗ್ಗೆ ಆಸಕ್ತಿಯನ್ನು ಶಿಫ್ಟ್ ಮಾಡಿಕೊಳ್ಳುತ್ತಾನೆ.ಈಗ ನೋಡಿ ಒಂದು ವಾರ ಹೆಚ್ಚು ಕಡಿಮೆ ಪ್ರಪಂಚದ ಎಲ್ಲಾ ಚಾನಲ್ ಗಳಲ್ಲಿ ಜಪಾನಿನ ಸ್ಥಿತಿ ಗತಿಯ ಬಗ್ಗೆ ಬಿತ್ತರಿಸಿ ಈಗ ಆ ಸುದ್ದಿ ಹಿಂದಕ್ಕೆ ನೂಕಲ್ಪಟ್ಟಿದೆಈಗ ಲಿಬಿಯದ ಜನಾಂಧೋಲನ ಮುಖ್ಯ ಸುದ್ದಿಯಾಗಿದೆ. ಆದರೆ ಜಪಾನಿನ ಸುನಾಮಿಗೆ ಒಳಗಾದ ಜನ ಇದನ್ನು ಮರೆಯಲು ಸಾಧ್ಯವಿಲ್ಲ. ಇನ್ನೂ ಅನೇಕ ಕಾಲ ಅವರು ಅತಂತ್ರದ ಬದುಕನ್ನೇ ಅವಲಂಬಿಸ ಬೇಕಾಗಿದೆ.ಎಲ್ಲವನ್ನು ಕಳೆದು ಕೊಂಡು ಬೀದಿಗೆ ಬಂದವರ ಸಹಾಯಕ್ಕಾಗಿ ಕೇವಲ ಅಲ್ಲಿನ ಸರ್ಕಾರವೇ ಯೋಜನೆಯನ್ನು ಹಾಕಿಕೊಳ್ಳಬೇಕು. ಸಧ್ಯ ಇದು ಅಲ್ಲಿ ಸಾಧ್ಯ. ನಮ್ಮ ಹಾಗೆ ಅಲ್ಲ. ಬೇರೆಯವರ ಸಾವಿನಲ್ಲೂ ತಮ್ಮ ಸ್ವಾರ್ಥ ಮೆರೆಯುವ ಅಮಾನವೀಯ ಬ್ರಷ್ಟಜನಗಳು ಅಲ್ಲಿ ಇಲ್ಲದೆ ಇರುವುದರಿಂದ ಪ್ರಭಾವಪೀಡಿತರ ಸ್ಥಿತಿ ಬೇಗ ಸುಧಾರಿಸುತ್ತದೆ ಎಂದು ನನ್ನ ಆಶಯ. ನಾವೇ ಕಣ್ಣಾರೆ ಕಂಡಿದ್ದೇವೆ 2004 ರ ಸುನಾಮಿಯಲ್ಲಿ ಇಡೀ ದೇಶವೇ ತಮ್ಮ ತನು,ಮನ,ಧನ ಸಹಾಯವನ್ನು ಸುನಾಮಿಪೀಡಿತ ಜನಗಳಿಗೆ ಕೊಟ್ಟರು.ಆದರೆ ಕಟುಕರು ಅದರಲ್ಲಿಯೂ ಹೊದಿಕೆ, ಹಚ್ಹಡಗಳನ್ನೂ, ಬಟ್ಟೆ ಬರೆಗಳನ್ನು ಮಾರಿ ಹಾಗು ಹರಿದುಬಂದ ಹಣವನ್ನು ಸಿಗಬೇಕಾದವರಿಗೆ ತಲುಪಿಸದ ಮಹಾ ಆಸೆಬುರಕ ಜನಗಳನ್ನು ಕಂಡಿದ್ದೇವೆ. ಅದರಲ್ಲೂ  ಕಮಿಷನ್ ಹೊಡೆದು ಮನೆಕಟ್ಟಿಸಿಕೊಂಡ ಧೀಮಂತರಿದ್ದಾರೆ ನಮ್ಮ ನಾಡಿನಲ್ಲಿ. ಇರಲಿ, ಅದು ಇಲ್ಲಿ ಅಪ್ರಸ್ತುತ.

ಪ್ರಾಕೃತಿಕ ವಿಕೋಪಗಳು ಸ್ವಾಭಾವಿಕೆ. ಅದು ನಿಸರ್ಗದ ಒಂದು ಪ್ರಕ್ರಿಯೆ. ಸದಾ  ನಡೆಯುತ್ತಲೇ ಇರಬೇಕು, ನಡೆಯುತ್ತಲೇ ಇರುತ್ತದೆ. ಅಮೇರಿಕ  ಅಥವಾ ಯಾವುದೇ  ಅತಿಪ್ರಭಲ  ರಾಷ್ಟ್ರಗಳು ಇದನ್ನು ತಡೆಯಲಾರರು. ಅತಿ  ವೃಷ್ಟಿ. ಬರಗಾಲ, ಜ್ವಾಲಾಮುಖಿ, ಭೂಕಂಪ, ಕಾಡ್ಗಿಚ್ಚು, ಭೂಕುಸಿತ. ಪ್ರವಾಹ ಇತ್ಯಾದಿ ಎಲ್ಲವೂ ಪರಿಸರ ಸಮತೋಲನದ ಒಂದು ಲಕ್ಷಣ. ಇದರೊಟ್ಟಿಗೆ ನಾವು ಇರಬೇಕು. ನಿಸರ್ಗದ  ಪ್ರಕ್ರಿಯೆಗಳ ಮುಂದೆ ನಮ್ಮ ಅನ್ವೇಷಣೆ , ಅವಿಷ್ಕಾರಗಳು  ಎಲ್ಲವೂ  ಅಸಂಬದ್ಧ ಎನಿಸುತ್ತದೆ. ಈ   ಭೂ  ಗ್ರಹ  ಇನ್ನೂ  ಸ್ಥಿರ ವಾಗಿಲ್ಲ. ಈ  ನಮ್ಮ  ಭೂಮಿ  ಅಸ್ಥಿರ ಹಾಗೂ ತುಂಬಾ ಅಶಾಂತ ಸ್ಥಿತಿಯಲ್ಲಿ ಇದೆ. ಭೂಕಂಪ, ಜ್ವಾಲಾಮುಖಿ ಇವೆಲ್ಲವೂ ಇನ್ನೂ ಸ್ಥಿರಗೊಳ್ಳುತ್ತಿರುವ ಈ ಭೂ ಗ್ರಹದ ಆಗು ಹೋಗುಗಳು.ಈ ನೈಸರ್ಗಿಕ ಪ್ರಕ್ರಿಯೆಗಳಿಗೆ ಪ್ರಭಾವಗಳಿಗೆ ದೇಶಗಳ ಗಡಿಗಳು ಗೊತ್ತಿರುವುದಿಲ್ಲ.ಜನ,ಜೀವಿ,ನಿರ್ಜೀವಿ, ಯಾವುದರಲ್ಲೂ ತಾರತಮ್ಯ ತೋರುವುದಿಲ್ಲ. ಇದರ ಪರಿಣಾಮ ಎಲ್ಲದರ ಮೇಲು ಒಂದೇ.!!! ವಿನಾಶ. (ನಾವು ಇದಕ್ಕೆ ವಿಪತ್ತು, ಆಪತ್ತು ಎಂದು ವಿಧ ವಿಧವಾಗಿ ನಾಮ ಕರಣ ಮಾಡಿದ್ದೇವೆ).

ಪ್ರಾಕೃತಿಕ ವಿಕೋಪಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.ಆದರೆ ಈ ವಿಕೋಪಗಳ ಹಿನ್ನೆಲೆಯಲ್ಲಿ ನಾವು ಕೈ ಹಾಕಿ ಆದರೆ ಪ್ರಭಾವನ್ನು ನೂರು  ಪಟ್ಟು  ಹೆಚ್ಚು ಮಾಡಿದ್ದೇವೆ ಎಂದರೆ ತಪ್ಪಗಲಾರದು. ಉತ್ತಮ  ಉದಾಹರಣೆಯಂದರೆ, ಈ  ತಿಂಗಳಲ್ಲಿ ಉಂಟಾದ ಭೂಕಂಪ ಮತ್ತು ಅದನ್ನು ಹಿಂಬಾಲಿಸಿದ ಸುನಾಮಿ.ನಿಜ,ಮಾನವ ನಿರ್ಮಿಸಿದ ಎಲ್ಲ ರಚನೆಗಳು ನುಚ್ಚು ನೂರಾದವು. ದಿಕ್ಕಾಪಾಲಾದವು.ಅಪಾರ ಪ್ರಾಣಹಾನಿ ಯಾಯಿತು. ಅಷ್ಟಕ್ಕೇ ಮುಗಿಯುತ್ತಿತ್ತು ಅದರ ಪರಿಣಾಮ. ಆದರೆ ಈ ಅಣುಸ್ಥಾವರದಿಂದ ಈ ವಿಕೋಪಕ್ಕೆ ವೈಜ್ಞಾನಿಕ ಅವಿಷ್ಕಾರಗಳನ್ನು ವೇಗವರ್ಧಕವಾಗಿ ಒದಗಿಸಿದ್ದೇವೆ.ನಾವು ವಿಕೋಪದ ತೀವ್ರತೆಯ್ನು, ಹೆಚ್ಚಿಸಿ, ಉಂಟಾಲಾಗಲಿರುವ  ದುರಂತದ  ಸಮಯವನ್ನು ಮೊಟಕು ಗೊಳಿಸಿದ್ದೇವೆ.ಆದುದರಿಂದಲೇ ಇನ್ನು ನಾವು ಕಾದು ನೋಡ ಬೇಕಿದೆ ಏನಾಗುವುದೆಂದು? ಮುಂದಾಗುವ ಭೀಕರ ದುರಂತವನ್ನು..

No comments:

Blog Archive