Thursday, June 27, 2013

ಆಗುಂಬೆಯ ಅಮಲು ಅಡರಿಕೊಂಡಿದೆ ಇನ್ನು
ಎಲ್ಲಾ ಜಂಜಾಟದಿಂದ ದೂರ ಬಯಸಿದ ಪೆನ್ನು.

ಆಕಾಶದ ಹಾಳೆಯ ಮೇಲೆ ಮಳೆಕುಂಚ ಬಿಡಿಸುವ 
ಹಿಮರಾಶಿ ಬಿಳಿ
ಅರ್ಥವಾಗದ ನೂರಾರು ಬಣ್ಣ
ಉತ್ಸಾಹಕ್ಕೆ ಇರಬಹುದೇ ಛಳಿ?

ದಿಗಂತಚೌಕಟ್ಟಿಗೆ ಸಸ್ಯರಾಶಿಯ ಕಿರೀಟ
ದೂರ ಸರಿಯುವ ಬೆಟ್ಟ ಛಾಯೆಯ ಮಾಟ
ಮಾಯೆ.

ಇರುವನ್ನೇ ಮರೆಸುವ ವಿಸ್ತಾರ,
ಏಕಾಂತತೆ,
ಕಡೆಯಲಾಗದ ಆಳ ಸಾಗರ
"ನೀನ್ಯಾರು" ಎಂದು ಯಾರದೋ ದೂರದಿಂದ ತೇಲಿಬಂದ ಕೂಗು
ಮಳೆಯಲ್ಲಿ ಕರಗಿ ಅಸ್ಪಷ್ಟವಾದಾಗ
ಗೊಂದಲದಲ್ಲಿ ಬೆಚ್ಚಿಬಿದ್ದು ತಡವಡರಿಸಿದ
ಪದವನ್ನೇ
ನಾನು ಮರೆತಿದ್ದೇನೆ.

No comments:

Blog Archive