ಹೀಗೊಂದು ಸಾವು.

ಸಾವಿಗೂ ಒಂದು ಘನತೆ
ಅವಿರೋಧವಾಗಿ ಗಳಿಸಿದ ಗೌರವ, ಹಿರಿಮೆ
ಆಳಲಿ ಬಿಡಿ ತನ್ನದೇ ಏಕಾಂತತೆ
ಈ ಮಹಾಜಾತ್ರೆಯಲ್ಲಿ.
ಅನುಭವಿಸಲಿ ಕೊಡಿ ಮರಣ ತನ್ಮಯತೆ.

ಸಾವೊಂದು ಹರಡುವ ಕಾಡ್ಗಿಚ್ಚು
ಬೆಚ್ಚನೆಯ ಜನಪ್ರಿಯತೆಯ ಕಿಡಿತಾಕಿ
ಬಿಡುವಿಲ್ಲದ ಸುದ್ದಿಬಿತ್ತರಿಸಲಿದೆ ದಿನಪೂರ ಸುದ್ದಿ
ನನಗೆ, ನಿಮಗೆ ಇರಬಹುದು ಸಂತಾಪ ಸುದ್ದಿ
ಬದುಕುಳಿದವರಿಗೆ ಆಗಬೇಕಿದೆ ಶುಧ್ದಿ.
ಅಶ್ರುತರ್ಪಣ ಪ್ರದರ್ಶನ ಸಂದರ್ಶಕನ ಕೋರಿಕೆ.
ಮೇಕ್ ಅಪ್ ಹುಡುಗನ ಯಾಂತ್ರಿಕ ತಯಾರಿ
ನಿರ್ಲಿಪ್ತ ಛಾಯಗ್ರಾಹಕ ಕೋನ, ಬೆಳಕುಗಳ ಅಳೆಯುತ್ತಾನೆ
ಸಾವಿನ ಗೇಲಿಮಾಡಲು,

ದುಖತಪ್ತ ಜನ ನೋಡುತ್ತಾರೆ ಗಡಿಯಾರದ ಮುಳ್ಳು
ಪದೇ ಪದೇ.. ಜಪಿಸಿ
ನಮಗೆ ಗೊತ್ತಿರದ ಮಂತ್ರ
ಜಡತೆಯ ಎಳೆದಾಡುವ ಧಾರ್ಮಿಕ ತಂತ್ರ.

ಉಯಿಲು ಬರೆದಿರಲಿಲ್ಲ
"ತನ್ನ ಚಿತಾಭಸ್ಮಕ್ಕೆ ವೃಂದಾವನ ಬೇಡ"
ಮರೆತಿದ್ದ ಚಿರಂಜೀವಿ ತನ್ನ ವಂಶವಾಹಿ ಶಾಪ
ಸಾಮಾನ್ಯ ಬದುಕನ್ನು ಅಸಮಾನ್ಯ ಮಾಡಿದ ಭೂಪ
ಈಗ ಸಿಕ್ಕಿದೆ ಮಾಫಿ
ಮನೆಹೊರಗೆ ಪ್ರಕಟ ಕುರುಳು ಕಟ್ಟಿಗೆ ಧೂಪ

ಆಗಲಿದ್ದಾನೆ ಸಧ್ಯದಲ್ಲೇ ಗೋಡೆಯಮೇಲೆ
ತೂಗಾಡುವ ಸ್ಥಬ್ಧ ಭಾವಚಿತ್ರ
ನೆನ್ನತಾನೆ ಚೈತನ್ಯದ ಚಿಲುಮೆ
ಕಾಯುತ್ತಿದೆ ಹತ್ತಿರದಲ್ಲೇ ಚಿತೆಯ ಕುಲುಮೆ
ನಗ್ನತೆಯ ನೆನಸಿ,
ಬಲವಂತ ಪುಣ್ಯಪ್ರಾಶನ ಮುಚ್ಚಿದ ಬಾಯಿಗೆ
ಸ್ಥಿತಪ್ರಜ್ಞ ನಿಶ್ಚಲವಾದ ಕಲ್ಲುಬಂಡೆ
ಋಷಿಮಲಗಿರುವ ಬಿದಿರಿನಹಾಸಿಗೆ
ಆದರೆ ಬೀಷ್ಮ ಅಗಿರಲ್ಲಿಲ್ಲ ಆ ಶರಶೈಯೆ ಯಲ್ಲಿ.

ಬಂತು ಸಾವಿನ ಬಂಡಿ ಸಕಲ ಸಿದ್ದತೆಯಲ್ಲಿ
ದರ್ಬೆ,ಚಂಬು, ಊದಿನಕಡ್ಡಿ,
ಎಲ್ಲಪರಿಕರ ಸಿಕ್ಕುವ ಸಂತೆಯಲ್ಲಿ
ಚಾಲಕನ ಪಕ್ಕ,
ಮೇಲೆ ಕಳಿಸುವ ಗಂಡು ಏಜೆಂಟ್ ಕೂತು
ಹುಡುಕುತ್ತಾನೆ ಅಗಲಿದ ನೆನಪುಗಳ ಮಡಿಕೆಯಲ್ಲಿ
ಕುಳಿತಿದ್ದಾರೆ ಚಿತ್ರಗುಪ್ತರು ಪಕ್ಕದಲ್ಲೇ
ಕಾಯುತ್ತಿದ್ದಾರೆ ಸಾವನ್ನು ಪಾಳಿಯಲ್ಲಿ
ಜಯಘೋಷ ಬೀದಿಕೊನೆಯಲ್ಲಿ ರಣಿಸಿದಾಗ
ಅಲ್ಲಲ್ಲಿ ಬಿಕ್ಕಳಿಕೆ,

ರಾಮಜಪದಲ್ಲೇ ಯಶಸ್ವಿ ಉಡಾವಣೆ
ಹೊಗೆಯ ಬೇಗೆಯಲ್ಲಿ ವಿದಾಯಹೇಳುವ ಆತ್ಮ
ಹಾರಲಿದೆ ಸಾವಕಾಶದನಿರ್ವಾತದಲ್ಲಿ
ಹೂತ ತಾತ್ಕಲಿಕ ವಿಳಾಸಹುಡುಕುತ್ತೇವೆ
ಮತ್ತೆ,ಮತ್ತೆ.....

Comments

Popular posts from this blog

ಕಾಗೆ....