Friday, January 3, 2014

ಹುತ್ತ

 

 
 
ಪರಿಚಯದ ಹುತ್ತದಲಿ
ನೂರಾರು ಜೀವಿಗಳು
ಕೀಟ ಸಾಮ್ರಾಜ್ಯಕೆ ಬಂದು
ತಳಊರುವ ಉಗ್ರಗಾಮಿ ಉರಗ
ಸುರಳಿ ಕೊಳವೆಯ ಒಂಟಿ ಕುಂಟ ಸಲಗ
ಅಧಿಕಾರ ಚಲಾಯಿಸುವ
ಬುಸುಗುಡುವ ನಾಗರಹಾವು
ಚಕ್ರಾಧಿಪತಿ
ಇಲ್ಲಿ ಎಲ್ಲರೂ ತಮ್ಮ ಪಾಡಿಗೆ ತಾವು,


ಇರುವೆಬಾಕ ಎಕಿಡ್ನಾ ಹೊಂಚುಹಾಕುವ ಅಂಗ ರಕ್ಷಕ
ನುಸಿಯ ಎಂಜಲ ಫೆವಿಕಾಲ್ ನಿಂದ
ಪೇರಿಸಿದ ವ್ಯಾಟಿಕನ್ ಚರ್ಚ್ ಗೋಪುರ
ಒಳಗೆ ಇರಬಹುದು ಶಾಂತಿ ಧೂತ
ತನ್ನದೇ ವಿಶಿಷ್ಟ ಲೋಕದಲಿ
ಸ್ವಾಭಾವಿಕ ನಿಯಂತ್ರಣದ ಶಾಂತಿ ಜಪದಲ್ಲಿ.
ಸಮಜೀವನ, ಸಮತೋಲನ ಆಚಾರದಲ್ಲಿ

ನಿಲ್ಲದ ಇರುವೆ,ಗೊದ್ದ,ಕೆಂಜಿಗೆಗಳ ಚಟುವಟಿಕೆಗೆ
ಚುನಾಯಿತ ಪ್ರತಿನಿಧಿ ಸರ್ಪರಾಜ
ಮೌನಿ, ಆದರೂ ಕೃತಜ್ಞ
ತನ್ನ ಭವ್ಯ ಅರಮನೆಯ ನಿರ್ಮಾಣದ ರೂವಾರಿಗಳಿಗೆ,
ಒಮ್ಮೊಮ್ಮೆ ಸ್ವಜಾತಿ ಭಕ್ಷಕರು,
ಸಮಯ ಬಂದಾಗ ಕಾಳಿಂಗನ ಹಾಗೆ
ಅಸಾಹಾಯಕರು ನಾವು
ಹೊಂದಾಣಿಕೆ ಸಹಜ
ಚೇಳು, ಹಲ್ಲಿಗೆ ವ್ಯತ್ಯಾಸ ತಿಳಿಯದ
ಅಜ್ಞಾನಿಳು, ಹಗ್ಗಕ್ಕೇ
ಹೈರಾಣಾಗುವ ಇವರಿಗೆ ತಿಳಿದಿಲ್ಲ.
ಜ್ಯುರಾಸಿಕ್ ಯುಗದಲ್ಲಿಇರಲೇ ಇಲ್ಲ ನನ್ನ ಜನ.

ವಿಪರ್ಯಾಸ, ಕ್ಷೀರ ಮಹಾಕಲ್ಪದಲ್ಲಿ
ನಾನಿನ್ನೂ ಜೀವಂತ
ಈಗ ಆರಂಭ ಕಾಂಡವ ದಹನ
ಹರಿಗೆ ಮನೆಯಲ್ಲಿ...

No comments:

Blog Archive