ಇತ್ತೀಚೆಗೆ ಫೇಸ್ ಬುಕ್ ನಲ್ಲಿನ ನನ್ನ ಕಿರಿಯ ಮಿತ್ರರರ ವೈವಿದ್ಯಮಯ ಸಾಲುಗಳು, ಮಿನಿಕವನ, ಹನಿಕವನ, ಸಾಲು ಕವನ ಮತ್ತು ಹೈಕು ಇತ್ಯಾದಿ ಖುಷಿ ಕೊಟ್ಟಿದೆ. ಖುಶಿಜಾಸ್ತಿಯಾಗಿ ವಿಚಿತ್ರವಾಗಿ ನನ್ನನ್ನೂ ಪ್ರಚೋದಿಸಿತು. ಪ್ರಯತ್ನಿಸುವ ಎಂದು ಯೋಚಿಸಿದಾಗ ಹರಿದು ಬಂದ.... ಸಾಲು
" ಬತ್ತಳಿಕೆಯಲಿ ಬಾಣವಿದ್ದು, ನೆಲಕಚ್ಚಿದ ರಣಭೂಮಿಯಲ್ಲಿ ಕರ್ಣ"
ಯಾಕೋ ತೃಪ್ತಿಯಾಗಲಿಲ್ಲ.... ಸ್ವಲ್ಪ ಇಂಪ್ರೂವ್ ಮಾಡೋಣ ಅಂತ ಹೊರಟಾಗ ನನ್ನ ಕವನ ಪಡೆದಿರುವ ರೂಪ.. ಅಂದಹಾಗೆ ಒಪ್ಪಿಕೊಳ್ಳಲೇ ಬೇಕಾದ ಸಂಗತಿ..... ಕರ್ಣನ ಪಾತ್ರ ನನಗೆ ಬಲು ಇಷ್ಟ....

ಕರ್ಣ...೨


 
 
ಬೆಳಕರಾಜನ ಅಬೀಜಸಂತಾನ ವಾದರೂ, ಹೊಕ್ಕಳುಬಳ್ಳಿ ಕಳಚಿದ್ದು ಅವಿವಾಹಿತ ಪ್ರಿಥ
ಹೆರಿಗೆಯಹಂಗನ್ನು ನೀರಲ್ಲಿ ತೇಲಿಬಿಟ್ಟ ಯುವತಿ ಕಳಂಕಿತಳಾಗಲಿಲ್ಲ,ನಿಜ, ಆದರೆ...
ನದಿಯಲ್ಲಿ ತೇಲುತ್ತಾ ದಡಸೇರಿ ಅಸ್ತಿತ್ವಪಡೆದದ್ದು ಮಾತ್ರ ಸೂತಪುತ್ರ.

ಬೆಸ್ತನಿಗೆ ವಿದ್ಯೆಯ ಅಮಲು, ಕಲಿಯಬೇಕಿತ್ತು ನಿಶೇಧಿತ ಧನುರ್ವಿದ್ಯೆ
ಆರಿಸಿಹೊರಟ ಶಿಶ್ಯ,ಎಲ್ಲರಿಂದ ತಿರಸ್ಕೃತ, ಕ್ಷತ್ರಿಯದ್ವೇಷಿ ಪರಶುರಾಮ
ಒಪ್ಪಿದ ನಾಜೂಕು ಬ್ರಾಹ್ಮಣ, ಸೂಕ್ಷಮತಿಗೆ ಧಾರೆಯರೆದ ತನ್ನೆಲ್ಲ ವಿದ್ಯೆ

ನಿಸ್ವಾರ್ಥ,ನಿಜಗುರು ಭಕ್ತ, ಕಂಡಾಗ ರಕ್ತ ಕಂಪಿಸಲಿಲ್ಲ, ತೊಡೆ ಮಿಸುಗಾಡಲಿಲ್ಲ
"ಕೋತಿಹುಣ್ಣು,ಬ್ರಹ್ಮರಾಕ್ಷಸ" ಬ್ರಾಹ್ಮಣ ನೋವು ನಿರೋಧಕ ಶಕ್ತಿಅರಿತ ಅಚಾರ್ಯ
ಅನಾಮಧೇಯ ಜೀವ, ಗುರುಭಕ್ತಿಯ ಕಾಣಿಕೆಗೆ ಪಡೆದ ಅಪರೂಪದ ವರ,ಶಾಪ

ಅಂತರ್ಮುಖಿ, ಅನಾಥ, ಬಯಸಿ ಜೀವಿಸಿದ್ದು ಗಾಂಡೀವಿಯೊಡನೆ ಒಂದು ದ್ವಂದ್ವ ಕಾಳಗ
ವಲಸೆ ಬಂದಾಗ ಆಯೋಜಿತವಾಗಿತ್ತು ರಾಜಕುಮಾರರ ಯುದ್ಧಕೌಶಲ್ಯ ಪ್ರದರ್ಶನ
ವಿಜಯಿ ಯಾರೆಂದು ತೀರ್ಮಾನಿಸಿ ಆಗಿತ್ತು ರಾಜಗುರು,ಪ್ರಕಟಣೆಯೊಂದೆ ಬಾಕಿ ಉಳಿದಿತ್ತು

ಸೋಜಿಗ ಕಾದಿತ್ತು, ತೀರ್ಪು ಬದಲಿಸಬೇಕಿತ್ತು ಅಲ್ಲಿ ಆಗಂತುಕ, ಅನಾಮಧೇಯ
ಅಪ್ರತಿಮ ಪ್ರತಿಭೆ ಮಿಂಚಿತ್ತು, ಅಚಾರ್ಯರ ಆಪ್ತಶಿಷ್ಯನೇ ಗೆಲುವ ಸೂಚನೆ ಮೊದಲಿತ್ತು.    
ಅನಿರೀಕ್ಷಿತ ಪ್ರಜ್ಜೆತಪ್ಪಿದ ರಾಜಮಾತೆ, ತಾಯ ಕರಳುಕಿಚ್ಚಿನಲಿ ಜ್ವಾಲೆಕಾಣದಾಗಿತ್ತು

ದ್ವೇಷಾಗ್ನಿಯಲಿ ಬೆಂದು, ಈರ್ಷೆಯಲಿ ಸೋತು ಆಗಂತುಕನ ಅಪ್ಪಿದ ಕುರುಕುಮಾರ
ಘೋಷಿಸಿದ ತನ್ನಾಪ್ತಮಿತ್ರ ಅಂಗರಾಜನೆಂದು, ಕುಸಿದಿದ್ದ ಕರ್ಣ ಋಣಭಾರದಡಿಯಲ್ಲಿ
ತಲೆಬಾಗಿಸಿನಿಂತಿದ್ದ, ತನ್ನತಂದೆಯ ಅಪ್ಪುಗೆಯಲ್ಲಿ,ಒಪ್ಪಿಕೊಂಡಿದ್ದ ತನ್ನಹುಟ್ಟು

ವನವಾಸದ ಕೊನೆಹಂತ ಪಾಂಡವರಿಗೆ , ಸ್ವಯಂವರ ಆಯೋಜನೆ ಪಾಂಚಾಲಿಗೆ
ಮುಲಾಜಿಗೆ ಮಣಿದಮಿತ್ರ, ಹೊರಟಿದ್ದ ನಿರ್ಲಿಪ್ತ, ಏನೂ ಅರಿವಿಲ್ಲದೆ ತನ್ನ ಪಾತ್ರ
ಬಿಲ್ಲು ಏರಿಸಿದರೂ, ಗುರಿಇಡಲಾದ ಹತಭಾಗ್ಯ,ಸಂಯಮದಲೇ ಸಹಿಸಿದ ರಾಜಾವಮಾನ.

ಇಂದ್ರನ ಬಡಬ್ರಾಹ್ಮಣವೇಶಕ್ಕೆ ಅಡುವಿಟ್ಟಾಗಿದೆ, ಕರ್ಣಕುಂಡಲ, ವಜ್ರಕವಚ
ರಕ್ಷಣಾಕವಚ ಕಳಚಲಾಗಿದೆ, ಒಂದಾದಮೇಲೊಂದು, ಗುರುಶಾಪ... ನೆನಪಿಗೇ ಬ್ರಹ್ಮಾಸ್ತ್ರ!
ಕೇಳುವವರಿಗೆ ಕೊಡುವುದು ಇನ್ನೂ ಬಾಕಿಇದೆ ದಾನಶೂರ. ಶೇಷಪ್ರಶ್ನೆಗಳ ರಾತ್ರಿ ಅಸಂಖ್ಯಾತ

ಹುಟ್ಟು ದ್ವೇಶವನ್ನೂ ಅನುಭವಿಸಲಾಗದ ಎಡಬಿಡಂಗಿ, ಪರಮಶತ್ರು ತನ್ನದೇರಕ್ತ
ಆದರೂ ತೀರಿಸಬೇಕಿದೆ ಹೆತ್ತವಳ ಋಣ, ಕೊಟ್ಟೇಬಿಟ್ಟ ಮಹರಾಯ ವಚನ
ಇಬ್ಬರಲಿ ಒಬ್ಬರೂ ಬದುಕುಳಿಯಬಹುದು, "ಮರುಬಳಕೆ ನಿಶೇಧ ತನ್ನಬತ್ತಳಿಕೆಯಲ್ಲಿ" 

ಧರ್ಮ ಸಂಕಟದಲ್ಲಿಪಕ್ಷಬದಲಿಸದ ಅಥಿರಥ ಮಹಾರಥರ ರಾಜಭಕ್ತಿಯ ಪೋಷಣೆ
ಅರಮನೆಯಲ್ಲೇ ಸೆರೆಯಾಗಿ, ಕಾದ ಸೇನಾಪತಿ ಮಿತ್ರನ ಸಾಂಗತ್ಯದಲ್ಲಿ, ಅಂಗರಾಜ
ಮುಂದುವರೆದ ಯುಧ್ದ, ಕಾಯುತ್ತಿದ್ದ ತನ್ನ ಸರದಿಗಾಗಿ ವಿಹ್ವಲ ಮನ ಕೋಲಾಹಲದಲ್ಲಿ

ಕೃಷ್ಣನ ಕುಯುಕ್ತಿ ಫಲಕೊಟ್ಟಿತು, ಚಿರಂಜಿವಿ ಭೀಷ್ಮ, ಮಲಗಿದ ಶರಶಯ್ಯೆಯಲಿ
ಮರಣಮಹೂರ್ತ ನಿರ್ಧರಿಸುವಾಗ ತಿಳಿದಿರಲಿಲ್ಲ ಗೆಲುವು ಯಾರದೆಂದು
ದ್ರೋಣರಿಗೂ, ಮಾಯಾಜಾಲ ಆಕ್ರಮಿಸಿಪಡೆದಿತ್ತು,ಪುತ್ರವ್ಯಾಮೋಹ

ಪದವಿರದ ಭಾವನೆಗಳಲ್ಲಿ, ವ್ಯಘ್ರ ಮನೋಬಲದಲ್ಲಿ ಮುನ್ನಡೆದ ಸೇನಾಪತಿ
ಋಣಭಾರ ತೀರಿಸಲು, ಹೊರಲಾರದ ಗೆಲುವಿನಹೊರೆ ಹೊತ್ತು ರಣರಂಗಕೆ,
ಅನ್ಯ, ಧನ್ಯ,.ಮರೆತ ತನ್ನ ಭ್ರಾತೃತ್ವ, ಸೇನೆ ಮುನ್ನಡೆಸಲು ರಥವೇರಿದ ದೃಷ್ಟಿಶೂನ್ಯ.

ಸಾರಥಿ ಶಲ್ಯ, ಹಿಯಾಳಿಸಿ, ರಣರಂಗ ಬಿಟ್ಟೋಡಿದ್ದು ಪೂರ್ವ ನಿಯೋಜಿತ
ಸರ್ಪಾಸ್ತ್ರ ಗುರಿತಪ್ಪಿ ಮರಳಿ, ಕೇಳಿ,ಕೇಳಿ, ಸೇನಾನಿ ನಿರ್ಲಕ್ಷಕ್ಕೆ ಬೇಸತ್ತು ಬತ್ತಳಿಕೆ ಸೇರಿತ್ತು
ಅಮಲಿನಲಿ ದಿಕ್ಕುತಪ್ಪಿದ ಅಶ್ವ, ಯೋಧನಿಗೆ ಸವಲಾಗಿ, ನೆಲವೆಲ್ಲ ರಕ್ತಮಯ

ಆಯತಪ್ಪಿ, ರಥ ಹೂತಾಗ, ಚಕ್ರ ಯಾವುದೋ ಕೋನದಲಿ ಅನಾಥ ವಾಲಿತ್ತು
ಹತಭಾಗ್ಯ ಹತಾಶೆಯಲ್ಲಿ ಕಂಡ ನೋಟ ಮಾತ್ರ ತನ್ನಬದುಕಿನ ಸಂಕಿಷ್ತ ಕಿರು ಚಿತ್ರ
ಯುದ್ದ ನಿಯಮದ ಪೇಚಿಗೆ ಸಿಕ್ಕ ತನ್ನತಮ್ಮನ ಕಿವಿಯಲಿ ಸಾರಥಿ ತುಂಬುತಿದ್ದ

ಬತ್ತಳಿಕೆಯಲಿ ಬಾಣವಿತ್ತು,ಬ್ರಹ್ಮಾಸ್ತ್ರ ಹೂಡುವ ತಂತ್ರ ಕಲಿತಾಗಿತ್ತು,
ಸೂತ್ರಮಾತ್ರ ಮರೆತಾಗ ಗುರುಶಾಪ ಫಲಿಸಿತ್ತು, ಅಸ್ತ್ರದೇಹ ಹೊಕ್ಕಾಗಿತ್ತು
ದೇಹ ನಡುಗಿ ನಿಶ್ಚಲವಾಗಿ, ಶೂನ್ಯ ನೋಟ ಸ್ಥಿರವಾಗಿ, ಅರ್ಜುನ ಕೈ ಕಂಪಿಸುತಿತ್ತು,

ಯಥಾ ಪ್ರಕಾರ ಕೃಷ್ಣನಮುಗುಳುನಗೆ ತೇಲುತ್ತಿತ್ತು ಅಲೆ,ಅಲೆಯಾಗಿ
 
 
 

Comments

Popular posts from this blog

ಕಾಗೆ....

Reunited...at last..