ಮರಣದಂಡನೆ.


 

ಇಲ್ಲೊಂದು ನ್ಯಾಯಲಯವಿದೆ, ವಿಚಿತ್ರ,ವಿಶೇಷ,ವಿಶಿಷ್ಟ

ಅನ್ನಿಸುವುದು ನಮಗೆ ಸ್ಪಷ್ಟ

ತೀರ್ಪು ಕೊಡುವುದು,ಪ್ರಕಟಿಸುವುದು ನ್ಯಾಯಮೂರ್ತಿಗಳೇ

ಇಲ್ಲಿಗೆ ವೈವಿದ್ಯಮಯ ಮೊಕದ್ದಮೆಗಳು ಧಾಖಲಾಗುತ್ತವೆ

ದೂರುದಾರ, ಕಕ್ಷಿದಾರ, ಸಾಕ್ಷಿಗಳೆಲ್ಲಾ ಗೊಂದಲಮಯ

ಕೆಲವು ಕೊಲೆ ಮೊಕದ್ದಮೆ ದೂರುಗಳಲ್ಲಿ ಅಪರಾಧಿಗೆ

ಕರುಣೆತೋರದೆ ಮರಣದಂಡನೆ ತೀರ್ಪು ನೀಡಲಾಗುತ್ತದೆ.

ಅದು ಅಂತಹ ವಿಶೇಷವಲ್ಲ...ಗೊತ್ತು.

ನಮ್ಮಸಮಾಜದಲ್ಲಿ ಹೀಗೆ ಅಲ್ಲವೇ?

ಆದರೆ ಈ ಅಪರಾಧಿಕ ನ್ಯಾಯಾಲಯಕ್ಕೆ ಬರುವ ಅಪರಾಧಿ

ಶಿಕ್ಷೆಯ ನಿಖರತೆಯಿಂದ ವಂಚಿತ

ಅಪರಾಧಿಗೆ, ಗಲ್ಲು ಕಂಭವೇ, ವಿಷಪ್ರಾಷನೆವೇ? ಎಲೆಕ್ಟ್ರಿಕ್ ಕುರ್ಚಿಯೇ

ಪ್ರಸ್ಥಾಪವಾಗದೆ ಮುಗಿಯುವುದು ವಿಶೇಷ

ಈ ನ್ಯಾಯಾಲಯ ನೀಡುವ ತೀರ್ಪಿನಲ್ಲಿ

ಶಿಕ್ಷೆಯ ವಿಧಾನ, ದಿನಾಂಕ,ಸಮಯ ಎಲ್ಲವೂ ಅಸ್ಪಷ್ಟ

ತಮ್ಮ ಅಧಿಕಾರವ್ಯಾಪ್ತಿಗೆ ಮೀರಿದ್ದು ಎಂಬ ಜಾರಿಕೊಳ್ಳುವ ಜಾಣ ಉತ್ತರ

ಯಾರಾದರೂ ಗಟ್ಟಿಸಿ ಪ್ರಶ್ನೆಕೇಳಿದಾಗ ಮಾತ್ರ

ತಮ್ಮ ಮರಣದಂಡನೆ ತೀರ್ಪಿಗೆ ಸರಿಯಾದ ಅಧಾರ ಒದಗಿಸಿ

ದೂರುದಾರನಿಗೆ ವಿವರಿಸಿ,ಸಂಭಂದಪಟ್ಟವರಿಗೆ

ಅರ್ಥವಾಗದ, ಎಂದೂ ಕೇಳಿರದ ಪದಗಳಿಂದ ಸಮಜಾಯಸಿ ಕೊಟ್ಟರೆಂದರೆ

ಮುಗಿಯಿತು. ಅವರ ಕೆಲಸ.

ಇನ್ನೂ ಇರುವುದು ಸೆರೆಮನೆಯಲ್ಲಿ ವಿಶ್ರಾಂತಿ

ಶಿಕ್ಷೆ ಅನುಭವಿಸುವ ತನಕ

ಇಲ್ಲಿ ಹೊರಬಂದ ತೀರ್ಪನ್ನು ಯಾರುಪ್ರಶ್ನಿಸುವ ಹಾಗಿಲ್ಲ

ಒಮ್ಮೆ ತುಲನಾತ್ಮಕ, ನಿಷ್ಪಕ್ತಪಾತ,

ನ್ಯಾಯಸಮ್ಮತ ತೀರ್ಪು ಹೊರಬಿದ್ದರೆ ಸಾಕು

ಎಲ್ಲರೂ ತಲೆಬಾಗಲೇ ಬೇಕು, ಹೌದು ಎಲ್ಲರೂ ಗೌರವಿಸುತ್ತಾರೆ

ಕಾಲ ಕಳೆದು,ದೇಶದಲ್ಲಿರು ಎಲ್ಲಾ ನ್ಯಾಯಾಲಯಗಳ ಯಾತ್ರೆ ಮುಗಿಸಿ,

ನ್ಯಾಯದೇವತೆಯಿಂದ ತೀರ್ಪನ್ನು ಮುಂದೂಡುವ ವರ

ಪಡೆಯುವ ಭಾಗ್ಯ ಇಲ್ಲಿನ ಅಪರಾಧಿಗಳಿಗಿಲ್ಲ,

ಅಷ್ಟೇ ಏಕೇ ರಾಷ್ಟ್ರಪತಿ ಸಹಾ ಇದರ ತೀರ್ಪನ್ನು ಬದಲಿಸುವ ಹಾಗಿಲ್ಲ

ಕರುಣೆ ಕರುಣಿಸಿ, ಮರಣದಂಡನೆಯನ್ನು ಆಜೀವ ಸೆರೆಮನೆ ವಾಸಕ್ಕೆ ಬದಲಿಸಲೂ ಅಸಾಧ್ಯ

ಇತರ ಎಲ್ಲಾ ಮಾನವೀಯ ನ್ಯಾಯಲಯಗಳ ಅಪರಾದಿಯಂತೆ

ಖೈದಿಗೆ ಯಾವ ರಿಯಾಯತಿ ಸಿಗುವುದಿಲ್ಲ.

ಕೇವಲ ತನ್ನ ಅಂತಿಮದಿನಕ್ಕೆ ಶಬರಿಯಾಗಿ, ಯಮರಾಮನನ್ನ ಕಾಯುವುದು

ಬೀಸೋದೊಣ್ಣೆ ತಪ್ಪಿದರೆ ನೂರುವರ್ಷ ಆಯಶ್ಶು

ತಪ್ಪಿಸಿಕೊಳ್ಳುವ ಕನಸಿನ ಸುಖದಿಂದಲೂ ವಂಚಿತ

ಜೀವಂತ ಶವವಾಗುವ ಸಾವಿನ ನಿರೀಕ್ಷಕರು

ಮೊನ್ನೆ ತಾನೆ ಹೋಗಿದ್ದೆ ಈ ಅಪರೂಪದ ಅನ್ಯಾಲಯಕೆ

ನನ್ನ ಸ್ನೇಹಿತನೇ ಅಪರಾಧಿ,ಅಪರಾಧದ ಮೂಲ ಯಾರಿಗೂ ತಿಳಿದಿಲ್ಲ

ನಿಷ್ಪಕ್ಷಪಾತಿ ನ್ಯಾಯಮೂರ್ತಿ

ಆಘಾತದ ತೀರ್ಪು ಪಿಸುಗುಡುವಾಗಲೂ ಆಗಿದ್ದರು ಶಾಂತಮೂರ್ತಿ

ಅವರು ಹೊರಹಾಕಿದ ತೀರ್ಪು ಸ್ಪಷ್ಟ ವಾಗಿತ್ತು

ಮರಣದಂಡನೆ ವಿಧಿಸಿ, ಕೊಟ್ಟಿದ್ದು ಮಾತ್ರ

ಮೂರು ನಾಲ್ಕುತಿಂಗಳ ಅನುಮಾನದ,ಅನುಕಂಪದ ಜೀವದಾನ

ಅರ್ಥವಾಗದ ನನಗೆ ಕೇಳಿಸಿದ್ದು ಇಷ್ಟೇ..

ಹೆಪ್ಯಾಟೋ ಕ್ಯಾರ್ಸಿನೋಮಾ...

ಪುನರುಚ್ಛರಿಸಿದ,ಬಿಳಿಕೋಟಿನೊಳಗಿದ್ದ ನನ್ನ ಸ್ನೇಹಿತನ ವಕೀಲ

Comments

Popular posts from this blog

ಕಾಗೆ....