ಮನಸ್ಸಿಗೆ ಬಂದದ್ ಬರೆದಾಗ!!! 

ಅರೆನಿದ್ರೆಯ ಅಮಲಿನಲ್ಲಿ ಸೆರೆಯಾದ ನಿಶ್ಚಲ ಕಾಯಕ್ಕೆ
ತಾಳೆಯಾಗದ ದೃಷ್ಯ ಚಿತ್ರಗಳ ನಿಶ್ಭದ್ದ ನರ್ತನ
ದುರ್ಗದ ದುರ್ಗಮ ಕೋಟೆಯ ಯಾವುದೋ 
ವಸ್ತುಸಂಗ್ರಹಾಲಯದಲ್ಲಿ,ದೊಡ್ಡಮ್ಮನ ಮನೆಯಲ್ಲಿ
ಬೊಜ್ಜದ ಭೂರಿಭೋಜನ.
ಅಲ್ಲಿಗೆ ನಾನೇ ಅಲಂಕಾರ ಬ್ರಾಹ್ಮಣ

ಬಾಳೆಲೆ ಹಸಿರಿನ ಎರಡು ಬದಿ ಅಲಂಕಿರಿಸಿದ ಮೇವು
ರಾಶಿ,ರಾಶಿ....ವ್ಯಂಜನ, ಖಾರ, ಸಿಹಿ,
ಹಸಿರಿನ ಊಟದ ಬಣಿವೆಯ ಇಕ್ಕಟ್ಟಲ್ಲಿ ಕೂತಿರುವ ರವೆಉಂಡೆ
ತೂತಿನ ವಡೆಯ ಜೊತೆಗೆ, ಗಹ,ಗಹಿಸಿ ನಕ್ಕವು ಗಾರಿಗೆಯ ಕೂಡಿ.....

ಜೋಕಾಲಿ ತೂಗಾಟಕ್ಕೆ ತೆಂಗಿನಮರದ ಮೇಲೆ ನಾನು
ಹೆದರಿ ಕಂಪಿಸುತ್ತಿದ್ದೆ ಬೀಳುವ ಭಯದಲ್ಲಿ
ಯಾವಾಗ ಸೇರಿದೆನೋ ಊರ ಮಧ್ಯ ಮಾರುಕಟ್ಟೆ?
ಅಸಂಖ್ಯಾತ ಜನ ಕ್ರೂರ ಹಾಸ್ಯದ ನೋಟ
ಜೋರಾಗಿ ನಡೆದಿರು ವಸಾಮಾನ್ಯ ವಹಿವಾಟು...

ಅರಿವಳಿಕೆಯ ನಶೆ ಸಂಪೂರ್ಣ ಇಳಿದು
ಪ್ರಜ್ಞೆ ಬಂದಾಗ ಪೂರ್ಣ ನಗ್ನಊರ ಮಧ್ಯದಲ್ಲಿ
ನಡು ಹಗಲಲ್ಲಿ, ನಾಚಿಕೆಗೆ ನೀರಾಗಿ,
ನಡುಗಿ ಹಲ್ಲೆಲ್ಲಾ ಉದುರಿ
ಬೊಚ್ಚುಬಾಯಿಯ ಮುದುಕ ನಾಗಿದ್ದೆ

ನಿಲ್ದಾಣತಿಳಿದಿಲ್ಲ, ವಿಮಾನದಲಿ ಕುಳಿತಿದ್ದೆ
ಕಂಡದ್ದು ಯಾವುದೋ ಹೆಸರಿರದ ಪರಕೀಯ ನಗರ?
ಖಂಡವೋ,ದೇಶವೋ ದ್ವೀಪವೋ? ಎಲ್ಲೋ ಕೇಳಿದ್ದೆ.
ಮೆಟ್ಟಿಲು ಸದ್ದಿಲ್ಲದೆ ಮೇಲೇರುತಿತ್ತುಎಸ್ಕಲೇಟರ್
ಅರಿವಾದದ್ದು ಮಾತ್ರ, ನನಗೆ ಮುಚ್ಚಿದ ಮುಕ್ತ ವೆಂಟಿಲೇಟರ್

ವಿಶಾಲ ಸಿಮೆಂಟ್ ಕ್ಯಾನ್ವಾಸ್
ಅರ್ಧವೃತ್ತದ ನೂರಾರು ಅಪೂರ್ಣ ಚಕ್ರಗಳು ಮೂಡುತ್ತಲೇ ಇವೆ
ಬಣ್ಣ ಮಾತ್ರತುಂಬುವರಿಲ್ಲ ಮೂಡುವ ಚಿತ್ರಗಳಿಗೆ
ಈ ಅಪೂರ್ವ ನವ್ಯಕಲೆ ಸೆರೆಯಾಗಿದೆ ಚೌಕಟ್ಟಿನಲ್ಲಿ
ಹರಿದು ಚಿಂದಿಯಾಗಿ, ಕೋರಿಯಾದ ಹಸಿರುಕಾಡು
ಅಭಿಮನ್ಯು ಇಲ್ಲಿಲ್ಲ, ಈ ಚಕ್ರವ್ಯೂಹ ಭೇದಿಸಲು
ಒಳಗೆ ಇರಬಹುದೇನೋ ಕೌರವ ಅಥಿರಥರು

ಕಾಡಿನಲಿ ಕಂಡ ಮೆಟ್ರೋ ರೈಲು, ಅಳಿಯಲು ಹೊರಟ
ಮಾಪಕ, ಪರ್ವತದ ವಿಸ್ತಾರ, ವೈಶಾಲ್ಯದೆತ್ತರ
ತಲುಪಿದೆ ಸುಬ್ರಮಣ್ಯ ಸುರಂಗಳ ಹಾವು ಹಳಿ
ಕತ್ತಲು ಬೆಳಕುಗಳ ಸತತ ಪಿಳಿ,ಪಿಳಿ
ಆಳ ಕಂದರಗಳಲಿ ಆಯತಪ್ಪಿ ಹರಿಯುವ
ಬೆಟ್ಟದ ಮಾನ್ಸೂನ್ ಪ್ರವಾಹ
ಪ್ರವಹಿಸಿದೆ ದಿಕ್ಕಿಲ್ಲದ ಇಳಿಜಾರಿನಲ್ಲಿ
ಗುರುತ್ವಕ್ಕೆ ಸಹಜವಾಗಿ ತನ್ನಿಛ್ಚೆಯಂತೆ

ಅಸಮಂಜಸ, ಅಸಂಭದ್ಧ,ಅಸಹಜ
ಅಯಸ್ಕಾಂತ ಸೆಳೆತಕ್ಕೆ ಕನಸುಗಳ ಧೂಳಿಪಟ
ಕನಸು ಕವನವಾಗುವ ವಾಸ್ತವ,
ಕಪ್ಪು,ಬಿಳುಪೋ, ವರ್ಣಮಯ ಛಾಯೆಯೋ,
ಹಗಲು ಕನಸು ಇರಬಹುದು....
ಕನಸಿಗೂ ಅಷ್ಟೇಕೇ ಗಂಭೀರ ಚರ್ಚೆ?

ಹೌದು ಬೇಕೇ ಬೇಕು ಕನಸಸುಗಳ ಕವನಗಳು
ತಾಳೆಯಾಗದ ಕನಸುಗಳು, ತಾಳಬದ್ಧ ರಾಗಕ್ಕೆ ಧ್ವನಿಯಾಗಬೇಕು
ನಮ್ಮ ಘಾಡನಿದ್ರೆಗೆ ಬೇಕೇ ಬೇಕು
ಅಸ್ಪಷ್ಟ, ಅಸಂಗತ ಕನಸುಗಳು ನಮ್ಮ ವಿಶ್ರಾಂತಿಗೆ
ಕೊಂಡಿಕಳಚಿದ ಅಮೂರ್ತ ಅಸಹಜ ಬದುಕಿಗೆ
ನೈಜವಲ್ಲದ, ನನಸೇ ಆಗದ, ಕನಸಸುಗಳೇ,
ಇರಬಹುದು..... ಆದರೂ ಬೇಕು
ಬರಲಿರುವ ನಾಳೆಗಳಿಗೆ.....
1 ShareLikeLike ·  · Promote · 

Comments

Popular posts from this blog

ಕಾಗೆ....

Reunited...at last..