Saturday, November 29, 2014

ಆಮ್ಲೆಟ್ಸಂಭೋಗ ವಿಲ್ಲದೆ ಮೊಟ್ಟೆ ಕೊಡುವ
ಕೋಳಿಗಳ ಫಾರಂ ಮೊಟ್ಟೆಗಳು
ಪಿಂಡದಲ್ಲೇ ಆಮ್ಲೆಟ್ ಆಗಿ ಅಂತ್ಯವಾಗುವ ಈ ಅಸ್ತಿತ್ವ
ಕಾವುಕೊಟ್ಟರೂ ಮೊಟ್ಟೆ
ಒಡೆಯುವುದಿಲ್ಲ, ಮರಿ ಹೊರಬರುವುದಿಲ್ಲ
ಭ್ರೂಣ ಬತ್ತಿ ಬೆಂದು ಆವಿಯಾಗಿ, ಬುಡ ಅಂಟಾಗಿ ಹೊಳೆದು
ಭದ್ರವಾಗಿ ಛಿದ್ರವಾದರೂ ಕೋಳಿ ಕೊರಲೆತ್ತಿ  
ಕೊಕ್ಕೋ,ಕೊಕ್ಕೋ.. ಎಂದು ಕೂಗಲಿಲ್ಲ
ಕೂಗುತ್ತಿಲ್ಲ...

ಜಡ್ಡು ಹಿಡಿದ ನಿರಂತರ ನಿಶ್ಚಿಂತೆಯ ಕನಸಲ್ಲಿ 
ಆಗುತ್ತಲಿದೆ ಸಾವಿರಾರು  ಗರ್ಭಪಾತ,
ಆಳವಾಗುತ್ತಿದೆ ನಿರ್ವಿಕಾರ ಪ್ರಪಾತ
ಎರಡು ಭ್ರೂಣ ಬಾಹಿರ ಪದರಗಳ ಮಧ್ಯೆ,
ನೀರಾಗಿಯೇ ನಿಂತು,ನೀರಂತೆ ಅಕಾರ ಪಡೆಯುತ್ತೇವೆ
ಆಕೃತಿಗೆ ತಕ್ಕಂತೆ

ಒತ್ತಡ ಉಷ್ಣತೆಗೆ ಹದವಾಗಿ
ಇವು ಮುಂದುವರೆದ ಜೀವಜಾತಿ  ಆಮ್ನಿಯೋಟ !!!
ಎಂದು ಥಟ್ಟನೆ ಹೊಳೆದಾಗ ಅನಿಸುತ್ತದೆ
ನಾವೂ ಬದುಕಿದ್ದೇವೆ ಜೀವಿಗಳಾಗಿ
ಜೀವಿಗಳಮಧ್ಯೆ, ಯಾವುದೋ ಒಂದು ಸ್ಥರದಲ್ಲಿ
ಸ್ತರವಿಲ್ಲದ ನಿಶ್ಯಬ್ಧ ಶಭ್ದಗಳೊಡನೆ
ನಿಷ್ಕ್ರಿಯ ಒಪ್ಪಂದದ ಕಂದರದಲ್ಲಿ....   

No comments:

Blog Archive