"ಸ್ವಚ್ಛ ನೀಲಿ ಆಕಾಶದಲಿ ಸ್ವೇಚ್ಛೆಯಾಗಿ ಚಲಿಸುವ ಬಿಳಿ ಮೋಡಗಳ ಜೂಟಾಟದ ಮುಂಜಾವು"
ಈ ಸಾಲನ್ನು ಬರೆದಿರುವ ಅನು ರಮಾಕಾಂತ್ ಬಗ್ಗೆ ಹೇಳಲೇ ಬೇಕು..ಅನೇಕ ಇಗಿನ ಪೀಳಿಗೆ ಅದರಲ್ಲೂ ಈ ಮಾಧ್ಯಮ ಎಪ್,ಬಿ ಯಲ್ಲಿನ ನವ ಯುವಕರಿಗೆ ತಿಳಿದಿರಿಲಿಕ್ಕಿಲ್ಲ... ರಮಾಕಾಂತ್....ಯಾರು ಎಂದು.. ಈ ಹುಡುಗಿ ನನ್ನ ಆಪ್ತಮಿತ್ರ.....ಸೂ.ರಮಾಕಾಂತ್ ರ ಮಗಳು... ಅನುರಾಧ....
ಸೂ.ರಮಾಕಾಂತ್ ಹಿರಿಯ ಪರ್ತಕರ್ತರು... ಸಂಯುಕ್ತ ಕರ್ನಾಟಕ, ಅದಕ್ಕಿಂತ ಮುಂಚೆ... ಮಣಿಪಾಲದಲ್ಲಿ ಆರಂಭಗೊಂಡ ಉದಯವಾಣಿ..., ಕನ್ನಡ ಪ್ರಭ ಮತ್ತು ಹೊಸದಾಗಿ 
ಆರಂಭವಾದ ವಿಜಯ ಕರ್ನಾಟಕ
ಯಲ್ಲಿ ದುಡಿದ ನಿಷ್ಟಾವಂತ, ಖಡಕ್ ವ್ಯಕ್ತಿತ್ವದ ಲೋಹಿಯವಾದಿ....ಕೊನೆಯವರೆಗು...ಅವರು ತಮ್ಮ ಬದುಕಿನಲ್ಲಿ ಯಾವುದೇ ರೀತಿಯ, ಒಪ್ಪಂದಗಳನ್ನು ಮಾಡಿಕೊಳ್ಳದೆ... ತಮ್ಮ ಅದರ್ಶದಪಾಲನೆಯಲ್ಲಿ ಲೋಕವಿರೋದಿಯಾದ ಧರ್ಯ ಛಲಗಾರ...ಇಂದಿನ ಮಧ್ಯಮ ವಯಸ್ಸಿನ ಅಥವಾ ನನ್ನ ವಯಸ್ಸಿನ ಆಸುಪಾಸು ವಯಸ್ಸಿನ ಸಮೂಹ ಮಾಧ್ಯಮದಲ್ಲಿ ಸಾಕಷ್ಟು ಹೆಸರು ಮಾಡಿರುವ, ಸಮಾಜದಲ್ಲಿ ನೆಲೆಯೂರಿರುವ ಅನೇಕರನ್ನು ಈ ವ್ಯಕ್ತಿ ಬೆಂಗಳೂರಿಗೆ ಕರೆಸಿಕೊಂಡು ತಮ್ಮ ರೂಮ್ ನಲ್ಲೇ ಅಶ್ರಯಕೊಟ್ಟು ಸಾಕಿ... ವೃತ್ತಿಪರ ಸಲಹೆಗಳನ್ನು ಕೊಟ್ಟು ದಡ ಮುಟ್ಟಿಸಿದರು...ಅವರ ಹೆಸರುಗಳು ಅನೇಕ... ಇನ್ನು ಬಹಳಷ್ಟು ಜನ ಜೀವಂತವಾಗಿದ್ದಾರೆ... ಅವರೆಲ್ಲಾ.. ಅವರ ಆಂತ್ಯಕ್ರಿಯಯಲ್ಲಿ ಅವರ ಮನೆಗೆ ಭೇಟಿಕೊಟ್ಟು.... ಗೌರವ ಸಲ್ಲಿಸಿ ಮಾಯವಾದವರನ್ನು ನಾನು ಮತ್ತೆ ಕಂಡದ್ದೂ ಅಪರೂಪ...ಎಲ್ಲರೂ ಸುಖವಾಗಿರಲಿ...
ಶಾಂತವೇರಿ ಗೋಪಾಲ ಗೌಡರ ಚಳುವಳಿಯಲ್ಲಿ ಭಾಗವಹಿಸಿದ ಅವರು ಮತ್ತು ಅವರ ಅನೇಕ ಸ್ನೇಹಿತರು ಅಥವಾ ಕಾಮ್ರೇಡ್ ಗಳು ಇಂದಿನ ರಾಜಕೀಯದಲ್ಲಿ ಮೆರೆದಾಡಿದರು.. ಕೆಲವರು.. ಜಾರ್ಜ್ ಫರ್ನಾಂಡಿಸ್, ದಿವಂಗತರಾದ, ಶ್ರಿ ಜೆ.ಎಚ್. ಪಟೇಲ್, ಎಸ್.ಬಂಗಾರಪ್ಪ, ಸಾಹಿತಿ ಯು.ಆರ್. ಅನಂತಮೂರ್ತಿ, ಪಿ.ಲಂಕೇಶ್...ಮರೆಯಲಾರದ ಪಿ.ಕಳಿಂಗ್ ರಾವ್,...ಖ್ಯಾತ ಸಂಪಾದದಕರುಗಳಾದ, ಖಾದ್ರಿ ಶಾಮಣ್ಣ, ವೈ ಎನ್ ಕೆ.. ಇನ್ನು ಮುಂತಾದ ಪ್ರತಿ"ಷ್ಟಿತ ವ್ಯಕ್ತಿಗಳ ನಿಕಟ ಸಂಪರ್ಕದಲ್ಲಿದ್ದವರು.. ಒಟ್ಟಿಗೆ ಅವರೊಡನೆ ಕೆಲಸಮಾ
ಡಿದವರು... ರಮಾಕಾಂತ್.ಎಸ್.. ೧೯೬೮-೬೯ ರ ಸುಧಾ ವಾರ್ಷಿಕದಲ್ಲಿ ಯುಗಾದಿ ವಿಶೇಷ ಸಂಚಿಕೆಯ ಕಥಾ ಸ್ಪರ್ಧೆಯಲ್ಲಿ...ಅವರ "ಸಹಜ’ ಕಥೆಗೆ ಪ್ರಥಮ ಬಹುಮಾನ ದೊರೆತಿತ್ತು..ನಂತರ...ಅವರು... ಅಸಹಜ ಎನ್ನುವ ಸಣ್ಣಕಥೆಗಳ ಸಂಕಲವನ್ನು ಪ್ರಕಟಿಸಿದರು... ಸಾಕಷ್ಟು ಮೆಚ್ಚುಗೆ ಸಿಕ್ಕಿತು..
ದುರಂತ ಅಂದರೆ ಮೊನ್ನೆ... ನನ್ನ ಸ್ನೇಹಿತರೊಬ್ಬರು ಅವರ ಸಂಕಲನದ ಎರಡು ಕಥೆಗಳನ್ನು ಪುನರ್ ಮುದ್ರಣ ಮಾಡಲು ಪ್ರಯತ್ನಿಸಿದರು..ಆದರೆ..ಅದರ ಒಂದು ಕಾಪಿಯೂ ಯಾರ ಬಳಿಯೂ ದೊರಕಲಿಲ್ಲ...
ಪತಿಕೋದ್ಯಮ ದಲ್ಲಿ ರಾಜಕೀಯ ಆರಂಭಿದ ದಿನಗಳಲ್ಲೇ ಕನ್ನಡ ಪ್ರಭ ಬಿಟ್ಟು...ವಿಜಯ ಕರ್ನಾಟಕ.
ವನ್ನುಲಾಂಚ್ ಮಾಡಲು ಬೇಕಿದ್ದ ಎಲ್ಲಾ ಕೆಲಸಗಳನ್ನು ಮಾಡಿ.....ಪ್ರಕಟಣೆಯ ಸ್ವಲ್ಪ ಸಮಯದನಂತರ ಕಿರಿಯ ವಯಸ್ಸಿನಲ್ಲಿ ಸುಮಾರು...೫೫-೫೬ ವರ್ಶ ವಿರಬಹುದು....ಅವರು ನಿಧನರಾದಾಗ...
ನನಗಿನ್ನೂ ಜ್ಞಾಪಕವಿದೆ.... ೧೬ ಜುಲೈ ೨೦೦೦..... ಅದಿನ ಗ್ರಹಣ.... ರಾತ್ರಿ
ಇಷ್ಟನ್ನು ಹೇಳಿದ ಕಾರಣ... ಅವರ ಮತ್ತು ನನ್ನ ಒಡನಾಟ....೧೯೭೨ ರಿಂದ ಕೊನೆಯವರೆಗೂ...೨೦೦೦..... ಅವರ ನಿಧನನಂತರವೂ ನಾನು ಸಂಪರ್ಕದಲ್ಲಿದ್ದೇನೆ... ಹಾಗಂತಲೇ.... ಮೊನ್ನೆ ತನ್ನ ಹುಟ್ಟು ಹಬ್ಬಕ್ಕೆ ನನ್ನನ್ನು ನೋಡಲು ಅವರ ಮಗಳು ಅನು ಬಂದಾಗ ಅವಳಿಗೆ ಬೈದು ಹೇಳಿದೆ.... "ಎಲ್ಲಾ....ಮರೆತು ಬಿಟ್ಟಿದ್ದಾರೆ ನಿಮ್ಮಪ್ಪನ್...ನೀನು ಮೊದಲು ಬರೀತಾ ಇದ್ದಿ...ನಿನ್ಯಾಕೆ , ಮತ್ತೆ ಪಯತ್ನ ಮಾಡಬಾರದು.."
ಅನು...ನನ್ನ ಮಾತಿಗೆ ಬೆಲೆಕೊಟ್ಟು ತನ್ನ ಪ್ರಯತ್ನ ಆರಂಭಿಸಿರುವುದನ್ನು ನೋಡಿ ತುಂಬಾ ಖುಷಿಯಾಯಿತು...ಅವಳ ಮೊದಲಸಾಲನ್ನು ನನ್ನೊಟ್ಟಿಗೆ ಟ್ಯಾಗ್ ಮಾಡಿದ್ದಾಳೆ...
ಈ ನನ್ನ ಅನುಭವದ ಮೂಲಕ ನಿಮಗೆ ತಿಳಿಯಬಹುದು... ಆ ಸಾಲಿನ ಬೆಲೆ ನನ್ನ ಖುಶಿ...... ಅವಳ ಹುಟ್ಟು ಹಬ್ಬದ ಅವಳ ಕುಟುಂಬದ ಕೆಲವು ಕ್ಷಣಗಳನ್ನೂ ನಿಮ್ಮೊಡನೆ ಹಂಚಿಕೊಂಡಿದ್ದೇನೆ...
ಬಹುಮುಖ್ಯ ವ್ಯಕ್ತಿಯನ್ನು ಮರೆತಿದ್ದೆ....ರಮಾಕಾಂತ್ ರಿಗೆ ತುಂಬಾ ಕ್ಲೋಸ್ ಆದ ಇನ್ನೊಬ್ಬ ಸ್ನೇಹಿತ ದೇವನೂರು ಮಹಾದೇವ.... ಇಂದಿಗೂ... ದ್ಯಾವನೂರು ಅವರನ್ನು ಮರೆತಿಲ್ಲ... ಸಮಯ ಬಂದಾಗಲೆಲ್ಲ ಅವರನ್ನು ಜ್ಞಾಪಿಸಿಕೊಂಡಿರುವುದು ನನಗೆ ತಿಳಿದಿದೆ....ಎಲ್ಲಾ ಸಂದರ್ಶನಗಳಲ್ಲೂ ಹೇಳಿಕೊಂಡಿದ್ದಾರೆ... in a way he considered Ramakanth as his Guru... or an Idol...

Comments

Popular posts from this blog

ಕಾಗೆ....