ಮೆಗಾ ಧಾರವಾಹಿ.

ಸ್ವರಮಾಧುರ್ಯ ಪ್ರತಿಫಲಿಸಿದು ಅಕ್ಷಿಪಟಲದಮೇಲೆ
ಅದರೂ ಮೀಟುತ್ತಿದೆ ಹೃದಯ ಶ್ವಾಸದಲ್ಲಿ
ನಿಂತಿಲ್ಲ ಕಂಪನ ಒಳಕಿವಿಯ ದ್ರವದಲ್ಲಿ
ಪುಪ್ಪುಸಕೆ ಯಾಕೋ ಉಬ್ಬಸ, ಏದುಸಿರು
ರಾಗ ಸಮಾಪ್ತಿ, ಮುಂದುವರಿದಿದೆ ಶಬ್ಧ
ಶಿವನ ತಾಂಡವದ ಡಮರುಗದ ಹಾಗೆ
ಕೇಳಬರುತಿದೆ  ಭವಿಷ್ಯ ವಾಣಿ,ಗೊರವಯ್ಯನ
ಬುಡುಬುಡುಕೆಯಿಂದ ಬಾರಿಸುತಿದೆ
ಬದುಕಿನ ಪಲ್ಲವಿ....

ತೇಲಿಬರುವ ಅಲೆಹಿಂದೆ ಅಂಡಲೆದು,
ಬಿಸಿಲ ಕುದರೆ ಬೆನ್ನೇರಿ, ಗುಡ್ಡಹತ್ತಿ, ಕಣಿವೆ ಇಳಿದು
ಸವಾರಿ ತಲುಪಿತು ಬಯಲು,
ಆದರೂ
ಮಾಂತ್ರಿಕ ಮೋಡಿಯ ಅಯಸ್ಕಾಂತದ ಸೆಳೆತಕ್ಕೆ
ಗೋಡೆಗಳಿಲ್ಲ, ಹಿಂಬಾಲಿಸಿದೆ
ಆದೇ ರಾಗ, ಅರ್ಥವಾಗದ ಅನುರಾಗ
ಜೀವನರಾಗ ಮುಂದುವರಿದಿದೆ ಕಚೇರಿ
ಗಾಯಕ, ಪ್ರೇಕ್ಷಕ, ವಾದ್ಯವೃಂದ ಮಾಯ
ನಾನೊಬ್ಬ ಕುರುಡ ಕಾಣುವುದಿಲ್ಲ ಯಾರು

ಪದವಿಲ್ಲದ ಭಾಷೆ,  ಮಧುರ, ಮೌನ
ಮನಕಲಕುದ ಜಾನಪದವೋ, ನಿರ್ಭಾವ ಭಾವಗೀತೆಯೋ
ಶಿಸ್ತಿನ ಕಠೋರ ಶಾಸ್ತ್ರೀಯ ಗಾಯನವೋ?
ಮರೆವಿಗೆ ಮುದನೀಡುವ ವಾದ್ಯ, ಗುಲ್ಲೆಬ್ಬಿಸುವ ಸ್ವರಗಳು
ಇಂದಿನ, ಚರಣ...
ಅಂತ್ಯ ಕಾಣದ ಚಾರಣ....ಕೇಳದ ಯಂತ್ರಸಿದ್ದ ಸಂಗೀತ?
ವಾದ್ಯ ವೃಂದದ ಪ್ರತಿಧ್ವನಿ ಕಿವಿಯಲ್ಲಿ ಅವಿಶ್ಕಾರ
ಅಂತ ಅನ್ನಿಸ್ಸಿದ್ದು ಊಂಟು.
ಉನ್ಮಾದ ವೆನಿಸಿದರೂ, ತಂಪೆರೆಯದ ಸಿಂಚನ
ಲೋಹಾಲಿಂಗನ!

ಮಾಸಿಹೋದ ಬಾಲ್ಯ, ಜಾರಿಹೋದ ತಾರುಣ್ಯ
ನೆನಪಿನಿಂದಾಯ್ದ ಕವನ ಸಂಕಲನ
ಅಥವಾ
ಪ್ರತಿಯೊಂದು ಪುಟವೂ ಸ್ವತಂತ್ರ ಕಿರುಕಥೆಗಳ ಕಿರುಹೊತ್ತಿಗೆ

ಇಲ್ಲಾ?
ಹಾಗೆ ಸುಮ್ಮನೆ ಇದ್ದಕ್ಕಿದ್ದಂತೆ ಇಲ್ಲದಾಗುವ ಇರುವಿಕೆ
ಮರೀಚಿಕೆ,
ವೇಗಕ್ಕೆ ದಿಕ್ಕು ದಾರಿಯೇ ಇಲ್ಲ ಚಲನೆ ಮಾತ್ರ..
ಆದರೂ
ಎಳೆಯರ ಗುಂಪಲ್ಲಿ ಅರಿವಿಲ್ಲದ ಉಳಿವು
ಅನಿಸಿದಾಗ ಗೋಚರಿಸುವ ವ್ಯಥೆ.
ಇದು ನೀಳ್ಗಥೆ....
ಅನಿಸಿದರೂ ’ಕಥೆ ಮುಂದುವರೆಯುತ್ತದೆ’ ಎಂಬ ಮುಕ್ತಾಯ ಕಾಣುವ
ಮೆಗಾ ಧಾರವಾಹಿ.....

Comments

Popular posts from this blog

ಕಾಗೆ....

Reunited...at last..