Sunday, June 19, 2016

ನಾಳೆ

ವಿಸ್ತಾರ ವಿಕಸನಕೆ ಹಗುರಾದ ಮನಸು
ಒಂದು ಕ್ಷಣ ಪ್ರಕ್ಶುಬ್ಧ, ತೀಕ್ಷ್ಣ
ನಿಶ್ಯಭ್ದ, ತಕ್ಷಣ ಶಾಂತಸಾಗರ
ತೇಲುವ ಗಾಳಿ ಇಂಪಾದ ಹಾಡು ಅತಿಮಧುರ
ಅಳತೆಗೆ ಮೀರಿದ ಆಕಾಶ, ನಡುವಿನ ದಿಗಂತ
ಕಲ್ಪನಾತೀತ ಅನಂತ.
ಉಬ್ಬರ,ಇಳಿತಗಳ ನಿಲ್ಲದ ಅಲೆಗಳ ಗೋಳ
ಹುಟ್ಟು ಸಾವುಗಳ ಮೀರಿದ ಕಾಲ...
ನಿರೂಪ, ರೂಪಾಂತರ ಕೋಲಾಹಲ
ಜೀವಿ, ನಿರ್ಜೀವಿಗಳ ಸತತ ಪೈಪೋಟಿ
ವಿಕಾಸ, ವಿನಾಶ.... ಸಂಸ್ಲೇಷಿತ ವಿಘಟನೆ
ಆದಿ ಅಂತ್ಯವಿಲ್ಲದ ದ್ವಂದ್ವ
ಆಕಾರದಲ್ಲೇ  ಶೂನ್ಯವಾಗುವ ನಿರಾಕಾರ,
ಎಲ್ಲವೂ ಸುಂದರ, ಯಾವುದಲ್ಲ ನಶ್ವರ?
ಅನಿವಾರ್ಯದ ಅಳಿವು, ಒಪ್ಪುವುದು ದುಸ್ತರ
ಬೇಕಿದೆ ನನಗೊಬ್ಬ ಸಕಲ ನೋವು ನಿವಾರಕ
ಸುಖದಾಯಕ ಈಶ್ವರ, ಹಾಗೆ ಅಗೋಚರ
ಭ್ರಮೆಯಲ್ಲೇ ಉನ್ಮಾದ,ನಶೆ ಸುಖ ತೀರದ
ಬಯಕೆ, ಬವಣೆಯ  ಬದುಕು
ಕನಸಾದರೂ ಇರಲಿ ಸುಂದರ
ತಾತ್ಕಾಲಿಕ ಇರುವಿಕೆ.... ಎಲ್ಲೆಲ್ಲೂ ಶಾಶ್ವತ ಸಮರ
ವಿನಾಶಕಾರಿ ಅಸ್ತಿತ್ವ ಮಾತ್ರ ಅಮರ...
ಎಲ್ಲರೂ ಪ್ರಾರ್ಥಿಸೋಣ ನಮ್ಮ,ನಮ್ಮ ಏಳಿಗೆಗೆ
ವರದ ನಿರೀಕ್ಷೆ, ನಮಗೆ ಮಾತ್ರ!
ಆದರೆ....
ಭವಿಷ್ಯ ಎಲ್ಲರಿಗೂ
ಅಘೋಶಿತ ಫಲಿತಾಂಶ......

No comments:

Blog Archive