ರಚನೆ.

ನಿಗದಿತ ಸಹಜ, ನಿದ್ರೆ ಮುಗಿಸಿ,
ಕತ್ತಲ ಬಾವಿಯಿಂದ ಈಜಿ ಹೊರಬಂದು
ಸೂಕ್ತ ಧಾಕಲಾತಿಗಳೊಟ್ಟಿಗೆ ಅಧಿಕೃತ ಪ್ರವೇಶ
ತಪ್ಪದೇ ಪಡೆಯುತಿದೆ ಹಾಜರಿ
ಮುಕ್ತ ತರಗತಿಯಲ್ಲಿ,ದಿನನಿತ್ಯ ಪರೀಕ್ಷೆಗಳಿಗೆ
ಸಾಮಾನ್ಯ ಪ್ರಭೇಧದ ಉಳಿವಲ್ಲಿ
ಬೆಳಕಿಗೆ ಮೈಒಡ್ಡಿ ಬಿಸಿಲಕಾಯಿಸಿ,
ಭಿತ್ತಿರಹಿತ ಮೈದಾನದ ಸ್ಪರ್ಧೆಯಲಿ ವೀಕ್ಷಕ ಪಾತ್ರ.
ಪೈಪೋಟಿ,ಫಲಿತಾಂಶಗಳಿಂದ ದೂರ
ಅಳತೆಗೆ ಬಾರದಷ್ಟು ಋತುಗಳನ್ನು ಕಂಡ ಕಾಲ
ಕಂಕಾಲದಲ್ಲೇ ನರಳುತಿದೆ ಇಂದಿಗೂ...
ನಡಿಗೆ ನಿಂತಿಲ್ಲ, ನಡುಕಮಾತ್ರ
ಅವಕ್ಕಾಗಿ, ತೆರೆದ ಆ ಆಕ್ಷಣದ ಆ ಮೂಕ ಬಾಯಿ,
ಎಂದೂ ಕಲಿಯದ ಭಾಷೆ, ಶಬ್ಧಗಳ ಅರಣ್ಯರೋಧನ
ಮುಚ್ಚಿಲ್ಲ ಇಂದೂ, ಬೆರಗಾಗಿ ಆ ಬೆದರು ಕಣ್ಣು
ಮಿಟುಕಿಸದೆ ರೆಪ್ಪೆ ಶೂನ್ಯ ನೋಟದಲಿ ಸ್ಥಬ್ದ
ಬೆಳಕಿಗೆ ಹೆದರಿದ ಆ ಮೊದಲ ದೃಷ್ಟಿ,
ನಿಜವೇನೋ ಅಪರೂಪದ ಸೃಷ್ಟಿ
ಸುತ್ತಿರುವ ತೊಗಲಲ್ಲಿ ಕಟ್ಟಿಟ್ಟ ರಕ್ತ,ಮಾಂಸಲ
ಪಾರ್ಸೆಲ್ ಪೊಟ್ಟಣ ಡೆಲಿವಿರಿಗೆ ರಡಿ ಇದೆ
ಸೂಕ್ಷಾಣುಗಳ ದಂಡಯಾತ್ರೆಗೆ ಬಲಿಯಾಗಿ ಹಳಸುವ ಮುನ್ನ,
ಬದುಕಿನ ಬಣ್ಣದ ಹುಣ್ಣು ಸೇರಲಿದೆ ಮಣ್ಣು...
ತೀರಿಸಲು ಅನುಭವದ ಋಣ
ನಿಗೂಢ ಶಾಶ್ವತ ಮಹಾ ಪಯಣ,
ಪುನರಾಗಮನ ಮತ್ತೆ,ಮತ್ತೆ....
Like
Comment

Comments

Popular posts from this blog

ಕಾಗೆ....