ವರ್ತಮಾನ 


ಯಾಕೋ..ಯಾವುದು ಸರಿ ಇಲ್ಲ ಅನ್ಸುತ್ತೆ.ವಿಚಿತ್ರ ಸ್ಥಿತಿ... ಏನು ಇಲ್ಲ..ಜಗತ್ತಿನ ನಿಲ್ಲದ ಸತತ ಸುದ್ದಿಗಳು ಬೇಡವೆಂದರೂ ಪ್ರತಿ ಕ್ಷಣ ಕಂಡು....ನಮ್ಮ ಕ್ರಿಯಾವಾಹಕ ನರಗಳು ನಿಷ್ಕ್ರಿಯವಾಗಿವೆ.ಪ್ರಚೋದನೆಗಳು ಸಹಾ ತುಂಬಾ ಯಾಂತ್ರಿಕವಾಗಿ ಗ್ರಾಹಕಗಳನ್ನು ಸೇರಿ ಗೊಂದಲ ಉಂಟುಮಾಡುತ್ತಿವೆ...ಭಾವನೆಗಳು ತೀರಾ ಕ್ಷಣಿಕವಾಗುತ್ತಿವೆ...ಈಗ ಈ ಕ್ಷಣ ಅಳು..ಅದನ್ನು ಮರೆಸಿ, ಒರೆಸಿ.....ಇನ್ನೊಂದು ಘಳಿಗೆಯ ಪ್ರತಿಕ್ರಿಯೆಗೆ ಸಿದ್ದವಾಗುತ್ತವೆ ಸ್ಥಿತಪ್ರಜ್ಞರಂತೆ ಇದ್ದು..ಇನ್ನೊಂದು ಕ್ಷಣದಲ್ಲಿ ಮಂದಹಾಸ.ಆಮುಗುಳುನಗೆ ಖಳನಾಯಕನಂತೆ ನಗುತ್ತಿರುತ್ತದೆ.....ಯಾವ ಘಟನೆಗಳಿಗೂ ಅಂಟಿಕೊಳ್ಳುವಷ್ಟು ಸಮಯ ನಮ್ಮಲ್ಲಿಲ್ಲ . ಈಗ...ನಾವು ವಿಶ್ವನಾಗರೀಕರು.....!!!
ನಾವು ಮನುಷ್ಯರೇ.?.ಅಥವಾ ಈ ಸ್ಥಿತಿಗೆ ತಂದಿರುವ ಇಷ್ಟೊಂದು ಮಾಹಿತಿಗಳು,ಅದಕ್ಕೆಪ್ರತಿಕ್ರಿಯೆಗಳು ಅವಶ್ಯವೇ....? ಎಲ್ಲದರಿಂದ ಓಡುತ್ತೇವೆ ತಪ್ಪಿಸಿಕೊಂಡವರ ಹಾಗೆ.....ಯಾವುದನ್ನೂ ಗಂಭೀರವಾಗಿ, ಕೆಲಸಮಯ ವೀಕ್ಷಿಸಿ, ಗ್ರಹಿಸಿ ಅನುಭವಿಸುವುದನ್ನು ಮರೆತಿದೆ ನಮ್ಮ ಮಿದುಳು....ತಟಸ್ಥ, ಸಮತೋಲನ ಮಾನವ ಮನಸ್ಠಿತಿ...ಸಮಾಧಾನ, ತಾಳ್ಮೆ...ಕಡಿಮೆಯಾಗುತ್ತಿದೆಯೇ?
ತೀರಾ ಅತಿರೇಕದ ಉನ್ಮಾದದಲ್ಲಿದೆ ನಮ್ಮ ಮನಸ್ಸು...ಒಂದು...ದ್ವೇಶ ಇಲ್ಲವೇ ತೀರಾ ಬಾಲಬಡುಕತನ ಚಮಚಾಗಿರಿ. ಮಾನವೀಯ ಪ್ರೀತಿ, ಅನುಕಂಪ, ಆತ್ಮೀಯತೆ, ಎಲ್ಲಾಪದಗಳು ಅರ್ಥಕಳೆದುಕೊಂಡಿವೆ.... ಆದರ್ಶವಾದಿಗಳು ಸಹಾ ತಾವೇ ಸರಿಎನ್ನುವ ನಿಲುವು ತಾಳಿದರೆ...ಅಥವಾ ತಾವು ಒಪ್ಪಿಕೊಂಡು ಆ ಆದರ್ಶ ಅಥವಾ ನೀತಿ ಎಲ್ಲರೂ ಅನುಸರಿಸಬೇಕು ಎನ್ನುವ ಹಟ.....ತಮ್ಮ, ತಮ್ಮ ನಿಲುವೇ ಶ್ರೇಷ್ಟ ಮತ್ತೆ ಸರ್ವಕಾಲಿಕ ಸತ್ಯಎಂಬ ಧೋರಣೆಯಿಂದಾಗಿ, ಎಲ್ಲಾ ಮೌಲ್ಯಗಳು ಅಪಮೌಲ್ಯ ಸ್ಥಿತಿಎದಿರುಸುತ್ತಿದೆ ಅನಿಸುತ್ತೆ....ಯಾರನ್ನು,ಯಾವುದನ್ನು, ಯಾತಕ್ಕಾಗಿ ಅನುಸರಿಸುವುದು...?ಸದ್ಯದ ಜಗತ್ತಿನ ಸ್ಥಿತಿಯಲ್ಲಿ ಎಲ್ಲರನ್ನು ಕಾಡುತ್ತಿರುವ ಪ್ರಶ್ನೆ
ಒಬ್ಬರನ್ನೊಬ್ಬರು ಸಹಿಸುವುದು ಇಷ್ಟು ಕಷ್ಟ ಅನಿಸಿರಲಿಲ್ಲ...ಈಗ ನಮ್ಮಂಥವರು ತೀರಾ ಇಕ್ಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡಂತೆ ಕಾಣುತ್ತೆ.ಹೆಪ್ಪುಗಟ್ಟಿದೆ ರಕ್ತ ನಾಳಗಳಲ್ಲಿ, ಹೃದಯದ ಕೋಣೆಗಳಲ್ಲಿ..ನರಕೋಶ ಯಾಂತ್ರಿಕ ಸಂದೇಶವಾಗೆ ಉಳಿದಿವೆ. ವಿದ್ಯುತ್ ಪ್ರಚೋದನೇ ಯಾಗುವುದೇ ಇಲ್ಲ... ವ್ಯವದಾನ ಇಲ್ಲ ಯಾರಲ್ಲೂ... ಯಾವುದರಿಂದ...ಯಾಕಾಗಿ...ಯಾವಾಗ... ಪ್ರಶ್ನೆಗಳಿಗೆ ಉತ್ತರವಿಲ್ಲ....ಉತ್ತರವಿದ್ದರೂ ಪುರುಸೊತ್ತಿಲ್ಲ..
ಇದಾದಮೇಲೆ ಇನ್ನೊಂದು ಪೋಸ್ಟ್ ಓದಬೇಕು...ಪ್ರತಿಕ್ರಿಯಿಸಬೇಕು...ಮರೆತಾಯಿತು..ಸತತ ಬದಲಾಗುವ ಪ್ರತಿಕ್ರಿಯಾತ್ಮಕ ಸಂವೇದನೆಗಳು.......

Comments

Popular posts from this blog

ಕಾಗೆ....

Reunited...at last..