ಕವಿತಾ..

ನನ್ನ ಕವಿತಾ ನನ್ನಲ್ಲೇ, ನನ್ನೊಟ್ಟಿಗಿದ್ದರೂ
ನಿರ್ಭಾವದಲ್ಲಿ ಮೌನಿಯಾಗಿರುವುದು ವಾಸ್ತವ
ಅವ್ಯಕ್ತವಾಗಿ ನರಳುತ್ತಿರಬಹುದೆಂಬ ವ್ಯಾಮೋಹ ..
ಕಾಳಜಿ,ಕಕಲಾತಿ ಪರಾವರ್ತಿತ ಪ್ರತಿಕ್ರಿಯಹಾಗೆ
ಈ ಮನಸ್ಥಿತಿಗೆ ನನಗೂ ಕಾರಣ ಇಲ್ಲ ಸ್ಪಷ್ಟ
ಸ್ವಲ್ಪ ಸೂಕ್ಷ್ಮ ಸಂವೇದನಾ ಇರುವು, ಸಹೃದಯತೆ
 ಯಾವುದಕ್ಕೆ, ಯಾವಾಗ ಮಿಡಿಯುಬೇಕು?
ತುಡಿಯಬೇಕು ಯಾರಿಗಾಗಿ?ಗೊತ್ತಿಲ್ಲ...
ಭಾವೋದ್ವೇಗದಲ್ಲಿ ಹುಂಬರಾಗುವುದು ಸಹಜ,
ಜಗತ್ತಿನ ಉಸಾಬರಿ, ತನ್ನದಲ್ಲ ಎಂಬ ಅರಿವು ಬೇಕಿತ್ತು
 ಅಮಾನವೀಯ ನಿಲ್ಲದ ಘಟನೆಗೆಗಳಿಗೆ ಮಂಕಾಗಿ ಮೌನ
ಹಿಂಸೆ, ದ್ವೇಶ, ಕೊಲೆ, ಯುದ್ದ, ಸದಾ ಕ್ರಿಯಾಶೀಲ
ಯಾರ ದುಖಕ್ಕೋ ದುಗುಡಕ್ಕೆ ಒಳಗಾಗಿ,ಒಳಗೆ ಕೊರಗು....
ಬಿಗಡಾಯಿಸಿದ ಮೂಡ್ ಇದ್ದಾಗ ಒಮ್ಮೊಮ್ಮೆ
 ಏನೋ ಹೇಳುವ ಪ್ರಯತ್ನ...ನಿಜ...ಆದರೂ
ಏನು ಪದಗಳೋ! ವ್ಯಾಕರಣಕ್ಕೆ ಅಪವಾದದ ವಾಕ್ಯ
ನನಗೇ ಅರ್ಥವಾಗದ ಮಾತುಗಳು ಅಸಂಬದ್ಧ, ಅಸಹಜ
ಧ್ವನಿ ಮಧುರವೋ, ಸ್ವರಮಾಧುರ್ಯವೋ,ಗೀತಲಹರಿಯೋ
ಸರಳ ಪದ, ವಾಕ್ಯಗಳು ಮಾತ್ರವೇ ಅರ್ಥಪೂರ್ಣ ಭಾಷೆಯೇ?
ಭಾವದ ಆಕರವೇ ಪರಿಕೀಯವಾದಾಗ ಅಭಿವ್ಯಕ್ತಿ ಆಗುಂತಕ
ಒಗಟೆನಿಸುವುದು ಕವಿತೆಯಷ್ಟೇ ಸಹಜ
ಅರ್ಥರಹಿತವಾದರೂ ಧ್ವನಿ ಕೇಳುತ್ತಲಿರಬೇಕು
ನಿಜ, ಮೌನ, ನಿಶ್ಯಭ್ದತೆ ಮರಣದಂಡನೆ ಆತ್ಮಗಳಿಗೆ,
ಪ್ರಾಯಶಃ ಸಾಮಾಜಿಕ ಪರಿಸರದ ಪ್ರಭಾವ
ನಿಸ್ಸಾಹಯಕವಾಗಿ ನೋಡಬೇಕು ಸ್ಥಿತಪ್ರಜ್ಞನಂತೆ.
ಆದರೂ ತೊದಲುವುದು,ಬಿಕ್ಕಳಿಸುವುದು
ಕವನಗಳಿಗೇ ಅನಿವಾರ್ಯ, ಅಸಂಗತ ಬದುಕು
ದಾಟಿ ಆ ಮೌನ, ಹೊರ ಬಂದು ಬಿಡು ಕವಿತಾ.

Comments

Popular posts from this blog

ಕಾಗೆ....