ಈ ಕ್ಷಣಕ್ಕೆ ಅಲ್ಲದಿದ್ದರೂ, ಭವಿಷ್ಯದ ನಿಜ ಭವಿಷ್ಯ...
ನೈಸರ್ಗಿಕ ವಿನಾಶಕಾರಿ ಘಟನೆಗಳು ಪ್ರಕೃತಿಯಲ್ಲಿ ಸಾಮಾನ್ಯ....ಹಾಗೂ....ಈ ಭೂಕಂಪ, ಸುನಾಮಿ, ಪ್ರವಾಹ, ಜ್ವಾಲಾಮುಖಿ, ಆಕಾಶಕಾಯಗಳು ಭೂಮಿಯನ್ನು ಅಪ್ಪಳಿಸುವುದು, ಕಾಡ್ಗಿಚ್ಚು ಇತ್ಯಾದಿ ಸ್ವಾಭಾವಿಕ ಪ್ರಕ್ರಿಯೆಗಳು ಪರಿಸರವನ್ನು ಅಪ್ ಡೇಟ್ ಮಾಡುವ ಒಂದು ಜೈವಿಕ ಹಾಗೂ ಭೌಗೋಳಿಕ ತಂತ್ರ..... 
ಆದರೆ
ಮಾನವನಿಂದ ಉಂಟಾಗುತ್ತಿರುವ, ಪ್ರಗತಿಎಂದು ಕರೆಯಲ್ಪುಡುವ ಅವಿಶ್ಕಾರಕ ಕರ್ಮಗಳು ಪರಿಸರದ ಸಹಜ ಸಮತೋಲನವನ್ನು ಹಾಳುಮಾಡಲು ಮಾತ್ರ ಸಹಾಯಕಾರಿ...ಇದಕ್ಕೆ ನಮಗೆ ನಾವೇ ಬೇಕಾದ ಸಮಜಾಯಿಷಿ ಕೊಟ್ಟು ನೈಸರ್ಗಿಕ ಸಂಪನ್ಮೂಲಗಳ ಶೋಷಣೆಯನ್ನು ಮುಂದುವರಿಸಿ,ಪ್ರಪಂಚದ ಇರುವನ್ನೇ ಅಪಾಯದ ಅಂಚಿನಲ್ಲಿಟ್ಟಿದ್ದೇವೆ.......(ದುರಂತ ಅಂದರೆ ನಮ್ಮನ್ನು ಬಿಟ್ಟು ಪರಿಸರದ ಇತರ ಯಾವುದೇ ಜೈವಿಕ ಅಥವ ಅಜೈವಿಕ ಸಹವರ್ತಿಗಳನ್ನು ನಾವು ಈ ಪರಿಸರ ಸಮಪಾಲುದಾರರು ಎಂದು ಪರಿಗಣಿಸದೇ ಇರುವುದು.) 
ಯಾರಿಗೂ ತಿಳಿದಿಲ್ಲ....ನಮ್ಮ ಈ ಪ್ರಗತಿಯ ನಿಜ ಪರಿಣಾಮ ನಾಳೆ ಏನಾಗಲಿದೆಯೆಂದು....ಆದರೂ ಈ ಹೊತ್ತು ಅತ್ಯಂತ ಆರಾಮದಾಯಕ, ವೈಭವದ ಅಸ್ವಾಭಾವಿಕ ಬದುಕು ಕೇವಲ ಕೆಲವೇ ಮಂದಿಗಳಿಗೆ ಮಾತ್ರ ಸೀಮಿತವಾಗಿದ್ದು....ಅವರ ಸ್ವಾರ್ಥದ ಅಮಾನವೀಯ ಬದುಕಿನ ಶೈಲಿಯ ದುಶ್ಪರಿಣಾಮದಲ್ಲಿ ವಿಶ್ವದ ಎಲ್ಲಾ ಜನಗಳು ಅಪಾಯವನ್ನು ಎದುರಿಸುತ್ತಿದ್ದೇವೆ.....
ಕೆಲವೇ ಕೆಲವು ಬೆರಳಣಿಕೆಯಷ್ಟು ಮಂದಿಗೆ ಮಾತ್ರ ಲಭ್ಯವಾಗಬಲ್ಲ, ಹೊಸ,ಹೊಸ ಮಾನವ ಸುಖಾಧಾರಿತ ಅವಿಶ್ಕಾರಗಳಿಂದ ಖಂಡಿತಾ ಪರಿಸರಕ್ಕೆ ಉಳಿವಿಲ್ಲ..... ಈ ಎಲ್ಲಾ ಅವಿಷ್ಕಾರಗಳಿಗೆ ಒಂದು ನಿರ್ಧಿಷ್ಟ ಮಾರ್ಗಸೂಚಿಇಲ್ಲ....ಹೊಸವಸ್ತುವಿನ ಅವಿಶ್ಕಾರದ ನಂತರ ಅದರ ಉಪಯೋಗ ಮಾತ್ರಮುಖ್ಯ.. ಇತರ ಪರಿಣಾಮ??? ಬೇಕಾಗಿಲ್ಲ....
ವಿನಾಶದ ಹಾದಿಯಲ್ಲಿ ತೀರಾ ದೂರಸಾಗಿ ಬಂದಿದ್ದೇವೆ.....ಆದರೂ.... ಬಡಕಲಾದ ಈ ಪರಿಸರವನ್ನೇ ಉಳಿಸಲು, ಪ್ರಯತ್ನಿಸಬಹುದಾದ ಏಕೈಕಮಾರ್ಗ ಅಂದರೆ.... ಸಹಜವಾದ, ಸರಳವಾದ ಜೀವನ ಪದ್ದತಿಯನ್ನು ಅನುಸರಿಸುವುದು....!!!!
ಆದರೆ....ಅದು ಸಾಧ್ಯವೇ? ಈ ನಗರಾಕರ್ಷಿತ ಜನಗಳಿಗೆ?
ಈ ಪ್ರಶ್ನೆ ನನಗೂ ಸಹಾ.......ಆದರೂ ..

Comments

Popular posts from this blog

ಕಾಗೆ....