ನಕ್ಕು ಬಿಡಿ ಜೋರಾಗಿ...
ಗಂಡಸರೆ....ಹುಷಾರ್.....
you can claim no more to be an integral part of the nature......The human generation will continue to survive even with the extinction of naturally born and asexually reproduced MEN....

ಇಂದಿನ ಪ್ರಗತಿಶೀಲ ತಂತ್ರಜ್ಞಾನಯುಗದಲ್ಲಿ ನಿಮ್ಮ ಇರುವಿಕೆಯ ಅಸ್ತಿತ್ವ ಅನಿವಾರ್ಯವಲ್ಲ.....ವಿಕಾಸದ ಹಾದಿಯಲ್ಲಿ ಸಂತತಿ ಮುಂದುವರೆಯಲು ನೀವು ಬೇಕಿಲ್ಲ....!!!

೯೦ ರ ದಶಕದಲ್ಲೇ ಯಶಸ್ವಿಯಾದ ಜೈವಿಕತಂತ್ರಜ್ಞಾನ ಕ್ಲೋನಿಂಗ್ ಅಥವಾ ಅಬೀಜಜ ಅಥವ ನಿರ್ಲಿಂಗಪ್ರಜನನವನ್ನು ಮಾನವರ ಮೇಲೆ ಪ್ರಯೋಗಮಾಡಲು ಬಿಟ್ಟಿಲ್ಲ, ಬಿಡುವುದಿಲ್ಲ. ಕಾರಣ ಗಂಡಸರು ಬೇಡಿಕೆಇಲ್ಲದೆ ಮೂಲೆ ಗುಂಪಾಗಬಹುದು ಎಂಬ ಹೆದರಿಕೆ....

ಈ ನಿರ್ಲಿಂಗ ಪ್ರಜನನ ವಿಧಾನದಲ್ಲಿ, ಜನನಾಂಗದಲ್ಲಿ ಉತ್ಪತ್ತಿಯಾಗುವ ಹಾಗು ಮುಂದೆ ಆಂಡ ಅಥವ ತತ್ತಿಯನ್ನು ಫಲಿತ ಗೊಳಿಸುವ ಲಿಂಗಾಣು ಅಥವಾ ಪುರುಷಾಣುವಿನ ಅವಶ್ಯಕತೆ ಇಲ್ಲ...ಯಾರದೇ ಗಂಡು ಅಥವ ಹೆಣ್ಣು ದೇಹದ ( ನಿಮಗೆ ಇಷ್ಟವಾದವರ ಆಯ್ಕೆ ಅಂದರೆ ಕಲಾವಿದ, ಕ್ರೀಡಾಪಟು, ಆರೋಗ್ಯವಂತ ಒಳ್ಳೆಯಮೈಕಟ್ಟಿನ ಸುರಸುಂದರಿ ಅಥವ ಸುಂದರರು ಇತ್ಯಾದಿ..... ನಿಮಗೆ ಬಿಟ್ಟದ್ದು...) ಯಾವುದೇ ಅಂಗದ ಕೋಶವನ್ನು ಆ ವ್ಯಕ್ತಿಯ ಅರಿವಿಗೆ ಬರದಂತೆ ಪ್ರತ್ಯೇಕಿಸಿ ಕೃತಕವಾಗಿ ಆಂಡಕದ (ಹೆಣ್ಣು ಲಿಂಗಾಣು) ಜೋತೆ ಸಂಯೋಗಿಸಿ.....ಹೊಸಜೀವಿಯನ್ನು ಉತ್ಪತ್ತಿ ಮಾಡಬಹುದು...

ಆದರೆ ಈ ವಿಧಾನದಲ್ಲಿ ತಾಯಿಯ ದೇಹ ಮಾತ್ರ ಅನಿವಾರ್ಯ ಭೌತಿಕವಾಗಿ....ಹೊಸಜೀವಿಯ ಜನನಕ್ಕೆ ತಾಯಿಯ ಗರ್ಭವೇ ಆಗಬೇಕು ಒಂಭತ್ತು ತಿಂಗಳು ಹೊರಲು...ನಿಮ್ಮ ಪೋಷಕ ನಡುವಳಿಕೆಯ ಸ್ವಯಂ ಪ್ರವೃತ್ತಿ ಚಟದ ಅಥವಾ ದಾಹವನ್ನು ತೃಪ್ತಿಗೊಳಿಸಬಹುದು....ಈ ವಿಧಾನದಲ್ಲಿ ಹುಟ್ಟಿದ ಮಗು ತಂದೆ ಅಥವಾ ತಾಯಿ ಅಂದರೆ ಯಾರ ತದ್ರೂಪ ಮಗು ನಿಮ್ಮದಾಗಬೇಕೆಂದು ಕೊಂಡಿರುತ್ತೀರೋ....ಅಂಥವರ ತದ್ರೂಪವಾಗಿರುತ್ತದೆ....ಆದ್ದರಿಂದ....ನಿಮಗೆ ಇಷ್ಟವಾದ ಪ್ರತಿಭಾಶಾಲಿಗಳನ್ನು ಎಷ್ಟು ಬೇಕಾದರೂ....ಆರ್ಡರ್ ಮಾಡಿ....ಒಂಭತ್ತು ತಿಂಗಳು ಕಾದರೆ ಮಗು ನಿಮ್ಮಮನೆಬಾಗಿಲಿಗೆ ತಂದು ಡೆಲಿವರಿ ಮಾಡಬಹುದು....ಮಿಲ್ಕ್ ಬ್ಯಾಂಕ್, ಬ್ಲಡ್ ಬ್ಯಾಂಕ್ ಗಳಿಂದ ಬೇಕಾದನ್ನು ಪಡೆದು ಪೋಷಿಸಬಹುದು....ಸೇವಕರ ಸಹಾಯದಿಂದ....ತಾಯಿಯಾರೆಂದು ತಿಳಿಯುವ ಮಮಕಾರ ಇದ್ದರೆ ತಿಳಿದುಕೊಳ್ಳಬಹುದು...ಇಲ್ಲದಿದ್ದರೆ!!!!

ಆದರೆ ಒಮ್ಮೆ ಯೋಚಿಸಿ...ನಮ್ಮ ಈ ಅವಿಶ್ಕಾರಗಳ ಫಲವನ್ನು....

ತನ್ನ ಹುಟ್ಟೇ ಅಸ್ವಾಭಾವಿಕವಾದ ಅನಾಥಮಗು ತನ್ನ ಅನಾಥ ಪ್ರಜ್ಞೆಯನ್ನೇ ಕಳೆದುಕೊಂಡು ತಾಯಿಇಲ್ಲದೇ ಬೆಳೆಯಬಹುದು.......ಅದಕ್ಕೆ ತಾಯಿ,ತಂದೆ, ಇತ್ಯಾದಿಗಳ ಸಂಭಂದಗಳ ಅರಿವೇ ಇಲ್ಲದೆ ಯಂತ್ರಮಾನವನಂತೆ ಬೆಳೆದು ಸಾಯಬಹುದು..... ಆದರೆ ಇದರಿಂದ ಸಮಾಜಿಕ ನಡುವಳಿಕೆಯಲ್ಲಿ ಉಂಟಾಗ ಬಲ್ಲ ಏರು,ಪೇರು, ಗೊಂದಲ ಅನೂಹ್ಯ.... ನನ್ನ ಕೈಲಿ ಊಹಿಸಲು ಅಸಾಧ್ಯ ಮತ್ತು ಧರ್ಯವೂ ಸಾಲದು.....

ಸೋ..ಈಗಲಾದರೂ ತಿಳಿಯಿರಿ....
ಅಮ್ಮಂದಿರ ಪ್ರಾಮುಖ್ಯತೆಯನ್ನು....ತಾಯಿಇಲ್ಲದೇ ಜೀವಿಯ ಉಗಮವಿಲ್ಲ....
ನೀವಿಲ್ಲದಿದ್ದರೂ ಮಾನವ ಸಂತಾನ ಮುಂದುವರಿಯ ಬಹುದು ಎಂಬ ಸಾಧ್ಯತೆ ತಿಳಿದಿರಲಿ ನಿಮಗೆ ಗಂಡಸರೆ

ನೆನಪಿರಲಿ ಎಲ್ಲರಿಗೂ....ತಾಯಿ....ಹೆಂಡತಿ, ಮಗಳು,ಸೊಸೆ,ಅತ್ತೆ,ಅಕ್ಕ, ತಂಗಿ......... ಬಗ್ಗೆ ಗೌರವವಿರಲಿ....

Comments

Popular posts from this blog

ಕಾಗೆ....

Reunited...at last..