ವಯಸು. 

ನುಣುಚಿಕೊಳ್ಳುವ ನಿನ್ನ ನಯವಾದ ಶೈಲಿ,
ಜೆಲ್ಲಿಯಂತೆ ಜಾರಿ ಚದುರುವುದಿಲ್ಲ, 
ಸ್ಪೋಟಿಸದ ಲಾವ ಪಡೆವ ಘನರೂಪ ನಿಶ್ಚಲ ಉರುಳು
ಸಿಕ್ಕ, ಸಿಕ್ಕ ಜಾಗದಲ್ಲಿ, ಜೋತುಬೀಳುವ ಮರುಳು
ಹಿಡಿತಕ್ಕೆ ಜಿಡ್ಡಾಗಿ ಜಾರಿಹೋಗುವ ಶೂನ್ಯ 
ನಿನ್ನಿರುವು, ಅನುಭವಕೆ ಬಾರದ ಅಸಂಗತ,
ಎಲ್ಲೆಡೆ ಅವಿರ್ಭವಿಸುವ ನಿರಾಕಾರ ನೀನು,
ಸುಪ್ತ ಚಲನೆಯ ಅನುಭವದ ಕ್ಷಣದಲ್ಲಿ
ಆಗಂತುಕ ನಾನು ನನಗೆ,
ವಿವರಿಸಲು ನಿನ್ನ ಏನೆಂದು, ಹೇಗೆಂದು ಏಕೆಂದು,
ಯಾರೆಂದು, ಯಾರಲ್ಲಿ ಕೇಳುವುದು?
ನಿನ್ನ ಅನೂಹ್ಯ ಭವಿಷ್ಯದ ಆದ್ಭುತ ವಿಶಾಲ ಚಾಚು
ದಿಕ್ಕುಗಳಿಲ್ಲದ ಈ ಗುರುತ್ವರಹಿತ ಖಾಲಿತನದಲ್ಲಿ
ತೂಗಿ, ಜೋಕಾಲಿ ಆಡುವ ಜೀವಿಗಳ ಸಂತೆಯಲ್ಲಿ
ನೆಲದಮೇಲೆ ತೇಲುವ ಭ್ರಮೆ ಎಲ್ಲರಿಗೆ
ಸಿಕ್ಕಷ್ಟೇ ಅನುಭವ, ಕಂಡಷ್ಟೇ ಕನಸು
ಒಮ್ಮೊಮ್ಮೆ ನನಸಾಗುವ ಮನಸು
ಅದೇ ಆ ಬೆರಗಾಗುವ ನಿಜ ವಯಸು.

Comments

Popular posts from this blog

ಕಾಗೆ....