ದ್ವಂದ್ವ-೨

ವಿವಿಧತೆಯಲ್ಲಿ ಏಕತೆ?
ಏಕತೆಯಲ್ಲೇ ವಿವಿದತೆ? ಸಮಾರ್ಥ!
ಸುಂದರ ಭಾವಾನಾತ್ಮಕ ಸಾಲುಗಳು
ಘೋಷಣೆಗಳಿಗೆ ಮಾತ್ರ ಸೀಮಿತ
ಭಾಷೆಗೂ, ನಿಜಬದುಕಿಗೂ ಧೃವಗಳ ಅಂತರ
ಅನ್ವಯ ಅನುಕರಣೆ ಅಸಾಧ್ಯ,
ತಾಳೆಯಾಗದ ಅವಾಂತರ ಎಂದೆಂದಿಗೂ ಸಮನಾಂತರ
ಅನುಷ್ಟಾನದ ಭ್ರಮೆಯಲ್ಲಿಮಾಯವಾಗುವ ವಿಶೇಷತೆ
ಜಿಗುಪ್ಸೆಯ ಏಕತೆಯ ಯಾಂತ್ರಿಕ ಪುನರಾವರ್ತನೆ
ಭಾಷೆ ಬೇಕಿಲ್ಲ, ಅಸಂಖ್ಯ ಬದುಕಿನ ವಿಶಿಷ್ಟ ಭವ್ಯತೆಗೆ
ರೀತಿ ರಿವಾಜುಗಳ ಅನಿವಾರ್ಯತೆ
ಕಣ್ಣ ಕೋರೈಸುವುದು ಕ್ರೂರ ಸತ್ಯ
ವಲಸೆಯ ಮೋಜಲ್ಲಿ ಬರೆಯುವ ವಿಚಿತ್ರ ಮರಣ ಪತ್ರಗಳು
ವಲಸಿಗರಿಗೆ ಪಾಸ್ ಪೋರ್ಟ್ ಬೇರೆ.
ಇನ್ನು ಗಡಿಗಳ ಮಾತೇಕೆ?
ಗ್ರಹಾಂತರದಲ್ಲಿಅಂತಃರಾಷ್ಟ್ರೀಯ ಗುರುತುಚೀಟಿ ಕಡ್ಡಾಯ!
ಭರ್ಜರಿ ಭಾವೋನ್ಮಾದ ವಿಶ್ವ ಮಾನವ,
ಭೂಆವಾಸವೇ ಸಿಡಿದು ಛಿಧ್ರವಾಗಿ ಹೊಸ ದೇಶಗಳ ಅಸ್ತಿತ್ವ
ಜಲ ಆವಾಸದ ಆಳಗಳನ್ನೇ ಆಳ ಹೊರಟ ಐಲುದೊರೆಗಳ ಸಾಮ್ರಾಜ್ಯ
ಗಾಳಿಯಲಿ ಹಾರುವ ಹಕ್ಕಿಗಳಿಗೆ ಗುರುತುಚೀಟಿ ಅಂಟಿಸುವ ನೀವು
ಸೀಮೋಲಂಘನೆ ಕಾಯಿದೆ ಅಡಿನಿಮ್ಮ ದೇಶದ ಗಡಿಗಳಲ್ಲೇ
ಗಾಳಿಯನು ತಡೆದು ಭಂದಿಸುವ ಬೇಲಿ ಹಾಕುವಿರಾ?
ನದಿಯ ಹರಿವಿಗೆ ತಡೆಗೋಡೆ ಕಟ್ಟಿ
ಕಾಡುಮುಳುಗಿಸಬಹುದು, ಅಸಂಖ್ಯ ಜೀವಸಂಹಾರದಲ್ಲಿ
ಮಣ್ಣುಸಾಗಿಸಿ, ಮೋಡಕ್ಕೆ ಒಡ್ಡುಹಾಕಿ,
ಸಿಂಪಡಿಸಬಲ್ಲಿರಾ ಹನಿಗಳನ್ನು ಮರಳುಗಾಡಿನಲ್ಲಿ?
ಗಡಿಪಾರು ಮಾಡಬಲ್ಲಿರಾ ನಿಮ್ಮ ಮನಸನ್ನು.?

Comments

Popular posts from this blog

ಕಾಗೆ....