ಮರ್ಲಹಳ್ಳಿ

ಬಿಸಿಲು ಹಾಕಿದ ಬರೆಗೆ,
ಸುಟ್ಟು ಕರಕಲಾಗಿದೆ ಬಯಲು ಬರಡು
ರುಮಾಲು ಕಳಚಿದ ತುದಿ, ಬರೀ ಮೈ ತೆಂಗಿನ ಕಂಬ 
ನಿರಂಬಳ ಆಕಾಶದ ತುಂಬ ಅದೃಶ್ಯ ಬಿಂಬ
ಹೆಕ್ಕಳೆ ಕಳಚಲಿರುವ ಉಳಿದ ದೂರದ ಹಸಿರು
ಆಗಲಿದೆ ನಿರ್ಜೀವ ಕೊರಡು, ಸ್ಥಭ್ದವಾದ ಉಸಿರು
ಬಂಡೆಗಳ ರಾಶಿಯ ನಿರ್ಜಲ ತಪ್ಪಲಲಿ ತತ್ತರಿಸಿವೆ
ದಾಹದಿಂದ ಕಳ್ಳಿಗಳ ರಾಶಿ ಜಾಲಿ, ತುಗ್ಗಲಿ ಬೇಲಿ
ಕೇದಿಗೆಯ ಪೊದೆಯಲ್ಲಿ ಹಾವೂಇಲ್ಲ, ಹಾವರಾಣಿಯೂ ಇಲ್ಲ
ಮಾಯವಾಗಿವೆ ಬೇಲಿಯಲಿ ಬೋರೆ, ಕಾರೆ, ಕವಳೆ, ಲೇಬೆ
ಮರಒಣಗಿ ಅಬ್ಬೆಪಾರೆ ಪಾಪ ಗೂಬೆ
ಹೊರಟಿತು ವಲಸೆ ಪೊಟರೆಯ ಜಾಡು ಹಿಡಿದು
ಇದು ನನ್ನ ಹಳ್ಳಿ,
ಸೌರಗರ್ಭದ ಕೂಪ ತಾಪ, ಅದೆಂತಹ ತಂಪು?
ನೆಲಬಳ್ಳಿಯ ಅನುಭಂದ ನನ್ನ ಮರಳ ಹಳ್ಳಿ.
ವರ್ಷಗಳ ಲೆಕ್ಖಕ್ಕೆ ಮೀರಿ ಮಳೆಕಾಣದೆ ಬಾಯಾರಿದೆ
ಪ್ರಚೋದಿಸಿದೆ ನನಗೆ ಅರಳು,ಮರಳು.

Comments

Popular posts from this blog

ಕಾಗೆ....