ನೆನಪು. ತಾಯಿಯ ಮಮತೆಯ ಅಂಟಿಕೊಂಡಿದ್ದು ಗರ್ಭದ ಗೋಡೆಗಾದರೂ ಹೊಕ್ಕಳು ಹುರಿ ಹರಿದು ಹುಟ್ಟಿದ್ದು ಊದುಕು ಲುಮೆಯ ತೊಟ್ಟಿಲಲ್ಲಿ. ಬಿಸಿಲ ಝಳದಲೇ ಜಾರಿದ ಬಾಲ್ಯ ಕಾಡುಬಂಡೆಗಳಮೇಲೆ ಚಿಗುರಿದ ಯವ್ವನ, ಜೂಟಾಟ, ಕಣ್ಣುಮುಚ್ಚಾಲೆ ಕೊರಕಲು ಪ್ರಪಾತಗಳಲ್ಲಿ, ತಳರಹಿತ ಗವಿಯ ಸಂದು, ಗೊಂದುಗಳ ನೆರಳಲ್ಲೂ ತೀವ್ರ ತಾಪವೇ ಹವಾ ನಿಯಂತ್ರಿತ ಆವಾಸ. ಬಂಡೆಗಳನ್ನೇ ಯಾಮಾರಿಸಿ ಕೊರಕಲಲ್ಲೇ ಆವಾಸ ಕಂಡ ನೇರಲೆ,ಕಾರೆ,ಕವಳೆ,ಲೇಬೆ, ಬೋರೆ ಗಂಜಿಗೆ. ಕೊರಕಲುಗಳಲ್ಲಿ ತಲೆ ಎತ್ತಿರುವ ಗುಲಗಂಜಿ. ಉಪಹಾರ ಯಾವುದಾದರೇನು ಹಸಿವುಮಾತ್ರ ಪಂಚತಾರ ಹೋಟೆಲ್ ಗಳಂತೆ.ಆಲ್ಲಿ ಸ್ವಸಹಾಯ ಪಧ್ದತಿ ಕಡ್ಡಾಯ. ಬಹಿರ್ದೆಸೆಯ ಚಾರಣದಲ್ಲಿ ಸಿತಾಫಲ ಅನ್ ಲಿಮಿಟೆಡ್ ನುರಿತ ಪರ್ವತಾರೋಹಿಗೆ. ನಿರ್ಜನ ಕಣಿವೆಯಲಿ ಸ್ವಗತ, ಶಾಶ್ವತ. ಸಂಭಾಷಣೆ ಕೂಗೋಗುಡ್ಡದ ಪ್ರತಿಧ್ವನಿಯಲಿ ಕಂಪಿಸಿ, ರಾಕ್ಷಸ ಇಳಿಜಾರು ಬಂಡೆ ಬೈಗಳ ಪ್ರತಿಧ್ವನಿಯ ರೋಮಾಂಚನ ಶ್ರವಣ. ನೇಯ್ಗೆ ಮಗ್ಗಗಳ ನಿಲ್ಲದ ನಡಿಗೆಯ ರೇಶಿಮೆಯ ಹೆಜ್ಜೆ. ಶಿಸ್ತಿನ ಸಾರೋಟು ಚಲನೆಯಲಿ ಲಾಳಗಳ ಓಟ, ನಿರಂತರ ಧ್ವನಿಸುವ ಬದುಕಿನ ಚಟಾ ಪಟಾ. ಊರಿಗೊಂದು ಭಾಷೆ ಅದರ ಸಾಮಾನ್ಯದ ಅಸ್ತಿತ್ವ. ಕರಡಿ ಗಂಗಣ್ಣನ ಘಮ,ಘಮ ಮಂಡಾಳ್ ಒಗ್ಗರಣಿ ಆದ್ಯಾತ್ಮ ತತ್ವ. ಅತ್ತಿಕಾಯಿ, ಜೊತೆಗೆ ಮೆಣ್ಸಿನ್ಕಾಯ್ ಉಳ್ಳಾಗಡ್ಡಿ, ಮಂಡಕ್ಕಿ ಭರ್ಜರಿ ಭೋಜನ. ಈಜಾಟ ಮನೋರಂಜನೆ ಆಟ, ನೀರಿದ್ದ ಆ ದೊಡ್ಡಬಾವಿ, ಬಾನಿ ಎಳೆಯುವ ಹಗ್ಗದ ಮೇಲೆ ಜೋಕಾಲಿ, ಹಿಂಬದಿಯ ನಡಿಗೆಯಲಿ ದಿಣ್ಣೆ ಏರಿ,
Posts
- Get link
- X
- Other Apps
ಮಣ್ಣು. ನಿನ್ನ ಗ್ರಹಿಕೆಗೆ ಸಿಗದ ನಿರೂಪಣೆ.... ಮಣ್ಣು ಅದಕೂ ಬೇಕು ದುರಾಸೆಗೆ ದೂರವಾದ ಕಣ್ಣು ಬರೀ ಮರಳಲ್ಲ, ಧೂಳಲ್ಲ, ಭೂ ಮೇಲ್ಪದರವೂ ಅಲ್ಲ ಶಿಲೆಯ ಹುಡಿಯಲ್ಲ. ಜೀವರಸದ ರಸಾಯನ ಅದು ಬದುಕಿಗೆ ಮಹಾ ಪ್ರಸಾದ ನಿನ್ನ ಜೈವಿಕ ಅಸ್ತಿತ್ವದ ಮೂಲ ಬಣ್ಣ. ವಿಲಾಸಿ ಬದುಕ ಪೊರೆ ಸರಿಸು. ಮಣ್ಣಾಗುವ ಮುನ್ನ, ನಿರಾಕಾರನಾಗಿ ಅನಿಲದಲಿ ಅತಂತ್ರ ಅಲೆಯುವ ಮುನ್ನ ಅರಿವಿಲ್ಲದೆ, ಅಗೋಚರವಾಗಲಿರುವ ನೀನು ಮತ್ತೊಮ್ಮೆ ಬರುವೆ...ನೆನಪಿರಲಿ ಬರಲೇ ಬೇಕು ಇಲ್ಲಿಗೇ ಹೊಸ ರೂಪದಲಿ ಜೀವಿಯಾಗಿ ಮಣ್ಣಿನಿಂದಲೇ. ಈ ಪುರಾತನ ಪಳೆಯುಳಿಕೆಗೆ....
- Get link
- X
- Other Apps
ವಿಕಾಸವೆಂಬ ಪಾತಾಳದಲ್ಲಿ. ಆಸೆಯೇ ದುಖಕ್ಕೆ ಮೂಲ ಎಂದಿದ್ದ ಬುದ್ಧ ಸರಳತೆಯಲಿ ಬದುಕನ್ನೇ ಗೆದ್ದು ತೆರೆದಿಟ್ಟಿದ್ದ ವೈಭೋಗ ಬದುಕು ನಿಷಿದ್ದ, ತನ್ನದೇ ಮುಕ್ತ ಇರುವಿನಲಿ ಜೀವನ ಸಮೃದ್ಧ ಮುಗುಳುನಗೆಯ ವಶೀಕರಣದಲಿ ನಮ್ಮನ್ನೇ ಕದ್ದ ಯುದ್ಧ ತ್ಯಜಿಸಿದ ಯೋಧ ಅಹಿಂಸೆ ಮಹಾ ಅಸ್ತ್ರದಲಿ ಇಂದಿಗೂ ಸದಾ ಸಿಧ್ದ "ಆಸೆಯೇ ಅನ್ವೇಷಣೆಯ ಬೇರು, ಅವಶ್ಯಕತೆಯೇ ಆವಿಶ್ಕಾರಗಳ ಮೂಲ" ಪ್ರಗತಿಪರ ಸಿದ್ಧಾಂತಿಗಳು, ಜಪಿಸುವ ಜಗದ ಮಂತ್ರ ಇಂದು ಮನುಕುಲ ಸೀಮಿತ ತಂತ್ರವೇ ಅವನತಿಯ ಶೂಲ ಅವಿಶ್ಕಾರಗಳ ಅಡಿಪಾಯ ಸದಾ ಕುತೂಹಲ ಅನ್ವಯ, ಬಳಕೆ, ಮಾತ್ರ ಬಲಶಾಲಿಗಳ ಪಾಲು ನೀನೊಬ್ಬ ಶೋಷಿತ, ಬಡವನಲ್ಲದ ಭ್ರಮೆಯಲ್ಲೇ ಖುಷಿ ನೀನಾಗಲಾರೆ ಸಮಬಾಳ್ವೆಯ ಋಷಿ ಆತ್ಯಾಧುನಿಕ, ಸುಸಜ್ಜಿತ, ಆರಾಮದಾಯಕ ವೈಭವದ ಕನಸಿಗೆ, ಧ್ಯೇಯ ಬದುಕಿನ ಸರಕು, ಕೈಗೆಟುವ ಮಾಯಲೋಕದಲ್ಲಿ ಮೋಜು, ಮಸ್ತಿ, ಮನರಂಜನೆಯಲಿ ಮಗ್ನನಾಗು ಮಾದಕತೆಯ ನಶೆ ಬಲು ಮಜಾ, ನಿಜ ಮತ್ತಿಳಿದು, ಭ್ರಮನಿರಸನ, ಮತ್ತೆ ಮರುಳುವ ಮಾಯಲೋಕದ ಅಥಿತಿ ತಿಳಿದಿಲ್ಲ ನಿನಗೆ ಯಾವಾಗ ನಿನ್ನ ತಿಥಿ ನೀನೊಬ್ಬ ಸ್ವತಂತ್ರ ಗುಲಾಮ. ಅನುಭವಿಸು ಕಳೆದುಹೋಗುವವರೆಗೂ, ಪ್ರಜ್ಞಾಹೀನ ಸ್ಥಿತಿಯಲ್ಲೇ ಇರಲಿ ನಿನ್ನ ಸಮಾದಿ ಎಚ್ಚರಕೆ ಮರುಳದ ಮಾದಕದ ಕನಸಲ್ಲಿ ಲುಪ್ತನಾಗಿಯೇ ಇರು, ಶಾಶ್ವತ ಮಂಪರಿನಲ್ಲಿ ಸತ್ತ ನೆನ್ನೆಗಳು, ಹುಟ್ಟದ ನಾಳೆಗಳು ಈ ಕ್ಷಣದ ಪ್ರತಿಕ್ರಿಯೆಯ ಇರುವು ಬದುಕಲ್ಲ ಕ್ಷಣದ ಸರಳತೆಯ ಸತ್ಯದ ತಡಕಾಟದಲ್ಲೇ ಬದುಕು ನೀತಿಯೇ, ಆದರ್ಷವೇ
- Get link
- X
- Other Apps
"ಸವನಾಲು ಬಸದಿ" ಇದೇ ಸೆಪ್ಟಂಬರ್ ತಿಂಗಳ ಮೊದಲ ವಾರದಲ್ಲಿ ಇಲ್ಲೇ ಸಮೀಪದಲ್ಲಿರುವ ಅಷ್ಟಾಗಿ ಪ್ರಸಿಧ್ದಿಇಲ್ಲದ, ಬೆಟ್ಟದಬುಡದ ಹಸಿರುಕಾಡಲ್ಲಿ, ಎತ್ತರದ ಮರಗಳ ನೆರೆಳಿಲ್ಲಿರುವ ಒಂದು ಜೈನ ಬಸದಿ ಅದರ ಪರಿಸರ ಆಕರ್ಷಣೀಯವಾಗಿದೆ. ಯಾರಿಗೂ ನಿರಾಸೆ ಮಾಡುವುದಿಲ್ಲ ಈ ಸುಂದರ ತಾಣ. ಎಲ್ಲರೂ ನೋಡಬಹುದೆಂದು ನಮ್ಮ ಸ್ನೇಹಿತರೊಬ್ಬರು ಹೇಳಿದಾಗ....ತಿಂಗಳು ಗಟ್ಟಲೆ ಎಲ್ಲೂ ಹೋಗದೆ ಮನೆಯಲ್ಲೇ ಇದ್ದು ಸಾಕಾಗಿ ಕಾಯುತ್ತಿದ್ದ ನನಗೆ ಪ್ರಯತ್ನಪಡಬಹುದೆಂದು ಅನಿಸಿತು. ವಿರಳ ಜನಸಂದಣಿ ಇರುವ.....ಅತಿ ಚಿಕ್ಕದಾರಿ ಕಾಡು, ಆಡಿಕೆ, ಬಾಳೆ ತೋಟಗಳ ನಡುವೆ ಸಣ್ಣರಸ್ತೆಯಲ್ಲಿ ಒಂದು ಕಾರ್ ಮಾತ್ರ ಹೋಗಲು ಇರುವ ದಾರಿ. ಎರಡು, ಮೂರು ಕಿ.ಮಿ ಒಳಗೆಹೋಗುವಾಗ ನಿರ್ಜನರಸ್ತೆಗಳು. ಅಲ್ಲೊಂದು ಸೇತುವೆ ಇದೆ. ಆ ಸೇತುವೆಯಲ್ಲಿ ಸಣ್ಣ ಕಾರಿನ ಪಕ್ಕದ ಕನ್ನಡಿಗಳನ್ನೂ ಸಹಾ ಒಳಗೆಳೆದುಕೊಂಡು ಮಾತ್ರ ಹೋಗಬಹುದಾದ, ಸ್ವಲ್ಪ ಹೆದರಿಕೆ ಹುಟ್ಟಿಸುವ ಸೇತುವೆ. ನನ್ನಂತ ಅನುಭವವಿಲ್ಲದ ಹೊಸ ಚಾಲಕರಿಗೆ ನಿಜವಾದ ಸವಾಲು. ಸ್ಟೇರಿಂಗ್ ಕೊಂಚ ಯಾಮಾರಿದರು ಹೊಸಕಾರ್ ಉಜ್ಜಿಕೊಂಡುಹೋಗುವುದು ಖಾತ್ರಿ ಸೇತುವೆಯ ಕಬ್ಬಿಣದ ಕಂಬಿಗಳಿಗೆ. ಕೆಣಕಿದ ಹಾಗೆ ಅನಿಸಿ ನೋಡೋಣ ಪ್ರಯತ್ನ ಪಡೋಣ, ತೀರಾ ಆಗದಿದ್ದರೆ ಗಾಡಿಯನ್ನು ಅಲ್ಲೇ ನಿಲ್ಲಿಸಿ ನಡೆದುಕೊಂಡೇ ಹೋಗುವುದೆಂದು ನಿರ್ಧರಿಸಿ ಹೊರಟೆವು ಮೂರು ಮಂದಿ. ನನ್ನ ತಮ್ಮನ ಮಗ ಪ್ರತೀಕ್ ಜೋಡಿದಾರ್, ಲಕ್ಷ್ಮಿಯ ತಮ್ಮನ ಮಗಳು ಅರ್ಪಿತಾ ಶಾಮಪ್ರಸಾದ್
- Get link
- X
- Other Apps
ಯಶಸ್ವಿ. ಯಶಸ್ಸಿಗೇಕೆ ಮೆಟ್ಟಿಲು ? ಎಸ್ಕಲೇಟರ್ ಗಳ ಕಾಲದಲ್ಲಿ ಜಾರೋಬಂಡೆಯಲ್ಲಿ ಮೇಲಕ್ಕೂ ಜಾರಬಹುದು ! ಕೆಳಕ್ಕೂ ಏರಬಹುದು ! ಗುರುತ್ವಮೀರಿದ ಗುರು, ಕಟ್ಟಬಹುದು ಸಂತಸದ ಬದುಕು ಕಣ್ಣಿದ್ದು ಕುರುಡಾಗಿ, ಸಾಗರದಡಿ ನಡಿಗೆಗೆ, ಭೂಮಿಯ ಋಣವೇಕೆ ಚಲನೆಗೆ, ಸಂಭಂದ ಕಳಚಿದ ತೇಲುವಿಕೆಗೆ, ಮೇಲ್ಮೈ ವಿಸ್ತಾರ ಅನಿವಾರ್ಯವಲ್ಲ. ಜಲನಿಯಮ ಉಲ್ಲಂಘನೆಯಲ್ಲ ಅನ್ವಯ..ತೇಲುಜೀವಿಗಳಿಗೆ ಮಾತ್ರ ಸಾಗರದಲ್ಲಿ. ಲವಣ ಸಾಂದ್ರತೆ, ತೂಕ ಕಳೆದುಹೋದ ಪದಗಳು ಗುರುತ್ವ ನಿಸರ್ಗದ ಅಪ್ಪನ ಸ್ವತ್ತಲ್ಲ ಸ್ವಾಮಿ. ಈ ಕಾಲದಲ್ಲಿ. ನಮ್ಮ ಯುಕ್ತಿಯ ಶಕ್ತಿ. ಹಗುರಾದ ವಿಮಾನಕೇ ಇಲ್ಲ ತೂಕದ ಹಂಗು, ಹಡಗಿಗೇಕೆ, ಪಾಪ, ಇನ್ನು ಭಾರದ ಹೊರೆ? ಹಕ್ಕಿಗಳ ಹಾರಾಟ ಭಾಗಶಹ ರದ್ದು ಹಿಮಗಿರಿ ಕರಗಿ ನದಿಯಾಗಿ ಹರಿವಾಗ ಅಣೆಕಟ್ಟಿಗಳಿಗೇಕೆ ಪಕ್ಷಪಾತ, ನದಿಯ ಹರಿವಿಗೆ ಉಕ್ಕಲಿ ಪ್ರವಾಹ, ಕೊಚ್ಚಿಹೋಗಲಿ ಹಳೆಯ ಕೊಳೆ ಮುಳುಗಿ ಹೋಗಲಿ ಆ ನಿಶ್ಚಲ ಕೊಳೆತ ಹೊಳೆ, ನಲುಗದ ನವ ವಿನ್ಯಾಸದ ಆವಾಸ ನಿಶ್ಚಲ ಪ್ರಕೃತಿ ವಿಕೋಪ ನಿರೋಧಕ ಸಂಶೋಧನೆಯಲಿ ಸ್ಥಿರ ನಿಲ್ಲುವ ಯಶಸ್ವಿ, ಕಂಡಿರದ ತಪಸ್ವಿ ಹಿಮಕ್ರೀಡೆಗಳ ಆಯೋಜನೆ ಮರುಭೂಮಿಯಲಿ ಕಡಲ ಒಡಲ ಕೊರೆತದಲ್ಲಿ ತೈಲ ಗಣಿ ಉದ್ಘಾಟನೆ ಕಾಡನು ಕರಗಿಸಿ, ಮೃಗಗಳ ಬೆದರಿಸಿ, ಗಿಡಮರಗಳ ಸವರಿ ಸಿಂಗರಿಸಿ, ನವ, ನವೀನ ಬಡಾವಣೆಯ ಶೃಂಗಾರ, ಇದು ನಮ್ಮ ಚಮತ್ಕಾರ, ಕೇಳದಿರಲಿ ಚೀತ್ಕಾರ ಹಾಕೊಂದು ಧಿಕ್ಕಾರ, ಮಾನವತೆಯ ಮಮಕಾರ ಸರ್ವರಕ್ಷಕ, ಆ ನಿರಾಕಾರನಿಗೊಂದು ಇರಲಿ ನಿನ್ನ ಜೈಕಾರ,
ಕೊರಗಜ್ಜ, ದೈವ, ಪರಿಸರ ಇತ್ಯಾದಿ...
- Get link
- X
- Other Apps
ಕೊರಗಜ್ಜ, ದೈವ, ಪರಿಸರ ಇತ್ಯಾದಿ... ಕೊರಗಜ್ಜ, ದೈವ, ಪರಿಸರ ಇತ್ಯಾದಿ... ಮೊದಲು ಕೇಳಿರಲಿಲ್ಲ ಈ ದೈವದ ಹೆಸರು, ಹರಕೆ ಹೊರುವ ಮಂದಿ ಕಂಡಿರಲಿಲ್ಲ ಇಲ್ಲಿ....ಸುಮಾರು ಸಮಯದ ಮುಂಚೆ ಅಂದರೆ ನಾಲ್ಕು ದಶಕಗಳಹಿಂದೆ ನಾನಿಲ್ಲಿಗೆ ಬಂದಾಗ. ಈಗಿನ ಮನೆ,ಮನೆಯ ಮಾತಾಗಿರುವಈ ತಾತನ ಬಗ್ಗೆ ಕೇಳಿರಲಿಲ್ಲ.ಅತಿ ಜನಪ್ರಿಯ ಪ್ರೀತಿಯ ದೈವಶಕ್ತಿ ಆಗಿರಲಿಲ್ಲ...ಘಟ್ಟದ ತಳದ ಕಡಲ ಗಡಿಯ ಒಳನಾಡಿನಲ್ಲಿ. ಕಡಲತಡಿಯ ಸಾಮಾನ್ಯರಿಗೆ ಅರಾಧ್ಯ ಪೂಜ್ಯ ಇಂದು. ದೇವರಷ್ಟೇ ಭಕ್ತಿ,ಜನಪ್ರಿಯತೆ ಹೊಂದಿರುವ ದೈವಾಂಶ ಇರುವಿಕೆ ಈ ಪ್ರದೇಶದಲ್ಲಿ ಈಗ...ಎಲ್ಲಾ ಬಸ್, ಆಟೋಗಳ ಹಿಂದೆ....ಸ್ವಾಮಿ ಕೊರಗಜ್ಜ ಅನ್ನುವ ಸಾಲು ತೀರಾ ಸಾಮಾನ್ಯ ವಾಗಿದೆ. ಈ ಅಜ್ಜ ಆಗ ಎಲ್ಲಿದ್ದ. ಈಗ ಬಂದ ಎಲ್ಲಿಂದ?, ಇದ್ದಕ್ಕಿದ್ದಹಾಗೆ ಎಲ್ಲರಬಾಯಲ್ಲೂ ನೆಲಸಿ, ನೆಚ್ಚಿನ ಕಿಚ್ಚನ್ನು ಹಚ್ಚಿರುವ ತಪಸ್ವಿಯಾರು? ಆಶ್ಚರ್ಯ ಪಡಬೇಕಿಲ್ಲ...ನಿಖರಾವಾಗಿ ಈ ದೈವದ ಇತಿಹಾಸ ಗೊತ್ತಿಲ್ಲ ನನಗೆ. ಪ್ರಯತ್ನಿಸಿದೆ. ಒಂದು ಮೂಲದ ಪ್ರಕಾರ ಈ ಕೊರಗಜ್ಜ ರೈತರ ಹಟ್ಟಿಯಲ್ಲಿನ ಜಾನುವಾರುಗಳ ರಕ್ಷಣೆ ಮಾಡುವ ಆಪದ್ಭಾಂದವ ಎಂಬ ಜಾನಪದ ಕಥೆಯಲ್ಲಿ ಬರುವ ದೈವಾಂಶ. ಹೀಗಾಗಿ ಹಸುಗಳಿಗೆ, ಎಮ್ಮೆ ಅಥವ ಎತ್ತುಗಳಿಗೆ, ಕೋಳಿ ಇತ್ಯಾದಿ ಸಾಕುಪ್ರಾಣಿಗಳಿಗೆ ಯಾವುದೇ ರೋಗಬಂದರೂ ಕೊರಗಜ್ಜನಿಗೆ ಮೊರೆಹೋಗುತ್ತಾರೆ. ಕೆಲವರು ಭೂತಾರಾಧನೆಯ ಕಲ್ಪನೆಯ ರೂಢಿಯಲ್ಲಿತ್ತೇನೋ ಗೊತ್ತಿಲ್ಲ. ಗ್ರಾಮೀಣ ನಂಬಿಕೆ, ಸಂಪ್ರದಾಯ, ಪದ್ದತಿ ಆಚರಣೆ ಕೊರಗಜ್ಜನ
I am the best,
- Get link
- X
- Other Apps
I am the best, I am the best, I feel often... or I console myself my own diffident submissive and defeated restless mind oscillating like a pendulum from left hemisphere to right hemisphere of the cerebrum furious and helpless state pushes to extreme frustrations injected into the motionless body painful...traumatic reality but diffuses and percolates to every cell by cell in a constant indifferent gaze a blanket of blackness in front of you Eyes wide opened like a blind without a vision in the vicinity... And, I humbly accept there are better than me the world is full of better ones and oofy ones.......! Right or wrong, love me or hate me but I am what I am... can't help being what I am Unchanged in elasticity... ನಾನೇ ಶ್ರೇಷ್ಟ... ನಾನೇ ಶ್ರೇಷ್ಟ...ಅತಿ ಉತ್ತಮ ಅಂದುಕೊಂಡಿದ್ದುಂಟು ಅಗಾಗ ಅಸಾಹಯಕತೆಯಲ್ಲಿ ನನ್ನನ್ನು ನಾನೇ ಸಂತೈಸಿ ಕೊಂಡಿದ್ದೇನೆ ಸೋತು ಶರಣಾದ ಮುದುಡಿದ ಮನಸಲ್ಲಿ ಮಸ್ತಿಷ್ಕದ ಎಡಗೋಲದಿಂದ ಬಲಗೋಲದವರೆಗೂ ತೂಗುವ ಲೋಲಕದ ಹಾಗೆ, ಹೊಯ್ದಾಡಿ ಸುಡುಕೋಪದಲಿ ನಿಸ್ಸಾಹಯಕನಾಗಿ ಹತಾಶೆಯಲ್ಲಿ ಅವ್ಯಕ್ತನೋವು ಕೋಶದಲ್ಲೆಲ್ಲಾ