ವಿಕಾಸವೆಂಬ ಪಾತಾಳದಲ್ಲಿ.


ಆಸೆಯೇ ದುಖಕ್ಕೆ ಮೂಲ ಎಂದಿದ್ದ ಬುದ್ಧ
ಸರಳತೆಯಲಿ ಬದುಕನ್ನೇ ಗೆದ್ದು
ತೆರೆದಿಟ್ಟಿದ್ದ ವೈಭೋಗ ಬದುಕು ನಿಷಿದ್ದ,
ತನ್ನದೇ ಮುಕ್ತ ಇರುವಿನಲಿ ಜೀವನ ಸಮೃದ್ಧ
ಮುಗುಳುನಗೆಯ ವಶೀಕರಣದಲಿ ನಮ್ಮನ್ನೇ ಕದ್ದ
ಯುದ್ಧ ತ್ಯಜಿಸಿದ ಯೋಧ
ಅಹಿಂಸೆ ಮಹಾ ಅಸ್ತ್ರದಲಿ ಇಂದಿಗೂ ಸದಾ ಸಿಧ್ದ
"ಆಸೆಯೇ ಅನ್ವೇಷಣೆಯ ಬೇರು,
ಅವಶ್ಯಕತೆಯೇ ಆವಿಶ್ಕಾರಗಳ ಮೂಲ"
ಪ್ರಗತಿಪರ ಸಿದ್ಧಾಂತಿಗಳು, ಜಪಿಸುವ ಜಗದ ಮಂತ್ರ ಇಂದು
ಮನುಕುಲ ಸೀಮಿತ ತಂತ್ರವೇ ಅವನತಿಯ ಶೂಲ
ಅವಿಶ್ಕಾರಗಳ ಅಡಿಪಾಯ ಸದಾ ಕುತೂಹಲ
ಅನ್ವಯ, ಬಳಕೆ, ಮಾತ್ರ ಬಲಶಾಲಿಗಳ ಪಾಲು
ನೀನೊಬ್ಬ ಶೋಷಿತ, ಬಡವನಲ್ಲದ ಭ್ರಮೆಯಲ್ಲೇ ಖುಷಿ
ನೀನಾಗಲಾರೆ ಸಮಬಾಳ್ವೆಯ ಋಷಿ
ಆತ್ಯಾಧುನಿಕ, ಸುಸಜ್ಜಿತ, ಆರಾಮದಾಯಕ
ವೈಭವದ ಕನಸಿಗೆ, ಧ್ಯೇಯ ಬದುಕಿನ ಸರಕು,
ಕೈಗೆಟುವ ಮಾಯಲೋಕದಲ್ಲಿ ಮೋಜು,
ಮಸ್ತಿ, ಮನರಂಜನೆಯಲಿ ಮಗ್ನನಾಗು
ಮಾದಕತೆಯ ನಶೆ ಬಲು ಮಜಾ, ನಿಜ
ಮತ್ತಿಳಿದು, ಭ್ರಮನಿರಸನ, ಮತ್ತೆ
ಮರುಳುವ ಮಾಯಲೋಕದ ಅಥಿತಿ
ತಿಳಿದಿಲ್ಲ ನಿನಗೆ ಯಾವಾಗ ನಿನ್ನ ತಿಥಿ
ನೀನೊಬ್ಬ ಸ್ವತಂತ್ರ ಗುಲಾಮ.
ಅನುಭವಿಸು ಕಳೆದುಹೋಗುವವರೆಗೂ,
ಪ್ರಜ್ಞಾಹೀನ ಸ್ಥಿತಿಯಲ್ಲೇ ಇರಲಿ ನಿನ್ನ ಸಮಾದಿ
ಎಚ್ಚರಕೆ ಮರುಳದ ಮಾದಕದ ಕನಸಲ್ಲಿ
ಲುಪ್ತನಾಗಿಯೇ ಇರು, ಶಾಶ್ವತ ಮಂಪರಿನಲ್ಲಿ
ಸತ್ತ ನೆನ್ನೆಗಳು, ಹುಟ್ಟದ ನಾಳೆಗಳು
ಈ ಕ್ಷಣದ ಪ್ರತಿಕ್ರಿಯೆಯ ಇರುವು ಬದುಕಲ್ಲ
ಕ್ಷಣದ ಸರಳತೆಯ ಸತ್ಯದ ತಡಕಾಟದಲ್ಲೇ ಬದುಕು
ನೀತಿಯೇ, ಆದರ್ಷವೇ ! ಪ್ರಚೋದನಾಕಾರಿ ಆಕರ್ಷಣೆಗೆ!
ನೀನಿಂದು ಸಾಗು ನಿರಾಯಾಸ ಯಾತ್ರೆ
ಗಡಿರಹಿತ ಹೆದ್ದಾರಿ, ಎಲ್ಲೆಲ್ಲೂ ಜಾತ್ರೆ
ಕಂಡಲ್ಲಿ ಮೆರವಣಿಗೆ….ತೂರಿಕೋ ನೀನದರಲ್ಲಿ
ಸಂಭ್ರಮವೋ? ಸೂತಕವೋ?
ಸಮೂಹಸನ್ನಿಸರ್ವವ್ಯಾಪಿ, ನೀನೀಗ ಅಮಾಯಾಕ ?
ದಾರಿ ತಪ್ಪಿಪಿದ ಪ್ರಯಾಣಿಕ.
ತಲುಪುವ ವಿಳಾಸದ ಅರಿವಿರದ ಆಗಂತುಕ
ಆಗಬಲ್ಲೆಯಾ ಪ್ರಾಮಾಣಿಕ?
ಅಮಲಿಳಿಯುವವರೆಗೂ ನಿನ್ನದೇ ಲೋಕ….
Comments

Popular posts from this blog

ಕೊರಗಜ್ಜ, ದೈವ, ಪರಿಸರ ಇತ್ಯಾದಿ...

The Crow.

ಕಾಗೆ....