ಬೆಳಗು.. . ನಿರಂತರ,ನಿರುತ್ತರ ಪ್ರಶ್ನೆಗಳ ನಿರ್ವಾತ ಬೆಳಗು ಮಾಸಿಹೋಗುವ ನಡುಹಗಲಿನ ಕೊರಗು ಅವರ್ಣನಿಯ ಶಾಂತಿಯ ಸಂಜೆಯ ಬೆರಗು ನಾಳೆಗಳ ನಿಶೆಯಲ್ಲಿ ನಿದ್ರಿಸುವ ಕತ್ತಲಿಗೆ ಮೆರಗು. ಮರಳಿ,ಮರಳಿ ಘಟಿಸುವ ದಿನನಿತ್ಯದ ಸೊಬಗು ಬದುಕು...ಕೊರಗು? ಹಾಸಿದೆ ಸೆರಗು. ಜೀವನೋತ್ಸಾಹ ಬತ್ತದಿರುವ ಸೋಜಿಗ..... ----------------------------------------- ಮನೆ.. ಅಲ್ಲಿದೆ ನಮ್ಮನೆ, ಇಲ್ಲಿಗೆ ಬರಲಿಲ್ಲ ಸುಮ್ಮನೆ ಕಟ್ಟುವೆ ಇಲ್ಲೇ...ಇನ್ನೊಂದು ನನ್ನದೇ ಮನೆ.. ಗುಹೆಯೇ ಮನೆಯಾದ ಕಾಲ ಒಂದಿತ್ತು ಕಾಡೇ ಗುಡಿಯಾದ ನೋಟ ಚಿಗುರಿತ್ತು ಮರದ ಪೊಟರೆಯನು ಮರೆಯಬಾರದಿತ್ತು ಹೊಳೆಯೇಇಲ್ಲ ಮಣ್ಣ ಹಂಗಿನ ಕೀಮತ್ತು ಮರಗಳೆಲ್ಲ ನನಗಾಗಿ ಬೀಳಬಾರದಿತ್ತು... ಕಾಡ್ಗಿಚ್ಚು ಕಿಡಿ ಹಾರಿ ಕುಲುಮೆ ಕಾದಿತ್ತು ಭೂಬಸಿರ ಚಿವುಟಿದ ಬಲವಂತದ ಆ ತಾಕತ್ತು ಹಸಿರ ಉಸಿರಿಗೇ ಇಂದು ಕಾಡಿದೆ ಆಪತ್ತು -------------------------------------- A day in the summer. What a horrible hyper-thermal morning? but let us not take it as time for brooding after all it is life, and should keep moving till the final whistle is blown for a new beginning. ------------------------------------------- As usual. Nothing...
Posts
Showing posts from March, 2013